For Quick Alerts
ALLOW NOTIFICATIONS  
For Daily Alerts

ಧ್ಯಾನ್‌ ಚಂದ್‌ ಜೀವನ ದೇಶದ ಯುವ ಕ್ರೀಡಾಳುಗಳಿಗೆ ಪ್ರೇರಣೆ: ಸಿದ್ದರಾಮಯ್ಯ

ಬೆಂಗಳೂರು: ಇಂದು (ಆಗಸ್ಟ್‌ 29) ದೇಶದಲ್ಲಿ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇಂದು ಹಾಕಿ ಲೋಕದ ದಿಗ್ಗಜ ಆಟಗಾರ ಧ್ಯಾನ್ ಚಂದ್ ಜನ್ಮದಿನ. ಭಾರತ ಸರ್ಕಾರವು 2012 ರಿಂದ ಅವರ ಜನ್ಮದಿನದಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲು ಘೋಷಿಸಲಾಯಿತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕ್ರೀಡಾ ದಿನಾಚರಣೆಯ ಹಿನ್ನೆಲೆ ಟ್ವೀಟ್ ಮಾಡಿದ್ದಾರೆ

ಧ್ಯಾನಚಂದ ಅವರ ಜನ್ಮದಿನ ಪ್ರಯುಕ್ತ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಸಾಮಾಜಿಕ ಜಾಲತಾಣದಲ್ಲಿ (ಎಕ್ಸ್) ಟ್ವೀಟ್ ಮಾಡಿದ್ದಾರೆ. ಹಾಕಿ ಲೋಕವನ್ನು ತನ್ನ ಮಾಂತ್ರಿಕ ಆಟ ಆಳಿದ ಧ್ಯಾನಚಂದ ಅವರ ಸಾಧನೆ ಬಗ್ಗೆ ಸ್ಮರಿಸಿ ಬರೆದುಕೊಂಡಿದ್ದಾರೆ. ಅಲ್ಲದೆ ಇವರ ಜೀವನ ದೇಶದ ಕ್ರೀಡಾ ಪಟುಗಳಿಗೆ ಮಾದರಿ ಎಂದು ತಿಳಿಸಿದ್ದಾರೆ. ಹಾಕಿ ಕ್ರೀಡೆಯನ್ನೇ ಜಗತ್ತು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದ ಮಾಂತ್ರಿಕ ಇವರು ಎಂದು ಸಿದ್ದರಾಂಯ್ಯನವರು ಗುಣಗಾನ ಮಾಡಿದ್ದಾರೆ.

CM Siddaramaiah Praises Hockey Legend Dhyan Chand Urges Youth to Follow His Example

ಕ್ರೀಡಾಪಟುಗಳಿಗೆ ಮಾದರಿ

ಕ್ರೀಡೆಯ ಬಗ್ಗೆ ಧ್ಯಾನ್ ಚಂದ್ ಅವರಿಗಿದ್ದ ಮನಸ್ಥಿತಿ ಮತ್ತು ಬದ್ಧತೆಯನ್ನು ಯುವ ಕ್ರೀಟಾಪಟುಗಳು ಅನುಕರಿಸಿದರೆ ಯಶಸ್ಸು ಕಾಣಲು ಸಾಧ್ಯ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದ್ದಾರೆ.

ನಗರದ ಕಂಠೀರವ ಕ್ರೀಡಾಂಗಣದ ಒಲಂಪಿಕ್ ಭವನದಲ್ಲಿ ರಾಜ್ಯ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯು ಆಯೋಜಿಸಿದ್ದ ಪದ್ಮಭೂಷಣ, ಹಾಕಿಪಟು ಮೇಜರ್ ಧ್ಯಾನ್ ಚಂದ್ ಜನ್ಮದಿನ ಹಾಗೂ ರಾಷ್ಟ್ರೀಯ ಕ್ರೀಡಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನೇಕ ಯುವಕರಲ್ಲಿ ಕ್ರೀಡಾ ಬದ್ಧತೆ ಕಡಿಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

22 ವರ್ಷಗಳ ಕಾಲ ತನ್ನ ಕಲಾತ್ಮಕ ಹಾಕಿ ಆಟದಿಂದ ವಿಶ್ವದಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಮಾಂತ್ರಿಕ ಧ್ಯಾನ್ ಚಂದ್. ತಮ್ಮ ವೃತ್ತಿಜೀವನದಲ್ಲಿ 400 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ ಶ್ರೇಷ್ಠ ಆಟಗಾರ. ಒಲಿಂಪಿಕ್ಸ್‌ ಕ್ರೀಡಾ ಕೂಟದಲ್ಲಿ ಭಾರತ ಬಂಗಾರ ಪದಕಗಳನ್ನು ಪಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಕ್ರೀಡಾ ಪಟು ಮೇಜರ್ ಧ್ಯಾನಚಂದ್.

ಧ್ಯಾನ ಚಂದ್ 1905 ರಲ್ಲಿ ಅಲಹಾಬಾದ್‌ನ ರಜಪೂತ ಕುಟುಂಬದಲ್ಲಿ ಜನಿಸಿದರು. ತಂದೆಯಂತೆ, ಧ್ಯಾನ್ ಚಂದ್ ಸೈನ್ಯಕ್ಕೆ ಸೇರಿಕೊಂಡರು ಮತ್ತು ಸೈನ್ಯದಲ್ಲಿಯೇ ಹಾಕಿ ಆಡಲು ಪ್ರಾರಂಭಿಸಿದರು. ಹಾಕಿ ಮಾಂತ್ರಿಕ ದೇಶಕ್ಕೆ ಅನೇಕ ಪ್ರಶಸ್ತಿಗಳನ್ನು ತಂದು ಕೊಟ್ಟಿದ್ದಾರೆ. ಧ್ಯಾನ್ ಚಂದ್ ಅವರು 1928, 1932 ಮತ್ತು 1936 ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕಗಳನ್ನು ಗೆದ್ದ ಭಾರತೀಯ ಹಾಕಿ ತಂಡದ ಭಾಗವಾಗಿದ್ದರು.

Story first published: Thursday, August 29, 2024, 14:08 [IST]
Other articles published on Aug 29, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+