ತಮಿಳುನಾಡು ಸಿಎಂ ವಿಜಯ್‌ಗೆ, ಪ್ರಜ್ಞಾನಂದ್ ಚೆಕ್‌ಮೀಟ್; 50 ಲಕ್ಷ ಬಹುಮಾನ
ಚೆನ್ನೈ: ನಾರ್ವೆ ಚೆಸ್ 2026 ಟೂರ್ನಿಯಲ್ಲಿ ಐತಿಹಾಸಿಕ ಪ್ರಶಸ್ತಿ ಗೆದ್ದು ಸಾಧನೆ ಮಾಡಿರುವ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ್ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಸೋಮವಾರ (ಜೂನ್ 8) ಸನ್ಮಾನಿಸಿದರು. ಕ್ರೀಡಾ ಅಭಿವೃದ್ಧಿ ಪ್ರಾಧಿಕಾರದ ಪರವಾಗಿ ಪ್ರಜ್ಞಾನಂದ್ ಅವರಿಗೆ 50 ಲಕ್ಷ ರೂ. ನೀಡಿ ಗೌರವಿಸಲಾಯಿತು.
ಪ್ರಜ್ಞಾನಂದ್ ಅವರನ್ನು ಸನ್ಮಾನ ಮಾಡಿದ ಸಿಎಂ ವಿಜಯ್ ಅವರೊಂದಿಗೆ ಸೌಹಾರ್ದಯುತ ಚೆಸ್ ಪಂದ್ಯವನ್ನು ಆಡಿದರು. ಸುಮಾರು 15 ನಿಮಿಷಗಳ ಕಾಲ ಆಡಿದರು. ತಾವೇ ಚೆಸ್ ಬೋರ್ಡ್ ತರಲು ಹೇಳಿ ಪ್ರಜ್ಞಾನಂದ್ ಅವರೊಂದಿಗೆ ಚೆಸ್ ಆಡುವ ಇಂಗಿತವನ್ನು ವ್ಯಕ್ತ ಪಡಿಸಿದ್ದರು.

ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಜ್ಞಾನಂದ್, ಸಿಎಂ ನನ್ನ ಜೊತೆಗೆ ಚೆಸ್ ಆಡುತ್ತಾರೆ ಎಂದು ನಾನು ಖಂಡಿತವಾಗಿಯೂ ಭಾವಿಸಿರಲಿಲ್ಲ. ಮುಖ್ಯಮಂತ್ರಿಗಳು ಅತ್ಯಂತ ಆಸಕ್ತಿಯಿಂದ ಯೋಚಿಸಿ ಕಾಯಿಗಳನ್ನು ಬಿಡುತ್ತಿದ್ದರು. ಅವರ ಚೆಸ್ ಕೌಶಲ್ಯ ನನಗೆ ನಿಜಕ್ಕೂ ಅಚ್ಚರಿ ಮೂಡಿಸಿತು" ಎಂದು ಸಂತಸ ಹಂಚಿಕೊಂಡಿದ್ದಾರೆ. ಈ ಗೆಲುವು ತಮ್ಮ ವೃತ್ತಿಜೀವನದ ಅತ್ಯಂತ ದೊಡ್ಡ ಸಾಧನೆ ಎಂದು ಪ್ರಜ್ಞಾನಂದ್ ಬಣ್ಣಿಸಿದ್ದಾರೆ.
ಓಸ್ಲೋದಲ್ಲಿ ಇತ್ತೀಚೆಗೆ ನಡೆದ ನಾರ್ವೆ ಚೆಸ್ ಟೂರ್ನಿಯ ಅಂತಿಮ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ಅವರನ್ನು ಸೋಲಿಸುವ ಮೂಲಕ 20 ವರ್ಷದ ಪ್ರಜ್ಞಾನಂದ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು. ಈ ಟೂರ್ನಿಯಲ್ಲಿ ವಿಶ್ವದ ನಂಬರ್ 1 ಆಟಗಾರ ನರ್ವೆ ಮ್ಯಾಗ್ನಸ್ ಕಾರ್ಲ್‌ಸನ್ ಅವರ ಸವಾಲನ್ನು ಎರಡು ಬಾರಿ ಮೆಟ್ಟಿನಿಂತರು. ಪ್ರಜ್ಞಾನಂದ್ ಅವರಿಗೆ ಗೌರವಿಸಿದ ವಿಡಿಯೋವನ್ನು ತಮಿಳುನಾಡು ಮುಖ್ಯಮಂತ್ರಿಗಳ ಕಚೇರಿ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದೆ.
ಸನ್ಮಾನದ ವೇಳೆ ಪ್ರಜ್ಞಾನಂದ್ ಅವರ ಪೋಷಕರು ಮತ್ತು ತಮಿಳುನಾಡು ಕ್ರೀಡಾ ಕಲ್ಯಾಣ ಮತ್ತು ಯುವಜನ ಸಬಲೀಕರಣ ಸಚಿವ ಆಧವ್ ಅರ್ಜುನ ಉಪಸ್ಥಿತರಿದ್ದರು.
ಪ್ರಜ್ಞಾನಂದ್ ಸಾಧನೆ
ಪ್ರಜ್ಞಾನಂದ್ ಅವರು ಕೇವಲ 12ನೇ ವಯಸ್ಸಿನಲ್ಲಿಯೇ 'ಗ್ರಾಂಡ್‌ಮಾಸ್ಟರ್'ಆದರು. ಈ ಸಾಧನೆ ಮಾಡಿದ ವಿಶ್ವದ ಅತಿ ಕಿರಿಯ ಆಟಗಾರರಲ್ಲಿ ಇವರೂ ಒಬ್ಬರು. ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನೇ ಹಲವು ಬಾರಿ ಸೋಲಿಸುವ ಮೂಲಕ ಇಡೀ ವಿಶ್ವದ ಗಮನ ಸೆಳೆದರು. ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರತಿಭಾವಂತ ಯುವ ಚೆಸ್ ಆಟಗಾರ ಪ್ರಜ್ಞಾನಂದ್, ಸದ್ಯ ಅಂತಾರಾಷ್ಟ್ರೀಯ ಚೆಸ್ ಟೂರ್ನಿಗಳಲ್ಲಿ ಭಾರತಕ್ಕೆ ಕೀರ್ತಿ ತರುತ್ತಿರುವ ಆಟಗಾರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications