'ಪಿಕಾಕ್ ಆಫ್ ದ ಫೇರ್‌ವೇಸ್' ಖ್ಯಾತಿಯ ಡೌಗ್ ಸ್ಯಾಂಡರ್ಸ್ ನಿಧನ

ಹೂಸ್ಟನ್, ಏಪ್ರಿಲ್ 13: ವಿಶ್ವದ ಹೆಸರಾಂತ ಗಾಲ್ಫರ್, ಪ್ರೊಫೆಶನಲ್ಸ್ ಗಾಲ್ಫರ್ಸ್ ಅಸೋಸಿಯೇಶನ್ (ಪಿಜಿಎ) ಟೂರ್‌ನಲ್ಲಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಅಮೆರಿಕಾದ ಡೌಗ್ ಸ್ಯಾಂಡರ್ಸ್ ಮೃತರಾಗಿದ್ದಾರೆ. ಸ್ಯಾಂಡರ್ಸ್ ವಯೋಸಹಜವಾಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಕೊನೆಯುಸಿರೆಳೆದಿರುವ ಡೌಗ್ ಸ್ಯಾಂಡರ್ಸ್, ಪಿಕಾಕ್ ಆಫ್ ದ ಫೇರ್‌ವೇಸ್ (ಫೇರ್‌ವೇಸ್‌ನ ನವಿಲು) ಖ್ಯಾತರಾಗಿದ್ದವರು. ಗಾಲ್ಫ್‌ನಲ್ಲಿ ಬಲು ಫೇಮಸ್ ಆಗಿದ್ದ ಸ್ಯಾಂಡರ್ಸ್ ಯುಎಸ್ ಪಿಜಿಎ ಟೂರ್‌ನಲ್ಲಿ 20 ಪ್ರಶಸ್ತಿಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ. ಇದರಲ್ಲಿ 1956ರ ಕೆನಡಿಯನ್ ಓಪನ್ ಟ್ರೋಫಿಯೂ ಸೇರಿದೆ.
20 ಪ್ರಶಸ್ತಿಗಳಲ್ಲದೆ ಸ್ಯಾಂಡರ್ಸ್ 1970ರ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟಿಗೆ ನಾಲ್ಕು ಬಾರಿ ರನ್ನರ್ಸ್ ಪ್ರಶಸ್ತಿ ಗೆದ್ದಿದ್ದಾರೆ. ಇದೇ ಕಾರಣಕ್ಕೆ ಗಾಲ್ಫ್ ಕ್ರೀಡೆಯಲ್ಲಿ ಸ್ಯಾಂಡರ್ಸ್‌ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದರು.
1970ರಲ್ಲಿ ಬ್ರಿಟಿಷ್ ಓಪನ್ ಗಾಲ್ಫ್ ಸ್ಪರ್ಧೆಯಲ್ಲಿ ಸ್ಯಾಂಡರ್ಸ್ ಸ್ಪಲ್ಪವೇ ಸ್ವಲ್ಪದರಲ್ಲಿ ಪ್ರಶಸ್ತಿ ಕೈ ತಪ್ಪಿಸಿಕೊಂಡಿದ್ದರು. ಇದು ಸ್ಯಾಂಡರ್ಸ್ ವೃತ್ತಿ ಬದುಕಿನ ಬಲುದೊಡ್ಡ ಸೋಲಾಗಿ ಗುರುತಿಸಿಕೊಂಡಿತ್ತು. ಯಾಕೆಂದರೆ ಅಂದಿನ ಸ್ಪರ್ಧೆಯಲ್ಲಿ ಸ್ಯಾಂಡರ್ಸ್ ಗೆದ್ದರೆಂದೇ ಭಾವಿಸಲಾಗಿತ್ತು. ಆದರೆ ಸ್ಯಾಂಡರ್ಸ್ ಸೋತು ಆಘಾತ ಅನುಭವಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications