CWG 2022: ಚಿನ್ನ ಗೆದ್ದ ವೇಟ್‌ಲಿಫ್ಟರ್ ಅಚಿಂತಾ ಶೆಯುಲಿ; ಭಾರತ ಗೆದ್ದ ಒಟ್ಟು ಪದಕಗಳೆಷ್ಟು?

ಸದ್ಯ ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಮೂರನೇ ದಿನದಂದು ಭಾರತ ಮತ್ತೊಂದು ಚಿನ್ನದ ಪದಕವನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ. ಪುರುಷರ 73 ಕೆಜಿ ಸ್ಕ್ವಾಷ್ ವಿಭಾಗದ ಫೈನಲ್‌ನಲ್ಲಿ ಭಾರತದ ವೇಟ್ ಲಿಫ್ಟರ್ ಅಚಿಂತಾ ಶೆಯುಲಿ ಒಟ್ಟು 313 ಕೆಜಿ ಭಾರ ಎತ್ತುವುದರ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
20 ವರ್ಷದ ಅಚಿಂತಾ ಶೆಯುಲಿ ಭಾಗವಹಿಸುತ್ತಿರುವ ತನ್ನ ಮೊದಲ ಕಾಮನ್‍ವೆಲ್ತ್ ಕ್ರೀಡಾ ಕೂಟ ಇದಾಗಿದ್ದು, ಚೊಚ್ಚಲ ಪ್ರಯತ್ನದಲ್ಲಿಯೇ ಚಿನ್ನ ಗೆಲ್ಲುವುದರ ಮೂಲಕ ಬೃಹತ್ ಸಾಧನೆಯನ್ನು ಮಾಡಿದ್ದಾರೆ. ಇನ್ನು ಇದಕ್ಕೂ ಮುನ್ನ ಇದೇ ದಿನ ಭಾರತದ ಮತ್ತೋರ್ವ ವೇಟ್ ಲಿಫ್ಟರ್ ಜೆರೆಮಿ ಲಾಲ್ರಿನುಂಗ 67 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ 300 ಕೆಜಿ ಭಾರ ಎತ್ತುವುದರ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದರು. ಈ ಮೂಲಕ ಭಾರತ ಕ್ರೀಡಾಕೂಟದ ಮೂರನೇ ದಿನದಂದು 2 ಚಿನ್ನದ ಪದಕಗಳನ್ನು ಪಡೆದುಕೊಂಡಿತು.
ಅಚಿಂತಾ ಶೆಯುಲಿ ಗೆದ್ದ ಚಿನ್ನದ ಪದಕ ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಭಾರತ ಗೆದ್ದ ಮೂರನೇ ಚಿನ್ನದ ಪದಕವಾಗಿದ್ದು, ಎಲ್ಲಾ ಪದಕಗಳೂ ಸೇರಿದಂತೆ ಭಾರತ ಗೆದ್ದ ಪದಕಗಳ ಸಂಖ್ಯೆ 6ಕ್ಕೇರಿದೆ.

ಅಚಿಂತಾ ಶೆಯುಲಿ ಸಾಧನೆ
ಭಾರತಕ್ಕೆ ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾ ಕೂಟದಲ್ಲಿ ಮೂರನೇ ಚಿನ್ನದ ಪದಕವನ್ನು ತಂದುಕೊಟ್ಟ ವೇಟ್ ಲಿಫ್ಟರ್ ಅಚಿಂತಾ ಶೆಯುಲಿ ಮೂಲತಃ ಪಶ್ಚಿಮ ಬಂಗಾಳದ ಧೋಲ್ ಪುರ್ ನ ನಿವಾಸಿ. 20 ವರ್ಷ ವಯಸ್ಸಿನ ಇವರು ಗೆದ್ದ ಚೊಚ್ಚಲ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ ಚಿನ್ನದ ಪದಕ ಇದಾಗಿದ್ದು, ಈ ಹಿಂದೆ ನಡೆದಿದ್ದ ಕಾಮನ್ ವೆಲ್ತ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ 2019 ಮತ್ತು 2021ರ ಆವೃತ್ತಿಗಳಲ್ಲಿ ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದರು. ಹಾಗೂ 2021ರ ಜ್ಯೂನಿಯರ್ ವೇಟ್ ಲಿಫ್ಟಿಂಗ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ ರಜತ ಪದಕವನ್ನು ಗೆದ್ದಿದ್ದಾರೆ.

ಪದಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದ ಭಾರತ
ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮೂರನೇ ದಿನದಂದು ಜೆರೆಮಿ ಲಾಲ್ರಿನುಂಗ ಮತ್ತು ಅಚಿಂತಾ ಶೆಯುಲಿ ಈ ಇಬ್ಬರು ಚಿನ್ನದ ಪದಕವನ್ನು ಪಡೆದದ್ದು ಬಿಟ್ಟರೆ ಭಾರತಕ್ಕೆ ಬೇರೆ ಯಾವುದೇ ವಿಭಾಗದಲ್ಲಿಯೂ ಕೂಡ ಯಾವ ಪದಕವೂ ಲಭಿಸಲಿಲ್ಲ. ಈ ಮೂಲಕ ಕ್ರೀಡಾಕೂಟದಲ್ಲಿ ಒಟ್ಟಾರೆ 3 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕವನ್ನು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

ಇಲ್ಲಿಯವರೆಗೂ ಪದಕ ಗೆದ್ದವರು
ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟದ ಮೂರನೇ ದಿನದ ಮುಕ್ತಾಯದ ತನಕ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳ ಪಟ್ಟಿ ಈ ಕೆಳಕಂಡಂತಿದೆ.
1. ಸಂಕೇತ್ ಮಹದೇವ್ ಸರ್ಗರ್ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ
2. ಗುರುರಾಜ್ ಪೂಜಾರಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ
3. ಮೀರಾಬಾಯಿ ಚಾನು - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ
4. ಬಿಂದ್ಯಾ ರಾಣಿ ದೇವಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ
5. ಜೆರೆಮಿ ಲಾಲ್ರಿನುಂಗ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ
6. ಅಚಿಂತಾ ಶೆಯುಲಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications