CWG 2022: ಮೊದಲ ದಿನ ಇಲ್ಲ ಪದಕ; ಭಾರತೀಯ ಕ್ರೀಡಾಪಟುಗಳ 2ನೇ ದಿನದ ವೇಳಾಪಟ್ಟಿ

ಪ್ರತಿಷ್ಠಿತ ಕಾಮನ್‍ವೆಲ್ತ್ ಗೇಮ್ಸ್ ಕ್ರೀಡಾಕೂಟ 2022ಕ್ಕೆ ಜುಲೈ 28ರಂದು ಅದ್ಧೂರಿ ಚಾಲನೆ ದೊರೆಯಿತು. ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ಈ ಬಾರಿಯ ಕಾಮನ್ ವೆಲ್ತ್ ಕ್ರೀಡಾಕೂಟ ನಡೆಯುತ್ತಿದ್ದು, ಜುಲೈ 29ರ ಶುಕ್ರವಾರದಂದು ಕ್ರೀಡಾಕೂಟದ ಮೊದಲ ದಿನದ ಪಂದ್ಯಾವಳಿಗಳು ನಡೆದವು.
ಮೊದಲ ದಿನದಂದು ಭಾರತದ ಬ್ಯಾಡ್ಮಿಂಟನ್ ಮಿಶ್ರ ತಂಡ ಪಾಕಿಸ್ತಾನದ ವಿರುದ್ಧ 5-0 ಅಂತರದಲ್ಲಿ ಜಯ ಸಾಧಿಸಿದರೆ, ಪಿವಿ ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಸುಲಭ ಜಯ ಸಾಧಿಸಿದರು. ಭಾರತೀಯ ವನಿತೆಯರ ಟೇಬಲ್ ಟೆನಿಸ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 3-0 ಅಂತರದ ಗೆಲುವನ್ನು ಸಾಧಿಸಿತು ಹಾಗೂ ನಂತರದ ಪಂದ್ಯದಲ್ಲಿ ಫಿಜಿ ವಿರುದ್ಧ ಕೂಡ 3-0 ಅಂತರದ ಗೆಲುವನ್ನು ಸಾಧಿಸಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿತು. ಬಾಕ್ಸಿಂಗ್‌ನಲ್ಲಿ ಪಾಕಿಸ್ತಾನದ ಸುಲೇಮಾನ್ ಬಲೋಚ್ ವಿರುದ್ಧ 63.5 ಕೆಜಿ ಸುತ್ತಿನಲ್ಲಿ ಭಾರತದ ಶಿವ ತಾಪಾ ಜಯ ಸಾಧಿಸಿದರು. ಇನ್ನು ಭಾರತೀಯ ವನಿತೆಯರ ಹಾಕಿ ತಂಡ ಘಾನಾ ವಿರುದ್ಧ 5-0 ಅಂತರದಿಂದ ಗೆಲುವನ್ನು ಕಂಡಿತು.
ಅತ್ತ ಇದೇ ಮೊದಲ ಬಾರಿಗೆ ಕಾಮನ್‍ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಭಾರತೀಯ ವನಿತೆಯರ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ 3 ವಿಕೆಟ್‍ಗಳ ಸೋಲನ್ನು ಅನುಭವಿಸಿದರೆ, ಅಕ್ವಾಟಿಕ್ ವಿಭಾಗದ 400 ಮೀ ಪುರುಷರ ಫ್ರೀಸ್ಟೈಲ್ ಈವೆಂಟ್‌ನ 3ನೇ ಹೀಟ್‌ನಲ್ಲಿ ಅಂತಿಮ ಸ್ಥಾನ ಪಡೆದ ಭಾರತದ ಕುಶಾಗ್ರ ರಾವತ್ ಎಲಿಮಿನೇಟ್ ಆದರು. ಟ್ರಯಥ್ಲಾನ್ ವಿಭಾಗದಲ್ಲಿ ಭಾರತದ ಪ್ರಜ್ಞಾ ಮೋಹನ್ 26 ಮತ್ತು ಸಂಜನಾ ಜೋಷಿ 27ನೇ ಸ್ಥಾನ ಪಡೆದುಕೊಳ್ಳುವುದರ ಮೂಲಕ ಮಿಂಚುವಲ್ಲಿ ವಿಫಲರಾದರು. ಹೀಗೆ ಮೊದಲ ದಿನ ಭಾಗವಹಿಸಿದ್ದ ಭಾರತೀಯ ಕ್ರೀಡಾಪಟುಗಳ ಪೈಕಿ ಬಹುತೇಕರು ಮೇಲುಗೈ ಸಾಧಿಸಿದ್ದು, ಕೆಲವರು ಹಿನ್ನಡೆ ಅನುಭವಿಸಿದ್ದಾರೆ. ಇನ್ನು ಭಾರತೀಯ ಕ್ರೀಡಾಪಟುಗಳ ಎರಡನೇ ದಿನದ ವೇಳಾಪಟ್ಟಿ ಹೇಗಿದೆ ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ.

ಕಾಮನ್‍ವೆಲ್ತ್ ಗೇಮ್ಸ್ 2022 ಎರಡನೇ ದಿನದ ಭಾರತೀಯರ ವೇಳಾಪಟ್ಟಿ
ಕಾಮನ್‍ವೆಲ್ತ್ ಗೇಮ್ಸ್ 2022 ಎರಡನೇ ದಿನದ ಭಾರತೀಯರ ವೇಳಾಪಟ್ಟಿ
• 1:00 PM: ಲಾನ್ ಬೌಲ್ಸ್ - ತಾನಿಯಾ ಚೌಧರಿ ಮಹಿಳೆಯರ ವಿಭಾಗೀಯ ಪ್ಲೇ ರೌಂಡ್ 3 ರಲ್ಲಿ ಮತ್ತು ಪುರುಷರ ತಂಡ ಸೆಕ್ಷನಲ್ ಪ್ಲೇ ರೌಂಡ್ 3 vs ಮಾಲ್ಟಾ
• 1:30 PM: ಅಥ್ಲೆಟಿಕ್ಸ್ - ಪುರುಷರ ಮ್ಯಾರಥಾನ್ ಫೈನಲ್‌ನಲ್ಲಿ ನಿತೇಂದ್ರ ಸಿಂಗ್ ರಾವತ್
• 1:30 PM: ಬ್ಯಾಡ್ಮಿಂಟನ್ - ಶ್ರೀಲಂಕಾ ವಿರುದ್ಧ ಮಿಶ್ರ ತಂಡ A ಗುಂಪಿನಲ್ಲಿ ಭಾರತ
• 1:30 PM: ಜಿಮ್ನಾಸ್ಟಿಕ್ಸ್ - ಯೋಗೇಶ್ವರ್ ಸಿಂಗ್ ಪುರುಷರ ಆರ್ಟಿಸ್ಟಿಕ್ ಫೈನಲ್
• 1:30 PM: ವೇಟ್‌ಲಿಫ್ಟಿಂಗ್ - ಪುರುಷರ 55ಕೆಜಿ ವಿಭಾಗದಲ್ಲಿ ಸಂಕೇತ್ ಮಹದೇವ್ ಸರ್ಗರ್
• 2:00 PM: ಟೇಬಲ್ ಟೆನಿಸ್ - ಮಹಿಳೆಯರ ತಂಡ ಗುಂಪು 2ರಲ್ಲಿ ಭಾರತ vs ಗಯಾನಾ
• 2:30 PM: ಸೈಕ್ಲಿಂಗ್ - ಮಹಿಳೆಯರ ಸ್ಪ್ರಿಂಟ್ ಕ್ವಾಲಿಫಾಯಿಂಗ್ ಸುತ್ತಿನಲ್ಲಿ ಮಯೂರಿ ಲೂಟ್ ಮತ್ತು ತ್ರಿಯಾಶಿ ಪಾಲ್
• 2:30 PM: ಸೈಕ್ಲಿಂಗ್ - ಪುರುಷರ 4000 ಮೀ ವೈಯಕ್ತಿಕ ಪರ್ಸ್ಯೂಟ್ ಕ್ವಾಲಿಫಾಯಿಂಗ್ ಸುತ್ತಿನಲ್ಲಿ ವಿಶ್ವಜೀತ್ ಸಿಂಗ್ ಮತ್ತು ದಿನೇಶ್ ಕುಮಾರ್
• 3:00 PM: ಈಜು - 200 ಮೀ ಫ್ರೀಸ್ಟೈಲ್ ಹೀಟ್ 3 ರಲ್ಲಿ ಕುಶಾಗ್ರಾ ರಾವತ್
• 3:11 PM: ಸೈಕ್ಲಿಂಗ್ - ಮಹಿಳೆಯರ 3000ಮೀ ವೈಯಕ್ತಿಕ ಪರ್ಸ್ಯೂಟ್ ಕ್ವಾಲಿಫಾಯಿಂಗ್ ಸುತ್ತಿನಲ್ಲಿ ಮೀನಾಕ್ಷಿ
• 4:03 PM: ಸೈಕ್ಲಿಂಗ್ - ಮಹಿಳೆಯರ ಸ್ಪ್ರಿಂಟ್‌ನಲ್ಲಿ ಮಯೂರಿ ಲೂಟ್ ಮತ್ತು ತ್ರಿಯಾಶಿ ಪಾಲ್ (ಅರ್ಹತೆ ಪಡೆದರೆ)
• 4:15 PM: ವೇಟ್‌ಲಿಫ್ಟಿಂಗ್ - ಪುರುಷರ 61 ಕೆಜಿ ವಿಭಾಗದ ಫೈನಲ್‌ನಲ್ಲಿ ಗುರುರಾಜ
• 4:30 PM: ಟೇಬಲ್ ಟೆನ್ನಿಸ್ - ಭಾರತ ಪುರುಷರ ತಂಡ vs ನಾರ್ದರ್ನ್ ಐಲ್ಯಾಂಡ್ ಗ್ರೂಪ್ 3
• 4:36 PM: ಸೈಕ್ಲಿಂಗ್ - ಮಹಿಳೆಯರ ಸ್ಪ್ರಿಂಟ್ ಕ್ವಾರ್ಟರ್‌ಫೈನಲ್‌ನಲ್ಲಿ ಮಯೂರಿ ಲೂಟ್ ಮತ್ತು ತ್ರಿಯಾಶಿ ಪಾಲ್ (ಅರ್ಹತೆ ಪಡೆದರೆ)
• 4:52 PM: ಸೈಕ್ಲಿಂಗ್ - ಪುರುಷರ 400M ವೈಯಕ್ತಿಕ ಪರ್ಸ್ಯೂಟ್ ಅರ್ಹತೆಯಲ್ಲಿ ವಿಶ್ವಜೀತ್/ದಿನೇಶ್
• 5:00 PM: ಬಾಕ್ಸಿಂಗ್ - 54-57 ಕೆಜಿ ತೂಕ ವಿಭಾಗದಲ್ಲಿ ಹುಸನ್ಮುದ್ದೀನ್ ಮೊಹಮ್ಮದ್ (IND) ವಿರುದ್ಧ ಅಮ್ಜೋಲಿ (SA) (32ರ ಸುತ್ತು)
• 5:00 PM: ಸ್ಕ್ವಾಷ್ - 32 ರ ಪುರುಷರ ಸಿಂಗಲ್ಸ್ ಸುತ್ತಿನಲ್ಲಿ ರಮಿತ್ ಟಂಡನ್ ಮತ್ತು ಸೌರವ್ ಘೋಸಲ್; 32 ರ ಮಹಿಳೆಯರ ಸಿಂಗಲ್ಸ್ ಸುತ್ತಿನಲ್ಲಿ ಜೋಷ್ನಾ ಚಿನಪ್ಪ ಮತ್ತು ಸುನಯ್ನಾ ಸಾರಾ ಕುರುವಿಲ್ಲಾ.
• 5:45 PM: ಸ್ಕ್ವಾಷ್ - ಜೋಶ್ನಾ ಚಿನಪ್ಪ vs ಮೇಗನ್ ಅತ್ಯುತ್ತಮ ಮಹಿಳಾ ಸಿಂಗಲ್ಸ್ ರೌಂಡ್ ಆಫ್
• 32 5:45 PM: ಸ್ಕ್ವಾಷ್ - ಸುನಯ್ನಾ ಕುರುವಿಲಾ vs ಐಫಾ ಅಜ್ಮಾನ್ ಮಹಿಳೆಯರ ಸಿಂಗಲ್ಸ್ ರೌಂಡ್ ಆಫ್ 32
• 6:15 PM: ಸ್ಕ್ವಾಷ್ - ಸೌರವ್ ಘೋಷಾಲ್ ವಿರುದ್ಧ ಶಮಿ ವಕೀಲ್ ಪುರುಷರ ಸಿಂಗಲ್ಸ್ ರೌಂಡ್ ಆಫ್ 32
• 7:30 PM: ಲಾನ್ ಬೌಲ್ಸ್ - ಪುರುಷರ ತಂಡ ಜೋಡಿಗಳು ವಿಭಾಗೀಯ ಆಟ 3 ರ ವಿರುದ್ಧ ಕುಕ್ ದ್ವೀಪಗಳು
• 8:00 PM: ವೇಟ್‌ಲಿಫ್ಟಿಂಗ್ - ಮಹಿಳೆಯರ 49 ಕೆಜಿ ವಿಭಾಗದಲ್ಲಿ ಸೈಖೋಮ್ ಮೀರಾಬಾಯಿ ಚಾನು
• 8:30 PM: ಟೇಬಲ್ ಟೆನ್ನಿಸ್ - ಮಹಿಳೆಯರ ತಂಡ ಕ್ವಾರ್ಟರ್ ಫೈನಲ್
• 8:30 PM: ಸೈಕ್ಲಿಂಗ್ - ಪುರುಷರ ಕೀರಿನ್ ಮೊದಲ ಸುತ್ತಿನಲ್ಲಿ ಎಸೊವ್ ಅಲ್ಬೆನ್
• 8:30 PM: ಪುರುಷರ ಟೇಬಲ್ ಟೆನಿಸ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ vs ಉತ್ತರ ದ್ವೀಪ
• 9:00 PM: ಜಿಮ್ನಾಸ್ಟಿಕ್ಸ್ - ಮಹಿಳಾ ತಂಡ ಫೈನಲ್ ಮತ್ತು ವೈಯಕ್ತಿಕ ಅರ್ಹತಾ ಉಪವಿಭಾಗ 3ರಲ್ಲಿ ಪ್ರಣತಿ ನಾಯಕ್, ರುತುಜಾ ನಟರಾಜ್ ಮತ್ತು ಪ್ರತಿಷ್ಟಾ ಸಮಂತಾ .
10:30 PM: ಲಾನ್ ಬೌಲ್ಸ್ - ಮಹಿಳಾ ತಂಡ ಫೋರ್ಸ್ ವಿಭಾಗೀಯ ಆಟ 3 ರ ವಿರುದ್ಧ ಕೆನಡಾ.
11:30 PM: ಬ್ಯಾಡ್ಮಿಂಟನ್ - ಆಸ್ಟ್ರೇಲಿಯಾ ವಿರುದ್ಧ ಮಿಶ್ರ ತಂಡ A ಗುಂಪಿನಲ್ಲಿ ಭಾರತ
11:30 PM: ಹಾಕಿ - ಭಾರತ vs ವೇಲ್ಸ್ ಮಹಿಳೆಯರ ಪೂಲ್ ಎ
12:00 AM: ಬಾಕ್ಸಿಂಗ್ - 70 ಕೆಜಿ ವಿಭಾಗದ ರೌಂಡ್ 1 ರಲ್ಲಿ ಲೊವ್ಲಿನಾ ಬೊರ್ಗೊಹೈನ್ ವಿರುದ್ಧ ಎನ್ ಏರಿಯನ್
12:13 AM: ಈಜು - ಕುಶಾಗ್ರಾ ರಾವತ್ 200M ಫ್ರೀಸ್ಟೈಲ್ ಫೈನಲ್
12:30 AM: ವೇಟ್‌ಲಿಫ್ಟಿಂಗ್ - ಮಹಿಳೆಯರ 55 ಕೆಜಿ ಫೈನಲ್‌ನಲ್ಲಿ ಬಿಂದ್ಯಾರಾಣಿ ದೇವಿ
• 1:00 AM: ಬಾಕ್ಸಿಂಗ್ - 92 ಕೆಜಿ ವಿಭಾಗದಲ್ಲಿ 1 ರೌಂಡ್‌ನಲ್ಲಿ ಸಂಜೀತ್ ವಿರುದ್ಧ ಪಿಎಫ್ ಅಟೊ ಲೆಯು
1:35 AM: ಈಜು - ಶ್ರೀಹರಿ ನಟರಾಜ್ ಪುರುಷರ 100M ಬ್ಯಾಕ್‌ಸ್ಟ್ರೋಕ್ ಫೈನಲ್

ಮೊದಲ ದಿನದ ಮುಕ್ತಾಯದ ನಂತರ ಪದಕ ಪಟ್ಟಿಯ ಟಾಪ್ 5 ತಂಡಗಳು
1. 8 ಚಿನ್ನ, 4 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗೆದ್ದಿರುವ ಆಸ್ಟ್ರೇಲಿಯಾ 16 ಪದಗಳನ್ನು ಪಡೆದುಕೊಂಡು ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
2. 3 ಚಿನ್ನ, 3 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ಗೆದ್ದಿರುವ ನ್ಯೂಜಿಲೆಂಡ್ ಪದಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ.
3. 2 ಚಿನ್ನ, 5 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿರುವ ಇಂಗ್ಲೆಂಡ್ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
4. 1 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ಗೆದ್ದಿರುವ ಕೆನಡಾ ದೇಶ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ
5. 1 ಚಿನ್ನ, 1 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗೆದ್ದಿರುವ ಸ್ಕಾಟ್ಲೆಂಡ್ ಪದಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ಮೊದಲ ದಿನ ಭಾರತದ ಪಾಲಿಗಿಲ್ಲ ಯಾವುದೇ ಪದಕ
ಇನ್ನು ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ ಮೊದಲ ದಿನದಂದು ಭಾರತದ ಯಾವುದೇ ಕ್ರೀಡಾಪಟು ಕೂಡ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ಆದರೆ ಪ್ರಥಮ ಪಂದ್ಯದಲ್ಲಿ ಬಹುತೇಕ ಭಾರತೀಯ ಕ್ರೀಡಾಪಟುಗಳು ಜಯ ಸಾಧಿಸಿದ್ದು ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ಪೈಕಿ ಯಾವ ಕ್ರೀಡಾಪಟುಗಳು ಪದಕಕ್ಕೆ ಕೊರಳೊಡ್ಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications