Commonwealth Games 2022: 3ನೇ ದಿನ ಚಿನ್ನದ ಬೇಟೆಯಾಡಿದ ಭಾರತೀಯರು; 4ನೇ ದಿನದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಪ್ರಸ್ತುತ ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ಜರಗುತ್ತಿರುವ ಪ್ರತಿಷ್ಠಿತ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಇಂದು ( ಆಗಸ್ಟ್ 1 ) ನಾಲ್ಕನೇ ದಿನದ ಸ್ಪರ್ಧೆಗಳು ಹಾಗೂ ಪಂದ್ಯಗಳು ನಡೆಯಲಿವೆ. ಮೂರನೇ ದಿನದ ಮುಕ್ತಾಯದ ಹಂತಕ್ಕೆ ಆಸ್ಟ್ರೇಲಿಯಾ ಪದಕ ಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದರೆ, ನ್ಯೂಜಿಲೆಂಡ್ ದ್ವಿತೀಯ ಸ್ಥಾನಕ್ಕೆ ಏರಿಕೆ ಕಂಡಿದೆ ಹಾಗೂ ದ್ವಿತೀಯ ಸ್ಥಾನದಲ್ಲಿದ್ದ ಇಂಗ್ಲೆಂಡ್ ತೃತೀಯ ಸ್ಥಾನಕ್ಕೆ ಕುಸಿದಿದೆ. ಇನ್ನು ಮೂರನೇ ದಿನದಂದು ಭಾರತ 2 ಚಿನ್ನದ ಪದಕಗಳನ್ನು ಗೆದ್ದ ಪರಿಣಾಮ ಪದಕ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಿಗಿತ ಕಂಡಿದೆ.
ಎರಡನೇ ದಿನದ ಮುಕ್ತಾಯದ ಹಂತಕ್ಕೆ 4 ಪದಕಗಳನ್ನು ಗೆದ್ದಿದ್ದ ಭಾರತದ ಪರ ಮೂರನೇ ದಿನದಂದು 67 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಜೆರೆಮಿ ಲಾಲ್ರಿನುಂಗ ಚಿನ್ನದ ಪದಕ ಹಾಗೂ 73 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಅಚಿಂತಾ ಶೆಯುಲಿ ಚಿನ್ನದ ಪದಕಗಳನ್ನು ಗೆದ್ದರು. ಈ ಮೂಲಕ ಭಾರತದ ಪದಕಗಳ ಸಂಖ್ಯೆ ಆರಕ್ಕೇರಿದೆ.
ಇನ್ನು ಮೂರನೇ ದಿನ ಯಶಸ್ವಿಯಾಗಿ ಮುಕ್ತಾಯವಾದ ನಂತರ ಕ್ರೀಡಾಕೂಟದ ನಾಲ್ಕನೇ ದಿನದಂದು ಭಾರತೀಯರು ಭಾಗವಹಿಸಲಿರುವ ಸ್ಟರ್ಧೆಗಳ ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ.

ನಾಲ್ಕನೇ ದಿನದ ( ಆಗಸ್ಟ್ 1 ) ಸ್ಪರ್ಧೆಗಳ ಪಟ್ಟಿ
ಲಾನ್ ಬೌಲ್ಸ್:
• ಮಹಿಳೆಯರ 4 ಸೆಮಿಫೈನಲ್ (1:00 PM)
ಜೂಡೋ: (ಮಧ್ಯಾಹ್ನ 2:30ರ ನಂತರ)
• ಪುರುಷರ 66 ಕೆಜಿ ರೌಂಡ್ ಆಫ್ 16: ಜಸ್ಲೀನ್ ಸಿಂಗ್ ಸೈನಿ
• ಮಹಿಳೆಯರ 57 ಕೆಜಿ 16 ರ ಸುತ್ತು: ಸುಚಿಕಾ ತರಿಯಾಲ್
• ಪುರುಷರ 60 ಕೆಜಿ ಸುತ್ತಿನ 16: ವಿಜಯ್ ಕುಮಾರ್ ಯಾದವ್
•ಮಹಿಳೆಯರ 48 ಕೆಜಿ ಕ್ವಾರ್ಟರ್ ಫೈನಲ್: ಶುಶೀಲಾ ದೇವಿ ಲಿಕ್ಮಾಬಮ್
ಸ್ಕ್ವ್ಯಾಷ್:
• ಮಹಿಳೆಯರ ಸಿಂಗಲ್ಸ್ ಪ್ಲೇಟರ್ ಕ್ವಾರ್ಟರ್ ಫೈನಲ್: ಸುನೈನಾ ಸಾರಾ ಕುರುವಿಲ್ಲಾ (ಸಂಜೆ 4:30)
• ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್: ಜೋಷ್ನಾ ಚಿನ್ನಪ್ಪ (ಸಂಜೆ 6:00)
ಈಜು:
• ಪುರುಷರ 100 ಮೀ ಬಟರ್‌ಫ್ಲೈ ಹೀಟ್ 6: ಸಜನ್ ಪ್ರಕಾಶ್ (3:51 PM)
ಬಾಕ್ಸಿಂಗ್:
• 48-51 ಕೆಜಿ ವಿಭಾಗ (ಫ್ಲೈವೇಟ್) 16 ರ ಸುತ್ತು: ಅಮಿತ್ ಫಂಗಲ್ (4:45 PM)
• 54-57 ಕೆಜಿ ವಿಭಾಗ (ಫೆದರ್‌ವೇಟ್) 16 ರ ಸುತ್ತು: ಹುಸ್ಸಾಮ್ ಉದ್ದೀನ್ ಮೊಹಮ್ಮದ್ (ಸಂಜೆ 6:00)
• 75-80 ಕೆಜಿ ವಿಭಾಗ (ಲೈಟ್ ಹೆವಿವೇಟ್) 16 ರ ಸುತ್ತು: ಆಶಿಶ್ ಕುಮಾರ್ (1:00AM)
ಸೈಕ್ಲಿಂಗ್:
• ಮಹಿಳೆಯರ ಕೀರೆನ್ 1 ನೇ ಸುತ್ತು: ತ್ರಿಯಾಶಿ ಪಾಲ್, ಶುಶಿಕಲಾ ಅಗಾಶೆ ಮತ್ತು ಮಯೂರಿ ಲೂಟ್ (6:32 PM)
• ಪುರುಷರ 40 ಕಿಮೀ ಪಾಯಿಂಟ್‌ಗಳ ಓಟದ ಕ್ವಾಲಿಫೈಯರ್: ನಮನ್ ಕಪಿಲ್, ವೆಂಕಪ್ಪ ಕೆಂಗಲಗುತ್ತಿ, ದಿನೇಶ್ ಕುಮಾರ್ ಮತ್ತು ವಿಶ್ವಜೀತ್ ಸಿಂಗ್ (ಸಂಜೆ 6:52)
• ಪುರುಷರ 1000 ಮೀ ಟೈಮ್ ಟ್ರಯಲ್ ಫೈನಲ್ಸ್: ರೊನಾಲ್ಡೊ ಲೈಟೊಂಜಮ್, ಡೇವಿಡ್ ಬೆಕ್ಹ್ಯಾಮ್ (8:02 PM)
• ಮಹಿಳೆಯರ 10 ಕಿಮೀ ಸ್ಕ್ರ್ಯಾಚ್ ರೇಸ್ ಫೈನಲ್: ಮೀನಾಕ್ಷಿ (ರಾತ್ರಿ 9:37)
ಹಾಕಿ:
• ಪುರುಷರ ಪೂಲ್ ಬಿ: ಭಾರತ vs ಇಂಗ್ಲೆಂಡ್ (ರಾತ್ರಿ 8:30)
ವೇಟ್ ಲಿಫ್ಟ್:
• ಪುರುಷರ 81 ಕೆಜಿ: ಅಜಯ್ ಸಿಂಗ್ (2:00 PM)
• ಮಹಿಳೆಯರ 71 ಕೆಜಿ: ಹರ್ಜಿಂದರ್ ಸಿಂಗ್ (11:00 PM)
ಟೇಬಲ್ ಟೆನ್ನಿಸ್:
• ಪುರುಷರ ತಂಡ ಸೆಮಿಫೈನಲ್: ಭಾರತ vs ನೈಜೀರಿಯಾ (11:30 PM)
ಪ್ಯಾರಾ-ಈಜು:
• ಪುರುಷರ 50 ಮೀ ಫ್ರೀಸ್ಟೈಲ್ S7 ಫೈನಲ್: ನಿರಂಜನ್ ಮುಕುಂದನ್ ಮತ್ತು ಸುವಾಶ್ ನಾರಾಯಣ ಜಾಧವ್ (12:46AM)

ಇಲ್ಲಿಯವರೆಗೂ ಭಾರತದ ಪರ ಚಿನ್ನ ಗೆದ್ದವರ ಪಟ್ಟಿ
• ಮೀರಾಬಾಯಿ ಚಾನು - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ
• ಜೆರೆಮಿ ಲಾಲ್ರಿನುಂಗ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ
• ಅಚಿಂತಾ ಶೆಯುಲಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ

ಇತರೆ ಪದಕ ಗೆದ್ದವರು
• ಸಂಕೇತ್ ಮಹದೇವ್ ಸರ್ಗರ್ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ
• ಗುರುರಾಜ್ ಪೂಜಾರಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ
• ಬಿಂದ್ಯಾ ರಾಣಿ ದೇವಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications