For Quick Alerts
ALLOW NOTIFICATIONS  
For Daily Alerts

Commonwealth Games 2022: 4ನೇ ದಿನ 3 ಪದಕ; ಐದನೇ ದಿನದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

Commonwealth Games 2022: Day 5 full schedule list of India

ಸದ್ಯ ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಟಿತ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಭಾರತದ ಕ್ರೀಡಾಪಟುಗಳು ಕ್ರೀಡಾಕೂಟದ ಪ್ರಥಮ ದಿನ ಯಾವುದೇ ಪದಕವನ್ನು ಗೆದ್ದಿರಲಿಲ್ಲ. ನಂತರ ದ್ವಿತೀಯ ದಿನದಂದು ಪದಕ ಬೇಟೆಯನ್ನು ಆರಂಭಿಸಿದ ಭಾರತೀಯರು ನಾಲ್ಕನೇ ದಿನದ ಮುಕ್ತಾಯದ ಹಂತಕ್ಕೆ ಒಟ್ಟು 9 ಪದಕಗಳನ್ನು ತನ್ನದಾಗಿಸಿಕೊಂಡಿದೆ.

ನಾಲ್ಕನೇ ದಿನದಂದು ಭಾರತೀಯರು 1 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಭಾರತದ ವೇಟ್ ಲಿಫ್ಟರ್ ಹರ್ಜಿಂದರ್ ಸಿಂಗ್ ಮಹಿಳಾ 71 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದರು, ಜುಡೋ ಪಟು ಸುಶೀಲಾದೇವಿ 41 ಕೆಜಿ ವೇಟ್ ಲಿಫ್ಟಿಂಗ್ ಮಹಿಳಾ ವಿಭಾಗದ ಫೈನಲ್ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾದ ಕ್ರೀಡಾಪಟು ವಿರುದ್ಧ ಸೋತು ಬೆಳ್ಳಿ ಪದಕವನ್ನು ಗೆದ್ದರು ಹಾಗೂ ಭಾರತದ ವಿಜಯ್ ಕುಮಾರ್ ಯಾದವ್ ಪುರುಷರ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದರು.

ಹೀಗೆ ನಾಲ್ಕನೇ ದಿನದಂದು 3 ಪದಕಗಳನ್ನು ತನ್ನದಾಗಿಸಿಕೊಂಡಿರುವ ಭಾರತ ಐದನೇ ದಿನದಂದು ಯಾವ ಸ್ಪರ್ಧೆಗಳಲ್ಲಿ ಪದಕವನ್ನು ಗೆಲ್ಲಬಹುದು ಹಾಗೂ ಭಾರತೀಯರ ಐದನೇ ದಿನದ ವೇಳಾಪಟ್ಟಿ ಹೇಗಿದೆ ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.

ಐದನೇ ದಿನದ ವೇಳಾಪಟ್ಟಿ

ಐದನೇ ದಿನದ ವೇಳಾಪಟ್ಟಿ

ಪ್ರಸ್ತುತ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ ಐದನೇ ದಿನದ ( ಆಗಸ್ಟ್ 2 ) ಭಾರತೀಯ ಕ್ರೀಡಾಪಟುಗಳ ವೇಳಾಪಟ್ಟಿ ಇಲ್ಲಿದೆ.

01:00 PM: ಭಾರತ vs ನ್ಯೂಜಿಲೆಂಡ್ - ಮಹಿಳೆಯರ ಜೋಡಿ ರೌಂಡ್ 1 (ಲಾನ್ ಬೌಲ್ಸ್)

01:00 PM: ಭಾರತ vs ನ್ಯೂಜಿಲೆಂಡ್ - ಮಹಿಳೆಯರ ಟ್ರಿಪಲ್ಸ್ ರೌಂಡ್ 1 (ಲಾನ್ ಬೌಲ್ಸ್)

02:00 PM: ಪುನಮ್ ಯಾದವ್ - ಮಹಿಳೆಯರ 76 ಕೆಜಿ ಫೈನಲ್ (ವೇಟ್ ಲಿಫ್ಟಿಂಗ್)

02:30 PM: ಮುರಳಿ ಶ್ರೀಶಂಕರ್, ಮುಹಮ್ಮದ್ ಅನೀಸ್ ಯಾಹಿಯಾ - ಪುರುಷರ ಲಾಂಗ್ ಜಂಪ್ ಅರ್ಹತಾ ಸುತ್ತು (ಅಥ್ಲೆಟಿಕ್ಸ್)


03:04 PM: ಶ್ರೀಹರಿ ನಟರಾಜ್ - ಪುರುಷರ 200 ಮೀ ಬ್ಯಾಕ್‌ಸ್ಟ್ರೋಕ್ ಹೀಟ್ 2 (ಈಜು)

04:10 PM: ಅದ್ವೈತ್ ಪೇಜ್ - ಪುರುಷರ 1500ಮೀ ಫ್ರೀಸ್ಟೈಲ್ ಹೀಟ್ 1 (ಈಜು)

04:15 PM: ಮೃದುಲ್ ಬೊರ್ಗೊಹೈನ್ vs ಶಾನನ್ ಮೆಸಿಲ್ರಾಯ್ - ಪುರುಷರ ಸಿಂಗಲ್ಸ್ ರೌಂಡ್ 1 (ಲಾನ್ ಬೌಲ್ಸ್)


04:15 PM: ಭಾರತ vs ದಕ್ಷಿಣ ಆಫ್ರಿಕಾ - ಮಹಿಳೆಯರ ಫೋರ್ಸ್ ಫೈನಲ್ಸ್ (ಲಾನ್ ಬೌಲ್ಸ್)

04:28 PM: ಕುಶಾಗ್ರಾ ರಾವತ್ - ಪುರುಷರ 1500 ಮೀ ಫ್ರೀಸ್ಟೈಲ್ ಹೀಟ್ 2 (ಈಜು)

05:30 PM: ಸತ್ಯಜಿತ್ ಮೊಂಡಲ್ - ಪುರುಷರ ವಾಲ್ಟ್ ಫೈನಲ್ (ಜಿಮ್ನಾಸ್ಟಿಕ್ಸ್)

06:00 PM: ಭಾರತ vs ಇಂಗ್ಲೆಂಡ್/ಸಿಂಗಪುರ - ಪುರುಷರ ಚಿನ್ನದ ಪದಕ ಪಂದ್ಯ (ಅರ್ಹತೆ ಇದ್ದರೆ) (ಟೇಬಲ್ ಟೆನಿಸ್)

06:30 PM: ಭಾರತ vs ಇಂಗ್ಲೆಂಡ್ - ಮಹಿಳೆಯರ ಪೂಲ್ ಎ ಪಂದ್ಯ (ಹಾಕಿ)

06:30 PM: ವಿಕಾಸ್ ಠಾಕೂರ್ - ಪುರುಷರ 96 KG ಫೈನಲ್ಸ್ (ವೇಟ್‌ಲಿಫ್ಟಿಂಗ್)

06:35 PM: ಸೈಫ್ ತಾಂಬೋಲಿ - ಪುರುಷರ ಸಮಾನಾಂತರ ಬಾರ್ಸ್ ಫೈನಲ್ (ಜಿಮ್ನಾಸ್ಟಿಕ್ಸ್)


08:30 PM: ಸುನಯ್ನಾ ಕುರುವಿಲ್ಲಾ vs ಫೈಜಾ ಜಾಫರ್ (ಪಾಕಿಸ್ತಾನ) - ಮಹಿಳೆಯರ ಪ್ಲೇಟ್ ಸೆಮಿ-ಫೈನಲ್ (ಸ್ಕ್ವಾಷ್)

08:45 PM: ಭಾರತ vs ಫಿಜಿ - ಪುರುಷರ ಫೋರ್ಸ್ ರೌಂಡ್ 1 (ಲಾನ್ ಬೌಲ್ಸ್)

08:45 PM: ಭಾರತ vs ಇಂಗ್ಲೆಂಡ್ - ಮಹಿಳೆಯರ ಟ್ರಿಪಲ್ಸ್ ರೌಂಡ್ 2 (ಲಾನ್ ಬೌಲ್ಸ್)

09:15 PM: ಸೌರವ್ ಘೋಷಾಲ್ vs ಪಾಲ್ ಕೋಲ್ (ನ್ಯೂಜಿಲೆಂಡ್) - ಪುರುಷರ ಸಿಂಗಲ್ಸ್ ಸೆಮಿ-ಫೈನಲ್ (ಸ್ಕ್ವಾಷ್)

10:00 PM: ಮಲೇಷ್ಯಾ ವಿರುದ್ಧ ಭಾರತ (ಅರ್ಹತೆ ಇದ್ದರೆ) - ಮಿಶ್ರ ತಂಡ ಫೈನಲ್ಸ್ (ಬ್ಯಾಡ್ಮಿಂಟನ್)

11:00 PM: ಉಷಾ ಬನ್ನೂರು ನಟೇಶ್ ಕುಮಾರ - ಮಹಿಳೆಯರ 87 ಕೆಜಿ ಫೈನಲ್ಸ್ (ವೇಟ್ ಲಿಫ್ಟಿಂಗ್)

11:43 PM: ಶ್ರೀಹರಿ ನಟರಾಜ್ - ಪುರುಷರ 200 ಮೀ ಬ್ಯಾಕ್‌ಸ್ಟ್ರೋಕ್ ಫೈನಲ್ (ಅರ್ಹತೆ ಇದ್ದರೆ) (ಈಜು)

11:45 PM: ರೋಹಿತ್ ಟೋಕಾಸ್ ವಿರುದ್ಧ ಆಲ್ಫ್ರೆಡ್ ಕೋಟೆ (ಘಾನಾ) - ಪುರುಷರ 63.5 - 67 KG ರೌಂಡ್ ಆಫ್ 16 (ಬಾಕ್ಸಿಂಗ್)

00:03 AM (ಆಗಸ್ಟ್ 3): ತೇಜಸ್ವಿನ್ ಶಂಕರ್ - ಪುರುಷರ ಹೈ ಜಂಪ್ ಅರ್ಹತಾ ಸುತ್ತು (ಅಥ್ಲೆಟಿಕ್ಸ್)

00:52 AM (ಆಗಸ್ಟ್ 3): ಸೀಮಾ ಪುನಿಯಾ, ನವಜೀತ್ ಕೌರ್ ಧಿಲ್ಲೋನ್ - ಮಹಿಳೆಯರ ಡಿಸ್ಕಸ್ ಥ್ರೋ ಫೈನಲ್ (ಅಥ್ಲೆಟಿಕ್ಸ್)

ಇಲ್ಲಿಯವರೆಗೂ ಪದಕ ಗೆದ್ದವರು

ಇಲ್ಲಿಯವರೆಗೂ ಪದಕ ಗೆದ್ದವರು

ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ ನಾಲ್ಕನೇ ದಿನದ ಮುಕ್ತಾಯದ ಹಂತಕ್ಕೆ ಭಾರತದ ಒಟ್ಟು 9 ಕ್ರೀಡಾಪಟುಗಳು ಪದಕಗಳನ್ನು ಗೆದ್ದಿದ್ದು, ಅವರ ಪಟ್ಟಿ ಕೆಳಕಂಡಂತಿದೆ.

• ಮೀರಾಬಾಯಿ ಚಾನು - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ

• ಜೆರೆಮಿ ಲಾಲ್ರಿನುಂಗ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ

• ಅಚಿಂತಾ ಶೆಯುಲಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ

ಇತರೆ ಪದಕ ಗೆದ್ದವರು

• ಸಂಕೇತ್ ಮಹದೇವ್ ಸರ್ಗರ್ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ

• ಗುರುರಾಜ್ ಪೂಜಾರಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ

• ಬಿಂದ್ಯಾ ರಾಣಿ ದೇವಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ

• ಸುಶೀಲಾದೇವಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿಬೆಳ್ಳಿ ಪದಕ

• ವಿಜಯ್ ಕುಮಾರ್ ಯಾದವ್ - ಪುರುಷರ ವಿಭಾಗದಲ್ಲಿ ಕಂಚಿನ ಪದಕ

• ಹರ್ ಜಿಂದರ್ ಕೌರ್ - ಮಹಿಳಾ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ

ಐದನೇ ದಿನ ಚಿನ್ನದ ನಿರೀಕ್ಷೆ

ಐದನೇ ದಿನ ಚಿನ್ನದ ನಿರೀಕ್ಷೆ

ಇನ್ನು ನಾಲ್ಕನೇ ದಿನದಂದು ಭಾರತದ ಯಾವುದೇ ಕ್ರೀಡಾಪಟು ಕೂಡಾ ಚಿನ್ನದ ಪದಕ ಗೆಲ್ಲದೆ ಇದ್ದು, ಐದನೇ ದಿನದಂದು ಭಾರತೀಯ ವನಿತೆಯರ ಲಾನ್ ಬೌಲ್ಸ್ ತಂಡ ಫೈನಲ್ ಪಂದ್ಯದಲ್ಲಿ ಸೆಣಸಾಡಲಿದ್ದು ಚಿನ್ನ ಗೆಲ್ಲುವ ನಿರೀಕ್ಷೆಯಿದೆ. ಪುರುಷರ ವಾಲ್ಟ್ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಸತ್ಯಜಿತ್ ಮೊಂಡಲ್ ಕೂಡ ಪದಕ ಗೆಲ್ಲುವುದು ಖಚಿತ.ಪುರುಷರ 96 ಕೆಜಿ ವೇಟ್ ಲಿಫ್ಟಿಂಗ್ ಫೈನಲ್ ಪಂದ್ಯವನ್ನಾಡಲಿರುವ ವಿಕಾಸ್ ಠಾಕೂರ್ ಚಿನ್ನ ಗೆಲ್ಲುವ ಸನಿಹದಲ್ಲಿದ್ದಾರೆ. ಮಹಿಳೆಯರ 87 ಕೆಜಿ ವೇಟ್ ಲಿಫ್ಟಿಂಗ್ ಫೈನಲ್ ಪಂದ್ಯದಲ್ಲಿ ಉಷಾ ಬನ್ನೂರು ನಟೇಶ ಕುಮಾರ ಸೆಣಸಾಡಲಿದ್ದು ಪದಕ ಗೆಲ್ಲುವುದು ಖಚಿತ.

Story first published: Tuesday, August 2, 2022, 12:10 [IST]
Other articles published on Aug 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+