Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CWG 2022: ಕಾಮನ್‍ವೆಲ್ತ್ ಮುಕ್ತಾಯ; ಭಾರತದ ಪರ ಪದಕ ಗೆದ್ದ ಎಲ್ಲಾ ಕ್ರೀಡಾಪಟುಗಳ ಪಟ್ಟಿ

Commonwealth Games 2022: Full list of Indian athletes who have won medal in commonwealth games

ಕಳೆದ ಜುಲೈ 28ರಂದು ಆರಂಭವಾಗಿದ್ದ ಪ್ರತಿಷ್ಠಿತ ಕಾಮನ್‍ವೆಲ್ತ್ ಗೇಮ್ಸ್ ಇಂಗ್ಲೆಂಡ್ ಬರ್ಮಿಂಗ್ಹ್ಯಾಮ್‌ನಲ್ಲಿ ಯಶಸ್ವಿಯಾಗಿ ಸಂಪೂರ್ಣವಾಗಿ ಮುಕ್ತಾಯವಾಗಿದ್ದು, ಇಂದು ( ಆಗಸ್ಟ್ 8 ) ಅಧಿಕೃತವಾಗಿ ತೆರೆಬಿದ್ದಿದೆ.

ಅಂತಿಮ ದಿನದಂದು ಭಾರತದ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಲಕ್ಷ್ಯ ಸೇನ್ ಚಿನ್ನದ ಪದಕವನ್ನು ಗೆದ್ದರೆ, ಬ್ಯಾಡ್ಮಿಂಟನ್ ವನಿತೆಯರ ವಿಭಾಗದಲ್ಲಿ ಪಿವಿ ಸಿಂಧು ಚಿನ್ನದ ಪದಕವನ್ನು ಗೆದ್ದರು ಹಾಗೂ ಬ್ಯಾಡ್ಮಿಂಟನ್ ವಿಭಾಗದ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಚಿನ್ನದ ಪದಕವನ್ನು ಗೆದ್ದರು. ಹೀಗೆ ಅಂತಿಮ ದಿನದಂದು ಬ್ಯಾಡ್ಮಿಂಟನ್ ವಿಭಾಗದಲ್ಲಿ ಹ್ರಾಟ್ರಿಕ್ ಚಿನ್ನದ ಪದಕ ಗೆದ್ದ ಭಾರತದ ಪರ ಪುರುಷರ ಹಾಕಿ ತಂಡ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಬೆಳ್ಳಿ ಪದಕವನ್ನು ಗೆದ್ದರು.

ಈ ಮೂಲಕ ಈ ಬಾರಿಯ ಕಾಮನ್‍ವೆಲ್ತ್ ಗೇಮ್ಸ್ ಮುಕ್ತಾಯದ ಹಂತಕ್ಕೆ ಭಾರತ ಒಟ್ಟು 61 ಪದಕಗಳನ್ನು ಗೆದ್ದಿದ್ದು, ಪದಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಭಾರತದ ಪರ ಪದಕ ಗೆದ್ದ ಎಲ್ಲಾ ಕ್ರೀಡಾಪಟುಗಳ ಪಟ್ಟಿ ಕೆಳಕಂಡಂತಿದೆ.

ಭಾರತದ ಪರ ಪದಕ ಗೆದ್ದ ಕ್ರೀಡಾಪಟುಗಳ ಸಂಪೂರ್ಣ ಪಟ್ಟಿ

ಭಾರತದ ಪರ ಪದಕ ಗೆದ್ದ ಕ್ರೀಡಾಪಟುಗಳ ಸಂಪೂರ್ಣ ಪಟ್ಟಿ

1 ಸಂಕೇತ್ ಸರ್ಗರ್ ಬೆಳ್ಳಿ ಪುರುಷರ 55 ಕೆಜಿ ವೇಟ್ ಲಿಫ್ಟಿಂಗ್

2 ಗುರುರಾಜ ಪೂಜಾರಿ ಕಂಚಿನ ಪುರುಷರ 61 ಕೆಜಿ ವೇಟ್ ಲಿಫ್ಟಿಂಗ್

3 ಮೀರಾಬಾಯಿ ಚನ್ಬು ಚಿನ್ನ ಮಹಿಳೆಯರ 49 ಕೆಜಿ ವೇಟ್ ಲಿಫ್ಟಿಂಗ್

4 ಬಿಂದ್ಯಾರಾಣಿ ದೇವಿ ಬೆಳ್ಳಿ ಮಹಿಳೆಯರ 55 ಕೆಜಿ ವೇಟ್ ಲಿಫ್ಟಿಂಗ್

5 ಜೆರೆಮಿ ಲಾಲ್ರಿನ್ನುಂಗಾ ಚಿನ್ನದ ಪುರುಷರ 67 ಕೆಜಿ ವೇಟ್‌ಲಿಫ್ಟಿಂಗ್

6 ಅಚಿಂತಾ ಶೆಯುಲಿ ಚಿನ್ನದ ಪುರುಷರ 73 ಕೆಜಿ ವೇಟ್‌ಲಿಫ್ಟಿಂಗ್

7 ಸುಶೀಲಾ ದೇವಿ ಲಿಕ್ಮಾಬಮ್ ಬೆಳ್ಳಿ ಮಹಿಳೆಯರ 48 ಕೆಜಿ ಜೂಡೋ

8 ವಿಜಯ್ ಕುಮಾರ್ ಯಾದವ್ ಕಂಚಿನ ಪುರುಷರ 60 ಕೆಜಿ ಜೂಡೋ

9 ಹರ್ಜಿಂದರ್ ಕೌರ್ ಕಂಚಿನ ಮಹಿಳೆಯರ 71 ಕೆಜಿ ವೇಟ್ ಲಿಫ್ಟಿಂಗ್

10 ಭಾರತೀಯ ಮಹಿಳಾ ತಂಡ ಚಿನ್ನದ ಮಹಿಳಾ ಬೌಲ್‌ಗಳು ಲಾನ್ ಬೌಲ್ಸ್

11 ವಿಕಾಸ್ ಠಾಕೂರ್ ಬೆಳ್ಳಿ ಪುರುಷರ 96 ಕೆಜಿ ವೇಟ್ ಲಿಫ್ಟಿಂಗ್

12 ಭಾರತೀಯ ಪುರುಷರ ತಂಡ ಚಿನ್ನದ ಪುರುಷರ ತಂಡ ಟೇಬಲ್ ಟೆನಿಸ್

13 ಭಾರತೀಯ ಮಿಶ್ರ ತಂಡ ಬೆಳ್ಳಿ ಮಿಶ್ರ ತಂಡ ಬ್ಯಾಡ್ಮಿಂಟನ್

14 ಲವ್‌ಪ್ರೀತ್ ಸಿಂಗ್ ಕಂಚಿನ ಪುರುಷರ 109 ಕೆಜಿ ವೇಟ್‌ಲಿಫ್ಟಿಂಗ್

15 ಸೌರವ್ ಘೋಸಲ್ ಕಂಚಿನ ಪುರುಷರ ಸಿಂಗಲ್ಸ್ ಸ್ಕ್ವಾಷ್

16 ತುಲಿಕಾ ಮಾನ್ ಬೆಳ್ಳಿ ಮಹಿಳೆಯರ 78+ ಕೆಜಿ ಜೂಡೋ

17 ಗುರ್ದೀಪ್ ಸಿಂಗ್ ಕಂಚಿನ ಪುರುಷರ 109+ ಕೆಜಿ ವೇಟ್ ಲಿಫ್ಟಿಂಗ್

18 ತೇಜಸ್ವಿನ್ ಶಂಕರ್ ಕಂಚಿನ ಪುರುಷರ ಹೈಜಂಪ್ ಅಥ್ಲೆಟಿಕ್ಸ್

19 ಮುರಳಿ ಶ್ರೀಶಂಕರ್ ಬೆಳ್ಳಿ ಪುರುಷರ ಲಾಂಗ್ ಜಂಪ್ ಅಥ್ಲೆಟಿಕ್ಸ್

20 ಸುಧೀರ್ ಗೋಲ್ಡ್ ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್‌ಲಿಫ್ಟಿಂಗ್

21 ಅಂಶು ಮಲಿಕ್ ಬೆಳ್ಳಿ ಮಹಿಳೆಯರ 57 ಕೆಜಿ ಫ್ರೀಸ್ಟೈಲ್ ಕುಸ್ತಿ

22 ಬಜರಂಗ್ ಪುನಿಯಾ ಚಿನ್ನದ ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿ

23 ಸಾಕ್ಷಿ ಮಲಿಕ್ ಚಿನ್ನ ಮಹಿಳೆಯರ 62 ಕೆಜಿ ಫ್ರೀಸ್ಟೈಲ್ ಕುಸ್ತಿ

24 ದೀಪಕ್ ಪುನಿಯಾ ಚಿನ್ನದ ಪುರುಷರ 86 ಕೆಜಿ ಫ್ರೀಸ್ಟೈಲ್ ಕುಸ್ತಿ

25 ದಿವ್ಯಾ ಕಕ್ರಾನ್ ಕಂಚಿನ ಮಹಿಳೆಯರ 68 ಕೆಜಿ ಫ್ರೀಸ್ಟೈಲ್ ಕುಸ್ತಿ

26 ಮೋಹಿತ್ ಗ್ರೆವಾಲ್ ಕಂಚಿನ ಪುರುಷರ 125 ಕೆಜಿ ಫ್ರೀಸ್ಟೈಲ್ ಕುಸ್ತಿ

27 ಪ್ರಿಯಾಂಕಾ ಗೋಸ್ವಾಮಿ ಬೆಳ್ಳಿ ಮಹಿಳೆಯರ 10000ಮೀ ಓಟದ ನಡಿಗೆ ಅಥ್ಲೆಟಿಕ್ಸ್

28 ಅವಿನಾಶ್ ಸೇಬಲ್ ಸಿಲ್ವರ್ ಪುರುಷರ 3000ಮೀ ಸ್ಟೀಪಲ್‌ಚೇಸ್ ಅಥ್ಲೆಟಿಕ್ಸ್

29 ಭಾರತೀಯ ಪುರುಷರ ತಂಡ ಬೆಳ್ಳಿ ಪುರುಷರ ಬೌಂಡರಿಗಳು ಲಾನ್ ಬೌಲ್‌ಗಳು

30 ಜೈಸ್ಮಿನ್ ಲಂಬೋರಿಯಾ ಕಂಚಿನ ಮಹಿಳೆಯರ 60 ಕೆಜಿ ಹಗುರ ಬಾಕ್ಸಿಂಗ್

31 ಪೂಜಾ ಗೆಹ್ಲೋಟ್ ಕಂಚಿನ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿ

32 ರವಿ ಕುಮಾರ್ ದಹಿಯಾ ಚಿನ್ನ ಪುರುಷರ 57 ಕೆಜಿ ಫ್ರೀಸ್ಟೈಲ್ ಕುಸ್ತಿ

33 ವಿನೇಶ್ ಫೋಗಟ್ ಚಿನ್ನ ಮಹಿಳೆಯರ 53 ಕೆಜಿ ಫ್ರೀಸ್ಟೈಲ್ ಕುಸ್ತಿ

34 ನವೀನ್ ಚಿನ್ನ ಪುರುಷರ 74 ಕೆಜಿ ಫ್ರೀಸ್ಟೈಲ್ ಕುಸ್ತಿ

35 ಪೂಜಾ ಸಿಹಾಗ್ ಕಂಚಿನ ಮಹಿಳೆಯರ 76 ಕೆಜಿ ಫ್ರೀಸ್ಟೈಲ್ ಕುಸ್ತಿ

36 ಮೊಹಮ್ಮದ್ ಹುಸಾಮುದ್ದೀನ್ ಕಂಚು ಪುರುಷರ 57 ಕೆಜಿ ಫೆದರ್ ವೇಟ್ ಬಾಕ್ಸಿಂಗ್

37 ದೀಪಕ್ ನೆಹ್ರಾ ಕಂಚಿನ ಪುರುಷರ 97 ಕೆಜಿ ಫ್ರೀಸ್ಟೈಲ್ ಕುಸ್ತಿ

38 ರೋಹಿತ್ ಟೋಕಾಸ್ ಕಂಚಿನ ಪುರುಷರ 67 ಕೆಜಿ ವೆಲ್ಟರ್ ವೇಟ್ ಬಾಕ್ಸಿಂಗ್

39 ಸೋನಾಲ್‌ಬೆನ್ ಪಟೇಲ್ ಕಂಚಿನ ಮಹಿಳಾ ಸಿಂಗಲ್ಸ್ ತರಗತಿಗಳು 3-5 ಪ್ಯಾರಾ ಟೇಬಲ್ ಟೆನಿಸ್

40 ಭಾವಿನಾ ಪಟೇಲ್ ಕಂಚಿನ ಮಹಿಳಾ ಸಿಂಗಲ್ಸ್ ತರಗತಿಗಳು 3-5 ಪ್ಯಾರಾ ಟೇಬಲ್ ಟೆನಿಸ್

41 ಮಹಿಳಾ ಹಾಕಿ ತಂಡ ಕಂಚಿನ ಮಹಿಳಾ ಹಾಕಿ ಹಾಕಿ

42 ನಿತು ಘಂಗಾಸ್ ಚಿನ್ನದ ಮಹಿಳೆಯರ 48 ಕೆಜಿ ಕನಿಷ್ಠ ತೂಕದ ಬಾಕ್ಸಿಂಗ್

43 ಅಮಿತ್ ಪಂಗಲ್ ಚಿನ್ನದ ಪುರುಷರ 51 ಕೆಜಿ ಫ್ಲೈವೇಟ್ ಬಾಕ್ಸಿಂಗ್

44 ಎಲ್ಡೋಸ್ ಪಾಲ್ ಗೋಲ್ಡ್ ಪುರುಷರ ಟ್ರಿಪಲ್ ಜಂಪ್ ಅಥ್ಲೆಟಿಕ್ಸ್

45 ಅಬ್ದುಲ್ಲಾ ಅಬೂಬಕರ್ ಬೆಳ್ಳಿ ಪುರುಷರ ಟ್ರಿಪಲ್ ಜಂಪ್ ಅಥ್ಲೆಟಿಕ್ಸ್

46 ಸಂದೀಪ್ ಕುಮಾರ್ ಕಂಚಿನ ಪುರುಷರ 10000 ಮೀ ಓಟದ ನಡಿಗೆ ಅಥ್ಲೆಟಿಕ್ಸ್

47 ಅನ್ನು ರಾಣಿ ಕಂಚು ಮಹಿಳೆಯರ ಜಾವೆಲಿನ್ ಥ್ರೋ ಅಥ್ಲೆಟಿಕ್ಸ್

48 ನಿಖತ್ ಜರೀನ್ ಗೋಲ್ಡ್ ಮಹಿಳೆಯರ 50 ಕೆಜಿ ಲೈಟ್ ಫ್ಲೈವೇಟ್ ಬಾಕ್ಸಿಂಗ್

49 ಶರತ್ ಕಮಲ್ / ಜಿ ಸತ್ಯನ್ ಬೆಳ್ಳಿ ಪುರುಷರ ಡಬಲ್ಸ್ ಟೇಬಲ್ ಟೆನಿಸ್

50 ದೀಪಿಕಾ ಪಲ್ಲಿಕಲ್ / ಸೌರವ್ ಘೋಸಲ್ ಕಂಚಿನ ಮಿಶ್ರ ಡಬಲ್ಸ್ ಸ್ಕ್ವಾಷ್

51 ಕಿಡಂಬಿ ಶ್ರೀಕಾಂತ್ ಕಂಚು ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್

52 ಮಹಿಳಾ ಕ್ರಿಕೆಟ್ ತಂಡ ಬೆಳ್ಳಿ ಮಹಿಳಾ ಕ್ರಿಕೆಟ್

53 ಶರತ್ ಕಮಲ್ / ಶ್ರೀಜಾ ಅಕುಲಾ ಗೋಲ್ಡ್ ಮಿಶ್ರ ಡಬಲ್ಸ್ ಟೇಬಲ್ ಟೆನಿಸ್

54 ಟ್ರೀಸಾ ಜಾಲಿ / ಗಾಯತ್ರಿ ಗೋಪಿಚಂದ್ ಕಂಚಿನ ಮಹಿಳೆಯರ ಡಬಲ್ಸ್ ಬ್ಯಾಡ್ಮಿಂಟನ್

55 ಸಾಗರ್ ಅಹ್ಲಾವತ್ ಬೆಳ್ಳಿ ಪುರುಷರ 92+ ಕೆಜಿ ಸೂಪರ್ ಹೆವಿವೇಯ್ಟ್ ಬಾಕ್ಸಿಂಗ್

56 ಪಿವಿ ಸಿಂಧು ಚಿನ್ನ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್

57 ಲಕ್ಷ್ಯ ಸೇನ್ ಚಿನ್ನ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್

58 ಸತ್ಯನ್ ಜ್ಞಾನಶೇಖರನ್ ಕಂಚು ಪುರುಷರ ಸಿಂಗಲ್ಸ್ ಟೇಬಲ್ ಟೆನಿಸ್

59 ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ / ಚಿರಾಗ್ ಶೆಟ್ಟಿ ಚಿನ್ನ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್

60 ಶರತ್ ಕಮಲ್ ಗೋಲ್ಡ್ ಪುರುಷರ ಸಿಂಗಲ್ಸ್ ಟೇಬಲ್ ಟೆನಿಸ್

61 ಪುರುಷರ ಹಾಕಿ ತಂಡ ಬೆಳ್ಳಿ ಪುರುಷರ ಹಾಕಿ ಹಾಕಿ

ಲಾನ್ ಬೌಲ್ಸ್‌ನಲ್ಲಿ ಐತಿಹಾಸಿಕ ದಾಖಲೆ

ಲಾನ್ ಬೌಲ್ಸ್‌ನಲ್ಲಿ ಐತಿಹಾಸಿಕ ದಾಖಲೆ

ಇನ್ನು ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ವನಿತೆಯರು ಲಾನ್ ಬೌಲ್ಸ್‌ನಲ್ಲಿ ಚಿನ್ನದ ಪದಕವನ್ನು ಗೆಲ್ಲುವುದರ ಮೂಲಕ ಇದೇ ಮೊದಲ ಬಾರಿಗೆ ಈ ಕ್ರೀಡೆಯಲ್ಲಿ ಪದಕ ಗೆದ್ದ ಐತಿಹಾಸಿಕ ದಾಖಲೆ ಬರೆದರು.

ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಪದಕ ಗೆದ್ದ ಪತ್ನಿ ದೀಪಿಕಾ ಪಲ್ಳಿಕಲ್ ಸಾಧನೆಗೆ ದಿನೇಶ್ ಕಾರ್ತಿಕ್ ಫಿದಾ | *Cricket
ಶೂಟಿಂಗ್ ಇಲ್ಲದಿದ್ದರೂ ಉತ್ತಮ ಸಾಧನೆ

ಶೂಟಿಂಗ್ ಇಲ್ಲದಿದ್ದರೂ ಉತ್ತಮ ಸಾಧನೆ

2018ರಲ್ಲಿ ಕೊನೆಯ ಬಾರಿಗೆ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ 26 ಚಿನ್ನದ ಪದಕ, 20 ಬೆಳ್ಳಿ ಪದಕ ಮತ್ತು 20 ಕಂಚಿನ ಪದಕಗಳು ಸೇರಿದಂತೆ ಒಟ್ಟು 66 ಪದಕಗಳನ್ನು ಗೆದ್ದಿದ್ದ ಭಾರತ ಈ ಬಾರಿ 22 ಚಿನ್ನದ ಪದಕ, 16 ಬೆಳ್ಳಿ ಪದಕ ಹಾಗೂ 23 ಕಂಚಿನ ಪದಕಗಳು ಸೇರಿದಂತೆ ಒಟ್ಟು 61 ಪದಕಗಳನ್ನು ಗೆದ್ದಿದೆ. ಕಳೆದ ಬಾರಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದ ಭಾರತ ಈ ಬಾರಿ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದು ಕಳೆದ ಬಾರಿಗಿಂತ ಕಡಿಮೆ ಪದಕ ಸಂಪಾದನೆ ಮಾಡಿದೆ. ಇನ್ನು ಈ ಬಾರಿ ಶೂಟಿಂಗ್ ಮತ್ತು ಆರ್ಚರಿಯಲ್ಲಿ ಕಳೆದ ಬಾರಿ ಹೆಚ್ಚು ಪದಕಗಳನ್ನು ಗೆದ್ದಿದ್ದ ಭಾರತ ಈ ಬಾರಿ ಶೂಟಿಂಗ್ ಇಲ್ಲದಿರುವುದರಿಂದ ಭಾರತ ಹೆಚ್ಚು ಪದಕಗಳನ್ನು ಗೆಲ್ಲುವುದಿಲ್ಲ ಎಂದು ಊಹಿಸಲಾಗಿತ್ತು. ಆದರೆ ಭಾರತ ಶೂಟಿಂಗ್ ಮತ್ತು ಆರ್ಚರಿ ಇಲ್ಲದಿದ್ದರೂ ಸಹ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ.

Story first published: Tuesday, August 9, 2022, 10:32 [IST]
Other articles published on Aug 9, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+