Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಾಮನ್‌ವೆಲ್ತ್ ಗೇಮ್ಸ್ 2022: ಭಾರತಕ್ಕೆ ಮೊದಲ ಪದಕ: ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಸಂಕೇತ್ ಸರ್ಗಾರ್

Commonwealth Games 2022: India won 1st medal as Weightlifter Sanket Sargar wins silver
Photo Credit: Doordarshan twitter

ಕಾಮನ್‌ವೆಲ್ತ್ ಗೇಮ್ಸ್‌ನ ಎರಡನೇ ದಿನದಲ್ಲಿ ಭಾರತ ತಮ್ಮ ಪದಕ ಬೇಟೆಯನ್ನು ಆರಂಭಿಸಿದೆ. ಶನಿವಾರ ಮಹಾರಾಷ್ಟ್ರದ ಸಂಕೇತ್ ಸರ್ಗಾರ್ ಇತಿಹಾಸವನ್ನು ಬರೆದಿದ್ದು ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನಿಸಿದ್ದಾರೆ. 55 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ 21ರ ಹರೆಯದ ಸಂಕೇತ್ ಬೆಳ್ಳಿ ಪದಕವನ್ನು ಮುಡಿಗೇರಿಡಿಕೊಂಡಿದ್ದಾರೆ.

ಪುರುಷರ 55 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಸಂಕೇತ್ ಸರ್ಗಾರ್ ಒಟ್ಟು 248 ಕೆಜಿ ಭಾರವನ್ನು ಎತ್ತುವ ಮೂಲಕ ಭಾರತದ ಪರವಾಗಿ ಪದಕದ ಸಾಧನೆ ಮಾಡಿದ್ದಾರೆ. 113 ಕೆಜಿ ಸ್ನಾಚ್ ಹಾಗೂ 135 ಕೆಜಿ ಕ್ಲೀನ್ ಮತ್ತು ಜರ್ಕ್ ಮೂಲಕ 248 ಕೆಜಿ ಸಾಧನೆ ಮಾಡಿದ್ದಾರೆ ಸಂಕೇತ್. ಮಲೇಶಿಯಾದ ಅನೀಕ್ ಮಹಮದ್ ಈ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.

ಭರವಸೆ ಮೂಡಿಸಿದ್ದ ಪ್ರತಿಭೆ

ಭರವಸೆ ಮೂಡಿಸಿದ್ದ ಪ್ರತಿಭೆ

ಖೇಲೋ ಇಂಡಿಯಾ ಯೂತ್ ಗೇಮ್ಸ್ ಹಾಗೂ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಅದ್ಭುತ ಪ್ರದರ್ಶನ ನಿಡಿ ಮಿಂಚಿದ್ದ ಸಂಖೇತ್ ಸರ್ಗಾರ್ ಮೇಲೆ ಸಾಕಷ್ಟು ನಿರೀಕ್ಷೆಗಳು ಮೂಡಿತ್ತು. ತಮ್ಮ ಮೇಲಿನ ನಿರೀಕ್ಷೆಯನ್ನು ಯುವ ಕ್ರೀಡಾಪಟು ಹುಸಿಗೊಳಿಸಲಿಲ್ಲ. ಅದ್ಭುತ ಪ್ರದರ್ಶನ ನಿಡುವ ಮೂಲಕ ಭಾರತಕ್ಕೆ ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಬೆಳ್ಳಿ ಪದಕವನ್ನು ಗೆದ್ದುಕೊಟ್ಟಿದ್ದಾರೆ.

ರಾಷ್ಟ್ರೀಯ ಚಾಂಪಿಯನ್ ಸಂಕೇತ್

ರಾಷ್ಟ್ರೀಯ ಚಾಂಪಿಯನ್ ಸಂಕೇತ್

ಕಳೆದ ಫೆಬ್ರವರಿ ತಿಂಗಳಿನಲ್ಲಿ ಸಿಂಗಾಪುರದಲ್ಲಿ ನಡೆದ ಏಷ್ಯನ್ ಅರ್ಹತಾ ಸ್ಪರ್ಧೆಯಲ್ಲಿ ಕಾಮನ್ವೆಲ್ತ್ ಮತ್ತು ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದರು ಸಂಕೇತ್ ಸಾಗರ್.(ಸ್ನ್ಯಾಚ್ - 113 ಕೆಜಿ; ಕ್ಲೀನ್ ಮತ್ತು ಜರ್ಕ್ 143 ಕೆಜಿ - ಒಟ್ಟು 256 ಕೆಜಿ), ತನ್ನ ಮೊದಲ ಪ್ರಯತ್ನದಲ್ಲಿ ಅವನು ತನ್ನ ಎಲ್ಲಾ 3 ಪ್ರಯತ್ನದಲ್ಲಿಯೂ ಯಶಸ್ವಿಯಾಗಿದ್ದ ಕಾರಣ ಇದು ಅವರ ಅತ್ಯುತ್ತಮ ಪ್ರದರ್ಶನ ಎನಿಸಿಕೊಂಡಿದೆ.

ಯಾರು ಈ ಸಂಕೇತ್ ಸರ್ಗಾರ್

ಸಂಕೇತ್ ಸರ್ಗಾರ್ 13ನೇ ವಯಸ್ಸಿನಿಂದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ತುಡಿತದಿಂದ ನಿರಂತರವಾಗಿ ಶ್ರಮ ಹಾಕತೊಡಗಿದ್ದರು. ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಮಿಂಚಿದ್ದಾರೆ. ಇದರಲ್ಲಿ 2021ರಲ್ಲಿ ತಾಷ್ಕೆಂಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದಿರುವುದು ಕೂಡ ಸೇರಿದೆ. ಸಂಕೇತ್ ಅವರ ತಂದೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಪಾನ್ ಶಾಪ್ ಹಾಗೂ ಫುಡ್ ಸ್ಟಾಲ್ ಹೊಂದಿದ್ದಾರೆ.

ಭಾರತೀಯ ಸೇನೆಗೆ ಪದಕ ಅರ್ಪಣೆ

ಭಾರತೀಯ ಸೇನೆಗೆ ಪದಕ ಅರ್ಪಣೆ

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪರವಾಗಿ ಪದಕದ ಖಾತೆಯನ್ನು ಆರಂಭಿಸಿರುವ ಸಂಕೇತ್ ಸರ್ಗಾರ್ ತಮ್ಮ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಸಂಕೇತ್ ತಾವು ಗೆದ್ದಿರುವ ಬೆಳ್ಳಿ ಪದಕವನ್ನು ಭಾರತೀಯ ಸೈನ್ಯಕ್ಕೆ ಅರ್ಪಿಸಿದ್ದಾರೆ.

Story first published: Saturday, July 30, 2022, 17:19 [IST]
Other articles published on Jul 30, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+