ಕಾಮನ್‌ವೆಲ್ತ್ ಗೇಮ್ಸ್: ಮೊದಲ ದಿನದ ಸ್ಪರ್ಧೆ ಭಾರತದ ಪಡೆ ಸಿದ್ಧ: ಕ್ರಿಕೆಟ್‌ನಲ್ಲಿ ಮಹಿಳಾ ತಂಡಕ್ಕೆ ಆಸಿಸ್ ಸವಾಲು

ಬರ್ಮಿಂಗ್‌ಹ್ಯಾಂ್‌ನಲ್ಲಿ ಆರಂಭವಾಗಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಚಾಲನೆ ದೊರೆತಿದೆ. ಗುರುವಾರ ಉದ್ಘಾಟನಾ ಕಾರ್ಯಕ್ರಮ ನಡೆದಿದ್ದು ಇಂದಿನಿಂದ ಸ್ಪರ್ಧೆಗಳು ಪ್ರಾರಂಭಗೊಂಡಿದೆ. ಮೊದಲ ದಿನ ಭಾರತ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದು ಭಾರತೀಯ ಕ್ರೀಡಾಪಟುಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಮೊದಲ ದಿನ ಪ್ರಮುಖವಾಗಿ ಭಾರತದ ಮಹಿಳಾ ಕ್ರಿಕೆಟ್ ತಂಡ ಸ್ಪರ್ಧಿಸುತ್ತಿರುವುದು ಕುತೂಹಲ ಮೂಡಿಸಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ಅವಕಾಶ ಪಡೆದುಕೊಂಡಿದ್ದು ಮೊದಲ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿದೆ. ಕ್ರಿಕೆಟ್ ಅಲ್ಲದೆ ಈಜು, ಬಾಕ್ಸಿಂಗ್, ಜಿಮ್ನಾಸ್ಟಿಕ್, ಹಾಕಿ, ಲಾನ್ ಬೌಲ್ಸ್, ಸ್ಕ್ವಾಶ್, ಟೇಬಲ್ ಟೆನಿಸ್, ಟ್ರ್ಯಾಕ್ ಸೈಕ್ಲಿಂಗ್, ಟ್ರಿಯಥ್ಲಾನ್ ಹಾಗೂ ಬ್ಲಾಡ್ಮಿಂಟನ್ ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕಾಣಿಸಿಕೊಳ್ಳುತ್ತಿದೆ. ಇಂದು ಮೊದಲ ಪಂದ್ಯ ನಡೆಯಲಿದ್ದು ಈ ಐತಿಹಾಸಿಕ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳಾ ತಮಡದ ಆಟಗಾರ್ತಿಯರು ಮುಖಾಮುಖಿಯಾಗಲಿದ್ದಾರೆ. ಆದರೆ ಒಟ್ಟಾರೆಯಾಗಿ ನೋಡಿದರೆ ಕಾಮನ್‌ವೆಲ್ತ್‌ನಲ್ಲಿ ಕ್ರಿಕೆಟ್ ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿಲ್ಲ. ಇದಕ್ಕೂ ಮುನ್ನ 1998ರ ಗೇಮ್ಸ್‌ನಲ್ಲಿ ಪುರುಷರ ಕ್ರಿಕೆಟ್ ಆಡಿಸಲಾಗಿತ್ತು. ಏಕದಿನ ಮಾದರಿಯಲ್ಲಿ ಅಂದು ಪಂದ್ಯಗಳು ನಡೆದಿತ್ತು.
ಮೊದಲ ದಿನ ಯಾವೆಲ್ಲಾ ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಸ್ಪರ್ಧಿಸುತ್ತಿದ್ದಾರೆ ಎನ್ನುವ ಮಾಹಿತಿಯ ಜೊತೆಗೆ ಸ್ಪರ್ಧೆಯ ಸಮಯಗಳ ವಿವರ ಇಲ್ಲಿದೆ

ಸ್ವಿಮ್ಮಿಂಗ್‌ನಲ್ಲಿ ಕಣಕ್ಕಿಳಿಯಲಿದ್ದಾರೆ ಭಾರತೀಯರು
ಕುಶಾಗ್ರಾ ರಾವತ್ - 400 ಮೀ ಫ್ರೀಸ್ಟೈಲ್ ಹೀಟ್ಸ್ (ಮಧ್ಯಾಹ್ನ 3:00)
ಆಶಿಶ್ ಕುಮಾರ್ ಸಿಂಗ್ - 100ಮೀ ಬ್ಯಾಕ್‌ಸ್ಟ್ರೋಕ್ S9 ಹೀಟ್ಸ್ (ಮಧ್ಯಾಹ್ನ 3:00)
ಸಜನ್ ಪ್ರಕಾಶ್ - 50 ಮೀ ಬಟರ್‌ಫ್ಲೈ ಹೀಟ್ಸ್ (ಮಧ್ಯಾಹ್ನ 3:00)
ಶ್ರೀಹರಿ ನಟರಾಜ್ - 100 ಮೀ ಬ್ಯಾಕ್‌ಸ್ಟ್ರೋಕ್ ಎಚ್ (ಮಧ್ಯಾಹ್ನ 3:00)
ಕುಶಾಗ್ರಾ ರಾವತ್ - (ಅರ್ಹತೆ ಪಡೆದರೆ)- 400 ಮೀ ಫ್ರೀಸ್ಟೈಲ್ ಫೈನಲ್ (1:30 pm)
ಆಶಿಶ್ ಕುಮಾರ್ ಸಿಂಗ್ - (ಅರ್ಹತೆ ಪಡೆದರೆ)- 100 ಮೀ ಬ್ಯಾಕ್‌ಸ್ಟ್ರೋಕ್ S9 ಫೈನಲ್ (ರಾತ್ರಿ 11:30)
ಸಜನ್ ಪ್ರಕಾಶ್ - (ಅರ್ಹತೆ ಪಡೆದರೆ)- 50 ಮೀ ಬಟರ್‌ಫ್ಲೈ ಸೆಮಿಸ್ (ರಾತ್ರಿ 11:30)
ಶ್ರೀಹರಿ ನಟರಾಜ್ - (ಅರ್ಹತೆ ಪಡೆದರೆ)- 100 ಮೀ ಬ್ಯಾಕ್‌ಸ್ಟ್ರೋಕ್ ಸೆಮಿಸ್ (ರಾತ್ರಿ 11:30)

ಮಹಿಳಾ ಕ್ರಿಕೆಟ್, ಮಹಿಳಾ, ಬಾಕ್ಸಿಂಗ್ ಹಾಗೂ ಜಿಮ್ನಾಸ್ಟಿಕ್ಸ್
ಭಾರತ ವಿರುದ್ಧ ಆಸ್ಟ್ರೇಲಿಯಾ : ಮಧ್ಯಾಹ್ನ 3:30
ಮಹಿಳಾ ಹಾಕಿ: ಭಾರತ ವಿರುದ್ಧ ಘಾನಾ: ಸಂಜೆ 6:30ಕ್ಕೆ
ಬಾಕ್ಸಿಂಗ್ :
ಶಿವ ಥಾಪಾ - ಪುರುಷರ 63.5 ಕೆಜಿ 32ರ ಸುತ್ತು (ಸಂಜೆ 4:30)
ಸುಮಿತ್ ಕುಂದು - ಪುರುಷರ 75 ಕೆಜಿ 32ರ ಸುತ್ತು (ಸಂಜೆ 4:30)
ರೋಹಿತ್ ಟೋಕಾಸ್ - ಪುರುಷರ 67 ಕೆಜಿ 32ರ ಸುತ್ತು (ರಾತ್ರಿ 11:00)
ಆಶಿಶ್ ಚೌಧರಿ - ಪುರುಷರ 80 ಕೆಜಿ 32ರ ಸುತ್ತು (ರಾತ್ರಿ 11:00)
ಜಿಮ್ನಾಸ್ಟಿಕ್ಸ್
ಯೋಗೇಶ್ವರ್, ಸತ್ಯಜಿತ್, ಸೈಫ್ - ಪುರುಷರ ವೈಯಕ್ತಿಕ ಮತ್ತು ತಂಡ ಅರ್ಹತಾ ಸುತ್ತು (ಮಧ್ಯಾಹ್ನ 1:30)
ಪುರುಷರ ತಂಡ ಫೈನಲ್ (ಅರ್ಹತೆ ಪಡೆದರೆ) (ರಾತ್ರಿ 10:00)

ಲಾನ್ ಬೌಲ್ಸ್, ಸ್ಕ್ವಾಷ್ ಹಾಗೂ ಟೇಬಲ್ ಟೆನಿಸ್
ಲಾನ್ ಬೌಲ್ಸ್
ನಯನ್ಮೋನಿ - ಮಹಿಳಾ ಸಿಂಗಲ್ಸ್ (ಮಧ್ಯಾಹ್ನ 1:00)
ದಿನೇಶ್, ನವನೀತ್, ಚಂದನ್- ಪುರುಷರು ಟ್ರಿಪಲ್ಸ್ (ಮಧ್ಯಾಹ್ನ 1:00)
ಸುನಿಲ್, ಮೃದುಲ್- ಪುರುಷರ ಜೋಡಿ ಸುತ್ತು 1 (ಸಂಜೆ 7:30)
ರೂಪಾ, ತಾನಿಯಾ, ಲವ್ಲಿ- ಮಹಿಳೆಯರ ನಾಲ್ಕು ಸುತ್ತು 1 (ಸಂಜೆ 7:30)
ಸ್ಕ್ವಾಷ್
ಸೌರವ್, ರಮಿತ್, ಅಭಯ್ - ರೌಂಡ್ ಆಫ್ 64 (ಸಂಜೆ 4:30)
ಜೋಶ್ನಾ, ಸುನಯ್ನಾ, ಅನಾಹತ್- 64 ರ ಸುತ್ತು (ಸಂಜೆ 4:30)
ಪುರುಷರ ಸಿಂಗಲ್ಸ್ - 64 ರ ಸುತ್ತು (ರಾತ್ರಿ 10:30)
ಮಹಿಳಾ ಸಿಂಗಲ್ಸ್ - 64 ರ ಸುತ್ತು (ರಾತ್ರಿ 10:30)
ಟೇಬಲ್ ಟೆನ್ನಿಸ್
ಪುರುಷರ ತಂಡ - ಅರ್ಹತಾ ಸುತ್ತು 1 (ಮಧ್ಯಾಹ್ನ 2:00)
ಮಹಿಳಾ ತಂಡ- ಅರ್ಹತಾ ಸುತ್ತು 1 (ಮಧ್ಯಾಹ್ನ 2:00)
ಪುರುಷರ ತಂಡ- ಅರ್ಹತಾ ಸುತ್ತು 2 (ರಾತ್ರಿ 8:30)
ಮಹಿಳಾ ತಂಡ- ಅರ್ಹತಾ ಸುತ್ತು 2 (ರಾತ್ರಿ 8:30)

ಟ್ರ್ಯಾಕ್ ಸೈಕ್ಲಿಂಗ್, ಟ್ರಿಯಥ್ಲಾನ್ ಮತ್ತು ಬ್ಯಾಡ್ಮಿಂಟನ್
ಟ್ರ್ಯಾಕ್ ಸೈಕ್ಲಿಂಗ್
ವಿಶ್ವಜೀತ್, ನಮನ್, ವೆಂಕಪ್ಪ, ಅನಂತ, ದಿನೇಶ್- ಪುರುಷರ ತಂಡ ಪರ್ಸ್ಯೂಟ್ ಅರ್ಹತೆ (ಮಧ್ಯಾಹ್ನ 2:30)
ಮಯೂರಿ, ತ್ರಿಯಶಾ, ಶುಶಿಕಲಾ- ಮಹಿಳಾ ತಂಡ ಸ್ಪ್ರಿಂಟ್ ಅರ್ಹತೆ (ಮಧ್ಯಾಹ್ನ 2:30)
ರೋಜಿತ್, ರೊನಾಲ್ಡೊ, ಡೇವಿಡ್, ಇಸೊವ್- ಪುರುಷರ ತಂಡ ಸ್ಪ್ರಿಂಟ್ ಅರ್ಹತೆ (2:30 pm)
ಪುರುಷರ ತಂಡ ಪರ್ಸ್ಯೂಟ್ ಫೈನಲ್ (ಅರ್ಹತೆಯ ವೇಳೆ) (ರಾತ್ರಿ 8:30)
ಮಹಿಳಾ ತಂಡ ಸ್ಪ್ರಿಂಟ್ ಫೈನಲ್ (ಅರ್ಹತೆಯ ವೇಳೆ) (ರಾತ್ರಿ 8:30)
ಪುರುಷರ ತಂಡ ಸ್ಪ್ರಿಂಟ್ ಫೈನಲ್ (ಅರ್ಹತೆಯ ವೇಳೆ) (ರಾತ್ರಿ 8:30)
ಟ್ರಿಯಥ್ಲಾನ್
ಆದರ್ಶ್, ವಿಶ್ವನಾಥ್ - ಪುರುಷರು ಫೈನಲ್ (ಮಧ್ಯಾಹ್ನ 3:30)
ಸಂಜನಾ, ಪ್ರಜ್ಞಾ- ಮಹಿಳಾ ಫೈನಲ್ (ಸಂಜೆ 5:30)
ಬ್ಯಾಡ್ಮಿಂಟನ್
ಭಾರತ vs ಪಾಕಿಸ್ತಾನ - ಮಿಶ್ರ ತಂಡ ಸ್ಪರ್ಧೆಯ ಗುಂಪು ಹಂತ (ಸಂಜೆ 6:30)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications