ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

Commonwealth Games Day 11 Live: 61 ಪದಕ ಗೆದ್ದು ನಾಲ್ಕನೇ ಸ್ಥಾನ ಪಡೆದ ಭಾರತ

PV Sindhu

ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ಈ ಬಾರಿಯ ಪ್ರತಿಷ್ಠಿತ ಕಾಮನ್‍ವೆಲ್ತ್ ಗೇಮ್ಸ್ ಕ್ರೀಡಾಕೂಟ ನಡೆಯುತ್ತಿದೆ. ಜುಲೈ 27ರಂದು ಅದ್ದೂರಿಯಾಗಿ ಉದ್ಘಾಟನೆಯಾದ ಕ್ರೀಡಾಕೂಟದ ಸ್ಪರ್ಧೆಗಳು ಹಾಗೂ ಪಂದ್ಯಗಳು ಜುಲೈ 28ರ ಶುಕ್ರವಾರದಿಂದ ಆರಂಭಗೊಂಡಿವೆ.

ಈ ಬಾರಿಯ ಕ್ರೀಡಾಕೂಟದಲ್ಲಿ ಕ್ರಿಕೆಟ್ ಆಟವೂ ಕೂಡ ಸೇರ್ಪಡೆಗೊಂಡಿದ್ದು, ಕಾಮನ್‍ವೆಲ್ತ್ ಗೇಮ್ಸ್ ಭಾರತೀಯರಲ್ಲಿ ಈ ಬಾರಿ ಇನ್ನೂ ಹೆಚ್ಚಿನ ಕುತೂಹಲವನ್ನು ಕೆರಳಿಸಿದೆ ಎಂದೇ ಹೇಳಬಹುದು.

10ನೇ ದಿನದ ಸ್ಪರ್ಧೆಯಲ್ಲಿ ಒಟ್ಟು ಐದು ಚಿನ್ನದ ಪದಕಗಳನ್ನ ಬಾಚಿದ ಭಾರತವು ಒಟ್ಟಾರೆ ಪದಕಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದೆ. ಭಾರತ 18 ಚಿನ್ನ, 15 ಬೆಳ್ಳಿ, 22 ಕಂಚಿನ ಪದಕಗಳೊಂದಿಗೆ ಒಟ್ಟಾರೆ 55 ಪದಕಗಳನ್ನ ಗೆದ್ದುಕೊಂಡಿದೆ. ನ್ಯೂಜಿಲೆಂಡ್ 19 ಚಿನ್ನ, 12 ಬೆಳ್ಳಿ, 17 ಕಂಚಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಮೂರು ಸ್ಥಾನದಲ್ಲಿ ಆಸ್ಟ್ರೇಲಿಯಾ 172, ಇಂಗ್ಲೆಂಡ್ 166, ಕೆನಡಾ 89 ಪದಕಗಳೊಂದಿಗೆ ಅಗ್ರ ಮೂರರಲ್ಲಿವೆ.

Aug 08, 2022, 8:50 pm IST

2022 ರ ಕಾಮನ್‌ವೆಲ್ತ್ ಗೇಮ್ಸ್‌ನ ಅಂತಿಮ ದಿನದಂದು ಭಾರತ ಆರು ಪದಕಗಳನ್ನು ಸೇರಿಸಿ ಅಂತಿಮ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತು. ಭಾರತ 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕ ಸೇರಿದಂತೆ ಒಟ್ಟು 61 ಪದಕಗಳೊಂದಿಗೆ ಮುಕ್ತಾಯವಾಯಿತು. ಹಿಂದಿನ ಆವೃತ್ತಿಯಲ್ಲಿ, ಭಾರತ 66 ಪದಕಗಳೊಂದಿಗೆ ಪದಕಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿತ್ತು.

Aug 08, 2022, 6:36 pm IST

ಹಾಕಿಯಲ್ಲಿ ಭಾರತ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ 0-7 ಅಂತರದಿಂದ ಸೋಲು ಅನುಭವಿಸಿದೆ. ಈ ಮೂಲಕ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದೆ.

Aug 08, 2022, 6:13 pm IST

ಟೇಬಲ್ ಟೆನಿಸ್‌ನಲ್ಲಿ ಚಿನ್ನದ ಪದಕ! ಭಾರತದ ಶರತ್ ಕಮಲ್ ಟೇನಲ್ ಟೆನಿಸ್‌ನ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ

Aug 08, 2022, 6:06 pm IST

ಬ್ಯಾಡ್ಮಿಂಟನ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಸಾತ್ವಿಕ್‌ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ: ಪುರುಷರ ಡಬಲ್ಸ್‌ನಲ್ಲಿಯೂ ಭಾರತಕ್ಕೆ ಚಿನ್ನ

Aug 08, 2022, 5:29 pm IST

ಹಾಕಿ: ಎರಡನೇ ಕ್ವಾರ್ಟರ್‌ನಲ್ಲಿ ಮತ್ತೊಂದು ಗೋಲು ಬಾರಿಸಿದ ಆಸ್ಟ್ರೇಲಿಯಾ: ಭಾರತಕ್ಕೆ 0-3 ಅಂತರದ ಹಿನ್ನಡೆ

Aug 08, 2022, 5:28 pm IST

ಮತ್ತೊಂದು ಪದಕ!. ಟೇಬಲ್ ಟೆನಿಸ್‌ನಲ್ಲಿ ಭಾರತದ ಸತ್ಯನ್ ಗೆಲುವು ಸಾಧಿಸಿದ್ದು ಕಂಚಿನ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ

Aug 08, 2022, 5:02 pm IST

ಹಾಕಿ ಫೈಲ್ ಪಂದ್ಯ ಆರಂಭವಾಗಿದ್ದು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯವನ್ನು ಗೆದ್ದು ಚಿನ್ನದ ಪದಕ ಮುಡಿಗೇರಿಸಿಕೊಳ್ಳಲು ಎರಡು ತಂಡಗಳು ಕೂಡ ಸರ್ವ ಪ್ರಯತ್ನ ನಡೆಸಲಿದೆ

Aug 08, 2022, 5:01 pm IST

ಟೇಬಲ್ ಟೆನಿಸ್‌ನಲ್ಲಿ ಭಾರತದ ಸತ್ಯನ್ ಹಾಗೂ ಇಂಗ್ಲೆಂಡ್‌ನ ಪೌಲ್ ಡ್ರಿಂಖಾಲ್ ಕಂಚಿನ ಪದಕಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.

Aug 08, 2022, 4:40 pm IST

ಮಲೇಷ್ಯಾದ ಆಟಗಾರನ ವಿರುದ್ಧ ಭಾರತದ 20ರ ಹರೆಯದ ಯುವ ಆಟಗಾರ ಲಕ್ಷ್ಯಸೇನ್ 19-21, 21-9, 21-16 ಅಂತರದಿಂದ ಗೆಲುವು ಸಾಧಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ

Aug 08, 2022, 4:38 pm IST

ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ: ಪುರುಷರ ಸಿಂಗಲ್ಸ್‌ನಲ್ಲಿ ಗೆದ್ದು ಬೀಗಿದ ಲಕ್ಷ್ಯಸೇನ್

Aug 08, 2022, 3:53 pm IST

ಕಾಮನ್‌ವೆಲ್ತ್ ಗೇಮ್ಸ್: ಪುರುಷರ ಬ್ಯಾಡ್ಮಿಂಟನ್‌ನ ಫೈನಲ್ ಪಂದ್ಯದ ಮೊದಲ ಸುತ್ತಿನಲ್ಲಿ ಭಾರತದ ಲಕ್ಷ್ಯ ಸೇನ್ ವಿರುದ್ಧ ಮಲೇಶಿಯಾದ ಯಂಗ್ 21-19 ಅಂತರದ ಗೆಲುವು ಸಾಧಿಸಿದ್ದಾರೆ

Aug 08, 2022, 3:44 pm IST

ಕಾಮನ್‌ವೆಲ್ತ್ ಗೇಮ್ಸ್: ಪುರುಷರ ಬ್ಯಾಡ್ಮಿಂಟನ್‌ನ ಫೈನಲ್ ಪಂದ್ಯದಲ್ಲಿ ಭಾರತದ ಲಕ್ಷ್ಯ ಸೇನ್ ಮತ್ತು ಮಲೇಶಿಯಾದ ಯಂಗ್ ಮುಖಾಮುಖಿಯಾಗಿದ್ದು, ಮೊದಲ ಸುತ್ತಿನಲ್ಲಿ ಸದ್ಯ ಇಬ್ಬರೂ ಸಹ 18-18 ಸೆಟ್‌ಗಳ ಸಮಬಲ ಸಾಧಿಸಿದ್ದಾರೆ

Aug 08, 2022, 3:12 pm IST

ಕಾಮನ್‌ವೆಲ್ತ್ ಗೇಮ್ಸ್: ಪುರುಷರ ಬ್ಯಾಡ್ಮಿಂಟನ್‌ನ ಫೈನಲ್ ಪಂದ್ಯ ಆರಂಭವಾಗಿದ್ದು ಚಿನ್ನದ ಪದಕ್ಕಾಗಿ ಭಾರತದ ಲಕ್ಷ್ಯ ಸೇನ್ ಹೋರಾಟ ಆರಂಭಿಸಿದ್ದಾರೆ.

Aug 08, 2022, 2:47 pm IST

ಭಾರತಕ್ಕೆ 19ನೇ ಚಿನ್ನದ ಪದಕ

ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ ಸಿಂಧು ಸ್ವರ್ಣ ಪದಕ ಜಯಿಸುವ ಮೂಲಕ ಭಾರತಕ್ಕೆ ಚಿನ್ನದ ಗರಿ ತಂದಿದ್ದಾರೆ. ಈ ಮೂಲಕ ಭಾರತವು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 19ನೇ ಚಿನ್ನದ ಪದಕ ಗೆದ್ದಿದೆ.

Aug 08, 2022, 2:45 pm IST

ಭಾರತಕ್ಕೆ ಮತ್ತೊಂದು ಚಿನ್ನದ ಪದಕ: ಬ್ಯಾಡಿಂಟನ್ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಭಾರತದ ಪಿ.ವಿ ಸಿಂಧು ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ನೇರ ಗೇಮ್‌ಗಳಿಂದ ಗೆಲ್ಲುವ ಮೂಲಕ ಸ್ವರ್ಣ ಪದಕ ಜಯಿಸಿದ್ದಾರೆ.

Aug 08, 2022, 2:30 pm IST

ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಪಿವಿ ಸಿಂಧು ಕೆನಡಾದ ಮಿಚೆಲ್ ಲಿ ವಿರುದ್ಧ ಎರಡನೇ ಸೆಟ್‌ನ ಮಿಡ್ ಗೇಮ್ ಬ್ರೇಕ್‌ನಲ್ಲಿ 11-6 ರಿಂದ ಮುನ್ನಡೆ ಸಾಧಿಸಿದ್ದಾರೆ

Aug 08, 2022, 2:19 pm IST

ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಕೆನಡಾದ ಮಿಚೆಲ್ ಲಿ ವಿರುದ್ಧ ಪಿವಿ ಸಿಂಧು ಮೊದಲ ಗೇಮ್ ಅನ್ನು 21-15 ಪಾಯಿಂಟ್ಸ್‌ ಅಂತರದಲ್ಲಿ ಜಯಗಳಿಸಿದ್ದಾರೆ.

Aug 08, 2022, 2:13 pm IST

ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಪಿವಿ ಸಿಂಧು ಕೆನಡಾದ ಮಿಚೆಲ್ ಲಿ ವಿರುದ್ಧ ಮಿಡ್ ಗೇಮ್ ಬ್ರೇಕ್‌ನಲ್ಲಿ 11-8 ರಿಂದ ಮುನ್ನಡೆ ಸಾಧಿಸಿದ್ದಾರೆ

Aug 08, 2022, 2:02 pm IST

ಭಾರತೀಯ ಪುರುಷರ ಹಾಕಿ ತಂಡದ ಮಿಡ್‌ಫೀಲ್ಡರ್ ವಿವೇಕ್ ಸಾಗರ್ ಪ್ರಸಾದ್ ಅವರು ಇಂದು ಆಸ್ಟ್ರೇಲಿಯಾ ವಿರುದ್ಧ ಫೈನಲ್ ಆಡಲು ಲಭ್ಯವಿರುವುದಿಲ್ಲ. ಅವರಿಗೆ ಮೊಣಕಾಲಿನ ಸಣ್ಣ ಗಾಯವಾಗಿದ್ದು, ವಿಶ್ರಾಂತಿಗೆ ಸೂಚಿಸಲಾಗಿದೆ. ಇಂದು 17 ಸದಸ್ಯರೊಂದಿಗೆ ತಂಡ ಆಡಲಿದೆ.

Aug 08, 2022, 2:00 pm IST

ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಉತ್ತಮ ಆರಂಭ ಪಡೆದ ಭಾರತದ ಪಿ.ವಿ ಸಿಂಧು. ಚಿನ್ನದ ಪದಕಕ್ಕಾಗಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಸಿಂಧುಗೆ ಕೆನಡಾದ ಮಿಚೆಲ್ ಲಿ ಸವಾಲು

Aug 08, 2022, 1:21 pm IST

ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್‌ ಫೈನಲ್

ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್‌ ಫೈನಲ್‌ನಲ್ಲಿ ಚಿನ್ನದ ಪದಕದ ಸ್ಪರ್ಧೆಯಲ್ಲಿ ಭಾರತದ ಪಿ.ವಿ ಸಿಂಧು, ಕೆನಡಾದ 2014ರ ಕಾಮನ್‌ವೆಲ್ತ್‌ ಚಾಂಪಿಯನ್‌ ಮಿಚೆಲ್ ಲಿ ಮುಖಾಮುಖಿಯಾಗಿದ್ದಾರೆ.

Aug 08, 2022, 12:34 pm IST

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡಕ್ಕೆ ಐಸಿಸಿ ಅಭಿನಂದನೆ ಸಲ್ಲಿಸಿದೆ.

Aug 08, 2022, 12:12 pm IST

ಮಹಿಳೆಯರ ಕ್ರಿಕೆಟ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನ್ನ ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟ ಭಾರತದ ವನಿತೆಯರಿಗೆ, ಭಾರತದ ಮಾಜಿ ಆಟಗಾರರು ಬೆಂಬಲಿಸಿದ್ದಾರೆ. ನೀವು ಫೈನಲ್ ಸೋತಿರಬಹುದು ಆದ್ರೆ ನೀವು ಅತ್ಯುತ್ತಮವಾದನ್ನು ಆಡಿದ್ದೀರಿ, ದೇಶಕ್ಕೆ ಹೆಮ್ಮೆ ತಂದಿದ್ದೀರಿ ಎಂದು ಪ್ರೋತ್ಸಾಹಿಸಿದ್ದಾರೆ.

Aug 08, 2022, 11:27 am IST

ಬ್ಯಾಡ್ಮಿಂಟರ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಭಾರತದ ಲಕ್ಷ್ಯಸೇನ್‌, ಮಲೇಷಿಯಾದ 22 ವರ್ಷದ ಯುವ ಆಟಗಾರ ಎನ್‌ಜಿ ಟಾಜಿ ಯಾಂಗ್ ಅವರೊಂದಿಗೆ ಕಾದಾಟ ನಡೆಸಲಿದ್ದು, ಪಂದ್ಯವು ಮಧ್ಯಾಹ್ನ 2.10ಕ್ಕೆ ಪ್ರಾರಂಭಗೊಳ್ಳಲಿದೆ.

Aug 08, 2022, 11:27 am IST

ಪಿ.ವಿ. ಸಿಂಧು ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್‌ ಫೈನಲ್‌ನಲ್ಲಿ ಕೆನಡಾದ 2014ರ ಕಾಮನ್‌ವೆಲ್ತ್‌ ಚಾಂಪಿಯನ್‌ ಮಿಚೆಲ್ ಲಿ ಮುಖಾಮುಖಿಯಾಗಿದ್ದಾರೆ.

Aug 08, 2022, 11:26 am IST

ಪುರುಷರ ಸಿಂಗಲ್ಸ್‌ ಕಂಚಿನ ಪದಕದ ಸ್ಪರ್ಧೆಯಲ್ಲಿ ಭಾರತದ ಜಿ. ಸತ್ಯನ್ ಅವರು ಬ್ರಿಟಿಶ್ ಟೇಬಲ್ ಟೆನಿಸ್ ಆಟಗಾರ ಪೌಲ್ ಡ್ರಿಂಕ್‌ಹಾಲ್‌ ವಿರುದ್ಧ ಪದಕಕ್ಕೆ ಪೈಪೋಟಿ ನಡೆಸಲಿದ್ದಾರೆ. ಈ ಪಂದ್ಯವು ಮಧ್ಯಾಹ್ನ 3.35ಕ್ಕೆ ಪ್ರಾರಂಭಗೊಳ್ಳಲಿದೆ.

Aug 08, 2022, 9:43 am IST

ಭಾರತದ ಪುರುಷರ ಹಾಕಿ ತಂಡವು ಇಂದು ಸ್ವರ್ಣ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದು, ಫೈನಲ್‌ನಲ್ಲಿ ಬಲಿಷ್ಟ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಶನಿವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್ ಪುರುಷರ ಹಾಕಿ ಸೆಮಿಫೈನಲ್‌ನಲ್ಲಿ ಭಾರತ 3-2 ಗೋಲುಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಫೈನಲ್ ತಲುಪಿದೆ.

Aug 08, 2022, 9:11 am IST

ಭಾರತವು ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸೋಮವಾರ ಹೆಚ್ಚಿನ ಪದಕಗಳ ನಿರೀಕ್ಷೆಯಲ್ಲಿದೆ. ಇದಕ್ಕೆ ಕಾರಣ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆಗಳಾದ ಪಿ.ವಿ ಸಿಂಧು, ಲಕ್ಷ್ಯ ಸೇನ್‌ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ ಫೈನಲ್‌ನಲ್ಲಿ ಸ್ಪರ್ಧಿಸುತ್ತಿದ್ದು, ಸಾತ್ವಿಕ್ ಮತ್ತು ಚಿರಾಗ್ ಪುರುಷರ ಡಬಲ್ಸ್‌ ಜೋಡಿ ಫೈನಲ್‌ನಲ್ಲಿ ಸ್ವರ್ಣ ಪದಕಕ್ಕೆ ಪೈಪೋಟಿ ನಡೆಸಲಿದೆ.

Aug 08, 2022, 8:43 am IST

10ನೇ ದಿನದ ಸ್ಪರ್ಧೆಯಲ್ಲಿ ಟೇಬಲ್ ಟೆನಿಸ್ ಲೆಜೆಂಡ್ ಅಚಂತಾ ಶರತ್ ಕಮಲ್ ಅವರು ಯುವ ಆಟಗಾರ್ತಿ ಶ್ರೀಜಾ ಅಕುಲಾ ಅವರೊಂದಿಗೆ ಮಿಶ್ರ ಡಬಲ್ಸ್ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾದರು

Aug 08, 2022, 8:42 am IST

ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಭಾರತವು ಒಟ್ಟಾರೆ 7 ಪದಕಗಳನ್ನ ಗೆದ್ದಿದ್ದು, ಇದರಲ್ಲಿ ಮೂರು ಚಿನ್ನ ಪದಕಗಳು ಸೇರಿವೆ.

Aug 08, 2022, 8:22 am IST

10ನೇ ದಿನದಲ್ಲಿ ಭಾರತಕ್ಕೆ ಬಾಕ್ಸಿಂಗ್ ಸೇರಿದಂತೆ ಪ್ರಮುಖ ಸ್ಪರ್ಧೆಗಳಲ್ಲಿ ಒಟ್ಟು 15 ಪದಕಗಳು ಸಂದಿವೆ. ಈ ಮೂಲಕ ಪದಕಗಳ ಸಂಖ್ಯೆ ಒಟ್ಟು 55ಕ್ಕೆ ಏರಿಕೆಯಾಗಿದೆ.

Aug 08, 2022, 12:51 am IST

ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ ಕ್ರಿಕೆಟ್ ವಿಭಾಗದಲ್ಲಿ ಭಾರತ ಚಿನ್ನದ ಪದಕವನ್ನು ಗೆಲ್ಲುವ ಅದ್ಭುತ ಅವಕಾಶವನ್ನು ಸಣ್ಣ ಅಂತರದಿಂದ ಕಳೆದುಕೊಂಡಿದ್ದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದೆ.

Aug 07, 2022, 11:06 pm IST

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಭಾರತದ ಮಹಿಳೆಯರಿಗೆ 162 ರನ್ ಗುರಿ

Aug 07, 2022, 10:54 pm IST

ಮಹಿಳೆಯರ ರಿಲೇ 4x100 ಮೀಟರ್ ಸ್ಪರ್ಧೆಯಲ್ಲಿ ಭಾರತ 5ನೇ ಸ್ಥಾನದೊಂದಿಗೆ ಸ್ಪರ್ಧೆ ಪೂರ್ಣಗೊಳಿಸಿದೆ

Aug 07, 2022, 8:41 pm IST

ಮಹಿಳಾ ಕ್ರಿಕೆಟ್ ಫೈನಲ್

ಭಾರತ vs ಆಸ್ಟ್ರೇಲಿಯಾ - ಮಹಿಳೆಯರ ಟಿ20 ಕ್ರಿಕೆಟ್‌ ಚಿನ್ನದ ಪದಕದ ಪಂದ್ಯ ಭಾರತೀಯ ಕಾಲಮಾನ ರಾತ್ರಿ 9.30ಕ್ಕೆ ಪ್ರಾರಂಭಗೊಳ್ಳುವುದು

Aug 07, 2022, 7:50 pm IST

ಪುರುಷರ ಟೇಬಲ್ ಟೆನಿಸ್: ಭಾರತಕ್ಕೆ ಬೆಳ್ಳಿ

ಪುರುಷರ ಟೇಬಲ್ ಟೆನಿಸ್ ಫೈನಲ್‌ನಲ್ಲಿ ಭಾರತದ ಅಚಂತಾ ಶರತ್ ಕಮಲ್/ಜಿ ಸತ್ಯನ್ ಜೋಡಿ, ಇಂಗ್ಲೆಂಡ್‌ನ ಡ್ರಿಂಕ್‌ಹಾಲ್ ಪಾಲ್/ಪಿಚ್‌ಫೋರ್ಡ್ ಲಿಯಾಮ್ ವಿರುದ್ಧ ಸೋಲನ್ನ ಅನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದೆ.

Aug 07, 2022, 7:40 pm IST

ಪುರುಷರ ಟೇಬಲ್ ಟೆನಿಸ್ ಫೈನಲ್‌

ಇಂಗ್ಲೆಂಡ್‌ನ ಡ್ರಿಂಕ್‌ಹಾಲ್ ಪಾಲ್/ಪಿಚ್‌ಫೋರ್ಡ್ ಲಿಯಾಮ್ ಜೋಡಿ ಭಾರತದ ವಿರುದ್ಧ 2-1ರಿಂದ ಮುನ್ನಡೆ ಸಾಧಿಸಿದೆ

Aug 07, 2022, 7:39 pm IST

ಪುರುಷರ ಟೇಬಲ್ ಟೆನಿಸ್ ಫೈನಲ್‌

ಅಚಂತಾ ಶರತ್ ಕಮಲ್/ಜಿ ಸತ್ಯನ್ ಮತ್ತು ಡ್ರಿಂಕ್‌ಹಾಲ್ ಪಾಲ್/ಪಿಚ್‌ಫೋರ್ಡ್ ಲಿಯಾಮ್ ನಡುವಿನ ಚಿನ್ನದ ಪದಕದ ಪಂದ್ಯದಲ್ಲಿ 11-8, 8-11, 1-3 ಪಾಯಿಂಟ್ಸ್ ದಾಖಲಾಗಿದೆ

Aug 07, 2022, 7:12 pm IST

ಭಾರತಕ್ಕೆ ಮತ್ತೊಂದು ಚಿನ್ನದ ಪದಕ

ಮಹಿಳೆಯರ 48-50 ಕೆಜಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ನಿಖತ್ ಜರೀನ್ ಚಿನ್ನದ ಪದಕ ಗೆದ್ದಿದ್ದಾರೆ. ಫೈನಲ್‌ನಲ್ಲಿ ಉತ್ತರ ಐರ್ಲೆಂಡ್‌ನ ಕಾರ್ಲಿ ಮೆಕ್‌ನಾಲ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದಾರೆ.

Aug 07, 2022, 7:08 pm IST

ಬಾಕ್ಸಿಂಗ್: ಮಹಿಳೆಯರ 48-50 ಕೆಜಿ ಫೈನಲ್‌ನಲ್ಲಿ ಉತ್ತರ ಐರ್ಲೆಂಡ್‌ನ ಕಾರ್ಲಿ ಮೆಕ್‌ನಾಲ್ ವಿರುದ್ಧ ಚಿನ್ನದ ಪದಕಕ್ಕಾಗಿ ನಿಖತ್ ಜರೀನ್ ಸ್ಪರ್ಧೆಗಿಳಿದಿದ್ದಾರೆ.

Aug 07, 2022, 7:07 pm IST

ಜಾವೆಲಿನ್ ಎಸೆತದಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ಭಾರತದ ಅನ್ನು ರಾಣಿ. ತಮ್ಮ ಅತ್ಯುತ್ತಮ 60 ಮೀಟರ್ ದೂರಕ್ಕೆ ಎಸೆಯುವ ಮೂಲಕ ಅನ್ನು ರಾಣಿ ಈ ಸಾಧನೆ ಮಾಡಿದ್ದಾರೆ

Aug 07, 2022, 7:06 pm IST

ಪುರುಷರ ಟೇಬಲ್ ಟೆನಿಸ್: ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮಲೇಷ್ಯಾದ ಚಾನ್ ಪೆಂಗ್ ಸೂನ್/ಟಾನ್ ಕಿಯಾನ್ ಮೆಂಗ್ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸಿ ಚಿನ್ನದ ಪದಕಕ್ಕೆ ಅರ್ಹತೆ ಪಡೆದರು

Aug 07, 2022, 5:15 pm IST

ಪುರುಷರ 10,000 ಮೀಟರ್ ರೇಸ್‌ ವಾಕ್‌ನಲ್ಲಿ ಭಾರತದ ಸಂದೀಪ್ ಕುಮಾರ್ ಕಂಚಿನ ಪದಕ ಜಯಿಸಿದ್ದಾರೆ.

Aug 07, 2022, 4:39 pm IST

ಪುರುಷರ ಟ್ರಿಪಲ್ ಜಂಪ್: ಎಲ್ದೋಸ್ ಪಾಲ್ 17.03 ಮೀ ಜಿಗಿತದೊಂದಿಗೆ ಚಿನ್ನದ ಗೆದ್ದಿದ್ದಾರೆ ಮತ್ತು ಅಬ್ದುಲ್ಲಾ ಅಬೂಬಕರ್ 17.02 ಮೀಟರ್ ಪ್ರಯತ್ನದಲ್ಲಿ ಬೆಳ್ಳಿ ಪದಕ ಗೆದ್ದರು.

Aug 07, 2022, 3:55 pm IST

ಪ್ರಸ್ತುತ ಪುರುಷರ ಟ್ರಿಪಲ್ ಜಂಪ್ ಫೈನಲ್ ನಡೆಯುತ್ತಿದ್ದು, ಭಾರತದ ಶಟ್ಲರ್ ಲಕ್ಷ್ಯ ಸೇನ್ ತಮ್ಮ ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯವನ್ನು ಆಡುತ್ತಿದ್ದಾರೆ.

Aug 07, 2022, 3:35 pm IST

ಕಾಮನ್‌ವೆಲ್ತ್ ಗೇಮ್ಸ್ 2022: ಭಾರತದ ಬಾಕ್ಸರ್ ಅಮಿತ್ ಪಂಘಲ್ 48-51 ಕೆಜಿ ತೂಕ ವಿಭಾಗದಲ್ಲಿ ಇಂಗ್ಲೆಂಡ್‌ನ ಕೈರಾನ್ ಮ್ಯಾಕ್ಡೊನಾಲ್ಡ್ ಅವರನ್ನು 5-0 ಅಂತರದಿಂದ ಸೋಲಿಸಿ ಚಿನ್ನ ಗೆದ್ದರು.

Aug 07, 2022, 3:24 pm IST

ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಮಹಿಳೆಯರ ಕನಿಷ್ಠ ತೂಕ ವಿಭಾಗದಲ್ಲಿ ಭಾರತದ ಬಾಕ್ಸರ್ ನಿತು ಗಂಗಾಸ್ ಚಿನ್ನದ ಪದಕ ಗೆದ್ದಿದ್ದಾರೆ.

Aug 07, 2022, 3:19 pm IST

ಕಾಮನ್‌ವೆಲ್ತ್ ಗೇಮ್ಸ್ 2022: ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಸಿಂಗಾಪುರದ ಯೆಯೊ ಜಿಯಾ ಮಿನ್ ಅವರನ್ನು ಮಹಿಳೆಯರ ಸಿಂಗಲ್ಸ್‌ನಲ್ಲಿ ಸೋಲಿಸಿದರು. ಫೈನಲ್ ತಲುಪಿದರು.

Aug 07, 2022, 3:15 pm IST

ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಪಿವಿ ಸಿಂಧು ಸಿಂಗಾಪುರದ ಯೆಯೊ ಜಿಯಾ ಮಿನ್ ವಿರುದ್ಧ 1-0 ಮುನ್ನಡೆ ಸಾಧಿಸಿದ್ದಾರೆ.

Aug 07, 2022, 3:15 pm IST

ಭಾರತ ವನಿತೆಯರ ಹಾಕಿ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.

Aug 06, 2022, 11:43 pm IST

ಭಾರತಕ್ಕೆ ಕಂಚು: ಪೂಜಾ ಸಿಹಾಗ್ ಭಾರತೀಯ ಕುಸ್ತಿಪಟುಗಳ ಗೆಲುವಿನ ಓಟವನ್ನು ಮುಂದುವರೆಸಿದರು, ಆಸ್ಟ್ರೇಲಿಯಾದ ನವೋಮಿ ಡಿ ಬ್ರೂಯಿನ್ ವಿರುದ್ಧ 10-0 ಗೆಲುವು ಸಾಧಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು

Aug 06, 2022, 11:35 pm IST

ಭಾರತಕ್ಕೆ ಚಿನ್ನ!! ಪುರುಷರ ಫ್ರೀಸ್ಟೈಲ್ 74 ಕೆಜಿ ವಿಭಾಗದಲ್ಲಿ ನವೀನ್ ಪಾಕಿಸ್ತಾನದ ಮುಹಮ್ಮದ್ ಷರೀಫ್ ತಾಹಿರ್ ಅವರನ್ನು ಸೋಲಿಸಿದ್ದರಿಂದ ಚಿನ್ನದ ಓಟ ಮುಂದುವರಿದಿದೆ. ನವೀನ್ ಶನಿವಾರ ತಾಹಿರ್‌ಗೆ 9-0 ಅಂತರದ ಗೆಲುವು ತಂದುಕೊಟ್ಟು ಭಾರತಕ್ಕೆ ಮೂರನೇ ಕುಸ್ತಿ ಚಿನ್ನವನ್ನು ಗಳಿಸಿದರು

Aug 06, 2022, 11:03 pm IST

ಭಾರತಕ್ಕೆ ಚಿನ್ನದ ಪದಕ: ಮಹಿಳೆಯರ ಫ್ರೀಸ್ಟೈಲ್ 53 ಕೆಜಿ ನಾರ್ಡಿಕ್ ಸಿಸ್ಟಮ್ ಫೈನಲ್‌ನಲ್ಲಿ, ವಿನೇಶ್ ಫೋಗಟ್ ಶ್ರೀಲಂಕಾದ ಚಮೋದ್ಯ ಕೇಶಾನಿ ಮಧುರಾವಲಗೆ ಡಾನ್ ಅವರನ್ನು ಸೋಲಿಸಿ ಭಾರತಕ್ಕೆ 11 ನೇ ಚಿನ್ನದ ಪದಕವನ್ನು ತಂದರು

Aug 06, 2022, 10:14 pm IST

ಕುಸ್ತಿ: ಸ್ಕಾಟ್ಲೆಂಡ್‌ನ ಕ್ರಿಸ್ಟೆಲ್ಲೆ ಲೆಟ್ಚಿಡ್ಜಿಯೊ ವಿರುದ್ಧ 12-2 ಜಯದೊಂದಿಗೆ ಪೂಜಾ ಗೆಹ್ಲೋಟ್ ಕಂಚು ಪಡೆದರು.

Aug 06, 2022, 10:12 pm IST

ಭಾರತಕ್ಕೆ ಚಿನ್ನದ ಪದಕ: ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದಲ್ಲಿ ರವಿ ಕುಮಾರ್ ಅವರು ನೈಜೀರಿಯಾದ ಎಬಿಕೆವೆನಿಮೊ ವೆಲ್ಸನ್ ವಿರುದ್ಧ 10-0 ಗೆಲುವು ಸಾಧಿಸಿ ಚಿನ್ನ ಗೆದ್ದರು. ರವಿ ಚಿನ್ನದ ಪದಕದಿಂದ 10 ಚಿನ್ನದ ಪದಕ ಸೇರಿದಂತೆ ಭಾರತದ ಪದಕಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ!

Aug 06, 2022, 7:59 pm IST

ಲಾನ್‌ ಗೇಮ್ಸ್‌ ಪುರುಷರ ಸೂಪರ್‌ 4ನಲ್ಲಿ ಭಾರತ ಬೆಳ್ಳಿ ಪದಕ ಗೆದ್ದು ಬೀಗಿದೆ. ಸುನೀಲ್, ನವನೀತ್, ಚಂದನ್ ಮತ್ತು ದಿನೇಶ್ ತಂಡ ನಾರ್ಥನ್ ಐರ್ಲೆಂಡ್ ತಂಡದ ವಿರುದ್ಧ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದೆ.

Aug 06, 2022, 7:52 pm IST

ಟೇಬಲ್ ಟೆನಿಸ್: ಮಿಶ್ರ ಡಬಲ್ಸ್‌ನಲ್ಲಿ ಭಾರತದ ಅಚಂತಾ ಶರತ್ ಕಮಲ್ ಮತ್ತು ಶ್ರೀಜಾ ಅಕುಲಾ 11-9, 11-8, 9-11, 12-14, 11-7 ರಲ್ಲಿ ಆಸ್ಟ್ರೇಲಿಯಾದ ನಿಕೋಲಸ್ ಲುಮ್ ಹಾಗೂ ಮಿನ್ಹ್ಯುಂಗ್ ಜೀ ಜೋಡಿಯನ್ನ ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ.

Aug 06, 2022, 7:26 pm IST

ಭಾರತ ಮಹಿಳಾ ಕ್ರಿಕೆಟ್ ತಂಡವು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ನಾಲ್ಕು ರನ್‌ಗಳ ಅಂತರದಲ್ಲಿ ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದೆ.

Aug 06, 2022, 6:01 pm IST

ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್ ಮುಕುಂದ್ ಸೇಬಲ್ ಬೆಳ್ಳಿ ಪದಕ ಗೆದ್ದರು.

Aug 06, 2022, 6:00 pm IST

ಬ್ಯಾಡ್ಮಿಂಟನ್: ಮಹಿಳೆಯರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಪಿವಿ ಸಿಂಧು 19-21, 21-14, 21-18 ರ ಸೆಟ್‌ಗಳಲ್ಲಿ ಮಲೇಷ್ಯಾದ ಜಿನ್ ವೀ ಗೋಹ್ ಅವರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು.

Aug 06, 2022, 5:25 pm IST

ಕುಸ್ತಿ: ಭಾರತದ ನವೀನ್ ಇಂಗ್ಲೆಂಡ್‌ನ ಚಾರ್ಲಿ ಬೌಲಿಂಗ್ ಅವರನ್ನು ಸೋಲಿಸಿ ಪುರುಷರ ಫ್ರೀಸ್ಟೈಲ್ 74 ಕೆಜಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

Aug 06, 2022, 4:29 pm IST

ಕುಸ್ತಿ: ಮಹಿಳೆಯರ ಫ್ರೀಸ್ಟೈಲ್ 53 ಕೆಜಿ ನಾರ್ಡಿಕ್‌ನಲ್ಲಿ ಭಾರತದ ವಿನೇಶ್ ಫೋಗಟ್ ನೈಜೀರಿಯಾದ ಮರ್ಸಿ ಬೊಲಾಫುನೊಲುವಾ ಅಡೆಕುರೊಯೆ ಅವರನ್ನು ಸೋಲಿಸಿದರು.

Aug 06, 2022, 4:05 pm IST

ದಿನದ ಮೊದಲ ಪದಕ

10,000 ಮೀಟರ್ ನಡಿಗೆಯಲ್ಲಿ ಪ್ರಿಯಾಂಕಾ ಬೆಳ್ಳಿ ಪದಕ ಗೆಲ್ಲುವ ಮೂಲಕ ಟ್ರ್ಯಾಕ್ ಮತ್ತು ಫೀಲ್ಡ್‌ನಿಂದ ಭಾರತಕ್ಕೆ ಇಂದು ಮೊದಲ ಪದಕ ಲಭಿಸಿದೆ. ಟೊಕಿಯೋ ಒಲಿಂಪಿನ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರಿಯಾಂಕಾ, ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕಕ್ಕೆ ಕೊರಳೊಡ್ಡಿದ್ದಾರೆ.

Aug 06, 2022, 3:55 pm IST

ಬಾಕ್ಸಿಂಗ್: ಪುರುಷರ ಫ್ಲೈವೇಟ್ ಫೈನಲ್‌ನಲ್ಲಿ ಅಮಿತ್ ಪಂಗಲ್ ಫೈನಲ್‌ ತಲುಪಿದ್ದಾರೆ. ಸರ್ವಾನುಮತದ ನಿರ್ಧಾರದ ಮೇಲೆ ಜಾಂಬಿಯಾದ ಚಿನಿಯಂಬಾ ಅವರನ್ನು ಸೋಲಿಸಿದರು.

Aug 06, 2022, 2:37 pm IST

ಕಾಮನ್‌ವೆಲ್ತ್ ಗೇಮ್ಸ್ 2022: ಭಾರತದ ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಇದೀಗ ಭಾರತ ಮತ್ತು ಇಂಗ್ಲೆಂಡ್ ಮಹಿಳಾ ಹಾಕಿ ಪಂದ್ಯದ ಕುರಿತು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ, ಅವರು ಸೂಪರ್ ಪವರ್ ಆಗುವವರೆಗೂ ಕ್ರಿಕೆಟ್‌ನಲ್ಲಿಯೂ ಇಂತಹ ಪಕ್ಷಪಾತ ನಡೆಯುತ್ತಿತ್ತು ಎಂದು ಹೇಳಿದ್ದಾರೆ.

Aug 06, 2022, 1:48 pm IST

ಶನಿವಾರ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು, ಕಿಡಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಆಡಲಿದ್ದಾರೆ. ಸ್ಟಾರ್ ಟೇಬಲ್ ಟೆನಿಸ್ ಆಟಗಾರರಾದ ಅಚಂತಾ ಶರತ್ ಕಮಲ್ ಮತ್ತು ಮಣಿಕಾ ಬಾತ್ರಾ ಕೂಡ ಆಡಲಿದ್ದು, ಇಮ್ ಸ್ಕ್ವಾಷ್ ಕೂಡ, ದೀಪಿಕಾ ಪಲ್ಲಿಕಲ್ ಮತ್ತು ಸೌರವ್ ಘೋಷಾಲ್ ಆಕ್ಷನ್‌ನಲ್ಲಿದ್ದಾರೆ.

Aug 06, 2022, 1:12 pm IST

ವಿನೇಶ್ ಫೋಗಟ್ ಅವರು ನಡೆಯುತ್ತಿರುವ ಗೇಮ್ಸ್‌ನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸುತ್ತಾರೆ ಮತ್ತು ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ದೀಪಕ್ ಪುನಿಯಾ ಚಿನ್ನ ಗೆದ್ದ ನಂತರ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ನೋಡಬೇಕಾಗಿದೆ. ನಿಖತ್ ಝರೀನ್ ಮತ್ತು ಅಮಿತ್ ಪಂಗಲ್ ಕೂಡ ತಮ್ಮ ತಮ್ಮ ಸೆಮಿಫೈನಲ್ ಪಂದ್ಯಗಳಲ್ಲಿ ಸ್ಪರ್ಧಿಸಲಿದ್ದಾರೆ.

Aug 06, 2022, 12:12 pm IST

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನ ಸೆಮಿಫೈನಲ್ ಹಣಾಹಣಿಯಲ್ಲಿ ಭಾರತೀಯ ಪುರುಷರ ಹಾಕಿ ತಂಡವು ದಕ್ಷಿಣ ಆಫ್ರಿಕಾವನ್ನು ಎದುರಿಸಲು ಸಜ್ಜಾಗಿದೆ.

Aug 06, 2022, 11:31 am IST

ಶುಕ್ರವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ ಸೆಮಿಫೈನಲ್‌ನಲ್ಲಿ ನಿಗದಿತ ಸಮಯದ ಕೊನೆಯಲ್ಲಿ ಎರಡೂ ತಂಡಗಳು 1-1 ಗೋಲುಗಳಿಂದ ಸಮಬಲಗೊಂಡ ನಂತರ ಭಾರತೀಯ ಮಹಿಳಾ ಹಾಕಿ ತಂಡವು ಶೂಟ್-ಔಟ್‌ನಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 0-3 ರಿಂದ ಸೋತಿತು.

Aug 06, 2022, 11:15 am IST

ಕಾಮನ್‌ವೆಲ್ತ್ ಗೇಮ್ಸ್ 2022ರ 8ನೇ ದಿನದಂದು ಭಾರತದ ಪದಕಗಳ ಬೇಟೆ ಮುಂದುವರೆದಿದ್ದು, ಕುಸ್ತಿಪಟುಗಳು 3 ಚಿನ್ನ, 1 ಬೆಳ್ಳಿ ಮತ್ತು 2 ಕಂಚು ಸೇರಿದಂತೆ 6 ಪದಕಗಳನ್ನು ಪಡೆದರು.

Aug 06, 2022, 10:48 am IST

ಶನಿವಾರ ಮಹಿಳಾ ಕ್ರಿಕೆಟ್ ತಂಡ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದ್ದು, ಗೆದ್ದರೆ ಭಾರತಕ್ಕೆ ಬೆಳ್ಳಿ ಪದಕ ಖಚಿತ.

Aug 05, 2022, 11:56 pm IST

ರೆಸ್ಲಿಂಗ್‌ನಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ! ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಬಳಿಕ ಚಿನ್ನದ ಪದಕ ಗೆದ್ದುಕೊಟ್ಟ ದೀಪಕ್ ಪುನಿಯಾ

Aug 05, 2022, 11:27 pm IST

ರೆಸ್ಲಿಂಗ್‌ನಲ್ಲಿ ಮತ್ತೊಂದು ಚಿನ್ನ!! ಸಾಕ್ಷಿ ಮಲಿಕ್ ಮಹಿಳೆಯರ ಫ್ರೀಸ್ಟೈಲ್ 62 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಕೆನಡಾದ ಅನಾ ಗೊನ್ಜಾಲೇಜ್ ಅವರನ್ನು ಮಣಿಸಿ ಈ ಸಾಧನೆ ಮಾಡಿದ್ದಾರೆ ಸಾಕ್ಷಿ ಮಲಿಕ್

Aug 05, 2022, 10:29 pm IST

ರೆಸ್ಲಿಂಗ್‌ನಲ್ಲಿ ಭಜರಂಗ್ ಪುನಿಯಾ ಭಾರತದ ಪರವಾಗಿ ಚಿನ್ನದ ಪದಕ ಗೆದ್ದಿದ್ದಾರೆ. 65 ಕೆಜಿ ವಿಭಾಗದ ಫೈನಲ್‌ನಲ್ಲಿ ಕೆನಡಾದ ಲಚ್‌ಲನ್ ಮೆಕ್‌ನೈಲ್ ವಿರುದ್ಧ 9-2 ಅಂತರದಿಂದ ಗೆದ್ದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

Aug 05, 2022, 10:26 pm IST

ಟೇಬಲ್ ಟೆನಿಸ್‌ನಲ್ಲಿ ಭಾರತದ ಆಟಗಾರ್ತಿಯರಾದ ಮನಿಕಾ ಬಾತ್ರಾ ಹಾಗೂ ಶ್ರೀಜಾ ಅಕುಲಾ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್‌ಗೇರಿದ್ದಾರೆ

Aug 05, 2022, 6:23 pm IST

ಬ್ಯಾಡ್ಮಿಂಟನ್: ಶ್ರೀಲಂಕಾದ ದುಮಿಂದು ಅಬೇಯ್‌ವಿಕ್ರಮ ವಿರುದ್ಧ 21-9, 21-12 ಅಂತರದಿಂದ ಭಾರತದ ಕಿಡಂಬಿ ಶ್ರೀಕಾಂತ್ ಗೆಲುವು ಸಾಧಿಸಿದ್ದು ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ

Aug 05, 2022, 3:46 pm IST

ಭಾರತದ ಅನುಭವಿ ರೆಸ್ಲರ್ ಬಜರಂಗ್ ಪುನಿಯಾ ಕೇವಲ 1 ನಿಮಿಷ 47 ಸೆಕೆಂಡ್‌ನಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕ್ವಾರ್ಟರ್‌ಗೆ ಬಜರಂಗ್ ಪುನಿಯಾ ಲಗ್ಗೆಯಿಟ್ಟಿದ್ದಾರೆ

Aug 05, 2022, 1:07 pm IST

ಮಹಿಳೆಯರ ಹಾಕಿ ತಂಡ ಸೆಮಿಫೈನಲ್ ಪ್ರವೇಶಿಸಿದ್ದು, ಶುಕ್ರವಾರ ಬಲಿಷ್ಠ ಆಸ್ಟ್ರೇಲಿಯವನ್ನು ಎದುರಿಸಲಿದೆ.

Aug 05, 2022, 11:35 am IST

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಕೆನಡಾದ ಫೂ ಚಿಂಗ್ ನಾಮ್ ವಿರುದ್ಧ ಮಹಿಳಾ ಸಿಂಗಲ್ಸ್ ಟೇಬಲ್ ಟೆನ್ನಿಸ್ ಪಂದ್ಯವನ್ನು ಗೆದ್ದ ಭಾರತದ ಮಣಿಕಾ ಬಾತ್ರಾ.

Aug 05, 2022, 11:14 am IST

ಕಾಮನ್‌ವೆಲ್ತ್ ಗೇಮ್ಸ್ 2022: ಈವರೆಗೆ ಆರು ಚಿನ್ನ, ಏಳು ಬೆಳ್ಳಿ ಮತ್ತು ಏಳು ಕಂಚಿನ ಪದಕಗಳೊಂದಿಗೆ ಭಾರತ ಪ್ರಸ್ತುತ ಪದಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದು, ಒಟ್ಟು 20 ಪದಕಗಳನ್ನು ಗೆದ್ದಿದೆ.

Aug 05, 2022, 10:56 am IST

ಭಾರತದ ಪ್ಯಾರಾ-ಪವರ್‌ಲಿಫ್ಟರ್ ಸುಧೀರ್ ಗುರುವಾರ (ಆಗಸ್ಟ್ 4) ರಂದು ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಪುರುಷರ ಹೆವಿವೇಟ್ ಫೈನಲ್‌ನಲ್ಲಿ 212 ಕೆಜಿ ಅತ್ಯುತ್ತಮ ತೂಕದೊಂದಿಗೆ ಚಿನ್ನದ ಪದಕಕ್ಕೆ ಕೊರೊಳೊಡ್ಡಿದರು.

Aug 05, 2022, 10:55 am IST

ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಕ್ರೀಡಾಂಗಣದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಅಥ್ಲೆಟಿಕ್ಸ್ ಪದಕ ಸಮಾರಂಭದಲ್ಲಿ ಭಾರತದ ಮುರಳಿ ಶ್ರೀಶಂಕರ್ ಅವರು ಪುರುಷರ ಲಾಂಗ್ ಜಂಪ್ ಫೈನಲ್‌ನಲ್ಲಿ ಬೆಳ್ಳಿ ಪದಕ ಪಡೆದರು.

Aug 04, 2022, 8:52 pm IST

ಹಾಕಿಯಲ್ಲಿ ಭಾರತ ವೇಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. 4-1 ಅಂತರದಿಂದ ಗೆಲುವು ಸಾಧಿಸಿದ ಭಾರತ ತಂಡ ಸತತ ಎರಡನೇ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸೆಮೀಫೈನಲ್‌ಗೇರಿದ ಸಾಧನೆ ಮಾಡಿದೆ.

Aug 04, 2022, 8:37 pm IST

ಪುರುಷರ ಸೂಪರ್ ಹೆವಿವೇಯ್ಟ್ ಕ್ವಾರ್ಟರ್ ಫೈನಲ್‌ನಲ್ಲಿ ಸಾಗರ್ ಅಹ್ಲಾವತ್ ಸೀಶೆಲ್ಸ್‌ನ ಕೆಡ್ಡಿ ಇವಾನ್ಸ್ ಆಗ್ನೆಸ್ ಅವರನ್ನು 5-0 ಅಂತರದಿಂದ ಸೋಲಿಸಿದರು. ಇದೀಗ ಆರು ಬಾಕ್ಸರ್ ಗಳ ಪದಕ ಖಚಿತವಾಗಿದೆ.

Aug 04, 2022, 8:17 pm IST

ಲಾನ್‌ಬೌಲ್‌ನ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತದ ಮೃದುಲ್ ಬೋರ್ಗಹೈನ್ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಲು ವಿಫಲವಾಗಿದ್ದಾರೆ

Aug 04, 2022, 7:53 pm IST

ಹಾಕಿ: ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಮತ್ತು ಹ್ಯಾಟ್ರಿಕ್ ಕವರ್! ಪುರುಷರ ಪೂಲ್ ಬಿ ಮುಖಾಮುಖಿಯಲ್ಲಿ ಭಾರತ ವೇಲ್ಸ್ ವಿರುದ್ಧ 3-0 ಮುನ್ನಡೆ ಸಾಧಿಸಿದೆ

Aug 04, 2022, 6:56 pm IST

ಬಾಕ್ಸಿಂಗ್: ಪದಕ ಖಚಿತ! ಮಹಿಳೆಯರ 60 ಕೆಜಿ ಲೈಟ್‌ವೇಟ್‌ನಲ್ಲಿ ಜೈಸ್ಮಿನ್ ಟ್ರಾಯ್ ಗಾರ್ಟನ್ ವಿರುದ್ಧ 4-1 ಜಯ ಸಾಧಿಸಿದ ಭಾರತ ಜಾಸ್ಮಿನ್ ಸೆಮಿಫೈನಲ್‌ಗೆ ಪ್ರವೇಶಿಸಿದರು.

Aug 04, 2022, 5:37 pm IST

ಬಾಕ್ಸಿಂಗ್: ಪುರುಷರ ಫ್ಲೈವೇಟ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸ್ಕಾಟ್ಲೆಂಡ್‌ನ ಲೆನ್ನನ್ ಮುಲ್ಲಿಗನ್ ವಿರುದ್ಧ 5-0 ಅಂತರದ ಗೆಲುವು ಸಾಧಿಸಿದ ಅಮಿತ್ ಪಂಗಲ್ ಭಾರತಕ್ಕೆ ಮತ್ತೊಂದು ಪದಕವನ್ನು ಖಚಿತಪಡಿಸಿದ್ದಾರೆ.

Aug 04, 2022, 4:32 pm IST

ಪ್ಯಾರಾ ಟೇಬಲ್ ಟೆನಿಸ್: ಭಾವಿನಾ ಪಟೇಲ್ ಸಿ3-5 ವಿಭಾಗದಲ್ಲಿ ಫಿಜಿಯ ಅಕಾನಿಸಿ ಲಾಟು ವಿರುದ್ಧ ತಮ್ಮ ಅಂತಿಮ ಗ್ರೂಪ್ ಹಂತದ ಪಂದ್ಯದಲ್ಲಿ 3-0 ಅಂತರದಲ್ಲಿ ಗೆದ್ದರು.

Aug 04, 2022, 3:51 pm IST

ಬ್ಯಾಡ್ಮಿಂಟನ್: ಪಿವಿ ಸಿಂಧು ಅವರು ಮಾಲ್ಡೀವ್ಸ್‌ನ ಫಾತಿಮತ್ ನಬಾಹಾ ಅಬ್ದುಲ್ ರಜಾಕ್ ವಿರುದ್ಧ 21-4, 21-11 ಅಂತರದಿಂದ ನೇರ ಗೆಲುವನ್ನು ಸಾಧಿಸಿ 16ರ ಸುತ್ತಿಗೆ ಪ್ರವೇಶಿಸಿದರು.

Aug 04, 2022, 3:28 pm IST

ಅಥ್ಲೆಟಿಕ್ಸ್: ಹಿಮಾ ದಾಸ್ ಹೀಟ್ಸ್ ಗೆದ್ದಿದ್ದಾರೆ. 23.42 ಸೆಕೆಂಡ್‌ಗಳಲ್ಲಿ ಮಹಿಳೆಯರ 200 ಮೀ ಪೂರೈಸಿದ ಹಿಮಾ ದಾಸ್ ಸೆಮಿಫೈನಲ್‌ಗೆ ಅರ್ಹತೆ ಪಡೆದರು.

Aug 04, 2022, 3:19 pm IST

ಬ್ಯಾಡ್ಮಿಂಟನ್: ಮಾಲ್ಡೀವ್ಸ್‌ನ ಫಾತಿಮತ್ ನಬಾಹಾ ಅಬ್ದುಲ್ ರಜಾಕ್ ವಿರುದ್ಧದ ಸಿಂಗಲ್ಸ್ ಅಭಿಯಾನದಲ್ಲಿ ಪಿವಿ ಸಿಂಧು ಶುಭಾರಂಭ ಮಾಡಿದ್ದಾರೆ. ಮೊದಲ ಗೇಮ್‌ನ ಮಧ್ಯಂತರಕ್ಕೆ ಭಾರತದವರು 11-2 ಮುನ್ನಡೆ ಸಾಧಿಸಿದರು.

Aug 04, 2022, 1:58 pm IST

ಅಥ್ಲೆಟಿಕ್ಸ್ ಸೆಣಸಾಟ ಶುರು

ಮಧ್ಯಾಹ್ನ 2:30 - ಮಹಿಳೆಯರ ಹ್ಯಾಮರ್ ಥ್ರೋ ಅರ್ಹತಾ ಸುತ್ತಿನ ಗುಂಪು ಎ - ಸರಿತಾ ರೋಮಿತ್ ಸಿಂಗ್, ಮಂಜು ಬಾಲಾ ಮಧ್ಯಾಹ್ನ 3:03 - ಮಹಿಳೆಯರ 200 ಮೀ ಸುತ್ತು 1 ಹೀಟ್ 2 - ಹಿಮಾ ದಾಸ್ 12:12 AM (ಶುಕ್ರವಾರ) - ಪುರುಷರ ಲಾಂಗ್ ಜಂಪ್ ಫೈನಲ್ಸ್ - ಮುರಳಿ ಶ್ರೀಶಂಕರ್ , ಮುಹಮ್ಮದ್ ಅನೀಸ್ ಯಾಹಿಯಾ

Aug 03, 2022, 11:18 pm IST

ಸ್ಕ್ವಾಶ್‌ನಲ್ಲಿ ಭಾರತದ ಪರವಾಗಿ ಸೌರಬ್ ಘೋಸಲ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕಂಚಿನ ಪದಕ ಗೆಲ್ಲುವ ಮೂಲಕ ಸೌರವ್ ಘೋಸಲ್ ಭಾರತಕ್ಕೆ ಮೊದಲ ವೈಯಕ್ತಿಕ ಪದಕ ಗೆದ್ದುಕೊಟ್ಟಿದ್ದಾರೆ

Aug 03, 2022, 9:26 pm IST

ವೈಟ್‌ಲಿಫ್ಟಿಂಗ್: 87+ ಕೆಜಿ ವಿಭಾಗದ ಫೈನಲ್‌ನಲ್ಲಿ ಭಾರತದ ಪೂರ್ಣಿಮಾ ಪಾಂಡೆ ಪದಕ ಗೆಲ್ಲುವ ಅವಕಾಶವನ್ನು ಸ್ವಲ್ಪದಲ್ಲಿ ಕಳೆದುಕೊಂಡಿದ್ದಾರೆ. 24ರ ಹರೆಯದ ಪೂರ್ಣಿಮಾ ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ

Aug 03, 2022, 6:24 pm IST

ಫೈನಲ್ ಹಂತಕ್ಕೇರಿದ ತುಲಿಕಾ ಮಾನ್: ಜುಡೋದಲ್ಲಿ ಭಾರತಕ್ಕೆ ಮೂರನೇ ಪದಕ ಖಚಿತ

Aug 03, 2022, 5:09 pm IST

ಲವ್‌ಪ್ರೀತ್ ಸಿಂಗ್ ಕಂಚು ಗೆಲ್ಲುವ ಮೂಲಕ ಕೇವಲ ವೇಟ್‌ಲಿಫ್ಟಿಂಗ್‌ನಲ್ಲಿಯೇ ಭಾರತ 9 ಪದಕಗಳನ್ನು ಗೆದ್ದುಕೊಂಡಂತಾಗಿದೆ

Aug 03, 2022, 4:58 pm IST

ಹಾಕಿ: ಗೆದ್ದರೆ ಸೆಮಿಫೈನಲ್, ಡ್ರಾಗೊಂಡರೂ ಮನೆಗೆ

ಹಾಕಿ: ಭಾರತ ವನಿತೆಯರ ಮತ್ತು ಕೆನಡಾ ವನಿತೆಯರ ನಡುವಿನ ಹಾಕಿ ಪಂದ್ಯದಲ್ಲಿ ಮೂರನೇ ಕ್ವಾರ್ಟರ್ ಮುಕ್ತಾಯದ ಸಮಯಕ್ಕೆ 2-2 ಅಂತರದ ಸಮಬಲ ಉಂಟಾಗಿದ್ದು, ಸೆಮಿಫೈನಲ್ ಪ್ರವೇಶಿಸಲು ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಪಂದ್ಯ ಡ್ರಾ ಆದರೂ ಸಹ ಕೆನಡಾ ತಂಡವೇ ಸೆಮಿಫೈನಲ್‌ಗೆ ಲಗ್ಗೆ ಇಡಲಿದೆ.

Aug 03, 2022, 4:04 pm IST

ಕಂಚು ಗೆದ್ದ ವೇಟ್‌ಲಿಫ್ಟರ್ ಲವ್‌ಪ್ರೀತ್ ಸಿಂಗ್

ವೇಟ್‌ಲಿಫ್ಟಿಂಗ್: ಪುರುಷರ 109 ಕೆಜಿ ವಿಭಾಗದಲ್ಲಿ ಭಾರತದ ಲವ್‌ಪ್ರೀತ್ ಸಿಂಗ್ ಕಂಚಿನ ಪದಕ ಗೆದ್ದಿದ್ದಾರೆ.

Aug 03, 2022, 3:45 pm IST

ಹಾಕಿ

ಭಾರತ ವನಿತೆಯರು ಮತ್ತು ಕೆನಡಾ ವನಿತೆಯರ ನಡುವಿನ ಹಾಕಿ ಪಂದ್ಯ ಶುರುವಾಗಿದೆ.

Aug 03, 2022, 3:41 pm IST

ಲಾನ್ ಬೌಲ್ಸ್ ಎರಡನೇ ಸುತ್ತಿನಲ್ಲಿ ಗೆದ್ದ ಭಾರತ ಮಹಿಳಾ ಜೋಡಿ

ಭಾರತ ಮಹಿಳಾ ಜೋಡಿ ತಂಡ ಲಾನ್ ಬೌಲ್ಸ್‌ನ 2ನೇ ಸುತ್ತಿನ ಪಂದ್ಯದಲ್ಲಿ 23-6ರಲ್ಲಿ ನಿಯು ತಂಡವನ್ನು ಸೋಲಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ 3ನೇ ಪಂದ್ಯವನ್ನಾಡಲು 4 PM ಕ್ಕೆ ಮರಳಲಿದೆ.

Aug 03, 2022, 2:50 pm IST

ಲಾನ್ ಬೌಲ್ಸ್ ಪುರುಷರ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಜಯ

ಲಾಲ್‌ ಬೌಲ್ಸ್ ಪುರುಷರ ಎರಡನೇ ಸುತ್ತಿನಲ್ಲಿ ಮೃದುಲ್ ಬೊರ್ಗೊಹೈನ್ ಗೆದ್ದಿದ್ದಾರೆ. ಅವರು ಫೋಕ್‌ಲ್ಯಾಂಡ್ ದ್ವೀಪಗಳ ಕ್ರಿಸ್ ಲಾಕ್ ಅವರನ್ನು 21-5 ರಿಂದ ಸೋಲಿಸಿದ್ದಾರೆ.

Aug 03, 2022, 2:07 pm IST

ಲಾನ್ ಬೌಲ್ಸ್‌ನಲ್ಲಿ ಭಾರತೀಯರ ಮುನ್ನಡೆ

ಲಾನ್ ಬೌಲ್ಸ್: ಕುಕ್ ಐಲ್ಯಾಂಡ್‌ನ ಕ್ರಿಸ್ ಲಾಕ್ ವಿರುದ್ಧ ಪುರುಷರ ಸಿಂಗಲ್ಸ್ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಭಾರತದ ಮೃದುಲ್ ಬೊರ್ಗೊಹೈನ್ 10-1 ರಿಂದ ಮುನ್ನಡೆ ಸಾಧಿಸಿದ್ದಾರೆ. ನಿಯು ವಿರುದ್ಧದ 2ನೇ ಸುತ್ತಿನ ಪಂದ್ಯದಲ್ಲಿ ಭಾರತ ಮಹಿಳಾ ಜೋಡಿ 6-4 ಮುನ್ನಡೆ ಸಾಧಿಸಿದೆ.

Aug 03, 2022, 12:58 am IST

ವೇಟ್‌ಲಿಫ್ಟಿಂಗ್: ಮಹಿಳೆಯರ 87 ಕೆಜಿ ಫೈನಲ್ನಲ್ಲಿ ಭಾರತದ ಉಷಾ ಬನ್ನೂರು ನಟೇಶ್ ಕುಮಾರ್ ಒಟ್ಟು 205 ಕೆಜಿ ತೂಕ ಎತ್ತಿದ್ದು, 6 ನೇ ಸ್ಥಾನ ಪಡೆದರು. ಇದರಲ್ಲಿ 95 ಕೆಜಿ ಸ್ನ್ಯಾಚ್ ಮತ್ತು 110 ಕೆಜಿ ಕ್ಲೀನ್ & ಜರ್ಕ್‌ ಹೊಂದಿದೆ.

Aug 02, 2022, 11:50 pm IST

ಬ್ಯಾಡ್ಮಿಂಟನ್: ಮಿಶ್ರ ತಂಡದ ಚಿನ್ನದ ಪದಕದ ಎರಡನೇ ಪಂದ್ಯದಲ್ಲಿ ಪಿ.ವಿ ಸಿಂದು, ಗೋ ಜಿನ್ ವೀ ವಿರುದ್ಧ 22-20, 21-17 ಸೆಟ್‌ಗಳಿಂದ ಗೆದ್ದಿದ್ದಾರೆ. ಈ ಮೂಲಕ ಭಾರತವು ಎದುರಾಳಿ ಮಲೇಷ್ಯಾ ವಿರುದ್ಧ 1-1ರಿಂದ ಸಮಬಲ ಸಾಧಿಸಿದೆ.

Aug 02, 2022, 11:43 pm IST

ವೇಟ್‌ಲಿಫ್ಟಿಂಗ್: ಮಹಿಳೆಯರ 87 ಕೆಜಿ ಫೈನಲ್ - ಭಾರತದ ಉಷಾ ಬನ್ನೂರ್ ತನ್ನ ಮೊದಲ ಸ್ನ್ಯಾಚ್ ಪ್ರಯತ್ನದಲ್ಲಿ 90 ಕೆಜಿಯನ್ನು ಯಶಸ್ವಿಯಾಗಿ ಎತ್ತುವ ಮೂಲಕ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

Aug 02, 2022, 11:41 pm IST

ಬ್ಯಾಡ್ಮಿಂಟನ್: ಮಿಶ್ರ ತಂಡದ ಚಿನ್ನದ ಪದಕದ ಎರಡನೇ ಪಂದ್ಯದಲ್ಲಿ ಪಿವಿ ಸಿಂಧು ಮೊದಲ ಗೇಮ್‌ನಲ್ಲಿ 22-20 ರಲ್ಲಿ ಗೋ ಜಿನ್ ವೀ ವಿರುದ್ಧ ಜಯಗಳಿಸಿದರು | ಮಲೇಷ್ಯಾ ಈಗಾಗಲೇ 1-0 ಮುನ್ನಡೆ

Aug 02, 2022, 10:19 pm IST

ಸ್ಕ್ವಾಷ್: ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಭಾರತದ ಸೌರವ್ ಘೋಶಲ್ 9-11, 4-11, 1-11 ರಲ್ಲಿ ನ್ಯೂಜಿಲೆಂಡ್‌ನ ಪಾಲ್ ಕೋಲ್ ವಿರುದ್ಧ ಸೋತರು. ಈ ಮೂಲಕ ಘೋಶಲ್ ಕಂಚಿನ ಪದಕದ ಪಂದ್ಯದಲ್ಲಿ ಆಡಲಿದ್ದಾರೆ.

Aug 02, 2022, 9:37 pm IST

ಹಾಕಿ: ಪೂಲ್ ಎ ಗೇಮ್‌ನಲ್ಲಿ ಇಂಗ್ಲೆಂಡ್ ವನಿತೆಯರ ವಿರುದ್ಧ ಭಾರತ ಮಹಿಳಾ ತಂಡವು 1-3 ಅಂತರದಲ್ಲಿ ಸೋಲನ್ನ ಅನುಭವಿಸಿದೆ.

Aug 02, 2022, 8:41 pm IST

ವೇಟ್‌ಲಿಫ್ಟರ್ ವಿಕಾಸ್ ಠಾಕೂರ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕಗಳ ಸಂಖ್ಯೆ 12 ಕ್ಕೆ ಏರಿಕೆಯಾಗಿದೆ.

Aug 02, 2022, 8:28 pm IST

ಟೇಬಲ್ ಟೆನಿಸ್‌ನಲ್ಲ ಚಿನ್ನ ಗೆದ್ದ ಭಾರತ

ಭಾರತ ಮತ್ತು ಸಿಂಗಾಪುರ ನಡುವೆ ನಡೆದ ಟೇಬಲ್ ಟೆನಿಸ್ ಫೈನಲ್ ಪಂದ್ಯದಲ್ಲಿ ಭಾರತ ಜಯ ಸಾಧಿಸಿದ್ದು, ಭಾರತ ಐದನೇ ಚಿನ್ನದ ಪದಕವನ್ನು ಗೆದ್ದಿದೆ.

Aug 02, 2022, 7:05 pm IST

ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ

ಲಾನ್ ಬೌಲ್ಸ್ ಮಹಿಳಾ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 17-10 ಅಂತರದಿಂದ ಗೆದ್ದು, ಇದೇ ಮೊದಲ ಬಾರಿಗೆ ಲಾನ್ ಬೌಲ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ಐತಿಹಾಸಿಕ ದಾಖಲೆಯನ್ನು ಬರೆದಿದೆ.

Aug 02, 2022, 6:48 pm IST

ಲಾನ್ಸ್‌ಬೌಲ್ ಫೈನಲ್: ಚಿನ್ನದ ಪದಕದತ್ತ ಭಾರತ

ಲಾನ್ ಬೌಲ್ಸ್ ಮಹಿಳಾ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮುಖಾಮುಖಿಯಲ್ಲಿ ಕೊನೆಯ ಸುತ್ತು ನಡೆಯುತ್ತಿದ್ದು ಭಾರತ 15-10 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ.

Aug 02, 2022, 6:13 pm IST

ಲಾನ್ಸ್‌ಬೌಲ್ ಫೈನಲ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಮತ್ತೆ ಮುನ್ನಡೆ

ಲಾನ್ ಬೌಲ್ಸ್ ಮಹಿಳಾ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮುಖಾಮುಖಿ ಏರ್ಪಟ್ಟಿದ್ದು, ಐದನೇ ಸುತ್ತಿನ ನಂತರವೂ ಭಾರತ 4-2 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ.

Aug 02, 2022, 5:24 pm IST

ಚಿನ್ನದ ಪದಕದತ್ತ ಭಾರತ ಲಾನ್ ಬೌಲ್ಸ್ ವನಿತೆಯರ ತಂಡ

ಲಾನ್ ಬೌಲ್ಸ್ ಮಹಿಳಾ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮುಖಾಮುಖಿ ಏರ್ಪಟ್ಟಿದ್ದು, ಮೂರನೇ ಸುತ್ತಿನ ಮುಕ್ತಾಯದ ಹಂತಕ್ಕೆ ಭಾರತ 3-2 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ.

Aug 02, 2022, 3:43 pm IST

ಲಾಂಗ್ ಜಂಪ್

ಭಾರತದ ಶ್ರೀಶಂಕರ್ ಲಾಂಗ್ ಜಂಪ್ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಕ್ವಾಲಿಫೈಯರ್ ಸುತ್ತಿನಲ್ಲಿ 8M ಜಿಗಿದ ಶ್ರೀಶಂಕರ್ ಕ್ವಾಲಿಫೈಯರ್ ಸುತ್ತಿನಲ್ಲಿ ಅತಿಹೆಚ್ಚು ಅಂತರಕ್ಕೆ ಜಿಗಿದ ಎಂಬ ದಾಖಲೆ ಬರೆದರು.

Aug 02, 2022, 3:03 pm IST

ಐದನೇ ದಿನ ಭಾರತದ ವೇಟ್‌ಲಿಫ್ಟಿಂಗ್ ಹಣಾಹಣಿಗಳ ಪಟ್ಟಿ

2 PM: ಪುನಮ್ ಯಾದವ್ (ಮಹಿಳೆಯರ 76 ಕೆಜಿ) — ಫೈನಲ್, 6:30 PM: ವಿಕಾಸ್ ಠಾಕೂರ್ (ಪುರುಷರ 96 ಕೆಜಿ) — ಫೈನಲ್, 11 PM: ಉಷಾ ಬನ್ನೂರು ನಟೇಶ್ ಕುಮಾರ (ಮಹಿಳೆಯರ 87 ಕೆಜಿ) — ಫೈನಲ್

Aug 02, 2022, 1:51 pm IST

ಐದನೇ ದಿನದ ಲಾನ್ ಬೌಲ್ಸ್ ಪಂದ್ಯಗಳ ಪಟ್ಟಿ

1 PM: ಭಾರತ vs ನ್ಯೂಜಿಲೆಂಡ್ – ಮಹಿಳೆಯರ ಜೋಡಿ ಸುತ್ತು 1 1 PM: ಭಾರತ vs ನ್ಯೂಜಿಲೆಂಡ್ – ಮಹಿಳೆಯರ ಟ್ರಿಪಲ್ ಸುತ್ತು 1 4:15 PM: ಭಾರತ vs ದಕ್ಷಿಣ ಆಫ್ರಿಕಾ – ಮಹಿಳೆಯರ ಫೋರ್ಸ್ ಫೈನಲ್ 4:15 PM: ಮೃದುಲ್ ಬೊರ್ಗೊಹೈನ್ vs ಶಾನನ್ ಮೆಸಿಲ್ರಾಯ್ – ಪುರುಷರ ಸಿಂಗಲ್ಸ್ ಸುತ್ತು 1 8:45 PM: ಭಾರತ vs ಫಿಜಿ – ಪುರುಷರ ಫೋರ್ಸ್ ಸುತ್ತು 1 8:45 PM: ಭಾರತ vs ಇಂಗ್ಲೆಂಡ್ – ಮಹಿಳೆಯರ ಟ್ರಿಪಲ್ಸ್ ಸುತ್ತು 2

Aug 02, 2022, 11:12 am IST

ಐದನೇ ದಿನ ಪದಕದತ್ತ ಮೂವರು ವೇಟ್‌ಲಿಫ್ಟರ್ಸ್

ಐದನೇ ದಿನದಂದು ಭಾರತದ ಮೂವರು ವೇಟ್ ಲಿಫ್ಟರ್ ಕ್ರೀಡಾಪಟುಗಳು ಪದಕ ಗೆಲ್ಲುವುದು ಖಚಿತವಾಗಿದೆ. ಮಹಿಳಾ 76 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಪೂನಮ್ ಯಾದವ್ ಫೈನಲ್ ಆಡಲಿದ್ದರೆ, ಪುರುಷರ 96 ಕೆ ಜಿ ಫೈನಲ್ ಸುತ್ತಿನಲ್ಲಿ ವಿಕಾಸ್ ಠಾಕೂರ್ ಸೆಣಸಾಡಲಿದ್ದಾರೆ ಮಹಿಳೆಯರ 87 ಕೆಜಿ ವೇಟ್ ಲಿಫ್ಟಿಂಗ್ ಫೈನಲ್ ಪಂದ್ಯದಲ್ಲಿ ಉಷಾ ಬನ್ನೂರು ಕುಮಾರ ಕಣಕ್ಕಿಳಿಯಲಿದ್ದಾರೆ.

Aug 01, 2022, 10:30 pm IST

ಮಹಿಳೆಯರ 48 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮೈಕೆಲಾ ವೈಟ್‌ಬೂಯಿ ವಿರುದ್ಧ ಸೋಲು ಅನುಭವಿಸಿದ ಕಾರಣ ಶುಶೀಲಾ ದೇವಿ ರಜತ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ

Aug 01, 2022, 10:06 pm IST

ಜುಡೋದಲ್ಲಿ ಭಾರತಕ್ಕೆ ಬೆಳ್ಳಿ ಪದಕ: ಕಾಮನ್‌ವೆಲ್ತ್‌ನಲ್ಲಿ ಎರಡನೇ ಪದಕ ಗೆದ್ದ ಶುಶಿಲಾ ದೇವಿ

Aug 01, 2022, 9:58 pm IST

ಹಾಕಿ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 4-2ರಿಂದ ಮುನ್ನಡೆ

Aug 01, 2022, 9:11 pm IST

ಹಾಕಿ: ಮನ್‌ದೀಪ್ ಸಿಂಗ್ ತನ್ನ ಎರಡನೇ ಗೋಲು ಗಳಿಸುವುದರೊಂದಿಗೆ ಪುರುಷರ ಪೂಲ್ ಬಿ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ 3-0 ಮುನ್ನಡೆ ಸಾಧಿಸಿದೆ.

Aug 01, 2022, 9:10 pm IST

ಸ್ಕ್ವಾಷ್: ಪುರುಷರ ಕ್ವಾರ್ಟರ್‌ಫೈನಲ್ ಗೆಲ್ಲುವ ಮೂಲಕ ಸೌರವ್ ಘೋಷಾಲ್ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸ್ಕಾಟ್ಲೆಂಡ್‌ನ ಗ್ರೆಗ್ ಲೊಬ್ಬನ್ ವಿರುದ್ಧ 11-5, 8-11, 11-7, 11-3 ಅಂತರದಲ್ಲಿ ಗೆದ್ದು ಪುರುಷರ ಸಿಂಗಲ್ಸ್ ಸೆಮಿಸ್‌ಗೆ ಪ್ರವೇಶಿಸಿದರು.

Aug 01, 2022, 9:00 pm IST

ಹಾಕಿ: ಮೊದಲ ಕ್ವಾರ್ಟರ್ ಅಂತ್ಯಕ್ಕೆ ಇಂಗ್ಲೆಂಡ್ ವಿರುದ್ಧ ಭಾರತ 2-0 ಮುನ್ನಡೆ ಸಾಧಿಸಿದೆ. ಲಲಿತ್ ಉಪಾಧ್ಯಾಯ ಆರಂಭಿಕ ಗೋಲು ಹೊಡೆದ ನಂತರ, ಮನದೀಪ್ ಸಿಂಗ್ ಭಾರತದ ಪರ ಎರಡನೇ ಗೋಲು ದಾಖಲಿಸಿದರು.

Aug 01, 2022, 8:59 pm IST

ಹಾಕಿ: ಪೂಲ್ ಬಿ ಮುಖಾಮುಖಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ಲಲಿತ್ ಉಪಾಧ್ಯಾಯ ಗೋಲು ದಾಖಲಿಸುವ ಮೂಲಕ 1-0 ಮುನ್ನಡೆ ನೀಡಿದ್ದಾರೆ.

Aug 01, 2022, 8:02 pm IST

ಸೈಕ್ಲಿಂಗ್: ಪುರುಷರ 1000 ಮೀ ಟೈಮ್ ಟ್ರಯಲ್ ಫೈನಲ್‌ನಲ್ಲಿ ರೊನಾಲ್ಡೊ ಲೈಟೊಂಜಮ್ ಸ್ಪರ್ಧೆ

Aug 01, 2022, 8:01 pm IST

ಸ್ಕ್ವಾಷ್: ಜೋಶ್ನಾ ಚಿನಪ್ಪ ಮೂರು ಸೆಟ್‌ಗಳನ್ನ ಸೋಲು ಮೂಲಕ ಮಹಿಳಾ ಸಿಂಗಲ್ಸ್‌ ಸ್ಕ್ವಾಷ್‌ ಸೆಮಿಫೈನಲ್‌ನಿಂದ ಹೊರಬಿದ್ದಿದ್ದಾರೆ. ಕೆನಡಾದ ಹಾಲಿ ನಾಟನ್‌ ವಿರುದ್ಧ ಅಂತಿಮ ಸುತ್ತಿನಲ್ಲಿ 15-13 ರಿಂದ ಸೋಲನ್ನ ಅನುಭವಿಸಿದ್ದು, 9-11, 5-11, 13-15 ನೇರ ಸೆಟ್‌ ಸೋಲನ್ನ ಕಂಡಿದ್ದಾರೆ.

Aug 01, 2022, 7:38 pm IST

ಜಿಮ್ನಾಸ್ಟಿಕ್ಸ್: ಮಹಿಳೆಯರ ವಾಲ್ಟ್ ಫೈನಲ್‌ನಲ್ಲಿ ಪ್ರಣತಿ ನಾಯಕ್ 12.699 ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ತೃಪ್ತಿಪಟ್ಟರು.

Aug 01, 2022, 7:37 pm IST

ಜಿಮ್ನಾಸ್ಟಿಕ್ಸ್‌: ಪ್ರಣತಿ ನಾಯಕ್ ನಾಲ್ಕನೇ ಸ್ಥಾನಕ್ಕೆ ಕುಸಿದು ಪದಕದ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.

Aug 01, 2022, 7:36 pm IST

ಸ್ಕ್ವಾಷ್: ಜೋಶ್ನಾ ಚಿನಪ್ಪ ಎರಡನೇ ಗೇಮ್‌ನಲ್ಲೂ ಕೆನಡಾದ ಹಾಲಿ ನಾಟನ್‌ ವಿರುದ್ಧ 11-5 ಅಂತರದಲ್ಲಿ ಸೋತರು. ವನಿತೆಯರ ಕ್ವಾರ್ಟರ್‌ಫೈನಲ್‌ನಲ್ಲಿ ಚಿನ್ನಪ್ಪಗೆ 0-2 ರಿಂದ ಹಿನ್ನಡೆಯಾಯಿತು

Aug 01, 2022, 7:35 pm IST

ಸ್ಕ್ವಾಷ್: ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಕೆನಡಾದ ಹಾಲಿ ನೌಟನ್ ಮೊದಲ ಗೇಮ್‌ನಲ್ಲಿ 11-9 ರಿಂದ ಜೋಶ್ನಾ ಚಿನಪ್ಪ ವಿರುದ್ಧ ಗೆದ್ದಿದ್ದಾರೆ.

Aug 01, 2022, 7:00 pm IST

ಸ್ಕ್ವಾಷ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಸುನಯಾನಾ ಸಾರಾ ಕುರುವಿಲ್ಲಾ

ಸ್ಕ್ವಾಷ್‌ನಲ್ಲಿ ಭಾರತದ ಸುನಯನಾ ಸಾರಾ ಕುರುವಿಲ್ಲಾ ಅವರು ಶ್ರೀಲಂಕಾದ ಚನಿತ್ಮಾ ಸಿನಾಲಿ ವಿರುದ್ಧ 11-3, 11-2, 11-2 ಸೆಟ್‌ಗಳಿಂದ ಜಯಗಳಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಪಂದ್ಯ ನಾಳೆ ನಡೆಯಲಿದೆ.

Aug 01, 2022, 6:50 pm IST

ಟೇಬಲ್ ಟೆನಿಸ್ ಸೆಮಿಫೈನಲ್ ಗೆದ್ದರೆ ಭಾರತಕ್ಕೆ ಮತ್ತೊಂದು ಪದಕ ಖಚಿತ

ರಾತ್ರಿ 11 ಗಂಟೆಗೆ ಭಾರತ ಮತ್ತು ನೈಜೀರಿಯಾ ನಡುವೆ ಪುರುಷರ ಟೇಬಲ್ ಟೆನಿಸ್ ಸೆಮಿ ಫೈನಲ್ ನಡೆಯಲಿದ್ದು, ಈ ಪಂದ್ಯದಲ್ಲಿ ಭಾರತ ಜಯ ಸಾಧಿಸಿ ಫೈನಲ್ ಪ್ರವೇಶಿಸಿದರೆ ಮತ್ತೊಂದು ಪದಕ ಖಚಿತವಾಗಲಿದೆ.

Aug 01, 2022, 6:31 pm IST

ಪದಕ ಖಚಿತಪಡಿಸಿದ ಶುಶೀಲಾ ದೇವಿ

ಮಹಿಳೆಯರ ವೇಟ್ ಲಿಫ್ಟಿಂಗ್ 48 ಕೆಜಿ ಸೆಮಿಫೈನಲ್‌ನಲ್ಲಿ ಶುಶೀಲಾ ದೇವಿ ಮಾರಿಷಸ್‌ನ ಪ್ರಿಸ್ಸಿಲ್ಲಾ ಮೊರಾಂಡ್ ಅವರನ್ನು 10-0 ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸುವದರ ಮೂಲಕ ಭಾರತಕ್ಕೆ ಪದಕ ತಂದುಕೊಡುವುದನ್ನು ಖಚಿತಪಡಿಸಿದ್ದಾರೆ.

Aug 01, 2022, 6:24 pm IST

ಭಾರತದ ಬಾಕ್ಸರ್ ಮೊಹಮ್ಮದ್ ಹುಸಾಮುದ್ದೀನ್ ಕ್ವಾಟರ್ ಫೈನಲ್‌ಗೆ

ಬಾಕ್ಸಿಂಗ್: ಪುರುಷರ 57 ಕೆಜಿ ಫೆದರ್‌ವೇಟ್ ಸುತ್ತಿನ 16 ಟೈನಲ್ಲಿ ಬಾಂಗ್ಲಾದೇಶದ ಎಂಡಿ ಸಲೀಂ ಹೊಸೈನ್ ಅವರನ್ನು 5-0 ಅಂತರದಿಂದ ಸೋಲಿಸಿದ ಭಾರತದ ಮೊಹಮ್ಮದ್ ಹುಸಾಮುದ್ದೀನ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

Aug 01, 2022, 4:42 pm IST

ಲಾನ್ ಬೌಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ ಭಾರತೀಯ ವನಿತೆಯರು

ಲಾನ್ ಬೌಲ್ಸ್ ವುಮೆನ್ 4 ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವನಿತೆಯರ ವಿರುದ್ಧ ಭಾರತೀಯ ವನಿತೆಯರು 16-13ರ ಅಂತರದಲ್ಲಿ ಜಯ ಸಾಧಿಸಿದ್ದು, ಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ಲಭಿಸುವುದು ಖಚಿತ.

Story first published: Wednesday, August 10, 2022, 15:32 [IST]
Other articles published on Aug 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X