ಕಾಮನ್‌ವೆಲ್ತ್ ಗೇಮ್ಸ್: ಸೆಮಿಫೈನಲ್‌ಗೇರಿದ ಸ್ವಿಮ್ಮರ್ ಶ್ರೀಹರಿ; ಟಿಟಿಯಲ್ಲಿಯೂ ಭಾರತಕ್ಕೆ ಸಿಹಿ

ಕಾಮನ್‌ವೆಲ್ತ್ ಗೇಮ್ಸ್‌ನ ಮೊದಲ ದಿನ ಭಾರತ ಕೆಲ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದಾರೆ. ಸ್ವಿಮ್ಮಿಂಗ್ ವಿಭಾಗದಲ್ಲಿ ಭಾರತ ಮಿಶ್ರ ಸಾಧನೆ ಮಾಡಿದೆ. ಮೂವರು ಸ್ವಿಮ್ಮರ್‌ಗಳ ಪೈಕಿ ಓರ್ವ ಮಾತ್ರವೇ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದು ಇಬ್ಬರು ಅರ್ಹತಾ ಸುತ್ತಿನಲ್ಲಿ ಹೊರಬಿದ್ದಿದ್ದಾರೆ.
ಪುರುಷರ 400M ಫ್ರೀಸ್ಟೈಲ್ ಈವೆಂಟ್‌ನ ಮೂಲಕ ಅಭಿಯಾನ ಆರಂಬಿಸಿದ ಭಾರತ ಕಳಪೆ ಆರಂಭವನ್ನು ಪಡೆಯಿತು. ಕುಶಾಗ್ರಾ ರಾವತ್ ಅವರು 8 ನೇ ಸ್ಥಾನವನ್ನು ಗಳಿಸಿ ಸ್ಪರ್ಧೆಯಿಂದ ಹೊರಬೀಳುವ ಮೂಲಕ ನಿರಾಸೆ ಮೂಡಿಸಿದರು. ಅವರು ಗುರಿ ತಲುಪಲು 3:57.45 ನಿಮಿಷ ತೆಗೆದುಕೊಂಡರು. ನಂತರ ಸಜನ್ ಪ್ರಕಾಶ್ ಕೂಡ ಈಜುಕೊಳದಲ್ಲಿ ನಿರಾಸೆ ಮೂಡಿಸಿದ್ದು ಪುರುಷರ 400M ಫ್ರೀಸ್ಟೈಲ್‌ನಲ್ಲಿ ಮುಂದಿನ ಸುತ್ತಿಗೇರಲು ವಿಫಲವಾದರು.
ಆದರೆ ಕನ್ನಡಿಗ ಶ್ರೀಹರಿ ನಟರಾಜ್ ಭಾರತಕ್ಕೆ ಭರವಸೆ ಮೂಡಿಸಿದ್ದಾರೆ. ಅನುಭವಿ ಈಜುಗಾರ ತನ್ನ ಹೀಟ್ಸ್ ಅನ್ನು ಮೂರನೇ ಸ್ಲಾಟ್‌ನಲ್ಲಿ ಮುಗಿಸಿದ ಕಾರಣ ಪುರುಷರ 100ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಸರಮಿಫೈನಲ್ ಜುಲೈ 30ರಂದು ತಡರಾತ್ರಿ 1:14ಕ್ಕೆ ನಡೆಯಲಿದೆ.
ಟೇಬಲ್ ಟೆನಿಸ್‌ನಲ್ಲಿ ಗೆಲುವು: ಇನ್ನು ಟೆಬಲ್ ಟೆನಿಸ್ ಪುರುಷರ ಮೊದಲ ಪಂದ್ಯದಲ್ಲಿ ಭಾರತ ಬಾರ್ಬಡೋಸ್ ವಿರುದ್ಧ 3-0 ಅಂತರದಿಂದ ಗೆಲುವು ಸಾಧಿಸಿದೆ. ಅನುಭವಿ ಟೇಬಲ್ ಟೆನ್ನಿಸ್ ತಾರೆ ಶರತ್ ಕಮಲ್ ನೇತೃತ್ವದ ಭಾರತ ಜಿ ಸತ್ಯನ್ ಮತ್ತು ಹರ್ಮೀತ್ ದೇಸಾಯಿ ಅವರೊಂದಿಗೆ ಮೊದಲ ಸೆಣೆಸಾಟದಲ್ಲಿ ಕೆವಿನ್ ಫಾರ್ಲೆ ಮತ್ತು ಟೈರೆಸ್ ನೈಟ್ ಜೋಡಿಯನ್ನು 11-9, 11-9, 11-4 ಅಂತರದಿಮದ ಮಣಿಸಿತು. ಬಳಿಕ ಶರತ್ ಕಮಲ್ ರೋಮನ್ ಮಾಕ್ಸ್‌ವೆಲ್ ವಿರುದ್ಧ 3-0 ಅಂತರದಿಂದ ಗೆಲುವು ಸಾಧಿಸಿರು. ಬಳಿಕ ಸಥಿಯನ್ ಕೂಡ ಗೆಲುವು ಸಾಧಿಸಿದರು. ಹೀಗಾಗಿ ಅಂತಿಮ ಎರಡು ಸಿಂಗ್ಸ್ ಪಂದ್ಯಗಳನ್ನು ಆಡುವ ಅವಶ್ಯಕತೆಯಿಲ್ಲದೆ ಭಾರತ ಗೆಲುವು ಸಾಧಿಸಿತು.
ಇದಕ್ಕೂ ಮುನ್ನ ಮನಿಕಾ ಭಾತ್ರಾ ನೇತೃತ್ವದಲ್ಲಿ ಮಹಿಳೆಯರ ತಂಡ ಕೂಡ ಮೊದಲ ಸೆಣೆಸಾಟದಲ್ಲಿ ಗೆಲುವು ಸಾಧಿಸಿತು. ಗ್ರೂಪ್ 2ರ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 3-0 ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಟಿಟಿ ಸ್ಪರ್ಧೆಯಲ್ಲಿ ಭಾರತ ಮೊದಲ ದಿನ ಸಿಹಿ ಕಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications