Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಾಮನ್ವೆಲ್ತ್ ಚಿನ್ನ ವಿಜೇತ ಸಂಜಿತಾ ಚಾನು ಡೋಪಿಂಗ್ ಶಿಕ್ಷೆಯಿಂದ ಮುಕ್ತ

Commonwealth gold-medalist Sanjita Chanu cleared of doping charge by IWF

ನವದೆಹಲಿ, ಜೂನ್ 10: ಕಾಮನ್ವೆಲ್ತ್ ಗೇಮ್ಸ್‌ನ ವೇಟ್‌ಲಿಫ್ಟಿಂಗ್‌ನಲ್ಲಿ ಬಂಗಾರದ ಪದಕ ವಿಜೇತ ಭಾರತದ ಲಿಫ್ಟರ್ ಸಂಜಿತಾ ಚಾನು ಅವರನ್ನು ಇಂಟರ್ ನ್ಯಾಷನಲ್ ವೇಟ್‌ಲಿಫ್ಟಿಂಗ್ ಫೆಡರೇಶನ್ (ಐಡಬ್ಲ್ಯೂಎಫ್‌) ಡೋಪಿಂಗ್ ಶಿಕ್ಷೆಯಿಂದ ಮುಕ್ತಿಗೊಳಿಸಿದೆ. ಅಷ್ಟೇ ಅಲ್ಲ, ಚಾನು ಅನುಭವಿಸಿದ ಆಘಾತಕ್ಕಾಗಿ ಕ್ಷಮೆಯೂ ಕೋರಿದೆ.

ವರ್ಲ್ಡ್ ಆ್ಯಂಟಿ ಡೋಪಿಂಗ್ ಏಜೆನ್ಸಿಯ (ವಾಡಾ) ಶಿಫಾರಸಿನಂತೆ ಐಡಬ್ಲ್ಯೂಎಫ್, ಚಾನು ಅವರನ್ನು ಶಿಕ್ಷೆಯಿಂದ ಮುಕ್ತಗೊಳಿಸುವ ನಿರ್ಧಾರ ತಾಳಿದೆ. 26ರ ಹರೆಯದ ಚಾನು ತಾನು ಮುಗ್ಧೆ ಎಂದು ಮೊದಲಿನಿಂದಲೂ ಹೇಳಿದ್ದರು.

ಕ್ರೀಡಾಪಟುವಿನ ಮಾದರಿಯನ್ನು ಆಧರಿಸಿ ಕ್ರೀಡಾಪಟುವಿನ ವಿರುದ್ಧದ ಪ್ರಕರಣವನ್ನು ನ್ಯಾಯಯುತವಾಗಿ ಮುಚ್ಚಬೇಕೆಂದು ವಾಡಾ ಶಿಫಾರಸು ಮಾಡಿದೆ,' ಎಂದು ಐಡಬ್ಲ್ಯೂಎಫ್‌ನಿಂದ ಬಂದಿರುವ ಇ-ಮೇಲ್‌ನಲ್ಲಿ ಬರೆಯಲಾಗಿದೆ.

ಡೋಪಿಂಗ್‌ನಿಂದ ನಾನು ಕೊನೆಗೂ ಅಧಿಕೃತವಾಗಿ ಮುಕ್ತವಾಗಿದ್ದೇನೆ ಎಂದು ನನಗೆ ಬಹಳ ಸಂತೋಷವಾಗುತ್ತಿದೆ. ಆದರೆ ನಾನು ಕಳೆದುಕೊಂಡಿದ್ದರ ಬಗ್ಗೆ ಏನು ಮಾಡೋದು? ನಾನು ಅನುಭವಿಸಿದ ಮಾನಸಿಕ ಹಿಂಸೆಯ ಜವಾಬ್ದಾರಿ ಹೊತ್ತುಕೊಳ್ಳುವವರು ಯಾರು?,' ಎಂದು ಪಿಟಿಐ ಜೊತೆ ಮಾತನಾಡಿದ ಚಾನು ಪ್ರಶ್ನಿಸಿದ್ದಾರೆ.

Story first published: Wednesday, June 10, 2020, 16:36 [IST]
Other articles published on Jun 10, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+