Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹೊಸ ಲವ್ ಇನ್ನಿಂಗ್ಸ್ ಆರಂಭಿಸಿದ ಶೇನ್ ವಾರ್ನ್

ಸಿಡ್ನಿ, ಜು.3: ಕ್ರಿಕೆಟ್ ಜಗತ್ತಿನ ಪ್ಲೇ ಬಾಯ್ ಎಂದೇ ಹೆಸರಾಗಿರುವ ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರು ಹೊಸ 'ಲವ್' ಇನ್ನಿಂಗ್ಸ್ ಆರಂಭಿಸಿದ್ದಾರಂತೆ. ನಟಿ ಲಿಜ್ ಹರ್ಲೆ ಜತೆ ಬ್ರೇಕ್ ಅಪ್ ಮಾಡಿಕೊಂಡಿರುವ ಶೇನ್ ಅವರು ರೂಪದರ್ಶಿ ಎಮಿಲಿ ಸ್ಕಾಟ್​ ಎಸೆದ ಗೂಗ್ಲಿಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸದ್ಯ ಜು.5ರಂದು ಲಾರ್ಡ್ಸ್ ನಲ್ಲಿ ನಡೆಯಲಿರುವ ಎಂಸಿಸಿ XI vs ವಿಶ್ವ XI ಪಂದ್ಯಾವಳಿಗೆ ಸಜ್ಜಾಗಲು ಲಂಡನ್ನಿಗೆ ಬಂದಿರುವ ಶೇನ್ ಕೂಡಾ ತಮ್ಮ ಹೊಸ ಜೋಡಿ ಬಗ್ಗೆ ಖುಷಿಯಿಂದ ಹೇಳಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ನೇತೃತ್ವದ XI ವಿರುದ್ಧ ಶೇನ್ ವಾರ್ನ್ XI ಆಡಲಿದೆ.

145 ಟೆಸ್ಟ್ ಪಂದ್ಯಗಳನ್ನಾಡಿದ ಶೇನ್ 708 ವಿಕೆಟ್ ಗಳನ್ನು ಪಡೆದಿರುವ ಶೇನ್ 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರೂ ದೇಶಿ ಪಂದ್ಯಗಳನ್ನಾಡಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಇನ್ನೂ ಜನಪ್ರಿಯತೆ ಉಳಿಸಿಕೊಂಡಿರುವ ಜತೆಗೆ ಗಾಸಿಪ್, ಕಿತ್ತಾಟ ವಿಚಾರದಲ್ಲೂ ಶೇನ್ ಸದಾ ಮುಂದೆ.

Confirmed! Shane Warne has officially bowled over Emily Scott

ಶೇನ್ ವಾರ್ನ್ ಹಾಗೂ ರೂಪದರ್ಶಿ ಕಮ್ ನಟಿ ಎಲೆಜಬೆತ್ ಹರ್ಲೆ ಸ್ಕಾಲೆಂಡ್ ನಲ್ಲಿ ಗಾಲ್ಫ್ ಟೂರ್ನಿಗೆ ಹೋಗಿದ್ದಾಗ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಭಾರತೀಯ ಮೂಲದ ಉದ್ಯಮಿ ಅರುಣ್ ನಾಯರ್ ಕೈ ಹಿಡಿದಿದ್ದ ಹರ್ಲೆ ನಾಲ್ಕು ವರ್ಷದ ದಾಂಪತ್ಯದ ನಂತರ ವಿಚ್ಛೇದನ ಪಡೆದುಕೊಂಡು ಶೇನ್ ವರಿಸಿದ್ದರು.

ಶೇನ್ ಕೂಡಾ ಮೊದಲ ಪತ್ನಿ ಸಿಮೊನ್ ಜೊತೆ ಹತ್ತು ವರ್ಷದ ಸುಖ ಸಂಸಾರ ಕಂಡ ನಂತರ ಸೋಡಾ ಚೀಟಿ ಕೊಟ್ಟು 2006ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಸೈಂಟ್ ಆಂಡ್ರೂಸ್ ನ ಐಷಾರಾಮಿ ಹೋಟೆಲ್ ನಲ್ಲಿ ಶೇನ್ ಹರ್ಲೆ ನಿಶ್ಚಿತಾರ್ಥಕ್ಕೆ ಹರ್ಲೆ ಪುತ್ರ ಡೇಮಿಯನ್ ಸಾಕ್ಷಿಯಾಗಿದ್ದ.

ಲಿಜ್ ಹರ್ಲೆಗೆ ಕೈಕೊಟ್ಟು ಆಸ್ಟ್ರೇಲಿಯಾ ಮಾಡಲ್​​ ಎಮಿಲಿ ಸ್ಕಾಟ್​ ಜೊತೆ ಶೇನ್ ಪ್ರೇಮರಾಗ ಹಾಡಲು ಆರಂಭಿಸಿದ್ದಾರೆ. ಆಕೆ ಮನೆಯಲ್ಲಿ ಆಕೆಯನ್ನು ಚುಂಬಿಸುವ ದೃಶ್ಯ ಎಲ್ಲೆಡೆ ಹರಿದಾಡುತ್ತಿವೆ. 30 ವರ್ಷ ವಯಸ್ಸಿನ ಡಿಜೆ ಎಮಿಲಿ ಸ್ಕಾಟ್, ಕಿರುತೆರೆ ನಟಿ, ರೂಪದರ್ಶಿಯಾಗಿ ಜನಪ್ರಿಯತೆ ಗಳಿಸಿದ್ದು ಈಗ ಶೇನ್ ಜತೆ ಓಡಾಡಿಕೊಂಡಿದ್ದಾರೆ. ಇಬ್ಬರು ಕಮಿಡೆಟ್ ಎಂದು ಘೋಷಿಸಿದ್ದಾರೆ. ಅದರೆ, ಇದು ಎಷ್ಟು ದಿನಗಳ ಕಾಲ ಎಂಬುದು ಇನ್ನೂ ಗೊತ್ತಿಲ್ಲ.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+