Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊರೊನಾವೈರಸ್ ತಗುಲಿದ್ದ ಜಪಾನ್‌ನ ಸುಮೋ ರಸ್ಲರ್ ಶೋಬುಶಿ ನಿಧನ

coronavirus infected Japanese sumo wrestler Shobushi died

ಟೋಕಿಯೋ, ಮೇ 13: ಕೊರೊನಾವೈರಸ್ ತಗುಲಿದ್ದ ಜಪಾನ್‌ನ ಸುಮೋ ಕುಸ್ತಿಪಟು 28ರ ಹರೆಯದ ಶೋಬುಶಿ ಸಾವನ್ನಪ್ಪಿದ್ದಾರೆ. ಕೊರೊನಾ ತಲುಲಿದ್ದ ಮೊದಲ ಸುಮೋ ಕುಸ್ತಿಪಟುವಾಗಿ ಶೋಬುಶಿ ಗುರುತಿಸಿಕೊಂಡಿದ್ದರು. ಶೋಬುಶಿ ಕೊನೆಯುಸಿರೆಳೆದಿರುವುದನ್ನು ಅಲ್ಲಿನ ಕ್ರೀಡಾ ಅಸೋಸಿಯೇಶನ್ ಘೋಷಿಸಿದೆ.

ಶೋಬುಶಿ ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅವರು ಬುಧವಾರ (ಮೇ 13) ಮುಂಜಾನೆ ನಿಧನರಾಗಿದ್ದಾರೆ. ತನ್ನ ಕಾಮಿಡಿ ಸುಮೋ ಆ್ಯಕ್ಟ್‌ ಅನ್ನೋ ವಿಶೇಷ ಕುಸ್ತಿಯಲ್ಲಿ ಶೋಬುಶಿ ಹೆಚ್ಚು ಜನಪ್ರಿಯರಾಗಿದ್ದರು ಎಂದು ತಿಳಿದುಬಂದಿದೆ.

'ನೋವಿಗೆ ತುತ್ತಾಗಿರುವ ಅವರ ಕುಟುಂಬವನ್ನು ಯೋಚಿಸುವಾಗ ನಾವು ಈ ಸಂದರ್ಭದಲ್ಲಿ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ,' ಎಂದು ಜಪಾನ್‌ ಸುಮೋ ಅಸೋಸಿಯೇಶನ್ (ಜೆಎಸ್‌ಎ) ಮುಖ್ಯಸ್ಥ ಹಕ್ಕಾಕು ಅವರು ನ್ಯೂಸ್ ಏಜೆನ್ಸಿ ಎಎಫ್‌ಪಿ ಜೊತೆ ಹೇಳಿದ್ದಾರೆ.

'ಒಂದು ತಿಂಗಳಿಗೂ ಹೆಚ್ಚು ಕಾಲ ಈ ರೋಗದ ವಿರುದ್ಧ ಹೋರಾಡುತ್ತ ಅವರು ತುಂಬಾ ಅನುಭವಿಸಿರಬಹುದು, ಆದರೆ ಸುಮೋ ಕುಸ್ತಿಪಟುವಿನಂತೆ ಅವರು ಸತತ ಪರಿಶ್ರಮಪಟ್ಟರು, ನೋವು ಸಹಿಸಿಕೊಂಡರು ಮತ್ತು ಕೊನೆಯವರೆಗೂ ಹೋರಾಡಿದರು,' ಎಂದು ಹಕ್ಕಾಕು ವಿವರಿಸಿದ್ದಾರೆ.

Story first published: Wednesday, May 13, 2020, 16:59 [IST]
Other articles published on May 13, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+