ಮಹಾನಗರಿ ಬೆಂಗಳೂರಿನ ಟಿಸಿಎಸ್ ವಿಶ್ವ 10K ರೇಸ್‌ಗೆ ಕ್ಷಣಗಣನೆ

ಬೆಂಗಳೂರು, ಮೇ 9: ಎಲೈಟ್ ಮತ್ತು ಅಮೇಚೂರ್ ದೂರದ ಓಟಕ್ಕೆ ಹೆಸರಾಗಿರುವ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ವಿಶ್ವ 10K ಓಟಕ್ಕೆ ಮಹಾನಗರಿ ಬೆಂಗಳೂರು ಸಜ್ಜಾಗುತ್ತಿದೆ. ಮೇ 19ರ ಭಾನುವಾರ ನಡೆಯಲಿರುವ ಈ ಆಕರ್ಷಣೀಯ ಓಟದ ಸ್ಪರ್ಧೆಗೆ ಕ್ಷಣಗಣನೆ ಶುರುವಾಗಿದೆ.
ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿರುವ 12ನೇ ಆವೃತ್ತಿಯ ಈ ಓಟದ ಸ್ಪರ್ಧೆಯಲ್ಲಿ ದೇಶದಾದ್ಯಂತ ಸುಮಾರು 24,570 ಓಟಗಾರರು ಪಾಲ್ಗೊಳ್ಳುವುದನ್ನು ನಿರೀಕ್ಷಿಸಲಾಗಿದೆ. ವಯೋಮಾನಗಳಿಗನುಗುಣವಾಗಿ ಬೇರೆ ಬೇರೆ ವಿಭಾಗಗಳಲ್ಲೂ ಸ್ಪರ್ಧೆಗಳು ನಡೆಯಲಿವೆ.
ಸ್ಪರ್ಧೆಯ ಪ್ರಮುಖಾಕರ್ಷಣೆಯಾಗಿರುವ 10K ರೇಸ್‌ಗಾಗಿ ಸುಮಾರು 16,046 ಓಟಗಾರರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಈ ವಿಭಾಗದ ಸ್ಪರ್ಧೆಗಾಗಿ ಕಳೆದ ವರ್ಷಕ್ಕಿಂತ ಈ ವರ್ಷ ಸುಮಾರು 800 ಹೆಚ್ಚುವರಿ ಹೆಸರುಗಳು ನೋಂದಾಯಿಸಲ್ಪಟ್ಟಿವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಅಥ್ಲೀಟ್‌ಗಳು ಪಾಲ್ಗೊಳ್ಳುತ್ತಿರುವುದು ಕೂಟದ ವಿಶೇಷ.
ಇನ್ನು ಸಮುದಾಯ ಓಟವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿರುವ 'ಮಜ್ಜಾ ರನ್' ವಿಭಾಗಕ್ಕಾಗಿ 6,595 ಸ್ಪರ್ಧಿಗಳು, ಹಿರಿಯ ನಾಗರಿಕರ ವಿಭಾಗದಲ್ಲಿ 873 ಸ್ಪರ್ಧಿಗಳು ಮತ್ತು ಅಂಗವಿಕಲರ ವಿಭಾಗದಲ್ಲಿ 720 ಸ್ಪರ್ಧಿಗಳು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಈ ಸಂಖ್ಯೆಗಳೂ ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟಾಗಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಓಟದ ಸ್ಪರ್ಧೆಗಳು ಮೇ 19ರ ಭಾನುವಾರ ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ಮುಂಜಾನೆ 5ರಿಂದ ಆರಂಭಗೊಳ್ಳಲಿವೆ. ನೋಂದಾವಣೆ, ಸ್ಪರ್ಧಾ ವಿಭಾಗಗಳು, ನಗದು ಪುರಸ್ಕಾರ ಇತ್ಯಾದಿ ಹೆಚ್ಚಿನ ಮಾಹಿತಿಗಳಿಗಾಗಿ https://tcsworld10k.procamrunning.in/ ಜಾಲತಾಣಕ್ಕೆ ಭೇಟಿ ನೀಡಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications