Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರೀಡೆ ಕೇವಲ ಪದಕ ಗೆಲ್ಲಲ್ಲು ಸೀಮಿತವಾಗಿಲ್ಲ, ಆತ್ಮವಿಶ್ವಾಸ ಬೆಳೆಸುತ್ತದೆ: ಕ್ರೇಗ್ ಫುಲ್ಟನ್

ಕ್ರೀಡೆಯು ಕೇವಲ ಪದಕಗಳನ್ನು ಗೆಲ್ಲುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಯುವ ಜನರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಮತ್ತು ದೇಶವನ್ನು ನಿರ್ಮಿಸುವ ಶಕ್ತಿಯಾಗಿದೆ ಎಂದು ಭಾರತೀಯ ಪುರುಷರ ಹಾಕಿ ತಂಡದ ಮುಖ್ಯ ತರಬೇತುದಾರ ಕ್ರೇಗ್ ಫುಲ್ಟನ್ ಹೇಳಿದ್ದಾರೆ. ಭಾರತ ಸರ್ಕಾರವು ಖೇಲೋ ಇಂಡಿಯಾ ಯೋಜನೆಯನ್ನು ವಿಸ್ತರಿಸಿ, ಕ್ರೀಡಾ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವುದು ಯುವ ಪ್ರತಿಭೆಗಳನ್ನು ಗುರುತಿಸಲು ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಶಾಲೆಗಳು, ಹಳ್ಳಿಗಳ ಆಟದ ಮೈದಾನಗಳಿಂದ ಹಿಡಿದು ಒಲಿಂಪಿಕ್ಸ್‌ ವೇದಿಕೆಯವರೆಗೆ ಯುವ ಅಥ್ಲೀಟ್‌ಗಳಿಗೆ ಸೂಕ್ತ ಹಾದಿಯನ್ನು ರೂಪಿಸುವುದು ಅತ್ಯಗತ್ಯವಾಗಿದೆ. ಖೇಲೋ ಇಂಡಿಯಾ ಫೀಡರ್ ಶಾಲೆಗಳು, ಉತ್ಕೃಷ್ಟ ವಿದ್ಯಾಲಯಗಳು ಮತ್ತು ಹೊಸ ತರಬೇತಿ ಕೇಂದ್ರಗಳ ಸ್ಥಾಪನೆಯಿಂದಾಗಿ ಯಾವುದೇ ಉದಯೋನ್ಮುಖ ಪ್ರತಿಭೆಯು ಅವಕಾಶಗಳಿಂದ ವಂಚಿತರಾಗುವುದಿಲ್ಲ ಎಂದು ಫುಲ್ಟನ್ ತಿಳಿಸಿದ್ದಾರೆ.

Craig Fulton Backs Khelo India Expansion Says Sports Build Confidence Beyond Medals Know details

ಕೇವಲ ಪ್ರತಿಭೆಯನ್ನು ಗುರುತಿಸುವುದು ಮಾತ್ರವಲ್ಲದೆ, ಅವರಿಗೆ ಉತ್ತಮ ತರಬೇತಿ, ಗುಣಮಟ್ಟದ ತರಬೇತುದಾರರು ಹಾಗೂ ಸ್ಪರ್ಧಾತ್ಮಕ ಪಂದ್ಯಗಳ ಅಗತ್ಯವಿದೆ. ರಾಷ್ಟ್ರೀಯ ತರಬೇತುದಾರರ ಮಾನ್ಯತಾ ಮಂಡಳಿ (National Coach Accreditation Board) ಸ್ಥಾಪನೆಯನ್ನು ಫುಲ್ಟನ್ ಶ್ಲಾಘಿಸಿದ್ದು, ಕೋಚ್‌ಗಳಲ್ಲಿ ಕೌಶಲ್ಯ ಹೆಚ್ಚಿದರೆ ಕ್ರೀಡಾಪಟುಗಳಿಗೆ ತುಂಬಾ ಉಪಯೋಗವಾಗುತ್ತದೆ ಎಂದು ಹೇಳಿದ್ದಾರೆ.

ಅಲ್ಲದೆ, ಭಾರತೀಯ ಮತ್ತು ವಿದೇಶಿ ಕೋಚ್‌ಗಳು ಪರಸ್ಪರ ಸ್ಪರ್ಧಿಗಳಲ್ಲ, ಬದಲಿಗೆ ದೇಶೀಯ ಜ್ಞಾನ ಮತ್ತು ಅಂತಾರಾಷ್ಟ್ರೀಯ ಅನುಭವಗಳು ಒಂದಾದಾಗ ಉತ್ತಮ ಕ್ರೀಡಾ ವ್ಯವಸ್ಥೆ ನಿರ್ಮಾಣವಾಗುತ್ತದೆ. ಕ್ರೀಡಾ ವಿಜ್ಞಾನ, ಗಾಯಗಳ ನಿರ್ವಹಣೆ ಮತ್ತು ಪುನಶ್ಚೇತನ ಆಧುನಿಕ ಕ್ರೀಡೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಭಾರತೀಯ ಪುರುಷರ ಹಾಕಿ ತಂಡವು ಸಾಲು ಸಾಲು ಒಲಿಂಪಿಕ್ಸ್‌ ಪದಕಗಳನ್ನು ಗೆದ್ದಿರುವುದು ವರ್ಷಗಳ ಕಾಲ ಮಾಡಿದ ನಿರಂತರ ಪರಿಶ್ರಮದ ಫಲವಾಗಿದೆ. 'ಹಾಕಿ ಇಂಡಿಯಾ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಂತಹ ಸರಣಿ ಪಂದ್ಯಾವಳಿಗಳು ರಾಷ್ಟ್ರೀಯ ತಂಡಕ್ಕೆ ನಿರಂತರವಾಗಿ ಕ್ರೀಡಾಪಟುಗಳನ್ನು ಒದಗಿಸುತ್ತಿವೆ. ಅದೇ ಮಾದರಿಯನ್ನು ಇತರ ಕ್ರೀಡೆಗಳಿಗೂ ಅಳವಡಿಸಿದರೆ ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Story first published: Monday, August 10, 2026, 11:29 [IST]
Other articles published on Aug 10, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+