Breaking News: ಭಾರತ ಜುಡೋದಲ್ಲಿ 2 ಪದಕ: ಬೆಳ್ಳಿ ಗೆದ್ದ ಶುಶೀಲಾ ದೇವಿ, ವಿಜಯ್‌ಗೆ ಕಂಚು

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಎರಡನೇ ಬೆಳ್ಳಿ ಪದಕವನ್ನು ಗೆದ್ದುಕೊಂಡಿದೆ. ಮಹಿಳೆಯರ 48 ಕೆಜಿ ವಿಭಾಗದಲ್ಲಿ ಶುಶೀಲಾ ದೇವಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮೈಕೆಲಾ ವೈಟ್‌ಬೂಯಿ ವಿರುದ್ಧ ಸೋಲು ಅನುಭವಿಸಿದ ಕಾರಣ ಶುಶೀಲಾ ದೇವಿ ರಜತ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇನ್ನು ಮತ್ತೊಂದೆಡೆ ವಿಜಯ್ ಕುಮಾರ್ ಯಾದವ್ ಕೂಡ ಕಂಚಿನ ಪದಕವನ್ನು ಗೆದ್ದುಕೊಂಡಿದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಈ ಫೈನಲ್ ಪಂದ್ಯ 4 ನಿಮಿಷಗಳ ಅವಧಿಯಲ್ಲಿ 0-0 ಆಗಿ ಉಳಿದ ಕಾರಣ ನಂತರ ಗೋಲ್ಡನ್ ಪಾಯಿಂಟ್‌ನಲ್ಲಿ ಫಲಿತಾಂಶವನ್ನು ನಿರ್ಧರಿಸಲಾಯಿತು. ಚಿನ್ನದ ಪದಕಕ್ಕೆ ಕೊರಳೊಡ್ಡಲು ಸಾಕಷ್ಟು ಆಕ್ರಮಣಕಾರಿಯಾಗಿ ಶುಶೀಲಾ ದೇವಿ ಮುನ್ನುಗ್ಗಿದರು. ಆದರೆ ತಮ್ಮ ಎದುರಾಳಿಯಿಂದ ಥ್ರೋಡೌನ್ಗೆ ಒಳಗಾದ ಬಳಿಕ ಪಂದ್ಯವನ್ನು ಕಳೆದುಕೊಂಡರು. ಹೀಗಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಮಹಿಳೆಯರ 48 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಮಾರಿಷಸ್‌ನ ಪ್ರಿಸ್ಸಿಲ್ಲಾ ಮೊರಾಂಡ್‌ರನ್ನು ಇಪ್ಪಾನ್‌ನಿಂದ ಮಣಿಸಿ ಶುಶೀಲಾ ಫೈನಲ್‌ಗೆ ತಲುಪಿದ್ದರು. ಇಪ್ಪಾನ್ ಅಂದರೆ ಸ್ಪರ್ಧಿ ಎದುರಾಳಿಯನ್ನು ಗಣನೀಯ ಶಕ್ತಿ ಮತ್ತು ವೇಗದಿಂದ ಮ್ಯಾಟ್‌ಗೆ ಎಸೆಯುವ ಒಂದು ಚಲನೆಯಾಗಿದೆ.
ಮಣಿಪುರದ ಜೂಡೋಕಾ ಶೂಶೀಲಾ ದೇವಿ ರಾಷ್ಟ್ರೀಯ ಮಟ್ಟದಲ್ಲಿ ಅದ್ಭುತ ಪ್ರದರ್ಶನ ನೀಡಿ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ 2014 ರ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕೂಡ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. 2015ರ ಜೂನಿಯರ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನೂ ಗೆದ್ದಿರುವುದು ಇವರ ಸಾಧನೆಯಾಗಿದೆ.
ಇನ್ನು ಮತ್ತೊಂದೆಡೆ ಜುಡೋಕಾ ವಿಜಯ್ ಕುಮಾರ್ ಯಾದವ್ ಕೂಡ ಭಾರತಕ್ಕೆ ಪದಕವನ್ನು ತಂದುಕೊಟ್ಟಿದ್ದಾರೆ. ಸೋಮವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ 60 ಕೆಜಿ ಸ್ಪರ್ಧೆಯಲ್ಲಿ ಸೈಪ್ರಸ್‌ನ ಪೆಟ್ರೋಸ್ ಕ್ರಿಸ್ಟೋಡೌಲಿಡ್ಸ್ ವಿರುದ್ಧ ಜಯಗಳಿಸುವ ಮೂಲಕ ಕಂಚಿನ ಪದಕವನ್ನು ಗೆದ್ದಿದ್ದಾರೆ.
ಇಲ್ಲಿಯವರೆಗೂ ಭಾರತದ ಪರ ಚಿನ್ನ ಗೆದ್ದವರ ಪಟ್ಟಿ
• ಮೀರಾಬಾಯಿ ಚಾನು - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ
• ಜೆರೆಮಿ ಲಾಲ್ರಿನುಂಗ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ
• ಅಚಿಂತಾ ಶೆಯುಲಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ
ಇತರೆ ಪದಕ ಗೆದ್ದವರು
• ಸಂಕೇತ್ ಮಹದೇವ್ ಸರ್ಗರ್ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ
• ಗುರುರಾಜ್ ಪೂಜಾರಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ
• ಬಿಂದ್ಯಾ ರಾಣಿ ದೇವಿ - ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ
ನಾಲ್ಕನೇ ದಿನದ ( ಆಗಸ್ಟ್ 1 ) ಸ್ಪರ್ಧೆಗಳ ಪಟ್ಟಿ
ಲಾನ್ ಬೌಲ್ಸ್:
• ಮಹಿಳೆಯರ 4 ಸೆಮಿಫೈನಲ್ (1:00 PM)
ಜೂಡೋ: (ಮಧ್ಯಾಹ್ನ 2:30ರ ನಂತರ)
• ಪುರುಷರ 66 ಕೆಜಿ ರೌಂಡ್ ಆಫ್ 16: ಜಸ್ಲೀನ್ ಸಿಂಗ್ ಸೈನಿ
• ಮಹಿಳೆಯರ 57 ಕೆಜಿ 16 ರ ಸುತ್ತು: ಸುಚಿಕಾ ತರಿಯಾಲ್
• ಪುರುಷರ 60 ಕೆಜಿ ಸುತ್ತಿನ 16: ವಿಜಯ್ ಕುಮಾರ್ ಯಾದವ್
•ಮಹಿಳೆಯರ 48 ಕೆಜಿ ಕ್ವಾರ್ಟರ್ ಫೈನಲ್: ಶುಶೀಲಾ ದೇವಿ ಲಿಕ್ಮಾಬಮ್
ಸ್ಕ್ವ್ಯಾಷ್:
• ಮಹಿಳೆಯರ ಸಿಂಗಲ್ಸ್ ಪ್ಲೇಟರ್ ಕ್ವಾರ್ಟರ್ ಫೈನಲ್: ಸುನೈನಾ ಸಾರಾ ಕುರುವಿಲ್ಲಾ (ಸಂಜೆ 4:30)
• ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್: ಜೋಷ್ನಾ ಚಿನ್ನಪ್ಪ (ಸಂಜೆ 6:00)
ಈಜು:
• ಪುರುಷರ 100 ಮೀ ಬಟರ್‌ಫ್ಲೈ ಹೀಟ್ 6: ಸಜನ್ ಪ್ರಕಾಶ್ (3:51 PM)
ಬಾಕ್ಸಿಂಗ್:
• 48-51 ಕೆಜಿ ವಿಭಾಗ (ಫ್ಲೈವೇಟ್) 16 ರ ಸುತ್ತು: ಅಮಿತ್ ಫಂಗಲ್ (4:45 PM)
• 54-57 ಕೆಜಿ ವಿಭಾಗ (ಫೆದರ್‌ವೇಟ್) 16 ರ ಸುತ್ತು: ಹುಸ್ಸಾಮ್ ಉದ್ದೀನ್ ಮೊಹಮ್ಮದ್ (ಸಂಜೆ 6:00)
• 75-80 ಕೆಜಿ ವಿಭಾಗ (ಲೈಟ್ ಹೆವಿವೇಟ್) 16 ರ ಸುತ್ತು: ಆಶಿಶ್ ಕುಮಾರ್ (1:00AM)
ಸೈಕ್ಲಿಂಗ್:
• ಮಹಿಳೆಯರ ಕೀರೆನ್ 1 ನೇ ಸುತ್ತು: ತ್ರಿಯಾಶಿ ಪಾಲ್, ಶುಶಿಕಲಾ ಅಗಾಶೆ ಮತ್ತು ಮಯೂರಿ ಲೂಟ್ (6:32 PM)
• ಪುರುಷರ 40 ಕಿಮೀ ಪಾಯಿಂಟ್‌ಗಳ ಓಟದ ಕ್ವಾಲಿಫೈಯರ್: ನಮನ್ ಕಪಿಲ್, ವೆಂಕಪ್ಪ ಕೆಂಗಲಗುತ್ತಿ, ದಿನೇಶ್ ಕುಮಾರ್ ಮತ್ತು ವಿಶ್ವಜೀತ್ ಸಿಂಗ್ (ಸಂಜೆ 6:52)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications