For Quick Alerts
ALLOW NOTIFICATIONS  
For Daily Alerts

CWG 2022: ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಪದಕದ ಭರವಸೆ ಮೂಡಿಸಿರುವ ಅಥ್ಲೀಟ್‌ಗಳು ಇವರು!

CWG 2022: without Neeraj chopra who can shine in track and field events

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದ ಅಭಿಯಾನ ಮಂಗಳವಾರದಿಂದ ಆರಂಭವಾಗಿದೆ. ಆದರೆ ನೀರಜ್ ಚೋಪ್ರ ಗಾಯದ ಕಾರಣದಿಂದಾಗಿ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗುಳಿದಿರುವುದು ಭಾರತಕ್ಕೆ ಹಿನ್ನಡೆಯಾಗಿದೆ. ಹಾಗಿದ್ದರೂ ಭಾರತದಲ್ಲಿ ಸಾಕಷ್ಟು ಅಥ್ಲೀಟ್‌ಗಳು ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ 2010ರಲ್ಲಿ ಎರಡು ಚಿನ್ನ, ಮೂರು ಬೆಳ್ಳಿ ಹಾಗೂ ಏಳು ಕಂಚಿನ ಪದಕ ಗೆದ್ದಿರುವುವು ಈವರೆಗಿನ ಅತ್ಯುನ್ನತ ಸಾಧನೆ ಎನಿಸಿಕೊಂಡಿದೆ. ಅದಾದ ಬಳಿಕ 2014 ಹಾಗೂ 2018ರ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ತಲಾ ಒಂದು ಚಿನ್ನ, ಬೆಳ್ಳಿ ಹಾಗೂ ಕಂಚು ಗೆದ್ದ ಸಾಧನೆ ಮಾಡಿದೆ ಭಾರತ.

ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಪದಕ ಗೆಲ್ಲುವ ಸಾಧ್ಯತೆಯಿರುವ ಅಥ್ಲೀಟ್‌ಗಳ ಮಾಹಿತಿ ಇಲ್ಲಿದೆ.

ಮುರಳಿ ಶ್ರೀಶಂಕರ್: ಶ್ರೀಶಂಕರ್ ಲಾಂಗ್‌ಜಂಪ್‌ನಲ್ಲಿ ಭಾರತದ ಪರವಾಗಿ ಭರವಸೆ ಮೂಡಿಸಿರುವ ಕ್ರೀಡಾಪಟು. ಶ್ರೀಶಂಕರ್ ಮೊದಲ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಣಕ್ಕಿಳಿಯುತ್ತಿದ್ದಾರೆ. 23 ವರ್ಷದ ಅವರು ಇತ್ತೀಚೆಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ ಲಾಂಗ್ ಜಂಪ್ ಫೈನಲ್‌ಗೆ ಪ್ರವೇಶಿಸಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದರು. ಏಪ್ರಿಲ್‌ನಲ್ಲಿ ಫೆಡರೇಶನ್ ಕಪ್‌ನಲ್ಲಿ ಬಂದ ಅವರ 8.36 ಮೀ ದೂರದ ಜಿಗಿತ ಈ ಋತುವಿನಲ್ಲಿ ವಿಶ್ವದ ಎರಡನೇ ಅತ್ಯುತ್ತಮ ಜಿಗಿತವಾಗಿದೆ.

ಸೀಮಾ ಪುನಿಯಾ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪರವಾಗಿ ಸೀಮಾ ಪುನಿಯಾ ನಾಲ್ಕು ಪದಕಗಳನ್ನು ಗೆದ್ದಿದ್ದು ಈವರೆಗೆ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಈ ಬಾರಿಯ ಗೇಮ್ಸ್‌ನಲ್ಲಿ ಸತತ 5ನೇ ಪದಕ ಗೆಲ್ಲುವ ಅವಕಾಶ ಸೀಮಾ ಪುನಿಯಾ ಅವರಿಗಿದೆ. 2006ರಿಂದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಈ ಅನುಭವಿ ಅಥ್ಲೀಟ್ ಮೂರು ಬೆಳ್ಳಿ ಮೂರು ಬೆಳ್ಳಿ ಪದಕಗಳನ್ನು (2006, 2014, 2018) ಮತ್ತು ಒಂದು ಕಂಚಿನ ಪದಕ (2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ)ವನ್ನು ಗೆದ್ದಿದ್ದಾರೆ. ಆದರೆ ಚಿನ್ನದ ಪದಕ ಮಾತ್ರ ಸೀಮಾ ಪುನಿಯಾ ಕೊರಳಿಗೇರಲು ಸಾಧ್ಯವಾಗಿಲ್ಲ. ಆದರೆ ಈ ಬಾರಿಯ ಕ್ರೀಡಾಕೂಟದಲ್ಲಿ ಅದನ್ನು ಸಾಧಿಸುವ ವಿಶ್ವಾಸದಲ್ಲಿದ್ದಾರೆ.

ರೋಹಿತ್ ಯಾದವ್ ಹಾಗೂ ಡಿಪಿ ಮನು: ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರ ಅಲಭ್ಯತೆಯಲ್ಲಿ ಭಾರತದ ಪರವಾಗಿ ಜಾವೆಲಿನ್ ಎಸೆತದಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿರುವ ಅಥ್ಲೀಟ್‌ಗಳು ಎಂದರೆ ರೋಹಿತ್ ಯಾದವ್ ಹಾಗೂ ಡಿಪಿ ಮನು. ರೋಹಿತ್ ಈ ವರ್ಷ ಸ್ಥಿರವಾಗಿ ಪ್ರದರ್ಶನ ನೀಡುತ್ತಿದ್ದು 80 ಮೀಟರ್‌ಅನ್ನು ಐದು ಬಾರಿ ಮೀರಿಸಿದ್ದಾರೆ. ಇನ್ನು ಮನು 84.35 ಮೀಟರ್ ದೂರ ಜಾವೆಲಿನ್ ಎಸೆದ ದಾಖಲೆ ಹೊಂದಿದ್ದು ಭಾರತದ ಎರಡನೇ ಅತ್ಯುತ್ತಮ ಜಾವೆಲಿನ್ ಎಸೆತಗಾರ ಎನಿಸಿಕೊಂಡಿದ್ದಾರೆ.

ಅವಿನಾಶ್ ಸಾಬ್ಲೆ: ಅವಿನಾಶ್ ಸಾಬ್ಲೆ ಭಾರತದ ಪರವಾಗಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿಕೊಂಡು ಬರುತ್ತಿರುವ ಅಥ್ಲೀಟ್ ಎನಿಸಿದ್ದಾರೆ. ರಾಷ್ಟ್ರೀಯ ದಾಖಲೆಯನ್ನು ಕೂಡ ಅವಿನಾಶ್ ಸಾಬ್ಲೆ ಮುರಿದಿದ್ದಾರೆ. ಯುಎಸ್‌ಎಯಲ್ಲಿ ತರಬೇತಿಯನ್ನು ಕೂಡ ಪಡೆದುಕೊಂಡಿರುವ ಅವಿನಾಶ್ ಮೇಲೆ ಸಾಕಷ್ಟು ನಿರೀಕ್ಷೆಗಳು ಇದೆ.

ದ್ಯುತಿ ಚಾಂದ್: 2012ರ ಬಳಿಕ ಭಾರತದ ವೇಗದ ಮಹಿಳಾ ಓಟಗಾರ್ತಿ ಎನಿಸಿಕೊಂಡಿರುವ ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದು ಅವರ ಕೊನೆಯ ಕಾಮನ್‌ವೆಲ್ತ್ ಗೇಮ್ಸ್ ಆಗಿರುವ ಸಾಧ್ಯತೆಯೂ ಇದೆ. 2024ರ ಬಳಿಕ ನಿವೃತ್ತಿಯಾಗುವುದಾಗಿ ಈಗಾಗಲೇ ದ್ಯುತಿ ಹೇಳಿಕೊಂಡಿರುವ ಕಾರಣ ಅದಾದ ಬಳಿಕ ಆಯೋಜನೆಯಾಗಲಿರುವ ಮುಂದಿನ ಕಾಮನ್‌ವೆಲ್ತ್‌ನಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆಯಿದೆ. ಹೀಗಾಗಿ ಈ ಬಾರಿಯ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಅತ್ಯುತ್ತಮ ಸಾಧನೆ ಮಾಡುವ ಪ್ರಯತ್ನದಲ್ಲಿದ್ದಾರೆ ದ್ಯುತಿ ಚಾಂದ್.

ಹಿಮಾ ದಾಸ್: ಮಹಿಳಾ ಓಟಗಾರ್ತಿಯಾಗಿ ಸಾಕಷ್ಟು ಖ್ಯಾತಿ ಪಡೆದಿರುವ ಹಿಮಾದಾಸ್ ಭಾರತದ ಪರವಾಗಿ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರು. ಈ ಬಾರಿ ಟೂರ್ನಿಯ ಆರಂಬಿಕ ಹಂತದಲ್ಲಿಯೇ ಹಿಮಾದಾಸ್ 400 ಮೀಟರ್ ಏಟದ ಸ್ಪರ್ಧೆಯಲ್ಲಿ ಪದಕ ಚಿನ್ನದ ಪದಕ ಗೆದ್ದಿದ್ದಾರೆ ಎಂಬುದು ಸುದ್ದಿಯಾಗಿತ್ತು. ಆದರೆ ಹಿಮಾದಾಸ್ ಮಹಿಳೆಯರ 400 ಮೀಟರ್ ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂಬುದು ಪ್ರಮುಖ ಅಂಶ. 200 ಮೀಟರ್ ಓಟದ ಸ್ಪರ್ಧೆಯಲ್ಲಿ ಹಾಗೂ 4*100 ಮಹಿಳಾ ರಿಲೇ ಸ್ಪರ್ಧೆಯಲ್ಲಿ ಹಿಮಾದಾಸ್ ಭಾಗವಹಿಸಲಿದ್ದಾರೆ.

Story first published: Tuesday, August 2, 2022, 17:12 [IST]
Other articles published on Aug 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+