For Quick Alerts
ALLOW NOTIFICATIONS  
For Daily Alerts

Chess: ಡಿ.ಗುಕೇಶ್‌ ಇತಿಹಾಸ: 18ನೇ ವರ್ಷದಲ್ಲಿ ವಿಶ್ವ ಚಾಂಪಿಯನ್

ಭಾರತದ ಯುವ ಚೆಸ್ ಆಟಗಾರ ಡಿ. ಗುಕೇಶ್‌ ಇತಿಹಾಸ ನಿರ್ಮಿಸಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಆಟಗಾರ ದೊಡ್ಡ ಸಾಧನೆ ಮಾಡಿದ್ದಾರೆ. ಗುಕೇಶ್‌, ಚೀನಾದ ಡಿಂಗ್‌ ಲಿರೆನ್‌ರನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದರು. 18 ವರ್ಷದ ಯುವ, ಭರವಸೆಯ ಆಟಗಾರ ಡಿ.ಗುಕೇಶ್‌ 14ನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಚೀನಾದ ಆಟಗಾರನ ಸವಾಲನ್ನು ಮೀರಿ ನಿಂತರು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಡಿ.ಗುಕೇಶ್‌ ಅವರಿಗಿಂತಲೂ ಮೊದಲು ಈ ಸಾಧನೆಯನ್ನು ವಿಶ್ವನಾಥನ್ ಆನಂದ್ ಮಾಡಿದ್ದರು. ಮಹತ್ವದ ಪಂದ್ಯದಲ್ಲಿ ಡಿ ಗುಕೇಶ್‌ ಅವರು ಜಯ ಸಾಧಿಸುತ್ತಿದ್ದಂತೆ, ತಮ್ಮ ಭಾವನೆಗಳನ್ನು ನಿಯಂತ್ರಿಸಲು ಆಗದೇ ಭಾವುಕರಾದರು. ಅಲ್ಲದೆ ಅವರ ಕಣ್ಣಲ್ಲಿ ಆನಂದ ಭಾಷ್ಪ ಸುರಿಯಿತು. ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ಗೆದ್ದ ಗುಕೇಶ್‌ ವಿಶ್ವ ಪ್ರಶಸ್ತಿಗೆ ಅರ್ಹತೆ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡರು. ಈ ಮಹತ್ವದ ಕ್ಷಣದ ಕನಸನ್ನು ಕಳೆದ 10 ವರ್ಷಗಳ ಹಿಂದೆ ಕಾಣಲಾಗಿತ್ತು. ಈ ಕನಸು ನನಸಾದ ಖುಷಿ ನನಗಿದೆ ಎಂದು ಡಿ.ಗುಕೇಶ್‌ ತಿಳಿಸಿದ್ದಾರೆ.

D Gukesh Makes History Wins Chess World Championship by Defeating China s Ding Liren

ಗುಕೇಶ್‌ ಅಮೋಘ ಸಾಧನೆ

ಸಿಂಗಾರಪುರದಲ್ಲಿ ನಡೆದ ಟೂರ್ನಿಯಲ್ಲಿ ಗುಕೇಶ್‌ ಅಮೋಘ ಸಾಧನೆ ಮಾಡಿದ್ದಾರೆ. ಹದಿನೈದು ದಿನಗಳ ಕಾಲ ನಡೆದ ಟೂರ್ನಿಯಲ್ಲಿ ಭಾರತದ ಚೆಸ್ ಕ್ರೀಡಾ ಪಟು ಅಮೋಘ ಪ್ರದರ್ಶನ ನೀಡಿದರು. ಇದೇ ವೇಳೆ ಹಲವು ಬಾರಿ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದರು. ಆದರೆ ಅಷ್ಟೇ ಅದ್ಭುತವಾಗಿ ಕಂ ಬ್ಯಾಕ್ ಮಾಡಿ ಇತಿಹಾಸ ನಿರ್ಮಿಸಿದರು. ಅಂತಿಮವಾಗಿ ಗುಕೇಶ್‌ 14ನೇ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದರು. ಚೀನಾದ ಲಿರೆನ್ 2023 ರಲ್ಲಿ ರಷ್ಯಾದ ಇಯಾನ್ ನೆಪೋಮ್ನಿಯಾಚಿ ವಿರುದ್ಧದ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಜಯ ಸಾಧಿಸಿದರು. 18 ವರ್ಷದ ಯುವ ಚೆಸ್ ಆಟಗಾರ ಗುಕೇಶ್‌ ಅವರು ಚಿಕ್ಕವಯಸ್ಸಿನಲ್ಲಿ ಕಂಡ ಕನಸು ನನಸಾಗಿದೆ.

39 ವರ್ಷಗಳ ಹಳೆ ದಾಖಲೆ ಉಡೀಸ್

ಗುಕೇಶ್‌, ಚೀನಾದ ಆಟಗಾರನನ್ನು ಮಣಿಸುವ ಮೂಲಕ ಈ ಪ್ರಶಸ್ತಿಯನ್ನು ಪಡೆದ ವಿಶ್ವದ ಕಿರಿಯ ಕ್ರೀಡಾ ಪಟು ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡರು. ರಷ್ಯಾದ ಸ್ಟಾರ್ ಆಟಗಾರ ಗ್ಯಾರಿ ಕಾಸ್ಪರೋವ್ ಅವರು 1985 ರಲ್ಲಿ ಕಿರಿಯ ವಯಸ್ಸಿನಲ್ಲಿ ಈ ಪ್ರಶಸ್ತಿ ಪಡೆದ ಖ್ಯಾತಿಯನ್ನು ಪಡೆದಿದ್ದರು. ಇವರು ತಮ್ಮ 22ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ಇವರ ದಾಖಲೆಯನ್ನು ಡಿ.ಗುಕೇಶ್‌ ಅಳಿಸಿ ಹಾಕಿದ್ದಾರೆ.

ಭಾರತದ ಚೆಸ್‌ ಮಾಂತ್ರಿಕ ವಿಶ್ವನಾಥನ್ ಆನಂದ್ ಬಳಿಕ ಈ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಆಟಗಾರ ಎಂಬ ಹಿಗ್ಗು ಗುಕೇಶ್ ಅವರದ್ದಾಗಿದೆ. ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್ ಕೊನೆಯ ಬಾರಿಗೆ 2013 ರಲ್ಲಿ ಈ ಪ್ರಶಸ್ತಿಯನ್ನು ಗೆದ್ದಿದ್ದರು.

Story first published: Thursday, December 12, 2024, 20:39 [IST]
Other articles published on Dec 12, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+