Chess: ಇತಿಹಾಸ ಬರೆದ ಗುಕೇಶ್ ಪಡೆದ ಬಹುಮಾನ ಎಷ್ಟು?
ಭಾರತದಲ್ಲಿ ಈಗ ಕ್ರಿಕೆಟ್ ನಂತೆ ಬೇರೆ ಕ್ರೀಡೆಗಲಿಗೂ ಪ್ರೋತ್ಸಾಹ ಸಿಗುತ್ತಿದೆ. ಕ್ರಿಕೆಟ್ ಆಟಗಾರರಷ್ಟೇ ಖ್ಯಾತಿಯನ್ನು ಬೇರೆ ಕ್ರೀಡಾಪಟುಗಳು ಪಡೆಯುತ್ತಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಸಾಧನೆ ಮಾಡಿದ ಆಟಗಾರರಿಗೆ ಅಭಿಮಾನಿಗಳು ತಮ್ಮ ಹೃದಯದಲ್ಲಿ ಶಾಶ್ವತಶಾಶ್ವತ ಸ್ಥಾನ ನೀಡಿದ್ದಾರೆ. ಅದರಂತೆ ಬೇರೆ ಕ್ರೀಡೆಗಳತ್ತ ಯುವ ಆಟಗಾರರು ಸಹ ಮುಖ ಮಾಡಿದ್ದಾರೆ. ಜಾವೆಲಿನ್ ಥ್ರೋದಲ್ಲಿ ನಿರಜ್ ಚೋಪ್ರಾ ಸ್ಟಾರ್ ಗಿರಿ ಪಡೆದರೆ, ಚೆಸ್ ಕ್ರೀಡೆಯಲ್ಲಿ ವಿಶ್ವನಾಥನ್ ಆನಂದ್ ಸ್ಟಾರ್ ಗಿರಿ ಪಡೆದಿದ್ದಾರೆ. ಈಗ ಇದೇ ಸಾಲಿಗೆ 18 ವರ್ಷದ ಡಿ.ಗುಕೇಶ್ ಸೇರುತ್ತಾರೆ.
ಸಿಂಗಾಪುರದಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತದ ಡಿ ಗುಕೇಶ್ ಇತಿಹಾಸ ನಿರ್ಮಿಸಿದ್ದಾರೆ. ಇವರು ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರು. ಈ ಮೂಲಕ ಈ ಪಟ್ಟವನ್ನು ಅಲಂಕರಿಸಿದ ಕಿರಿಯ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡರು. ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಕೊಂಚ ನಿಧಾನವಾಗಿ ಆಡಿದ ಗುಕೇಶ್, ಹಂತ ಹಂತವಾಗಿ ಟೂರ್ನಿಯಲ್ಲಿ ಹಿಡಿತ ಸಾಗಿಸುತ್ತಾ ಸಾಗಿ, ಮಹತ್ಬದ ಪಂದ್ಯಗಳಲ್ಲಿ ಕೆಚ್ಚೆದಯ ಆಟ ಪ್ರದರ್ಶಿಸಿದರು. ಈಗ ಚಾಂಪಿಯನ್ ಪಟ್ಟ ಅಲಂಕರಿಸಿದ ಆಟಗಾರನಿಗೆ ಸಿಗುವ ಸಂಭಾವನೆ ಎಷ್ಟು ಎಂಬ ಚರ್ಚೆ ನಡೆಯುತ್ತಿದೆ.

ಗುಕೇಶ್ ಪಡೆದ ಸಂಭಾವನೆ ಎಷ್ಟು?
ಸಿಂಗಾಪೂರ್ ದಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಗುಕೇಶ್ ಗೆ ಸಿಕ್ಕ ಸಂಭಾವನೆ ಎಷ್ಟು ಎಂಬ ಚರ್ಚೆ ನಡೆಯುತ್ತಿದೆ. ಇವರಿಗೆ ಸಿಕ್ಕಿರುವ ಬಹುಮಾನ ಮೊತ್ತವನ್ನು ನೋಡಿದರೆ ಇವರು ಯಾವುದೇ ಕ್ರಿಕೆಟ್ ಆಟಗಾರರಿಗೂ ಕಮ್ಮಿ ಇಲ್ಲ. ಅಸಲಿಗೆ ಇದು ವಿಶ್ವ ಚಾಂಪಿಯನ್ ನ ಶಿಪ್ ನಲ್ಲಿ ಗರಿಷ್ಠ ಬಹುಮಾನ ಮೊತ್ತವನ್ನು ಹೊಂದಿರುವ ಚೆಸಗ ಟೂರ್ನಿ. ಈ ಟೂರ್ನಿಯಲ್ಲಿ ಆಟಗಾರರಿಗೆ ನೀಡಲು 21 ಕೋಟಿ ರೂಪಾಯಿ ನೀಡಲಾಗುತ್ತದೆ.
ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಗುಕೇಶ್ ಪಡೆದ ಬಹುಮಾನ ಮೊತ್ತ ಒಟ್ಟು 11.45 ಕೋಟಿ ರೂ. ಅಷ್ಟೇ ಅಲ್ಲಾ ಇವರು ಫೈನಲ್ ನಲ್ಲಿ ಜಯ ಸಾಧಿಸಿದಕ್ಕೆ ಇವರಿಗೆ 5.07 ಕೋಟಿ ರೂ. ನೀಡಲಾಗಿದೆ. ಒಟ್ಟಾರೆ ಇವರು ಗೆದ್ದ 3 ಪಂದ್ಯಗಳ ಬಹುಮಾನ ಮೊತ್ತ ಇವರಿಗೆ ಲಭಿಸಿದ ಹಣದಲ್ಲಿ ಸೇರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications