Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲಂಡನ್: ಜ್ಯಾವೆಲಿನ್ ಥ್ರೋನಲ್ಲಿ ಹೊಸ ಸಾಧನೆ ಮೆರೆದ ದೇವೇಂದರ್ ಸಿಂಗ್

ಲಂಡನ್, ಆಗಸ್ಟ್ 11: ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಜ್ಯಾವೆಲಿನ್ ಥ್ರೋ ವಿಭಾಗದಲ್ಲಿ ಸ್ಪರ್ಧಿಸಿರುವ ಭಾರತದ ಕ್ರೀಡಾಳು ದೇವೇಂದರ್ ಸಿಂಗ್ ಕಂಗ್ ಅವರು, ಈ ವಿಭಾಗದ ಅಂತಿಮ ಸುತ್ತಿಗೆ ಕಾಲಿಟ್ಟಿದ್ದಾರೆ.

ಈ ಮೂಲಕ ಅವರು, ವಿಶ್ವ ಅಥ್ಲೆಟಿಕ್ಸ್ ನ ಜ್ಯಾವೆಲನ್ ಥ್ರೋನಲ್ಲಿ ಹೀಗೆ ಅಂತಿಮ ಸುತ್ತಿಗೆ ಕಾಲಿಟ್ಟ ಮೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Davinder Kang becomes first Indian to qualify for javelin throw finals

ಗುರುವಾರ ರಾತ್ರಿ ನಡೆದ ಈ ವಿಭಾಗದ ಅರ್ಹತಾ ಸುತ್ತಿನ 'ಬಿ' ರೌಂಡ್ ನಲ್ಲಿ ಅವರು ತಮ್ಮ ಪಾಲಿಗೆ ಇದ್ದ ಮೂರು ಅವಕಾಶಗಳಲ್ಲೂ ಉತ್ತಮ ಸಾಧನೆ ಮೆರೆದರು. ಮೊದಲ ಎಸೆತದಲ್ಲಿ 82.22 ಮೀಟರ್ ವರೆಗೆ ಈಟಿಯನ್ನು ಎಸೆದ ಅವರು, ಆನಂತರ ಎರಡನೇ ಪ್ರಯತ್ನದಲ್ಲಿ 82.44 ಹಾಗೂ ಮೂರನೇ ಪ್ರಯತ್ನದಲ್ಲಿ 84.22 ಮೀಟರ್ ವರೆಗೆ ಈಟಿಯನ್ನು ಎಸೆದು ಅಂತಿಮ ಸುತ್ತಿಗೆ ಕಾಲಿಟ್ಟರು.

ಕೊನೆಯ ಪ್ರಯತ್ನದಲ್ಲಿ ಅವರು ಎಸೆದ 84.22 ಮೀಟರ್ ವರೆಗಿನ ದೂರವು ಅವರ ಈವರೆಗಿನ ವೃತ್ತಿಜೀವನದಲ್ಲಿ ಅತ್ಯಂತ ಶ್ರೇಷ್ಠ ಪ್ರದರ್ಶನ ಎಂದೆನಿಸಿದೆ. ಈ ಪ್ರದರ್ಶನದಿಂದಾಗಿ ಅವರು, 'ಬಿ' ರೌಂಡ್ ಅರ್ಹತಾ ಸುತ್ತಿನಲ್ಲಿ ಹೊರಹೊಮ್ಮಿದ ಟಾಪ್ 10 ಕ್ರೀಡಾಳುಗಳಲ್ಲಿ 7ನೇ ಸ್ಥಾನ ಪಡೆದರು.

ಆಗಸ್ಟ್ 12ರಂದು ನಡೆಯಲಿರುವ ಈ ವಿಭಾಗದ ಫೈನಲ್ ಸುತ್ತಿನಲ್ಲಿ ಅವರು ಪದಕಕ್ಕಾಗಿ ಶ್ರಮಿಸಲಿದ್ದಾರೆ.

ಆದರೆ, ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಮತ್ತೊಬ್ಬ ಜ್ಯಾವೆಲಿನ್ ಥ್ರೋವರ್ ನೀರಜ್ ಚೋಪ್ರಾ ಅವರು, ಅಂತಿಮ ಸುತ್ತಿಗೆ ಕಾಲಿಡುವಲ್ಲಿ ವಿಫಲರಾದರು.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+