ಏಷ್ಯನ್ ಪ್ಯಾರಾ ಗೇಮ್ಸ್ 2018: ಭಾರತಕ್ಕೆ ಕಂಚು ಗೆದ್ದ ದೀಪಾ ಮಲಿಕ್

ಜಕಾರ್ತಾ, ಅಕ್ಟೋಬರ್ 12: ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ ನ ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಭಾರತದ ದೀಪಾ ಮಲಿಕ್ ಕಂಚು ಜಯಿಸಿದ್ದಾರೆ. ಇದು ಈ ಗೇಮ್ಸ್ ನಲ್ಲಿ ದೀಪಾಗೆ ಲಭಿಸಿದ ಎರಡನೇ ಪದಕ.
ಶುಕ್ರವಾರ (ಅಕ್ಟೋಬರ್ 12) ನಡೆದ ಮಹಿಳಾ F51/52/53s ವಿಭಾಗದ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ರಿಯೋ ಪ್ಯಾರಾಲಂಪಿಕ್ ಪದಕ ವಿಜೇತೆ ದೀಪಾ 9.67 ಮೀ. ದೂರ ಚಕ್ರ ಎಸೆದು ಕಂಚು ಜಯಿಸಿದರು. ಈ ಮೊದಲ ಜಾವೆಲಿನ್ ಥ್ರೋನಲ್ಲೂ ದೀಪಾಗೆ ಕಂಚು ಒಲಿದಿತ್ತು.
ಇದೇ ವಿಭಾಗದಲ್ಲಿ ಚಿನ್ನದ ಪದಕ ಇರಾನ್ ನ ಎಲ್ನಾಜ್ ಡರಾಬಿಯನ್ ಪಾಲಾಯಿತು. ಎಲ್ನಾಜ್ 10.71 ಮೀ. ದೂರದ ಸಾಧನೆಯೊಂದಿಗೆ ಏಷ್ಯಾನ್ ಹೊಸ ದಾಖಲೆಯೊಂದಿಗೆ ಚಿನ್ನ ಬಾಚಿಕೊಂಡರು. ಬಹ್ರೇನ್ ನ ಫಾತಿಮಾ ನಧಾಮ್ 9.87 ಮೀ. ಸಾಧನೆಯೊಂದಿಗೆ ಬೆಳ್ಳಿ ತನ್ನದಾಗಿಸಿಕೊಂಡರು.
Story first published: Friday, October 12, 2018, 22:51 [IST]
Other articles published on Oct 12, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications