ಜೂನ್ 1ರಂದು ದೀಪಕ್ ಚಹರ್ weds ಜಯಾ ಭಾರದ್ವಾಜ್; ಯಾವ ಯಾವ ಕ್ರಿಕೆಟಿಗರನ್ನು ಆಹ್ವಾನಿಸಲಾಗಿದೆ?

ಬೆನ್ನುನೋವಿನಿಂದಾಗಿ ಐಪಿಎಲ್ 2022ರ ಸಂಪೂರ್ಣ ಪಂದ್ಯಾವಳಿಯಿಂದ ಹೊರಗುಳಿದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ದೀಪಕ್ ಚಹರ್ ಜೂನ್ 1ರಂದು ಆಗ್ರಾದಲ್ಲಿ ಮದುವೆಯಾಗಲಿದ್ದಾರೆ ಮತ್ತು ಜೂನ್ 3ರಂದು ನವದೆಹಲಿಯಲ್ಲಿ ಆರತಕ್ಷತೆ ನಡೆಯಲಿದೆ.
ಐಪಿಎಲ್ 2021ರ ಸಮಯದಲ್ಲಿ ದೀಪಕ್ ತನ್ನ ಬಾಲ್ಯದ ಗೆಳತಿ ಜಯಾ ಭಾರದ್ವಾಜ್‌ಗೆ ಲವ್ ಪ್ರಪೋಸ್ ಮಾಡಿದ್ದರು ಮತ್ತು ಆ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ದೀಪಕ್ ಚಹರ್ ಮತ್ತು ಜಯಾ ಭಾರದ್ವಾಜ್ ಕುಟುಂಬ ಜೂನ್ 1ರಂದು ಆಗ್ರಾದಲ್ಲಿ ನಡೆಯುವ ವಿವಾಹದ ಮೂಲಕ ಅವರ ವೈವಾಹಿಕ ಸಂಬಂಧವನ್ನು ಅಧಿಕೃತಗೊಳಿಸಲಿದೆ.
ದೀಪಕ್ ಚಹರ್ ಮತ್ತು ಜಯಾ ಭಾರದ್ವಾಜ್ ವಿವಾಹ ಕಾರ್ಯಕ್ರಮದಲ್ಲಿ ಅನೇಕ ಅತಿಥಿಗಳು ಮತ್ತು ಕೆಲವು ಗಣ್ಯರು ಭಾಗವಹಿಸಲಿದ್ದಾರೆ. ಇನ್‌ಸೈಡ್‌ಸ್ಪೋರ್ಟ್‌ನ ವರದಿಯ ಪ್ರಕಾರ, ದೀಪಕ್ ಚಹರ್ ಅವರು ಪತ್ನಿ ಸಾಕ್ಷಿ ಧೋನಿ ಜೊತೆಗೆ ತಮ್ಮ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಅವರನ್ನು ಮದುವೆಗೆ ಆಹ್ವಾನಿಸಿದ್ದಾರೆ.

ಈ ದಂಪತಿಗಳು ಶುಭ ಸಂದರ್ಭದಲ್ಲಿ ಹಾಜರಾಗುವ ನಿರೀಕ್ಷೆಯಿದೆ. ಎಂಎಸ್ ಧೋನಿ ಕೂಡ ದೀಪಕ್ ಚಹರ್‌ಗೆ ತುಂಬಾ ಹತ್ತಿರವಾಗಿದ್ದಾರೆ ಮತ್ತು ಭಾರತೀಯ ಮತ್ತು ಸಿಎಸ್‌ಕೆ ತಂಡಗಳಲ್ಲಿ ಅವರನ್ನು ಬೆಂಬಲಿಸಿದ್ದಾರೆ. ಚಹರ್ ಕೂಡ ಎಂಎಸ್ ಧೋನಿಯನ್ನು ತನ್ನ ಮಾರ್ಗದರ್ಶಕನಾಗಿ ಪರಿಗಣಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರನ್ನು ಸಹ ಮದುವೆಗೆ ಆಹ್ವಾನಿಸಲಾಗಿದೆ ಮತ್ತು ಭಾರತೀಯ ಪುರುಷರ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಅವರ ಪತ್ನಿ ರಿತಿಕಾ ಸಜ್ದೇಹ್ ಅವರನ್ನು ಸಹ ಆಹ್ವಾನಿಸಲಾಗಿದೆ. ವರದಿಯ ಪ್ರಕಾರ, ಈ ಮೂವರು ಕ್ರಿಕೆಟ್ ತಾರೆಯರು ದೀಪಕ್ ಚಹರ್ ವಿವಾಹ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.
"ಎಂಎಸ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ, ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ, ರೋಹಿತ್ ಶರ್ಮಾ ಮತ್ತು ಅವರ ಪತ್ನಿ ರಿತಿಕಾ ಅವರನ್ನು ಆಹ್ವಾನಿಸಲಾಗಿದೆ. ದೀಪಕ್ ಚಹರ್ ಮದುವೆಯಲ್ಲಿ ಹಾಜರಾಗುತ್ತಾರೆ," ಎಂದು ದೀಪಕ್ ಚಹರ್ ಅವರ ಕುಟುಂಬದ ಸದಸ್ಯರೊಬ್ಬರು ಇನ್ಸೈಡ್ ಸ್ಪೋರ್ಟ್‌ಗೆ ತಿಳಿಸಿದ್ದಾರೆ.

ಇವರಿಬ್ಬರ ಮದುವೆ ಕಾರ್ಡ್ ಕೂಡ ವೈರಲ್ ಆಗಿದ್ದು, ಮದುವೆಯ ಕಾರ್ಡ್‌ನಲ್ಲಿ ದೀಪಕ್ ಚಹರ್ ಮತ್ತು ಜಯಾ ಭಾರದ್ವಾಜ್ ಅವರ ಹೆಸರುಗಳ ಮೊದಲಕ್ಷರ ಡಿ ಮತ್ತು ಜೆ ಅಕ್ಷರಗಳನ್ನು ಸೃಜನಾತ್ಮಕ ರೀತಿಯಲ್ಲಿ ಬರೆಯಲಾಗಿದೆ.
ದೀಪಕ್ ಚಹರ್ ಭಾರತೀಯ ಕ್ರಿಕೆಟ್ ತಂಡದ ಇತರ ಕ್ರಿಕೆಟಿಗರನ್ನು ಆಹ್ವಾನಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಇಲ್ಲ. ದೀಪಕ್ ಚಹರ್ ಅವರು ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಾಲ್ ಮತ್ತು ಕೆಎಲ್ ರಾಹುಲ್‌ರಿಗೆ ತುಂಬಾ ಹತ್ತಿರವಾಗಿದ್ದಾರೆ.
ಆದರೆ ಈ ಸ್ನೇಹಿತರನ್ನು ಆಹ್ವಾನಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಜೂನ್ 1ರಂದು ಮದುವೆ ನಡೆಯಲಿದ್ದು, ಅಂದು ಯಾವ ಯಾವ ಕ್ರಿಕೆಟಿಗರು ಹಾಜರಾಗಲಿದ್ದಾರೆ ಎಂಬುದು ತಿಳಿಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications