
ನವದೆಹಲಿ: ವರ್ಲ್ಡ್ ಚಾಂಪಿಯನ್ ಬೆಳ್ಳಿ ಪದಕ ವಿಜೇತ ರಸ್ಲರ್ ದೀಪಕ್ ಪೂನಿಯಾ ಸೇರಿ ಮೂವರು ಅನುಭವಿ ರಸ್ಲರ್‌ಗಳಿಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಸಾಯ್) ಗುರುವಾರ (ಸೆಪ್ಟೆಂಬರ್ 3) ಈ ವಿಚಾರ ತಿಳಿಸಿದೆ.
ಒಲಿಂಪಿಕ್ಸ್‌ಗಾಗಿ ಅಭ್ಯಾಸ ನಡೆಸುತ್ತಿರುವ 86 ಕೆಜಿ ವಿಭಾಗದ ದೀಪಕ್ ಪೂನಿಯಾ, 65 ಕೆಜಿ ವಿಭಾಗದ ನವೀನ್ ಮತ್ತು 125 ಕೆಜಿ ವಿಭಾಗದ ಕೃಷನ್ ಕೋವಿಡ್ 19ಗೆ ತುತ್ತಾಗಿರುವ ರಸ್ಲರ್‌ಗಳು. ಮೂರೂ ರಸ್ಲರ್‌ಗಳು ಸೋನೆಪತ್‌ನಲ್ಲಿರುವ ಸಾಯ್ ಕೇಂದ್ರದಲ್ಲಿ ರಾಷ್ಟ್ರೀಯ ಕ್ಯಾಂಪ್‌ನಲ್ಲಿದ್ದವರು.
ಪಾಸಿಟಿವ್ ಬಂದಿರುವ ಮೂರೂ ರಸ್ಲರ್‌ಗಳನ್ನು ಸದ್ಯ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಈ ಮೊದಲು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಹೆಸರಿಸಲ್ಪಟ್ಟಿದ್ದ ಮಹಿಳಾ ರಸ್ಲರ್ ವಿನೇಶ್ ಪೋಗಟ್‌ಗೆ ಕೊರೊನಾ ತಗುಲಿತ್ತು. ಈಗವರು ಚೇತರಿಸಿಕೊಂಡಿದ್ದಾರೆ.
'ಸೋನೇಪತ್‌ನ ಸಾಯ್ ಸೆಂಟರ್‌ನಲ್ಲಿ ರಾಷ್ಟ್ರೀಯ ಕ್ಯಾಂಪ್‌ನಲ್ಲಿದ್ದ ಮೂವರು ಅನುಭವಿ ಪುರುಷ ರಸ್ಲರ್‌ಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ,' ಎಂದು ಕ್ರೀಡಾ ಇಲಾಖೆ ಮಾಹಿತಿ ನೀಡಿದೆ.