For Quick Alerts
ALLOW NOTIFICATIONS  
For Daily Alerts

Paralympics 2024: ಮಹಿಳೆಯರ 400 ಮೀ. ಓಟದಲ್ಲಿ ದೀಪ್ತಿಗೆ ಕಂಚು

ಪ್ಯಾರಿಸ್‌ನಿಂದ ಭಾರತಕ್ಕೆ ಮಂಗಳವಾರ ರಾತ್ರಿ ಶುಭ ಸುದ್ದಿಯೊಂದು ಬಂದಿದೆ. ಮಹಿಳೆಯರ ಟಿ20 400 ಮೀಟರ್ ಓಟದ ಫೈನಲ್‌ನಲ್ಲಿ ದೀಪ್ತಿ ಜಿವಾಂಜಿ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಪ್ರಸಕ್ತ ಕ್ರೀಡಾಕೂಟದಲ್ಲಿ ಭಾರತ 16 ಪದಕಗಳನ್ನು ಬಾಚಿಕೊಂಡಿದೆ.

ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ದೀಪ್ತಿ ಜಿವಾಂಜಿ ಸ್ಪರ್ಧಿಸಿದ್ದು, ಎಲ್ಲರ ಕಣ್ಣುಗಳು ಇವರ ಮೇಲೆ ನೆಟ್ಟಿರುತ್ತವೆ. ಇವರು ಇದೇ ವಿಭಾಗದಲ್ಲಿ ವಿಶ್ವ ದಾಖಲೆಯನ್ನು ಹೊಂದಿದ್ದರಿಂದ, ಇವರು ಚಿನ್ನ ಗೆಲ್ಲುವ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಆದರೆ ಮಂಗಳವಾರ ದೀಪ್ತಿ ಜಿವಾಂಜಿ ನಿಗದಿತ ದೂರವನ್ನು 55.82 ಸೆಕೆಂಡುಗಳಲ್ಲಿ ಮುಗಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.

Deepti Jivanji Wins Bronze in 400m T20 at Paris Paralympics 2024 India s 16th Medal

ಚಿನ್ನ ಯಾರಿಗೆ?

ಕುತೂಹಲ ಮೂಡಿಸಿದ್ದ ಸ್ಪರ್ಧೆಯಲ್ಲಿ ದೀಪ್ತಿ ಅಮೋಘವಾಗಿ ಓಟವನ್ನು ಆರಂಭಿಸಿದರು. ಆದರೆ, ಎಂಡ್‌ ಲೈನ್‌ ಹತ್ತಿರವಾಗುತ್ತಿದ್ದಂತೆ ಉಕ್ರೇನ್ ಓಟಗಾರ್ತಿ ವೇಗವನ್ನು ಹೆಚ್ಚಿಸಿಕೊಂಡರು. ಯೂಲಿಯಾ ಶುಲ್ಯೆರ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ತುರ್ಕಿಯೆಯ ಎಸೆಲ್ ಒಂಡರ್ ಅವರು ಬೆಳ್ಳಿ ಪದಕವನ್ನು ಗೆದ್ದರು. ದೀಪ್ತಿ ಕೊಂಚದರಲ್ಲಿ ಬಂಗಾರ, ಬೆಳ್ಳಿ ಮಿಸ್ ಮಾಡಿಕೊಂಡರು.

ದೀಪ್ತಿ ಸಾಧನೆ

ಈ ವರ್ಷ ಕೋಬೆಯಲ್ಲಿ ನಡೆದ ಪ್ಯಾರಾ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ದೀಪ್ತಿ ಜಿವಾಂಜಿ ಬಂಗಾರದ ಸಾಧನೆ ಮಾಡಿದ್ದರು. ಇದಲ್ಲದೆ 2022ರ ಏಷ್ಯನ್ ಗೇಮ್ಸ್‌ನಲ್ಲಿ ಸ್ವರ್ಣದ ನಗೆ ಬೀರಿದ್ದರು. ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದ ಟ್ರ್ಯಾಕ್‌ ಆಂಡ್‌ ಫಿಲ್ಡ್ ವಿಭಾಗದಲ್ಲಿ ಭಾರತಕ್ಕೆ ಲಭಿಸಿದ ಆರನೇ ಪದಕ ಇದಾಗಿದೆ.

ತೆಲಂಗಾಣದ ಕಲೇರಾ ಗ್ರಾಮದ ದೀಪ್ತಿ ಜಿವಾಂಜಿ 27 ಸೆಪ್ಟೆಂಬರ್ 2003 ರಂದು ಜನಿಸಿದರು. ಬಡ ಕುಟುಂಬದಲ್ಲಿ ಬೆಳೆದ ದೀಪ್ತಿ, ಚಿಕ್ಕ ವಯಸ್ಸಿನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಇವರು ಅಥ್ಲೀಟಿಕ್ಸ್‌ನಲ್ಲಿ ಇಂತಹ ಸಾಧನೆ ಮಾಡಲು ಕುಟುಂಬ ಅವರ ಅರ್ಧ ಎಕರೆ ಜಮೀನನ್ನು ಮಾರಬೇಕಾಯಿತು. ಈಗ ದೀಪ್ತಿ ಪ್ಯಾರಾಲಿಂಪಿಕ್ಸ್‌ ಕ್ರೀಡಾ ಕೂಟದಲ್ಲಿ ಕಂಚಿಗೆ ಕೊರಳೊಡ್ಡಿದ್ದಾರೆ.

ಪ್ರಧಾನಿ ಮೋದಿ ಅಭಿನಂದನೆ

ಮಹಿಳೆಯರ 400 ಮೀಟರ್‌ ಓಟದ ಸ್ಪರ್ಧೆಯಲ್ಲಿ ಕಂಚಿನ ಸಾಧನೆ ಮಾಡಿರುವ ದೀಪ್ತಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ಅವರು ವಿಶ್ವದ ಅಸಂಖ್ಯಾತ ಜನರಿಗೆ ಸ್ಫೂರ್ತಿಯ ಮೂಲ. ಅವರ ಕೌಶಲ್ಯ ಮತ್ತು ದೃಢವಾದ ಸ್ವಭಾವವು ಪ್ರಶಂಸನೀಯ ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.

Story first published: Wednesday, September 4, 2024, 1:14 [IST]
Other articles published on Sep 4, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+