ವಿನೇಶ್ ಫೋಗಟ್‌ಗೆ ದೆಹಲಿ ಹೈಕೋರ್ಟ್‌ನಿಂದ ದೊಡ್ಡ ರಿಲೀಫ್; ಕುಸ್ತಿ ಸಂಸ್ಥೆ ನಡೆಗೆ ಛೀಮಾರಿ
ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳಾ 51 ಕೆಜಿ ಕುಸ್ತಿ ವಿಭಾಗದ ಫೈನಲ್‌ಗೆ ಅರ್ಹತೆ ಪಡೆದು, ಬಳಿಕ ಪ್ರಶಸ್ತಿ ಸುತ್ತಿನಲ್ಲಿ ತೂಕ ಹೆಚ್ಚಾದ ಕಾರಣ ವಿನೇಶ್ ಪೋಗಟ್ ಅನರ್ಹ ಗೊಂಡಿದ್ದರು. ಇದಾದ ಬಳಿಕ ತವರಿಗೆ ಬಂದ ವಿನೇಶ್ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದರು. ಆದರೆ ಇತ್ತೀಚೆಗೆ ಕೆಲ ತಿಂಗಳುಗಳ ಹಿಂದೆ ನಿವೃತ್ತಿಯಿಂದ ಯು-ಟರ್ನ್ ಹೊಡೆದಿದ್ದರು. ಆದರೆ ಇವರಿಗೆ ಕುಸ್ತಿ ಅಖಾಡಕ್ಕೆ ಇಳಿಯಲು ಭಾರತೀಯ ಕುಸ್ತಿ ಸಂಸ್ಥೆ (ಡಬ್ಲ್ಯೂಎಫ್‌ಐ) ತಡೆ ನೀಡಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ವಿನೇಶ್ ದೆಹಲಿ ಹೈ ಕೋರ್ಟ್ ಮೊರೆ ಹೋಗಿದ್ದರು. ಈಗ ಕೋರ್ಟ್ ನಿರ್ಧಾರ ನಿಜಕ್ಕೂ ವಿನೇಶ್ ಅವರಿಗೆ ಕೊಂಚ ರಿಲೀಫ್ ನೀಡಿದೆ.
ಶುಕ್ರವಾರ (ಮೇ 22) ದೆಹಲಿ ಹೈಕೋರ್ಟ್ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಪ್ರಮುಖ ಬಿಗ್ ರಿಲೀಫ್ ನೀಡಿತು. ಈ ಪ್ರಕರಣವನ್ನು ತನಿಖೆ ಮಾಡಲು ಮತ್ತು ಮೌಲ್ಯಮಾಪನ ಮಾಡಲು ತಜ್ಞರ ಸಮಿತಿಯನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತು. ದೇಶೀಯ ಸ್ಪರ್ಧೆಗಳಲ್ಲಿ ವಿನೇಶ್ ಅವರನ್ನು "ಅನರ್ಹ" ಎಂದು ಘೋಷಿಸಿದ್ದು ಏಕೆ ಎಂಬುದನ್ನು ಭಾರತೀಯ ಕುಸ್ತಿ ಒಕ್ಕೂಟದ ನಿಲುವನ್ನು ನ್ಯಾಯಾಲಯ ಖಂಡಿಸಿದೆ.

ದೆಹಲಿ ಹೈ ಕೋರ್ಟ್‌ನ ವಿಚಾರಣೆಯ ವೇಳೆ ಕೋರ್ಟ್, ಕ್ರೀಡಾಪಟುಗಳು ಮತ್ತು ಸಂಘದ ನಡುವೆ ನಡೆಯುತ್ತಿರುವ ವಿವಾದವು ಕ್ರೀಡೆಯ ಮೇಲೆ ಪರಿಣಾಮ ಬೀರಬಾರದು ಎಂದು ಸಹ ಸ್ಪಷ್ಟ ಸಂದೇಶವನ್ನು ನೀಡಿದೆ. ಕುಸ್ತಿ ಮತ್ತು ಕ್ರೀಡಾಪಟುಗಳ ಹಿತಾಸಕ್ತಿಗಳನ್ನು ಸಹ ನ್ಯಾಯಾಲಯವು ಗಮನಿಸಿದೆ. ಭಾರತೀಯ ಕುಸ್ತಿ ಸಂಘದಲ್ಲಿ ನಡೆಯುತ್ತಿರುವ ಆಂತರಿಕ ಕಲಹದ ಹಿನ್ನೆಲೆ ನ್ಯಾಯಾಲಯ ಹೇಳಿಕೆ ನೀಡಿದೆ.
ವಿನೇಶ್ ಕೋರ್ಟ್ ಮೊರೆ ಹೋಗಿದ್ದು ಏಕೆ?
ವಿನೇಶ್ ಪೋಗಟ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕಸದಸ್ಯ ಪೀಠ ಮೇ 18 ರಂದು ಆದೇಶವನ್ನು ನೀಡಿತ್ತು. ಇದನ್ನು ಪ್ರಶ್ನಿಸಿ ವಿನೇಶ್ ಮೇಲ್ಮನವಿ ಸಲ್ಲಿಸಿದ್ದರು. ಇವರ ಮನವಿಗೆ ದೆಹಲಿ ಹೈ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ವಿನೇಶ್ ಅವರು ಮೇ 30-31 ರಂದು ನಡೆಯಲಿರುವ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸುವ ಇರಾದೆ ಹೊಂದಿದ್ದರು. ಇವರ ಆಸೆಗೆ ಡಬ್ಲ್ಯೂಎಫ್‌ಐ ಕೊಳ್ಳಿ ಇಟ್ಟಿತ್ತು.

ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ನಿಯಮಗಳಲ್ಲಿ ಕೆಲವು ಮಾರ್ಪಾಡುಗಳಿಗೆ ಅವಕಾಶವಿದೆ ಎಂದು ಸರ್ಕಾರಿ ವಕೀಲರು ತಿಳಿಸಿದರು. ಬಳಿಕವೇ ಪೀಠವು ಕೇಂದ್ರಕ್ಕೆ ತಜ್ಞರ ಸಮಿತಿಯನ್ನು ರಚಿಸುವಂತೆ ನಿರ್ದೇಶಿಸಿತು. ಫೋಗಟ್ ಪರ ಹಿರಿಯ ವಕೀಲರು, ಅವರಿಗೆ ಆಯ್ಕೆ ಪ್ರಕ್ರಿಯೆಯಲ್ಲಿ (ಟ್ರಯಲ್ಸ್) ಭಾಗವಹಿಸಲು ಅವಕಾಶ ನೀಡಬೇಕೆಂದು ಬಲವಾಗಿ ಒತ್ತಾಯಿಸಿದರು. ಮೇ 9 ರಂದು ನೀಡಲಾಗಿದ್ದ ಶೋ-ಕಾಸ್ ನೋಟಿಸ್ ಅನ್ನು ವಕೀಲರು ಕೋರ್ಟ್ ಗಮನಕ್ಕೆ ತಂದರು. ಅಲ್ಲದೆ ಗೊಂಡಾದಲ್ಲಿ ನಡೆಯಬೇಕಿದ್ದ ದೇಶೀಯ ಪಂದ್ಯವಾಳಿಗೆ ಒಂದು ದಿನ ಮುಂಚಿತವಾಗಿ ವಿನೇಶ್ ಪೋಗಟ್ ಶೋಕಾಸ್ ನೋಟಿಸ್ ನೀಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications