ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ನಿರಾಸೆ ಅನುಭವಿಸಿದ್ದಾರೆ. ಮಹಿಳೆಯರ ಸಿಂಗಲ್ ಸೆಮಿ ಫೈನಲ್ ಪಂದ್ಯದಲ್ಲಿ ಎರಡು ಬಾರಿಯ ಒಲಂಪಿಕ್ ಪದಕ ವಿಜೇತ ಸಿಂಧು ಸೋಲು ಕಂಡಿದ್ದಾರೆ.
ಶನಿವಾರ ನಡೆದ ಉಪಾಂತ್ಯ ಪಂದ್ಯದಲ್ಲಿ ಸಿಂಧು 18-21, 21-19, 07-21 ರಿಂದ ಸ್ಪೇನ್ ಖ್ಯಾತ ಆಟಗಾರತಿ ಕರೋಲಿನಾ ಮರಿನ್ ವಿರುದ್ಧ ಸೋಲು ಕಂಡರು. ಮೊದಲ ಗೇಮ್ ನಲ್ಲಿ ಉಭಯ ಆಟಗಾರರು ಸಮಯೋಚಿತ ಆಟದ ಪ್ರದರ್ಶನ ನೀಡಿದರು.

ಈ ಗೇಮ್ ನಲ್ಲಿ ಉಭಯ ಆಟಗಾರತಿಯರು ಅಂಕಗಳನ್ನು ಸುಲಭವಾಗಿ ಬಿಟ್ಟುಕೊಡಲಿಲ್ಲ. ಈ ಗೇಮ್ ನ್ನು ಸ್ಪೇನ್ ಆಟಗಾರ್ತಿ ಗೆದ್ದು 1-0 ಮುನ್ನಡೆ ಸಾಧಿಸಿದರು. ಎರಡನೇ ಜನವರಿ ಭರ್ಜರಿ ಕಂಬ್ಯಾಕ್ ಮಾಡಿದ ಭಾರತದ ಸಿಂಧು, ನೆಟ್ ಶಾಟ್ ಗ್ಯಾಪ್ ಶಾಟ್ ಗಳ ಮೂಲಕ ಅಂಗಗಳನ್ನು ಕಲೆ ಹಾಕಿದರು. ಅಲ್ಲದೆ ಕರೋಲಿನ ಒಡ್ಡಿದ ಸವಾಲನ್ನು ಮೆಟ್ಟಿ ನಿಂತರು.
ಎರಡನೇ ಗೇಮ್ ಅನ್ನು ಗೆದ್ದು ಸಿಂಧು, ಫೈನಲ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿ ಇಟ್ಟುಕೊಂಡರು. ಮೂರನೇ ಹಾಗೂ ನಿರ್ಣಾಯಕ ಗೇಮ್ ನಲ್ಲಿ ಕರೋಲಿನಾ ಮನಮೋಹಕ ಆಟವನ್ನು ಆಡಿ ಎಲ್ಲ ಚಿತ್ತ ಕದ್ದರು. ಸಿಂಧು ನಡೆಯನ್ನು ಅರಿತು ಆಟವಾಡಿದ ಕರೋಲಿನಾ ಅಂಕಗಳನ್ನು ಕಲೆಹಾಕಿ ಅಬ್ಬರಿಚಿದರು. ಈ ಮೂಲಕ ಮರಿ ಫೈನಲ್ ಪ್ರವೇಶಿಸಿದರು.
ಸಿಂಧು ಅವರು ಕ್ವಾಟರ್ ಫೈನಲ್ ನಲ್ಲಿ ವಿಶ್ವದ ಏಳನೇ ನಂಬರಿನ ಆಟಗಾರ್ತಿ ಇಂಡೋನೇಷ್ಯಾದ ಗ್ರೆಗೊರಿಯಾ ಮರಿಸ್ಕಾ ಅವರನ್ನು ಸೋಲಿಸಿ ಟೂರ್ನಮೆಂಟಿನ ಉಪಾಂತ್ಯಕ್ಕೆ ಪ್ರವೇಶಿಸಿದ್ದರು.
ಗ್ರೆಗೊರಿಯಾ ಮತ್ತು ಸಿಂಧು ನಡುವೆ ಈ ವರ್ಷದಲ್ಲಿ ಮೂರು ಬಾರಿ ಮುಖಾಮುಖಿಯಾಗಿತ್ತು. ಇದರಲ್ಲಿ ಎರಡು ಬಾರಿ ಸಿಂಧು ಸೋಲು ಅನುಭವಿಸಿದ್ದರು. ಡೆನ್ಮಾರ್ಕ್ ಓಪನ್ ನಲ್ಲಿ ಗ್ರೆಗೊರಿಯಾ ಅವರನ್ನು ಸೋಲಿಸುವ ಸಿಂಧು ಸೇಡು ತೀರಿಸಿಕೊಂಡಿದ್ದರು. ಆದರೆ, ಸೆಮಿಫೈನಲ್ ನಲ್ಲಿ ಸೋಲು ಅನುಭವಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ.