Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

National Sports Awards: ಗುಕೇಶ್, ಮನು ಭಾಕರ್ ಸೇರಿದಂತೆ ನಾಲ್ವರಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ

ರಾಷ್ಟ್ರಪತಿ ಭವನದಲ್ಲಿ ಇಂದು (ಜನವರಿ 17) ನಡೆದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ರೀಡಾ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು. ದೇಶದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಅತ್ಯುನ್ನತ ಕ್ರೀಡಾ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೀಡಿ ಗೌರವಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕಡೆ ತಿರುಗಿ ನೋಡುವಂತೆ ಸಾಧನೆ ಮಾಡಿದ ನಾಲ್ವರು ಕ್ರೀಡಪಟುಗಳಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ವಿಶ್ವ ಚೆಸ್ ಚಾಂಪಿಯನ್ 18 ವರ್ಷದ ಗುಕೇಶ್ ಡಿ, ಹಾಕಿ ಇಂಡಿಯಾ ನಾಯಕ ಹರ್ಮನ್‌ಪ್ರೀತ್ ಸಿಂಗ್, ಡಬಲ್ ಒಲಿಂಪಿಕ್ ಪದಕ ವಿಜೇತ ಶೂಟರ್ ಮನು ಭಾಕರ್‌, ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಹೈಜಂಪರ್ ಪ್ರವೀಣ್ ಕುಮಾರ್‌ ಅವರು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದರು.

Dhyan Chand Khel Ratna Award to Gukesh D Harmanpreet Singh Manu Bhakar Praveen Kumar

ಈ ನಾಲ್ವರು ಕ್ರೀಡಾಪಟು ಇಡೀ ದೇಶವೇ ಹೆಮ್ಮೆ ಪಡುವಂತ ಸಾಧನೆ ಮಾಡಿದ್ದಾರೆ. ಇದರೊಂದಿಗೆ ದೇಶದೆಲ್ಲೆಡೆ ಅಪಾರ ಮೆಚ್ಚುಗೆ ಪಡೆದಿದ್ದಾರೆ. ಇದೀಗ ಕ್ರೀಡಾಪಟುಗಳ ಪ್ರರಿಶ್ರಮಕ್ಕೆ ಕೇಂದ್ರ ಸರ್ಕಾರ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಪ್ರಶಸ್ತಿಯು ಕ್ರೀಡಾಪಟುಗಳು ಭವಿಷ್ಯದಲ್ಲಿ ಆಕಾಶದ ಎತ್ತರಕ್ಕೆ ಸಾಧನೆ ಮಾಡಲು ಶಕ್ತಿ ತುಂಬಲಿದೆ.

2024ರ ಪ್ರಶಸ್ತಿ ವಿಜೇತರು

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ: ಡಿ ಗುಕೇಶ್ (ಚೆಸ್), ಹರ್ಮನ್‌ಪ್ರೀತ್ ಸಿಂಗ್ (ಹಾಕಿ), ಪ್ರವೀಣ್ ಕುಮಾರ್ (ಪ್ಯಾರಾ-ಅಥ್ಲೆಟಿಕ್ಸ್), ಮನು ಭಾಕರ್ (ಶೂಟಿಂಗ್).

ಅರ್ಜುನ ಪ್ರಶಸ್ತಿ: ಜ್ಯೋತಿ ಯರ್ರಾಜಿ (ಅಥ್ಲೆಟಿಕ್ಸ್), ಅಣ್ಣು ರಾಣಿ (ಅಥ್ಲೆಟಿಕ್ಸ್), ನೀತು (ಬಾಕ್ಸಿಂಗ್), ಸಾವೀಟಿ (ಬಾಕ್ಸಿಂಗ್), ವಂತಿಕಾ ಅಗರವಾಲ್ (ಚೆಸ್), ಸಲೀಮಾ ಟೆಟೆ (ಹಾಕಿ), ಅಭಿಷೇಕ್ (ಹಾಕಿ), ಸಂಜಯ್ (ಹಾಕಿ), ಜರ್ಮನ್ಪ್ರೀತ್ ಸಿಂಗ್ (ಹಾಕಿ), ಹಾಕಿ), ಸುಖಜೀತ್ ಸಿಂಗ್ (ಹಾಕಿ), ರಾಕೇಶ್ ಕುಮಾರ್ (ಪ್ಯಾರಾ-ಆರ್ಚರಿ), ಪ್ರೀತಿ ಪಾಲ್ (ಪ್ಯಾರಾ-ಅಥ್ಲೆಟಿಕ್ಸ್), ಜೀವನಜಿ ದೀಪ್ತಿ (ಪ್ಯಾರಾ-ಅಥ್ಲೆಟಿಕ್ಸ್), ಅಜೀತ್ ಸಿಂಗ್ (ಪ್ಯಾರಾ-ಅಥ್ಲೆಟಿಕ್ಸ್), ಸಚಿನ್ ಸರ್ಜೆರಾವ್ ಖಿಲಾರಿ (ಪ್ಯಾರಾ-ಅಥ್ಲೆಟಿಕ್ಸ್), ಧರಂಬೀರ್ (ಪ್ಯಾರಾ-ಅಥ್ಲೆಟಿಕ್ಸ್), ಪ್ರಣವ್ ಸೂರ್ಮಾ (ಪ್ಯಾರಾ-ಅಥ್ಲೆಟಿಕ್ಸ್), ಎಚ್. ಸೆಮಾ (ಪ್ಯಾರಾ ಅಥ್ಲೆಟಿಕ್ಸ್), ಸಿಮ್ರಾನ್ (ಪ್ಯಾರಾ-ಅಥ್ಲೆಟಿಕ್ಸ್), ನವದೀಪ್ (ಪ್ಯಾರಾ-ಅಥ್ಲೆಟಿಕ್ಸ್), ನಿತೇಶ್ ಕುಮಾರ್ (ಪ್ಯಾರಾ-ಬ್ಯಾಡ್ಮಿಂಟನ್), ತುಳಸಿಮತಿ ಮುರುಗೇಶನ್ (ಪ್ಯಾರಾ-ಬ್ಯಾಡ್ಮಿಂಟನ್), ನಿತ್ಯ ಶ್ರೀ ಸುಮತಿ ಶಿವನ್ (ಪ್ಯಾರಾ-ಬ್ಯಾಡ್ಮಿಂಟನ್), ಮನೀಶಾ ರಾಮದಾಸ್ (ಪ್ಯಾರಾ-ಬ್ಯಾಡ್ಮಿಂಟನ್), ಕಪಿಲ್ ಪರ್ಮಾರ್ ( ಪ್ಯಾರಾ-ಜೂಡೋ), ಮೋನಾ ಅಗರ್ವಾಲ್ (ಪ್ಯಾರಾ-ಶೂಟಿಂಗ್), ರುಬಿನಾ ಫ್ರಾನ್ಸಿಸ್ (ಪ್ಯಾರಾ-ಶೂಟಿಂಗ್), ಸ್ವಪ್ನಿಲ್ ಸುರೇಶ್ ಕುಸಾಲೆ (ಶೂಟಿಂಗ್), ಸರಬ್ಜೋತ್ ಸಿಂಗ್ (ಶೂಟಿಂಗ್), ಅಭಯ್ ಸಿಂಗ್ (ಸ್ಕ್ವಾಷ್), ಸಜನ್ ಪ್ರಕಾಶ್ (ಈಜು), ಅಮನ್ (ಕುಸ್ತಿ).

ಅರ್ಜುನ ಪ್ರಶಸ್ತಿ(ಜೀವಮಾನ): ಸುಚಾ ಸಿಂಗ್ (ಅಥ್ಲೆಟಿಕ್ಸ್), ಮುರಳಿಕಾಂತ್ ರಾಜಾರಾಮ್ ಪೇಟ್ಕರ್ (ಪ್ಯಾರಾ-ಈಜು).

ದ್ರೋಣಾಚಾರ್ಯ ಪ್ರಶಸ್ತಿ: ಸುಭಾಷ್ ರಾಣಾ (ಪ್ಯಾರಾ-ಶೂಟಿಂಗ್), ದೀಪಾಲಿ ದೇಶಪಾಂಡೆ (ಶೂಟಿಂಗ್), ಸಂದೀಪ್ ಸಾಂಗ್ವಾನ್ (ಹಾಕಿ, ಎಸ್ ಮುರಳೀಧರನ್ (ಬ್ಯಾಡ್ಮಿಂಟನ್), ಅರ್ಮಾಂಡೋ ಆಗ್ನೆಲೊ ಕೊಲಾಕೊ (ಫುಟ್‌ಬಾಲ್).

Story first published: Friday, January 17, 2025, 13:50 [IST]
Other articles published on Jan 17, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+