Neeraj Chopra: ಯುಜೀನ್ ಡೈಮಂಡ್ ಲೀಗ್ ಟ್ರೋಫಿ ಗೆಲ್ಲುವಲ್ಲಿ ನೀರಜ್ ಚೋಪ್ರಾ ವಿಫಲ; 2ನೇ ಸ್ಥಾನಕ್ಕೆ ತೃಪ್ತಿ
ಶನಿವಾರ, ಸೆಪ್ಟೆಂಬರ್ 16ರಂದು ನಡೆದ 2023ರ ಯುಜೀನ್ ಡೈಮಂಡ್ ಲೀಗ್ ಫೈನಲ್‌ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ತಮ್ಮ ಡೈಮಂಡ್ ಟ್ರೋಫಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ 6 ಜನರ ಫೈನಲ್‌ನಲ್ಲಿ 83.80 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ಎರಡನೇ ಸ್ಥಾನ ಪಡೆದು ರನ್ನರ್-ಅಪ್ ಆದರು.

ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ಯೂಜೀನ್‌ನಲ್ಲಿ ನಡೆದ ಡೈಮಂಡ್ ಲೀಗ್‌ನ ಫೈನಲ್‌ನಲ್ಲಿ 84.24 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ಟ್ರೋಫಿಯನ್ನು ಗೆದ್ದುಕೊಂಡರು.
ಇನ್ನು ಫಿನ್‌ಲ್ಯಾಂಡ್‌ನ ಆಲಿವರ್ ಹೆಲ್ಯಾಂಡರ್ ಅವರು 83.74 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ 3ನೇ ಸ್ಥಾನ ಪಡೆದರು. ಆದರೂ ಅವರು ಈ ಡೈಮಂಡ್ ಲೀಗ್‌ನಲ್ಲಿ ಅಗ್ರ ಇಬ್ಬರು ಆಟಗಾರರ ಮೇಲೆ ಒತ್ತಡ ಹೇರಿದ್ದರು.
ಇದರ ಹಿಂದಿನ ದಿನ ಯುಜೀನ್‌ನಲ್ಲಿ ನಡೆದ ಮಹಿಳೆಯರ ಜಾವೆಲಿನ್ ಫೈನಲ್‌ನಲ್ಲಿ ಕಂಡುಬಂದಿದ್ದಕ್ಕಿಂತ ಇದು ಕಷ್ಟಕರ ಪರಿಸ್ಥಿತಿಯಾಗಿತ್ತು. ಜಾಕುಬ್ ವಡ್ಲೆಜ್ಚ್, ನೀರಜ್ ಚೋಪ್ರಾ ಸೇರಿದಂತೆ ಇತರ ಜಾವೆಲಿನ್ ಎಸೆತಗಾರರು ತಮ್ಮ ಋತುವಿನ ಅತ್ಯುತ್ತಮ ಅಂಕಗಳಿಂದ ದೂರವಿದ್ದರು.
ವಾಸ್ತವವಾಗಿ, ಯುಜೀನ್‌ನ ಡೈಮಂಡ್ ಲೀಗ್ ಫೈನಲ್‌ಗೆ ಮೊದಲು ನೀರಜ್ ಚೋಪ್ರಾ ಅವರ ಅತ್ಯುತ್ತಮ ಎಸೆತಗಳು 85 ಮೀಟರ್‌ಗಿಂತ ಕಡಿಮೆಯಿರಲಿಲ್ಲ.

ಭಾರತದ ನೀರಜ್ ಚೋಪ್ರಾ ಅವರು ಜಾವೆಲಿನ್‌ನಲ್ಲಿ ಡೈಮಂಡ್ ಟ್ರೋಫಿಯನ್ನು ಉಳಿಸಿಕೊಂಡ 3ನೇ ಆಟಗಾರನಾಗುವ ಅವಕಾಶ ವಂಚಿತರಾದರು.
ಟೊಕಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಜಾಕುಬ್ ವಡ್ಲೆಜ್‌ಗೆ ಇದು ಮೂರನೇ ಡೈಮಂಡ್ ಟ್ರೋಫಿ ಗೆಲುವಾಗಿದೆ. ಗಮನಾರ್ಹವಾಗಿ, ಕಳೆದ ತಿಂಗಳು ಜ್ಯೂರಿಚ್ ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ ಅವರನ್ನು ಸೋಲಿಸಿ ಜಾಕುಬ್ ವಡ್ಲೆಜ್ ಟ್ರೋಫಿ ಗೆದ್ದಿದ್ದರು.
ಕಳೆದ ವರ್ಷ ಜ್ಯೂರಿಚ್‌ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್‌ನಲ್ಲಿ 88.44 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದಿಂದ ನೀರಜ್ ಚೋಪ್ರಾ ಗೆಲುವು ಸಾಧಿಸಿದ್ದರು.
ನೀರಜ್ ಚೋಪ್ರಾ ಅವರ ಮೊದಲ ಎಸೆತವು ಫೌಲ್ ಆಗಿತ್ತು ಹಾಗೂ ಜಾಕುಬ್ ವಡ್ಲೆಜ್ 84.01 ಮೀಟರ್ ಎಸೆತದೊಂದಿಗೆ ಆರಂಭಿಕ ಮುನ್ನಡೆ ಸಾಧಿಸಿದರು.
ನಂತರ ಎರಡನೇ ಪ್ರಯತ್ನದಲ್ಲಿ ಭಾರತೀಯ ತಾರೆ ನೀರಜ್ ಚೋಪ್ರಾ 83.80 ಮೀಟರ್ ಎಸೆದು ಎರಡನೇ ಸ್ಥಾನಕ್ಕೆ ಮರಳಿದರು. ಮೂರನೇ ಎಸೆತವು 81.37 ಮೀಟರ್ ಆಗಿತ್ತು. ಆದರೆ ಅವರ ನಾಲ್ಕನೇ ಪ್ರಯತ್ನವು ತಪ್ಪಾಗಿ ಕೊನೆಗೊಂಡಿತು.
ನೀರಜ್ ಚೋಫ್ರಾ ತನ್ನ ಐದನೇ ಪ್ರಯತ್ನದಲ್ಲಿ ಕೇವಲ 80.74 ಮೀಟರ್ ದೂರ ಎಸೆಯಲು ಸಾಧ್ಯವಾಯಿತು. ಜಾಕುಬ್ ವಡ್ಲೆಜ್ ಕೊನೆಯ ಥ್ರೋವರೆಗೂ ಭಾರತೀಯನ ವಿರುದ್ಧ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿದ್ದರು.
ನೀರಜ್ ಚೋಪ್ರಾ ತನ್ನ ಆರನೇ ಪ್ರಯತ್ನದಲ್ಲಿ 80.90 ಮೀ ಪ್ರಯತ್ನದಲ್ಲಿ ಮುಗಿಸಿದದರೆ, ಜಾಕುಬ್ ವಡ್ಲೆಜ್ ತನ್ನ ಅತ್ಯುತ್ತಮ ಎಸೆತವನ್ನು 84.24 ಮೀಟರ್ ಅಂತಿಮ ಪ್ರಯತ್ನದಲ್ಲಿ ಸುಧಾರಿಸಿದರು.
ಏಷ್ಯನ್ ಗೇಮ್ಸ್ ಮೇಲೆ ಕಣ್ಣು
ಭಾರತೀಯ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಅತಿದೊಡ್ಡ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಚಿನ್ನವನ್ನು ಗೆದ್ದಿರುವ ಕಾರಣ 2023ರಲ್ಲಿ ಗಮನಾರ್ಹ ಪ್ರದರ್ಶನವನ್ನು ಹೊಂದಿದ್ದಾರೆ.
ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ. ನೀರಜ್ ಫೈನಲ್‌ನಲ್ಲಿ 88.17 ಮೀಟರ್ ಅತ್ಯುತ್ತಮ ಪ್ರಯತ್ನದೊಂದಿಗೆ ವಿಶ್ವ ಚಾಂಪಿಯನ್‌ಶಿಪ್ ಚಿನ್ನ ಗೆದ್ದರು.
ಇದೀಗ ನೀರಜ್ ಚೋಪ್ರಾ ಅವರು ತಮ್ಮ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಒಲಿಂಪಿಕ್ ಚಾಂಪಿಯನ್‌ಗೆ ಈ ವರ್ಷ ಬಿಡುವಿಲ್ಲದ ಋತುವಾಗಿದೆ. ಆಗಸ್ಟ್ ತಿಂಗಳಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪಾಕಿಸ್ತಾನದ ಅರ್ಷದ್ ನದೀಮ್ ಅವರಿಂದ ತೀವ್ರ ಪೈಪೋಟಿ ಎದುರಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications