Vinesh Phogat: ವಿನೇಶ್ ಪೋಗಟ್‌ಗೆ ತೂಕ ಹೆಚ್ಚಾದ ಬಗ್ಗೆ ತಿಳಿದಿತ್ತಾ? ರಾತ್ರಿ ಇಡಿ ಕುಸ್ತಿ ಪಟು ಮಾಡಿದ್ದೇನು?
ಭಾರತದ ಸ್ಟಾರ್ ಕುಸ್ತಿ ಪಟು ವಿನೇಶ್ ಪೋಗಟ್ ಒಲಿಂಪಿಕ್ಸ್‌ನ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದರು. ಮಂಗಳವಾರ ತಡ ರಾತ್ರಿ ಅಂಗಳಕ್ಕೆ ಇಳಿದಾಗಲೇ ತಾನು ಫೈನಲ್‌ಗೆ ಅರ್ಹತೆ ಪಡೆಯುತ್ತೇನೆ ಎಂಬ ಆತ್ಮ ವಿಶ್ವಾಸ ವಿನೇಶ್ ಪೋಗಟ್ ಅವರಲ್ಲಿ ಕಾಣುತ್ತಿತ್ತು. ಅಲ್ಲದೆ ಇನ್ನೊಂದು ಆತಂಕ ಸಹ ಅವರ ಮುಖದಲ್ಲಿ ಕಾಣುತ್ತಿತ್ತು.
ವಿನೇಶ್ ಪೋಗಟ್ ಭಾರತದ ಸ್ಟಾರ್ ಕುಸ್ತಿ ಪಟು. ಹಲವು ಬಾರಿ ಕುಸ್ತಿ ಅಖಾಡದಲ್ಲಿ ತನ್ನ ಸೊಗಸಾದ ಪಟ್ಟುಗಳ ಮೂಲಕ ದೇಶಕ್ಕೆ ಕೀರ್ತಿ ತಂದ ಗಟ್ಟಿಗಿತ್ತಿ. ಏಷ್ಯನ್ ಗೇಮ್ಸ್, ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ಸೇರಿದಂತೆ ಹಲವು ಪ್ರತಿಶಿಷ್ಠಿತ ಪಂದ್ಯಗಳಲ್ಲಿ ಭಾಗವಹಿಸಿ ಪದಕದ ಬೇಟೆ ನಡೆಸಿದ್ದರು. ಅವರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಆಸೆ ಮಾತ್ರ ಇತ್ತು. ಆದರೆ ಅದು ಈಗ ಕಮರಿದೆ.

ಆಗಿದ್ದೇನು?
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಫೈನಲ್ ಪಂದ್ಯದಲ್ಲಿ ಅವರು ಗೆದ್ದು ಇತಿಹಾಸ ನಿರ್ಮಿಸುವ ಕನಸು ಕಂಡಿದ್ದರು. ಆದರೆ ಇದ್ದಕ್ಕೂ ಮೊದಲು ಅವರಿಗೆ ತೂಕ ಶಾಪದಂತೆ ಪರಿಣಮಿಸಿದೆ. ನಿಗದಿತ ತೂಕಕ್ಕಿಂತ ಹೆಚ್ಚು ತೂಕವನ್ನು ವಿನೇಶ್ ಹೊಂದಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಟೊಕಿಯೋ ಒಲಿಂಪಿಕ್ಸ್ ಬಂಗಾರದ ಪದಕದ ವಿಜೇತೆ ಜಪಾನ ಕುಸ್ತಿ ಪಟುವನ್ನು ನಿಗದಿತ ಸಮಯದಲ್ಲಿ ಬಗ್ಗು ಬಡಿದ ವಿನೇಶ್, ಸೆಮಿಫೈನಲ್‌ನಲ್ಲಿ ಕ್ಯೂಬಾ ಆಟಗಾರ್ತಿಯನ್ನು ಸದೆ ಬಡೆದು ಫೈನಲ್‌ಗೆ ಪ್ರವೇಶಿಸಿದ್ದರು. ಆದರೆ ಅವರಿಗೆ ಆ ಒಂದು ಆತಂಕ ಬಹುವಾಗಿ ಕಾಡುತ್ತಿತ್ತು.
ರಾತ್ರಿ ಇಡಿ ಮಾಡಿದ್ದೇನು?
ವಿನೇಶ್ ಪೋಗಟ್ ಅವರಿಗೆ ತಮ್ಮ ತೂಕ ಹೆಚ್ಚಿದೆ ಎಂಬ ಆತಂಕ ಅವರ ಮುಖದಲ್ಲಿ ಎದ್ದು ಕಾಣುವಂತೆ ಇತ್ತು. ಇದನ್ನು ಹೇಗಾದರೂ ಮಾಡಿ ಕಡಿಮೆ ಮಾಡಬೇಕು. ಅದು ಒಂದೇ ದಿನದಲ್ಲಿ ಇಷ್ಟು ತೂಕ ಕಡಿಮೆ ಮಾಡುವುದು ಎಂದರೆ ಸಾಮಾನ್ಯ ಸಂಗತಿ ಅಲ್ಲವೇ ಅಲ್ಲ ಎಂಬ ಕಠಿಣ ಸತ್ಯ ಸಹ ಅವರಿಗೆ ಅರಿವಿತ್ತು. ವಿನೇಶ್ ಹೀಗಾಗಿ ಬುಧವಾರ ನಡೆಯುವ ಫೈನಲ್‌ಗೂ ಮುನ್ನ ಟೆನ್ಷನ್ ಹೆಚ್ಚು ಮಾಡಿಕೊಂಡರು.
ವಿನೇಶ್ ಪೋಗಟ್ ಅವರ ಮನಸ್ಸಿನಲ್ಲಿದ್ದ ಆತಂಕ ಅವರಿಗೆ ರಾತ್ರಿ ನಿದ್ದೆ ಮಾಡದಂತೆ ಮಾಡಿತ್ತು ಎಂದು ತಿಳಿದು ಬಂದಿದೆ. ಹೀಗಾಗಿ ಅವರು ತೂಕ ಇಳಿಸಿಕೊಳ್ಳಲು ಬೇಕಾದ ಎಲ್ಲ ಸರ್ಕಸ್ ಮಾಡಲು ಆರಂಭಿಸಿದರು. ಜಿಮ್‌ನಲ್ಲಿ ರಾತ್ರಿ ಇಡಿ ಬೆವರು ಹರಿಸಿದರು. ಅಲ್ಲದೆ ಸೈಕ್ಲಿಂಗ್, ಸ್ಕಿಟಿಂಗ್ ಹೀಗೆ ತೂಕ ನಷ್ಟಕ್ಕೆ ಯಾವೆಲ್ಲಾ ವ್ಯಾಯಮಗಳನ್ನು ಮಾಡಿದರೆ ಅನುಕೂಲವೋ ಅವುಗಳನ್ನು ಮಾಡಿದರು.
ರಾತ್ರಿಯಿಂದ ಬೆಳಗಿನ ವರೆಗೂ ಅವರ ತೂಕದಲ್ಲಿ ಏನೂ ವ್ಯಾತ್ಯಾಸಗಳು ಕಾಣಲಿಲ್ಲ. ಅವರು ನಿಗದಿತ ತೂಕಕ್ಕಿಂತ ನೂರು ಗ್ರಾಮ್ ಹೆಚ್ಚು ತೂಕ ಹೊಂದಿದ್ದು, ಆತಂಕಕ್ಕೆ ಕಾರಣವಾಯಿತು. ಪರಿಣಾಮ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಸುತ್ತು ಪ್ರವೇಶಿಸುವ ಮುನ್ನವೇ ಅನರ್ಹರಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications