Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಕಲ ಚೇತನರ ಕ್ರೀಡಾಕೂಟ: ಕನ್ನಡಿಗ ಬಿಎಸ್ ತೇಜಸ್ ರಾಷ್ಟ್ರಮಟ್ಟಕ್ಕೆ ಆಯ್ಕೆ

Disabled athlete BR Tejas selected for national level athletics

ಶಿವಮೊಗ್ಗ, ಜನವರಿ 9: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕ್ರೀಡಾಕೂಟಗಳಿಗೆ ಆಯ್ಕೆಯಾಗುವುದೆಂದರೇನೇ ವಿಶೇಷ. ಅಂತದ್ದರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ವಿಕಲ ಚೇತನ ವಿದ್ಯಾರ್ಥಿಯೊಬ್ಬರು 100 ಮೀಟರ್ ಓಟದ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ತಾಲೂಕಿಗೆ, ಜಿಲ್ಲೆಗೆ ಹಿರಿಮೆ ತಂದಿದ್ದಾರೆ.

ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಗಾಮ ಸರ್ಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಬಿಎಸ್‌ ತೇಜಸ್‌ಗೆ ಅಂಗವೈಕಲ್ಯವಿದೆ. ಮನೆಯಲ್ಲಿ ಬಡತನವೂ ಇದೆ. ಆದರೆ ಬದುಕಿನ ಸವಾಲುಗಳನ್ನು ಬದಿಗಿಟ್ಟಿರುವ ತೇಜಸ್, ಮಧುಗಿರಿಯಲ್ಲಿ ನಡೆದ ರಾಜ್ಯ ಮಟ್ಟದ ವಿಕಲಚೇತನರ ಕ್ರೀಡಾಕೂಟದ 100 ಮೀ. ಓಟದಲ್ಲಿ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Disabled athlete BR Tejas selected for national level athletics

ಓಟದ ಜೊತೆಗೆ ಗುಂಡೆಸೆತದಲ್ಲೂ ತೇಜಸ್‌ಗೆ ದ್ವಿತೀಯ ಸ್ಥಾನ ಲಭಿಸಿದೆ. ಶಿಕಾರಿಪುರ ತಾಲೂಕು, ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತರುವುದರ ಜೊತೆಗೆ ಕರ್ನಾಟಕವನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ತೇಜಸ್ ಅವರನ್ನು ಶಿಕಾರಿಪುರ ತಾಲೂಕು ಪಂಚಾಯತ್ ಅಧ್ಯಕ್ಷ ಶಂಭು ಆರ್‌ಕೆ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾಮಹೇಶ್, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅಭಿನಂದಿಸಲಾಯಿತು.

ಸುರೇಶ-ಸವಿತಾ ದಂಪತಿ ಪುತ್ರರಾಗಿರುವ ತೇಜಸ್‌ಗೆ ಒಬ್ಬ ತಮ್ಮ, ಒಬ್ಬಳು ತಂಗಿಯಿದ್ದಾಳೆ. 1ರಿಂದ 5ನೇ ತರಗತಿಯನ್ನು ಕನ್ನಡಾಂಬೆ ಶಾಲೆ, 6-7ನೇ ತರಗತಿಯನ್ನು ಮೊರಾರ್ಜಿ ಚುರ್ಚಿಗುಂಡಿ, 8-10ನೇ ತರಗತಿಯನ್ನು ಗಾಮ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ತೇಜಸ್‌ಗೆ ಕ್ರೀಡೆಯಲ್ಲಿ ಮೊದಲಿನಿಂದಲೂ ಹೆಚ್ಚಿನ ಪ್ರೀತಿಯಿದೆ. ನಮ್ಮದೇ ಗ್ರಾಮ, ತಾಲ್ಲೂಕು, ಜಿಲ್ಲೆ, ರಾಜ್ಯದ ಪ್ರತಿಭೆ ತೇಜಸ್‌ರನ್ನು ಇನ್ನಷ್ಟು ಪ್ರೋತ್ಸಾಹಿಸುವವರು ಬೇಕಿದೆ.

Story first published: Thursday, January 9, 2020, 12:55 [IST]
Other articles published on Jan 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+