Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡಿಸ್ಕಸ್ ಥ್ರೋವರ್ ಸಂದೀಪ್ ಕುಮಾರಿಗೆ 4 ವರ್ಷಗಳ ನಿಷೇಧ ಶಿಕ್ಷೆ

Discus thrower Sandeep Kumari gets 4-year ban for dope flunk

ನವದೆಹಲಿ, ಮೇ 2: ಡಿಸ್ಕಸ್ ಥ್ರೋವರ್ ಸಂದೀಪ್ ಕುಮಾರಿಗೆ 4 ವರ್ಷಗಳ ನಿಷೇಧ ಶಿಕ್ಷೆ ವಿಧಿಲಾಗಿದೆ. ಡೋಪ್ ಪರೀಕ್ಷೆ ತಪ್ಪಿಸಲು ಯತ್ನಿಸಿದ್ದಕ್ಕಾಗಿ ಕುಮಾರಿಗೆ ವಾಡಾದ (ವರ್ಲ್ಡ್ ಆ್ಯಂಟಿ ಡೋಪಿಂಗ್ ಏಜೆನ್ಸಿ) ಅಥ್ಲೆಟಿಕ್ಸ್ ಇಂಟಗ್ರಿಟಿ ಯೂನಿಟ್‌ ನಿಷೇಧ ಶಿಕ್ಷೆ ವಿಧಿಸಿದೆ.

ಗುವಾಹಟಿಯಲ್ಲಿ ಜೂನ್ 2018ರಲ್ಲಿ ನಡೆದಿದ್ದ ನ್ಯಾಷನಲ್ ಇಂಟರ್ ಸ್ಟೇಟ್ ಚಾಂಪಿಯನ್‌ಶಿಪ್ ವೇಳೆ ಸಂದೀಪ್ ಕುಮಾರಿ ಅವರಿಂದ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು. ಆದರೆ ಆ ಮಾದರಿಯಲ್ಲಿದ್ದ ನಿಷೇಧಿತ ಔಷಧದ ಅಂಶವನ್ನು ಪತ್ತೆಹಚ್ಚುವಲ್ಲಿ ನ್ಯಾಷನಲ್ ಡೋಪ್ ಟೆಸ್ಟಿಂಗ್ ಲ್ಯಾಬೊರೇಟರಿ ವಿಫಲವಾಗಿತ್ತು.

ಕುಮಾರಿ, ನ್ಯಾಷನಲ್ ಇಂಟರ್ ಸ್ಟೇಟ್ ಚಾಂಪಿಯನ್‌ಶಿಪ್‌ನ ಮಹಿಳಾ ವಿಭಾಗದ ಡಿಸ್ಕಸ್ ಥ್ರೋನಲ್ಲಿ ಚಿನ್ನ ಗೆದ್ದಿದ್ದರು (58.41 ಮೀ. ದೂರ). ಹೀಗಾಗಿ ವಡಾವು ಕೆನಡಾದಲ್ಲಿರು ಮಾಂಟ್ರಿಯಲ್ ಲ್ಯಾಬೊರೇಟರಿಯಲ್ಲಿ ಕುಮಾರಿಯ ಸ್ಯಾಂಪಲ್ ಅನ್ನು ಪರೀಕ್ಷೆಗೊಳಪಡಿಸಲು ನಿರ್ಧರಿಸಿತು.

ಕುಮಾರಿಯಿಂದ ಪಡೆದಿದ್ದ ಸ್ಯಾಂಪಲ್‌ನ ಫಲಿತಾಂಶ ನವೆಂಬರ್ 2018ರ ವೇಳೆಗೆ ಮಾಂಟ್ರಿಯಲ್ ಲ್ಯಾಬೊರೇಟರಿಯಲ್ಲಿ ಅನಾಬೊಲಿಕ್ ಸ್ಟೀರಾಯ್ಡ್ ಮೆಟೆನೊಲೋನ್ ಪಾಸಿಟಿವ್ ಎಂದು ತೋರಿಸಿತ್ತು. ಕುಮಾರಿಯ ನಿಷೇಧ 26 ಜೂನ್ 2018ರಿಂದ ಅಂದರೆ ಅವರಿಂದ ಸ್ಯಾಂಪಲ್ ಸಂಗ್ರಹಿಸಿದ್ದರಿಂದ ಆರಂಭಗೊಳ್ಳಲಿದೆ.

Story first published: Saturday, May 2, 2020, 20:41 [IST]
Other articles published on May 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+