Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೋಕಿಯೋ ಒಲಿಂಪಿಕ್ಸ್‌ 2021ರ ವಿಜಯ ವೇದಿಕೆಯಲ್ಲಿ ವಿಚಿತ್ರ ವಿಧಾನ!

Do-it-yourself medal ceremony at Tokyo Olympics Games amid Covid-19

ಟೋಕಿಯೋ: ನಾವೂ ನೀವೆಲ್ಲ ಸಣ್ಣ ಪುಟ್ಟ ಕ್ರೀಡಾಕೂಟಗಳಲ್ಲಿ ಗೆದ್ದಾಗ ಅಲ್ಲಿದ್ದ ಸಣ್ಣ ವಿಜಯ ವೇದಿಕೆಗೆ ಹತ್ತಿ, ಮುಖ್ಯ ಅತಿಥಿಗಳಿಂದ ಕೊರಳಿಗೆ ಪದಕ ಏರಿಸಿಕೊಂಡು, ಕೈಕುಲುಕಿ, ಫೋಟೋಗೊಂದು ಪೋಸು ಕೊಟ್ಟು ಖುಷಿಯ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದೆವು. ಒಲಿಂಪಿಕ್ಸ್‌ನಲ್ಲೂ ಇಂಥದ್ದೇ ಪದಕ ವಿತರಣೆಯ ದೃಶ್ಯ ಕಾಣಸಿಗುತ್ತಿತ್ತು. ಆ ದೃಶ್ಯ ನೋಡೋಕೂ ಅದೇನೋ ಹಿತ ತರುತ್ತಿತ್ತು.

ಆದರೆ ಮುಂಬರಲಿರುವ ಟೋಕಿಯೋ ಒಲಿಂಪಿಕ್ಸ್‌ನಿಂದ ಒಲಿಂಪಿಕ್ಸ್‌ ಕ್ರೀಡಾಕೂಟದ ವೇಳೆ ವಿಜಯ ವೇದಿಕೆಯಲ್ಲಿ ಪದಕ ವಿತರಣೆಯ ಸಾಂಪ್ರದಾಯಿಕ ವಿಧಾನ ಬದಲಾಗಲಿದೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ ವಿಜೇತ ಅಥ್ಲೀಟ್‌ಗೆ ಪದಕ ಕೊರಳಿಗೆ ಹಾಕೋಕೆ, ಕೈ ಕುಲುಕಿ, ಅಭಿನಂದಿಸಿ ಚಂದದ ನಗು ನಗೋಕೆ ಅಲ್ಲಿ ಅಥಿತಿಗಳಾರೂ ಇರುವುದಿಲ್ಲ. ಬದಲಿಗೆ ಗೆದ್ದ ಅಥ್ಲೀಟ್‌ಗಳು ತಾವೇ ಪದಕ ಕೊರಳಿಗೇರಿಸಿಕೊಳ್ಳಬೇಕು.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ವಿಜಯ ವೇದಿಯ ವೇಳೆ ಪದಕ ಗೆದ್ದ ಅಥ್ಲೀಟ್‌ಗಳ ಮುಂದೆ ಪದಕದ ಟ್ರೇ ಇರುತ್ತದೆ. ಅದರಲ್ಲಿ ಮೂರು ಪದಕಗಳು ಇರುತ್ತವೆ. ಅಥ್ಲೀಟ್ ಅಲ್ಲಿಗೆ ಬಂದು ಖಾಲಿ ಪೋಡಿಯಂನ ಮೇಲೆ ತಾನೇ ಕೊರಳಿಗೆ ಪದಕ ಹಾಕಿಕೊಂಡು ಅಲ್ಲಿಂದ ನಡೆಯಬೇಕು. ಕೈ ಕುಲುಕೋದು, ತಬ್ಬಿ ಅಭಿನಂದಿಸೋದು ಅಲ್ಲಿ ಇರುವುದಿಲ್ಲ.

"ಅಥ್ಲೀಟ್‌ಗಳ ಕುತ್ತಿಗೆ ಪದಕ ಹಾಕುವ ವಿಧಾನ ಈ ಬಾರಿ ಇರುವುದಿಲ್ಲ," ಎಂದು ಇಂಟರ್ ನ್ಯಾಷನಲ್ ಒಲಿಂಪಿಕ್ಸ್ ಕಮಿಟಿ ಅಧ್ಯಕ್ಷ ಥೋಮಸ್ ಬಾಚ್ ಹೇಳಿದ್ದಾರೆ. ಕೋವಿಡ್-19 ಭೀತಿಯ ಕಾರಣ ಹೀಗೆ ಪದಕ ವಿತರಣೆ ಸಮಾರಂಭದಲ್ಲಿನ ನಿಯಮ ಯಾ ವಿಧಾನ ಬದಲಾಯಿಸಲಾಗಿದೆ.

Story first published: Tuesday, July 27, 2021, 15:36 [IST]
Other articles published on Jul 27, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+