For Quick Alerts
ALLOW NOTIFICATIONS  
For Daily Alerts

Paralympics 2024: ಬೆಳ್ಳಿ ಪದಕ ವಿಜೇತ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಯಶೋಗಾಥೆ ಏನು ಗೊತ್ತೇ?

2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳ ಸಾಧನೆಗೆ ಇಡೀ ದೇಶವೇ ಎದ್ದು ನಿಂತು ಸಲಾಂ ಹೊಡೆಯುತ್ತಿದೆ. ಟೋಕಿಯೊದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಪ್ರಣಯ ನಗರಿಯಲ್ಲಿ ಭಾರತದ ಅಥ್ಲೀಟ್‌ಗಳು ಅಮೋಘ ಪ್ರದರ್ಶನ ನೀಡಿ ಪದಕಗಳ ಬೇಟೆಯಾಡುತ್ತಿದ್ದಾರೆ.

ಭಾರತದ ಈ ಸಾಧನೆಯಲ್ಲಿ ಕನ್ನಡಿಗ ಸುಹಾಸ್ ಯತಿರಾಜ್ ಅವರ ಪಾತ್ರವೂ ಇದೆ ಎಂಬುದು ಮತ್ತೊಂದು ಹೆಮ್ಮೆಯ ಸಂಗತಿಯಾಗಿದೆ. ಐಎಎಸ್ ಹುದ್ದೆಯಂತಾ ಅತ್ಯುನ್ನತ ಅಧಿಕಾರಿಯಾಗಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗಿಯಾಗಿರುವ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಹಾಸನ ಮೂಲದ ಸುಹಾಸ್ ಯತಿರಾಜ್ ಉತ್ತರ ಪ್ರದೇಶದಲ್ಲಿ ಐಎಎಸ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Do you know the success story of 2024 Paris Paralympics silver medalist Suhas Yathiraj

ಪ್ರಧಾನಿ ಮೋದಿ ಅಭಿನಂದನೆ

ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಸುಹಾಸ್ ಯತಿರಾಜ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ ಅವರು, ಬೆಳ್ಳಿ ಪದಕ ಗೆದ್ದು ಸುಹಾಸ್ ಯತಿರಾಜ್ ಅದ್ಭುತ ಸಾಧನೆ ಮಾಡಿದ್ದಾರೆ. ಅವರ ಯಶಸ್ಸಿಗೆ ಭಾರತ ಸಂಭ್ರಮಿಸಿದೆ. ಅವರ ದೃಢತೆ ಮತ್ತು ಕ್ರೀಡೆಯ ಬದ್ಧತೆಯ ಬಗ್ಗೆ ನಮಗೆ ಹೆಮ್ಮೆ ಇದೆ' ಎಂದು ಹೊಗಳಿದ್ದಾರೆ.

ನಮ್ಮೂರ ಸಾಧಕ

ತನ್ನ ಕಾಲಿನಲ್ಲಿ ಊನ ಇದ್ದರೂ ಛಲ ಬಿಡದೆ ಮನ್ನುಗುತ್ತಿರುವ ಸುಹಾಸ್ ಅವರ ಸಾಧನೆಗೆ ಅದು ಎಂದಿಗೂ ಅಡ್ಡಿಯಾಗಿಲ್ಲ. 1983, ಜುಲೈ 2ರಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಲಾಳನಕೆರೆ ಗ್ರಾಮದಲ್ಲಿ ಯತಿರಾಜ್ ಮತ್ತು ಜಯಶ್ರೀ ದಂಪತಿಗಳಿಗೆ ಜನಿಸಿದ ಗಂಡು ಮಗುವೇ ಸುಹಾಸ್. ಅವರ ತಂದೆ ಸರ್ಕಾರಿ ಉದ್ಯೋಗಿಯಾಗಿದ್ದರಿಂದ ಹಲವು ಊರುಗಳಿಗೆ ಕಾಲ ಕಾಲಕ್ಕೆ ವರ್ಗಾವಣೆಯಾಗುತ್ತಿದ್ದರು.

ಸುಹಾಸ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಹಾಸನದ ದುದ್ದ ಎನ್ನುವಲ್ಲಿ ಪೂರೈಸಿದರು. ನಂತರ
ಶಿವಮೊಗ್ಗ ಡಿವಿಎಸ್ ಕಾಲೇಜಿನಲ್ಲಿ ಪ್ರೌಢ ಶಿಕ್ಷಣ ಮತ್ತು ಪಿಯುಸಿ ಮುಗಿಸಿದರು. ಇದಾದ ಬಳಿಕ ಮಂಗಳೂರಿನ ಸುರತ್ಕಲ್‌ನಲ್ಲಿ ಎನ್‌ಐಟಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗಳಿಸಿದರು.

ಐಎಎಸ್ ಆಗಿದ್ದೇಗೆ

ಇಂಜಿನಿಯರಿಂಗ್ ಮುಗಿಸಿದ ಸುಹಾಸ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಜೊತೆಗೆ ಏನಾದರೂ ಸಾಧಿಸಬೇಕೆನ್ನುವ ಅವರ ಛಲ ನಿಂತಿರಲಿಲ್ಲ. ಇದಕ್ಕಾಗಿ ಅವರು ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದರು.

ಮೊದಲ ಬಾರಿಗೆ 2007ರಲ್ಲಿ ಉತ್ತರ ಪ್ರದೇಶ ಕೇಡರ್​ನ ಐಎಎಸ್ ಅಧಿಕಾರಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಇದೊಂದಿಗೆ ದೇಶದಲ್ಲಿ ಐಎಎಸ್ ಅಧಿಕಾರಿಯಾದ ಮೊದಲ ವಿಶೇಷ ಚೇತನ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾರು. ಸುಹಾಸ್ ಅವರ ಪತ್ನಿ ರಿತು ಅವರೂ ಸಹಾ ಸಿವಿಲ್ ಸೇವೆಯಲ್ಲಿದ್ಧಾರೆ.

ದೇಶದ ಅತ್ಯುನ್ನತ ಹುದ್ದೆಯಲ್ಲದ್ದರೂ ಸುಹಾಸ್ ಅವರಿಗೆ ಕ್ರೀಡೆ ಮೇಲಿನ ಅಪಾರ ಆಸಕ್ತಿ ಕಡಿಮೆ ಆಗಿರಲಿಲ್ಲ.
2016 ರಲ್ಲಿ ಪ್ಯಾರಾ ಬ್ಯಾಡ್ಮಿಂಟನ್ ಆಡಲು ಆರಂಭಿಸಿದ ಸುಹಾಸ್ ಯತಿರಾಜ್ ಇಂದು ಇಡೀ ಪ್ರಪಂಚವ ತಿರುಗಿ ನೋಡುವ ಸಾಧನೆ ಗೈದಿದ್ದಾರೆ.

ಸುಹಾಸ್ ಸಾಧನೆಗಳು

*ಏಷ್ಯನ್ ಚಾಂಪಿಯನ್ ಷಿಪ್‌ (2016)- ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ
*ಟರ್ಕಿಶ್ ಓಪನ್ ಪ್ಯಾರಾ ಚಾಂಪಿಯನ್‌ಶಿಪ್ (2017)- ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಎರಡು ಚಿನ್ನದ ಪದಕ
*ರಾಷ್ಟ್ರೀಯ ಪ್ಯಾರಾ ಚಾಂಪಿಯನ್‌ಶಿಪ್ (2018)- ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ
*ಟರ್ಕಿಶ್ ಓಪನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್- (2019)- ಚಿನ್ನದ ಪದಕ
*ಟೋಕಿಯೋ ಪ್ಯಾರಾಲಿಂಿಕ್ಸ್‌ (2020)- ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ
ಇವರ ಕ್ರೀಡಾ ಸಾಧನೆಗಾಗಿ 2021ರಲ್ಲಿ ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಅರ್ಜುನ ಅವಾರ್ಡ್ ಲಭಿಸಿದೆ.

Story first published: Tuesday, September 3, 2024, 13:49 [IST]
Other articles published on Sep 3, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+