For Quick Alerts
ALLOW NOTIFICATIONS  
For Daily Alerts

ಲಿಂಗ ವಿವಾದಿತ ಭಾರತದ ಅಥ್ಲೀಟ್ ದ್ಯುತೀ ಚಂದ್ ಇನ್ನು ನಿರಾಳ

Indian sprinter Dutee Chand relieved after falling out of IAAFs new gender policy purview

ನವದೆಹಲಿ, ಏ. 27: ಲಿಂಗ ವಿವಾದಕ್ಕೆ ಒಳಗಾಗಿದ್ದ ಭಾರತದ ಸ್ಪ್ರಿಂಟರ್ ದ್ಯುತೀ ಚಂದ್ ಕೊಂಚ ನಿರಾಳರಾಗಿದ್ದಾರೆ. ಗುರುವಾರ ಇಂಟರ್ ನ್ಯಾಷನಲ್ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡೆರೇಶನ್ (ಐಎಎಎಫ್) ಪ್ರಕಟಿಸಿರುವ ಹೊಸ ಲಿಂಗ ನೀತಿಗೆ ಅವರು ಒಳಪಡದಿರುವುದು ಇದಕ್ಕೆ ಕಾರಣ. ಹೀಗಾಗಿ ದ್ಯುತೀ ಸುಮಾರು ನಾಲ್ಕು ವರ್ಷಗಳಿಂದ ಎದುರಿಸುತ್ತಿದ್ದ ಲಿಂಗ ವಿವಾದದ ಸಮಸ್ಯೆಗೆ ಸದ್ಯ ಬ್ರೇಕ್ ಬಿದ್ದಂತಾಗಿದೆ.

ಐಎಎಎಫ್ ಪ್ರಕಟಿಸಿರುವ ಹೊಸ ನಿಯಮದಲ್ಲಿ ಟೆಸ್ಟೋಸ್ಟೆರಾನ್ (ಪುರುಷ ಹಾರ್ಮೋನ್) ಹೆಚ್ಚಿನ ಮಟ್ಟದಲ್ಲಿರುವ ವನಿತಾ ಅಥ್ಲೀಟ್ ಗಳು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ನಿರ್ಬಂಧ ಸಡಿಲಿಸಿದೆ. ಸಡಿಲಿಸಿದೆ ಅನ್ನುವುದಕ್ಕಿಂತಲೂ ಹೊಸ ನಿಮಯದ ವ್ಯಾಪ್ತಿ 400 ಮೀ. ಓಟಕ್ಕಿಂತ ಮೇಲ್ಪಟ್ಟ ಓಟದ ಸ್ಪರ್ಧೆಗಳಿಗೆ ಮಾತ್ರ ಅನ್ವಯಿಸಲಿದೆ. ಅಂದರೆ 400ಮೀ., 400ಮೀ. ಹರ್ಡಲ್ಸ್, 800ಮೀ., 1500ಮೀ. ಮತ್ತು ಒಂದು ಮೈಲ್‌(ಸುಮಾರು 1600ಮೀ.)ಗಿಂತ ಕೆಳಗಿನ ದೂರದ ಓಟ ಸ್ಪರ್ಧೆಗಳಿಗೆ ಮಾತ್ರ ಹೊಸ ನಿಯಮ ಅನ್ವಯಿಸಲಿದೆ. ಆದರೆ ದ್ಯುತೀ ಚಂದ್ ವೇಗದ ಓಟವಾದ 100ಮೀ., 200ಮೀ. ಮತ್ತು4x100ಮೀ. ಓಟದ ಸ್ಪರ್ಧೆಗಳಲ್ಲಿ ಮಾತ್ರವೇ ಪಾಲ್ಗೊಳ್ಳುವುದರಿಂದ ನಿಯಮದಿಂದ ಅವರಿಗೆ ಅಡ್ಡಿಯ ಸಾಧ್ಯತೆಗಳಿಲ್ಲ.

Indian sprinter Dutee Chand relieved after falling out of IAAFs new gender policy purview

ಐಎಎಎಫ್ ನ ಹೊಸ ಲೈಂಗಿಕ ಬೆಳವಣಿಗೆಯ ವ್ಯತ್ಯಾಸ ನಿಯಮ ಹೇಳುವಂತೆ, 400 ಮೀ. ಓಟಕ್ಕಿಂತ ಮೇಲಿನ ಓಟಗಳಲ್ಲಿ ಪಾಲ್ಗೊಳ್ಳುವ (ಹಾರ್ಮೋನು ವ್ಯತ್ಯಾಸವಿರುವ) ಸ್ಪರ್ಧಿಗಳು ಉದಾಹರಣೆಗೆ 800 ಮೀ. ಒಲಿಂಪಿಕ್ಸ್ ಚಾಂಪಿಯನ್ ದಕ್ಷಿಣ ಆಫ್ರಿಕಾದ ಕ್ಯಾಸ್ಟರ್ ಸೆಮೆನ್ಯಾ ಅವರಂಥ ಸ್ಪರ್ಧಿಗಳು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದಾದರೆ ಅವರ ರಕ್ತದಲ್ಲಿರುವ ಟೆಸ್ಟೋಸ್ಟೆರಾನ್ ಪ್ರಮಾಣವನ್ನು ಕಡಿಮೆ ಮಾಡಿಕೊಂಡು ನಂತರ ಪಾಲ್ಗೊಳ್ಳಬಹುದಾಗಿದೆ.

ಐಎಎಎಫ್ ಕೌನ್ಸಿಲ್ ಮಾ. 1ರಂದು ಅನುಮೋದಿಸಿರುವ ಈ ಹೊಸ ನಿಯಮ ನ. 1ರಿಂದ ಜಾರಿಯಾಗಲಿದೆ. ಹಾರ್ಮೋನು ವೈಪರೀತ್ಯದಿಂದ ನರಳುತ್ತಿರುವ ವನಿತಾ ಅಥ್ಲೀಟ್ ಗಳು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ಬೇರೆದೆ ಅರ್ಜಿ ಸಲ್ಲಿಸಿ ಕೋರಿಕೊಳ್ಳುವ ಅವಶ್ಯಕತೆಯಿಲ್ಲ ಎಂದು ಐಎಎಎಫ್ ಹೇಳಿಕೊಂಡಿದೆ.

Indian sprinter Dutee Chand relieved after falling out of IAAFs new gender policy purview

ಪುರಷರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಹಿಳೆಯರಲ್ಲೂ ಸ್ಪಲ್ಪಮಟ್ಟಿನಲ್ಲಿ ಇರುತ್ತದೆ. ಆದರೆ ಕೆಲವರಲ್ಲಿ ಈ ಹಾರ್ಮೋನು ತೀರಾ ವಿಪರೀತವಾಗಿ ಗಂಡಸಿನ ಚಹರೆಗಳು ಕಂಡು ಬರುವುದೂ ಇದೆ. ಒಂದು ಮಿತಿಗಿಂತ ಹೆಚ್ಚು ನೈಸರ್ಗಿಕವಾಗಿ ಟೆಸ್ಟೋಸ್ಟೆರಾನ್ ಹಾರ್ಮೋನ್ ವೈಪರೀತ್ಯಕ್ಕೆ ಒಳಗಾದ ವನಿತೆಯೊಬ್ಬಳು ತಾನು ವನಿತೆಯೆಂದು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂಬ ನಿಯಮವಿದೆ.

ಹಾಮೋನು ವೈಪರೀತ್ಯಕ್ಕೆ ಒಳಗಾಗಿ ಹೆಣಗಾಡಿದ ಭಾರತದ ಅಥ್ಲೀಟ್ ಗಳಲ್ಲಿ ದ್ಯುತೀ ಚಂದ್‌ ಪ್ರಮುಖರು. ದ್ಯುತೀ ಐಎಎಎಫ್ ಹಾರ್ಮೋನು ವೈಪರೀತ್ಯ ನಿಯಮದ ವಿರುದ್ಧ 2015ರಿಂದಲೂ ಕಾನೂನಾತ್ಮಕವಾಗಿ ಹೋರಾಡುತ್ತಿದ್ದರು. ಅವರ ಹೋರಾಟಕ್ಕೆ ಈಗ ಫಲ ದೊರೆತಂತಾಗಿದೆ.
'ಈ ತೀರ್ಪು ನನ್ನ ದೀರ್ಘ ಹೋರಾಟದ ಫಲ. ನಿಯಮದ ವ್ಯಾಪ್ತಿಗೆ ಒಳಗಾಗದಿರುವ ನಾನಿನ್ನು ನನ್ನ ನೆಚ್ಚಿನ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬಹುದು. ಯಾವುದೇ ಮಟ್ಟದ ಕ್ರೀಡಾಕೂಟಗಳಲ್ಲೂ ಪಾಲ್ಗೊಳ್ಳಲು ನಾನಿನ್ನು ಸ್ವತಂತ್ರಳು' ಎಂದು ದ್ಯುತೀ ಹರ್ಷ ವ್ಯಕ್ತಪಡಿಸಿದ್ದಾರೆ.

Indian sprinter Dutee Chand relieved after falling out of IAAFs new gender policy purview

ಕಾನೂನು ಹೋರಾಟ ನಡೆಸಲು ಸೆಮೆನ್ಯಾಗೆ ಆಹ್ವಾನ

ಆದರೆ ಹೊಸ ನಿಯಮದಿಂದ ದ್ಯುತೀ ಸಂಪೂರ್ಣ ತೃಪ್ತಿಗೊಂಡಿಲ್ಲ. ಮಹಿಳೆಯರಲ್ಲಿರುವ ಟೆಸ್ಟೋಸ್ಟೆರಾನ್ ಪ್ರಮಾಣಕ್ಕೆ ಸಂಬಂಧಿಸಿ ಐಎಎಎಫ್ ಹೊಸ ನಿಯಮದಲ್ಲೂ ಹುಳುಕಿದೆ. ಅದೂ ಸರಿಯಲ್ಲ ಎಂದಿದ್ದಾರೆ. ಜೊತೆಗೆ ಸೌತಾಫ್ರಿಕಾ ಮಿಡ್ಲ್ ಡಿಸ್ಟ್ಯಾಂಸ್ (ಮಾಧ್ಯಮ ದೂರದ ಓಟ ಅಂದರೆ 400ಮೀ.-1500ಮೀ. ವರೆಗಿನ) ರನ್ನರ್ ಕ್ಯಾಸ್ಟರ್ ಸೆಮೆನ್ಯಾ ಅವರಿಗೆ ಕಾನೂನಾತ್ಮಕ ನೆರವು ಪಡೆಯಲು ಆಹ್ವಾನವನ್ನು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚಂದ್, 'ನನ್ನ ಕಾನೂನು ತಂಡದಿಂದ ನೆರವು ಪಡೆಯಲು ನಾನು ಸೆಮೆನ್ಯಾಗೆ ಆಹ್ವಾನವನ್ನು ನೀಡಿದ್ದೇನೆ. ನೀವು ಬಯಸಿದರೆ ನನ್ನ ಬೆಂಬಲ ಪಡೆದುಕೊಳ್ಳಬಹುದು ಎಂದು ಅವರಿಗೆ ನಾನು ಇಮೇಲ್ ಕಳುಹಿಸಿದ್ದೇನೆ' ಎಂದು ಹೇಳಿದ್ದಾರೆ.

Story first published: Friday, April 27, 2018, 17:38 [IST]
Other articles published on Apr 27, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+