ಇಟಲಿಯಲ್ಲಿ ಕಾರು ರೇಸಿಂಗ್: ಬೆಂಗಳೂರು ಬಾಲಕ ಶೈನಿಂಗ್!
ಲೊನಟೋ(ಇಟಲಿ), ಜೂನ್ 12: ಇಟಲಿಯಲ್ಲಿ ಬೆಂಗಳೂರಿನ ಅದ್ಭುತ ಬಾಲಕ ಮತ್ತೊಮ್ಮೆ ಮಿಂಚಿದ್ದಾನೆ.. 10 ವರ್ಷ ವಯಸ್ಸಿನ ರುಹಾನ್ ಆಳ್ವ, 60ಸಿಸಿ ಈಸಿ ಕಾರ್ಟ್ ಚಾಂಪಿಯನ್ ಶಿಪ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾನೆ.
ಕಳೆದ ವಾರಂತ್ಯದಲ್ಲಿ ನಡೆದ ರೇಸಿಂಗ್ ನಲ್ಲಿ ನಾಲ್ಕನೇ ಸುತ್ತಿನಲ್ಲಿ ಜಯ ಗಳಿಸಿದ ರುಹಾನ್ ಮ್ಜುಂದಿನ ಸುತ್ತಿನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟರು. ಒಟ್ಟಾರೆ, ಚಾಂಪಿಯನ್ ಶಿಪ್ ನಲ್ಲಿ 90 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನದಲ್ಲಿರುವ ಎಂಎಲ್ ಜಿ ರೇಸಿಂಗ್ ತಂಡದ ಪೆಟ್ರೆಸೆ ಲೊರೆಂಜೋಗಿಂತ 13 ಅಂಕಗಳು ಮಾತ್ರ ಹಿಂದಿದ್ದಾನೆ.

ಇಟಲಿಯಾ ಕಾರ್ಟ್ ಉತ್ಪಾದಕ ಸಂಸ್ಥೆ ಬಿರೆಲ್ ಆರ್ಟ್ ನ ಪ್ರಾಯೋಜಕತ್ವ ಪಡೆದುಕೊಂಡಿರುವ ರುಹಾನ್ ಅವರು ಎಂಎಲ್ ಜಿ ರೇಸಿಂಗ್ ಸ್ಪರ್ಧಿಗಳಾದ ಲೊರೆಂಜೊ ಪ್ಯಾಟ್ರೆಸ್ ಹಾಗೂ ಆಂಡ್ರಿಯಾ ಪಿರೊವಾನೋ ಅವರಿಗೆ ತಕ್ಕ ಪೈಪೋಟಿ ನೀಡಿದರು.
ಈ ರೇಸಿನಲ್ಲಿ ಪೋಡಿಯಂ ಏರಿದ್ದರಿಂದ ಒಟ್ಟಾರೆ ಚಾಂಪಿಯನ್ ಶಿಪ್ ನಲ್ಲಿ ರುಹಾನ್ ಈಗ ನಾಲ್ಕನೇ ಸ್ಥಾನಕ್ಕೇರಿದ್ದಾನೆ. ಮೊದಲ ಸುತ್ತಿನಲ್ಲಿ 60ಮಿನಿ ಕೆಟಗರಿಯಲ್ಲಿ ಸ್ಪರ್ಧಿಸಿದ್ದರಿಂದ ಕೆಲ ಅಂಕಗಳಿಂದ ವಂಚಿತನಾಗಿದ್ದ ರುಹಾನ್ ಈ 60ಸಿಸಿ ಈಶಿ ಕಾರ್ಟ್ ಚಾಂಪಿಯನ್ ಶಿಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾನೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications