ಇಎಸ್‌ಪಿಎನ್ ಪತ್ರಕರ್ತನ ಮೇಲೆ ಉರುಳಿದ ಗೋಡೆ: ಶಾಕಿಂಗ್ ವಿಡಿಯೋ

ಕೊಲಂಬಿಯಾ: ಆನ್ ಏರ್‌ನಲ್ಲಿ ಟಿವಿ ನಿರೂಪಕ ನಿರೂಪಣೆ ನೀಡುತ್ತಿದ್ದಾಗಲೇ ಸ್ಟುಡಿಯೋದ ಗೋಡೆ ಉರುಳಿ ಬಿದ್ದು ಪತ್ರಕರ್ತ ಗಾಯಗೊಂಡಿರುವ ಘಟನೆ ನಡೆದಿದೆ. ಕ್ರೀಡಾ ಚಾನೆಲ್ ಇಎಸ್‌ಪಿನ್ ಎಫ್‌ಸಿ ರೇಡಿಯೋದ ಕಾರ್ಯಕ್ರಮ ವೇಳೆ ಈ ಅವಘಡ ಸಂಭವಿದೆ.
ಇಎಸ್‌ಪಿಎನ್ ಕೊಲಂಬಿಯಾದ ಪತ್ರಕರ್ತ ಕಾರ್ಲೋಸ್ ಒರ್ಡುಜ್ ಅವರು ಕ್ರೀಡಾ ವಿಶ್ಲೇಷಣೆಗಾಗಿ ಸ್ಟುಡಿಯೋದೊಳಗೆ ಕುಳಿತಿದ್ದಾಗ ಸ್ಟುಡಿಯೋದ ಗೋಡೆಯ ಭಾಗ ಕುಸಿದು ಆತನ ಮೇಲೆಯೇ ಬಿದ್ದಿದೆ. ಆಗ ಒರ್ಡುಜ್ ತಲೆ ಎದುರಿದ್ದ ಮೇಜಿಗೆ ಬಡಿದಿದೆ.
ಅಚಾನಕ್ ಆದ ಘಟನೆಯಿಂದ ಪಕ್ಕದಲ್ಲಿದ್ದ ಇತರ ವಿಶ್ಲೇಷಕರು ಒಮ್ಮೆ ತಬ್ಬಿಬ್ಬಾದರು. ಕ್ಯಮರಾಮನ್ ಕೂಡಲೇ ಕ್ಯಾಮರವನ್ನು ಬೇರೆಗೆ ತಿರುಗಿಸಿದರು. ಕಾರ್ಯಕ್ರಮ ನಡೆಸಿಕೊಡುತ್ತಿದ್ದವರ ಮುಖದಲ್ಲಂತೂ ಭೀತಿ ಕಾಣುತ್ತಿತ್ತು. ಈ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದೆ.
ಅದೃಷ್ಟವಶಾತ್ ದುರ್ಘಟನೆಗೀಡಾದ ಪತ್ರಕರ್ತನಿಗೆ ಪ್ರಾಣಾಪಾಯ ರೀತಿಯ ಗಾಯವೇನೂ ಆಗಿಲ್ಲ. ಮುಖ ಮತ್ತು ಮೂಗಿನ ಬಳಿ ಸ್ವಲ್ಪ ಗಾಯಗಳಾಗಿವೆ. ಉಳಿದಂತೆ ಆತ ಚೆನ್ನಾಗೇ ಇದ್ದಾರೆ ಎಂದು ಕ್ರೀಡಾ ನಿರೂಪಕರೇ ಮಾಹಿತಿ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications