Paris Olympics 2024: 7 ತಿಂಗಳ ಗರ್ಭಿಣಿಯಾಗಿದ್ದರೂ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ದಿಟ್ಟ ಮಹಿಳಾ ಅಥ್ಲೀಟ್!
ಜುಲೈ 30 ಮಂಗಳವಾರ, ಪ್ಯಾರಿಸ್ ಒಲಿಂಪಿಕ್ಸ್‌ನ ನಾಲ್ಕನೇ ದಿನವಾದ ಇಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಆಥ್ಲೀಟ್‌ಗಳು ಪದಕಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಆದರೆ, ಈ ಬಾರಿ ಒಬ್ಬ ಮಹಿಳಾ ಆಥ್ಲೀಟ್ ಒಂದಲ್ಲ ಎರಡಲ್ಲ 7 ತಿಂಗಳ ಗರ್ಭಿಣಿಯಾಗಿದ್ದರೂ, ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದ್ದಾರೆ
ಈಜಿಪ್ಟ್‌ನ ಫೆನ್ಸರ್ ಸ್ಪರ್ಧಿ ನಾಡಾ ಹಫೀಜ್ ಅವರು 7 ತಿಂಗಳು ಗರ್ಭಿಣಿಯಾಗಿದ್ದರೂ ಪ್ಯಾರಿಸ್ ಒಲಿಂಪಿಕ್ಸ್ ಭಾಗವಹಿಸಿದ್ದಾರೆ. ತನ್ನ ಮೊದಲ ಪಂದ್ಯವನ್ನು ಯುಎಸ್‌ಎಯ ಎಲಿಜಬೆತ್ ಟಾರ್ಟಕೋವ್ಸ್ಕಿ ವಿರುದ್ಧ ನಾಡಾ ಹಫೀಜ್ ಗೆದ್ದರೆ, ಎರಡನೇ ಪಂದ್ಯದಲ್ಲಿ ಕೊರಿಯಾದ ಫೆನ್ಸರ್ ಜಿಯೋನ್ ಹೇಯಂಗ್ ವಿರುದ್ಧ ಮಹಿಳಾ ಸೇಬರ್ ವೈಯಕ್ತಿಕ ಸ್ಪರ್ಧೆಯ 16ರ ಸುತ್ತಿನಲ್ಲಿ 7-15 ಅಂಕಗಳ ಅಂತರದಿಂದ ಸೋಲು ಕಂಡಿದ್ದಾರೆ.

ಈ ಸೋಲಿನ ನಂತರ ಹಫೀಜ್ ಅವರು ತಾನು ಗರ್ಭಿಣಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ. " ವೇದಿಕೆಯಲ್ಲಿ ಇಬ್ಬರು ಆಟಗಾರರು ಇದ್ದಾರೆ ಎಂದು ನೀವು ಭಾವಿಸುತ್ತೀರಿ. ಆದರೆ ವಾಸ್ತವವಾಗಿ ಮೂವರು ಇದ್ದರು. ಅದು ನಾನು, ನನ್ನ ಪ್ರತಿಸ್ಪರ್ಧಿ ಮತ್ತು ಇನ್ನೂ ಹುಟ್ಟದ ಪುಟ್ಟ ಕಂದಮ್ಮ ಎಂದು ಹಫೀಜ್ ತಿಳಿಸಿದ್ದಾರೆ.
'ನನ್ನ ಮಗು ಮತ್ತು ನಾನು ಅನೇಕ ಸವಾಲುಗಳನ್ನು ಹೊಂದಿದ್ದೆವು, ಅದು ದೈಹಿಕ ಅಥವಾ ಭಾವನಾತ್ಮಕವಾಗಿರಬಹುದು. ಗರ್ಭಾವಸ್ಥೆಯ ಏರಿಳಿತಗಳು ಸ್ವತಃ ಕಷ್ಟ.
ಆದರೆ ಜೀವನ ಮತ್ತು ಕ್ರೀಡೆಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಹೋರಾಟವು ತುಂಬಾ ಕಷ್ಟಕರವಾಗಿದ್ದು, ಇದು ಹೋರಾಟಕ್ಕೆ ಯೋಗ್ಯವಾಗಿದೆ. 16ನೇ ಸುತ್ತಿನಲ್ಲಿ ನನ್ನ ಸ್ಥಾನವನ್ನು ಪಡೆದುಕೊಂಡಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಹೇಳಲು ಈ ಪೋಸ್ಟ್ ಬರೆಯುತ್ತಿದ್ದೇನೆ' ಎಂದು ಹಫೀಜ್ ಹೇಳಿದ್ದಾರೆ.
'ನನ್ನ ಪತಿ ಇಬ್ರಾಹಿಂ ಮತ್ತು ನನ್ನ ಕುಟುಂಬದವರ ವಿಶ್ವಾಸವನ್ನು ಪಡೆದು ಇಲ್ಲಿಗೆ ತಲುಪಲು ಸಾಧ್ಯವಾಗಿದ್ದು ನನ್ನ ಅದೃಷ್ಟ. ಇದು ವಿಶೇಷ ಒಲಿಂಪಿಕ್ಸ್ ಆಗಿತ್ತು ಏಕೆಂದರೆ, ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್ ಕಿರಿಯ ಅಥ್ಲೀಸ್ ಅನ್ನು ಸಹ ಹೊಂದಿತ್ತು ಎಂದು ಮುಂದೆ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications