33ನೇ ಜೂ. ನ್ಯಾಷನಲ್ಸ್ ನೆಟ್‌ಬಾಲ್‌ಗೆ ಹುಡುಗರ, ಹುಡುಗಿಯರ ರಾಜ್ಯ ತಂಡ ಪ್ರಕಟ

ಬೆಂಗಳೂರು: ತೆಲಂಗಾಣದ ಖಮ್ಮಂನಲ್ಲಿರುವ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಫೆಬ್ರವರಿ 24ರಿಂದ ಫೆಬ್ರವರಿ 27ರ ವರೆಗೆ 2020-21ರ ಬಾಲಕರ, ಬಾಲಕಿಯರ 33ನೇ ಜೂನಿಯರ್ ನ್ಯಾಷನಲ್ ನೆಟ್‌ಬಾಲ್ ಚಾಂಪಿಯನ್‌ಶಿಪ್ ನಡೆಯಲಿದೆ. ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ ರಾಜ್ಯ ತಂಡದ ಬಾಲಕ, ಬಾಲಕಿಯರ ಅಂತಿಮ ತಂಡ ಪ್ರಕಟಗೊಂಡಿದೆ.
ಟೂರ್ನಿಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಅಮೇಚೂರ್ ನೆಟ್‌ಬಾಲ್ ಅಸೋಸಿಯೇಶನ್ ಆಫ್ ಕರ್ನಾಟಕದಿಂದ ಫೆಬ್ರವರಿ 15ರಿಂದ 21ರ ವರೆಗೆ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಕೋಚಿಂಗ್ ಕ್ಯಾಂಪ್ ಆಯೋಜಿಸಲಾಗಿತ್ತು. ನೆಟ್‌ಬಾಲ್ ಜೂನಿಯರ್ ನ್ಯಾಷನಲ್ಸ್‌ನಲ್ಲಿ ಪಾಲ್ಗೊಳ್ಳುವ ತಂಡ ಫೆಬ್ರವರಿ 22ರ ಸಂಜೆ ಬೆಂಗಳೂರಿನಿಂದ ಹೊರಡಲಿದೆ.
ಹುಡುಗರ ತಂಡ
ಯೋಗೇಶ್ ಗೌಡ ಬಿಜೆ (ಕ್ಯಾಪ್ಟನ್), ಮೋಹನ್ ರಾಜ್ ಜಿ (ಉಪನಾಯಕ), ವರುಣ್ ಟಿಡಿ, ತೇಜಸ್ ಕೆ, ಅಂಚಿತ್ ಗೌಡ ಬಿ.ಸಿ, ಸುನಿಲ್ ವಿಜೆ, ಭಗತ್ ಎಸ್‌ಜಿ, ನಂದಾ ಜಿ, ಚಂದು ಎಸ್, ಸಮರ್ಥ್ ಎನ್‌ಜೆ, ಪ್ರೀತಮ್ ವಿಪಿ, ತರುಣ್ ಎಂ.ಎಸ್.
ಕೋಚ್: ಪುರ್ಹೋತ್ತಮ್ ಎಚ್‌ಡಿ, ಮ್ಯಾನೇಜರ್: ಎಸಿ ವಿಶ್ವನಾಥ.
ಹುಡುಗಿಯರ ತಂಡ
ಮನಸ್ವಿ ಎಚ್ (ನಾಯಕಿ), ಭೂಮಿಕಾ ಎಸ್ ತಗಡೂರ್ (ಉಪನಾಯಕಿ), ಸುರಭಿ ಬಿ. ಆರ್, ಲಾವಣ್ಯ ಬಿ, ಧನ್ಯಾ ಯು ಶೆಟ್ಟಿ, ಹರ್ಷಿತಾ ಎಸ್, ಕೀರ್ತನಾ ಡಿ, ಶಮಿತಾ ಎಸ್ ಶೆಟ್ಟಿ, ಪವಿತ್ರಾ ಕೆ, ಪೃಥ್ವಿ ವೊಕುಡಾ, ರಂಜನಾ, ಶ್ರೇಯಾ ಎಂ.
ಕೋಚ್: ರಂಜಿತಾ ಬಿಜೆ, ಮ್ಯಾನೇಜರ್: ಮಾನಸಾ ಎಲ್‌ಜಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications