Special Olympics: ಇತಿಹಾಸ ಬರೆದ ಸೌದಿ ಮಹಿಳಾ ಬಾಸ್ಕೆಟ್ ಬಾಲ್ ತಂಡ!

ದುಬೈ, ಮಾರ್ಚ್ 22: ಸೌದಿ ಆರೇಬಿಯಾದ ಮಹಿಳಾ ಬಾಸ್ಕೆಟ್ ಬಾಲ್ ತಂಡಕ್ಕೆ ಇದು ಮರೆಯಲಾಗದ ಕ್ಷಣ. ಸೌದಿಯ ವನಿತಾ ತಂಡ ಯಾವತ್ತಿಗೂ ಸ್ಪೆಷಲ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದಿಲ್ಲ. ಆದರೆ, ಇದೇ ಮೊದಲ ಬಾರಿಗೆ ಬಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಲ್ಲದೆ ಬಂಗಾರ ಗೆದ್ದುಕೊಂಡಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಯಲ್ಲಿ ನಡೆದ ಸ್ಪೆಷಲ್ ಒಲಿಂಪಿಕ್ಸ್ ಟೂರ್ನಿಯ ಬಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ಚೊಚ್ಚಲ ಬಾರಿಗೆ ಸ್ಪರ್ಧಿಸಿದ್ದ ಸೌದಿ ಮಹಿಳಾ ಬಾಸ್ಕೆಟ್ ಬಾಲ್ ತಂಡ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದೆ. ಇನ್ಮುಂದೆ ಸೌದಿ ಪುರುಷರ ತಂಡದಂತೆ ಮಹಿಳಾ ತಂಡ ಕೂಡ ಸ್ಪೆಷಲ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿದೆ.
ಸೌದಿಯ ಮಹಿಳಾ ತಂಡಕ್ಕೆ ಸ್ಪೆಷಲ್ ಒಲಿಂಪಿಕ್ಸ್‌ನಂತ ಸ್ಪರ್ಧೆಗಳಲ್ಲಿ ಭಾಗವಹಿಸಲು ಈ ಹಿಂದೆ ಅವಕಾಶ ಲಭಿಸಿರಲಿಲ್ಲ. ಆದರೆ ಈ ಸಾರಿ ಒಟ್ಟು 21 ಮಹಿಳೆಯರು ಬಾಸ್ಕೆಟ್ ಬಾಲ್ ಕೂಡ ಸೇರಿ ಬೊಸ್ಸೆ, ಟ್ರ್ಯಾಕ್ ಆ್ಯಂಡ್ ಫೀಲ್ಡ್ ಮತ್ತು ಬೌಲಿಂಗ್ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಕ್ರೀಡಾರಂಗದ ಸಂಭ್ರಮ ಸವಿದರು.
Story first published: Friday, March 22, 2019, 20:00 [IST]
Other articles published on Mar 22, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications