Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫ್ಲ್ಯಾಶ್‌ಬ್ಯಾಕ್ 2018: ಡಬ್ಲ್ಯೂಡಬ್ಲ್ಯೂಇ ಪ್ರಮುಖ ಘಟನೆಗಳ ಇ(ತು)ಣುಕು

Flashback 2018: WWE top five moments of the year

ನವದೆಹಲಿ, ಡಿಸೆಂಬರ್ 29: ಬಾಲ್ಯದಿಂದಲೂ ನಾವು ಹೆಚ್ಚಿನವರು ರಸ್ಲಿಂಗ್‌ ನೋಡಿಯೇ ಬೆಳೆದವರು. ಕ್ರಿಕೆಟ್‌ ಕ್ರೇಸಿನ ನಡುವೆ 'ನಾನು ಅಂಡರ್‌ ಟೇಕರ್, ನೀನು ಬ್ರಾಕ್‌ಲೆಸ್ನರ್' ಅಂತ ದೋಸ್ತಿ ಜೊತೆ ಕುಸ್ತಿಯಾಡಿದ್ದೂ ಇದೆ. ಸುಮಾರು 66 ವರ್ಷಗಳಿಂದಲೂ ರಸ್ಲಿಂಗ್‌ ನಮ್ಮನ್ನು ರಂಜಿಸುತ್ತಲೇ ಇದೆ.

1952 ಜನವರಿ 7ರಂದು ಅಮೆರಿಕಾದ ಜೆಸ್‌ಮೆಕ್‌ಮಹಾನ್ ಮತ್ತು ಟಟ್ ಮಾಂಟ್ ಇಂಥದ್ದೊಂದು ಮನರಂಜನಾ ಕ್ರೀಡೆಯ ಹುಟ್ಟಿಗೆ ಕಾರಣವಾದರು. ಅಲ್ಲಿಂದ ಇಲ್ಲೀವರೆಗೂ ವಿಭಿನ್ನ ಹೆಸರುಗಳಿಗೆ ಬದಲಾವಣೆಗಳನ್ನು ಕಾಣುತ್ತ ರಸ್ಲಿಂಗ್‌ ನಮ್ಮನ್ನು ಸೆಳೆಯುತ್ತಲೇ ಬಂದಿದೆ.

ಮೊದಲು ಕ್ಯಾಪಿಟಲ್ ರಸ್ಲಿಂಗ್‌ ಕಾರ್ಪೊರೇಷನ್, ಆಮೇಲೆ ಟೈಟಾನ್ ಸ್ಪೋರ್ಟ್ಸ್, ಮತ್ತೆ ವರ್ಲ್ಡ್ ರಸ್ಲಿಂಗ್‌ ಫೆಡರೇಶನ್, ಕೊನೆಗೆ ವರ್ಲ್ಡ್ ರಸ್ಲಿಂಗ್ ಎಂಟರ್‌ಟೇನ್ಮೆಂಟ್ ಹೀಗೆ ಹೆಸರುಗಳನ್ನು ಬದಲಾಯಿಸಿಕೊಂಡ ರಸ್ಲಿಂಗ್‌ ಕ್ರೀಡೆಯಲ್ಲಿನ 2018ರ ಪ್ರಮುಖ ಸಂಗತಿಗಳತ್ತ ಒಂದು ರೌಂಡು ಹೊಡೆಯೋಣ.

ರಿಂಗ್‌ಗೆ ಮರಳಿದ ಬ್ರಿಯಾನ್

ರಿಂಗ್‌ಗೆ ಮರಳಿದ ಬ್ರಿಯಾನ್

ರಸ್ಲಿಂಗ್‌ ರಿಂಗ್‌ನಲ್ಲಿ ಡೇನಿಯಲ್ ಬ್ರಿಯಾನ್ ಪರಿಚಯವಿರುವ ಹೆಸರು. ರಸ್ಲಿಂಗ್ ವೃತ್ತಿ ಬದುಕಿನಲ್ಲಿ ಏರಿಳಿತಳನ್ನು ಕಂಡಿದ್ದ ಬ್ರಿಯಾನ್ ಕೊಂಚಕಾಲ ಡಬ್ಲ್ಯೂಡಬ್ಲ್ಯೂಇಯಿಂದ ದೂರ ಉಳಿದಿದ್ದರು. ಆದರೆ 2018ರಲ್ಲಿ ಡೇನಿಯಲ್ ರಿಂಗ್‌ಗೆ ಮರಳಿ ಅಭಿಮಾನಿಗಳನ್ನು ರಂಜಿಸಲಾರಂಭಿಸಿದ್ದರು.

ಸೂಪರ್ ಶೋಡೌನ್!

ಸೂಪರ್ ಶೋಡೌನ್!

ಸೂಪರ್ ಸ್ಟಾರ್ ರಸ್ಲರ್‌ಗಳಲ್ಲಿ ಮುಂಚೂಣಿಯಲ್ಲಿರುವವರು ಅಂಡರ್‌ಟೇಕರ್. ರಸ್ಲಿಂಗ್‌ ರಿಂಗ್‌ನ ದಿಗ್ಗಜ ಟೇಕರ್‌ಗೆ (ಮಾರ್ಕ್ ವಿಲಿಯಂ ಕ್ಯಾಲವೆ ನಿಜ ಹೆಸರು) ಈಗ 53ರ ಹರೆಯ. ವಯೋ ಸಹಜವಾಗಿ ಟೇಕರ್ ಅವರ ಗುದ್ದಾಟದಲ್ಲಿ ಹಿಂದಿನ ಪ್ರಖರತೆಯಿಲ್ಲ. ಹೀಗಾಗಿ ಅಪರೂಪವಾಗಿದ್ದ ಟೇಕರ್ ಅಕ್ಟೋಬರ್ 6ರಂದು ಡಬ್ಲ್ಯೂಡಬ್ಲ್ಯೂಇ ಸೂಪರ್ ಶೋಡೌನ್‌ಗಾಗಿ ಆಸ್ಟ್ರೇಲಿಯಾಕ್ಕೆ ಬಂದಿದ್ದರು. ಕುತೂಹಲಕಾರಿ ಈ ಪಂದ್ಯದಲ್ಲಿ ಬ್ರದರ್ಸ್ ಆಫ್ ಡಿಸ್ಟ್ರಕ್ಷನ್ಸ್ ಖ್ಯಾತಿಯ ಅಂಡರ್ ಟೇಕರ್ ಮತ್ತವರ ಸಹೋದರ ಕೇನ್ ಅವರಿದ್ದ ಟ್ಯಾಗ್‌ ಟೀಮ್, ಟ್ರಿಪಲ್ ಎಚ್ ಮತ್ತು ಶಾನ್ ಮೈಕಲ್ಸ್ ತಂಡದೆದುರು ಸೋತಿತ್ತು. ಆದರೂ ಆಟದ ಕೊನೆಯಲ್ಲಿ ಕೇನ್-ಟೇಕರ್ ಇಬ್ಬರೂ ಸೇರಿ ಟ್ರಿಪಲ್‌ ಎಚ್ ಟ್ಯಾಗ್‌ ಟೀಮನ್ನು ನೆಲಕ್ಕುರುಳಿಸುವ ಮೂಲಕ ಬ್ರದರ್ಸ್ ಆಫ್ ಡಿಸ್ಟ್ರಕ್ಷನ್ಸ್ ಹೆಸರಿಗೆ ಅರ್ಥ ಒದಗಿಸಿದ್ದರು, ರಂಜಿಸಿದ್ದರು.

ರೋಮನ್ ರೇನ್ಸ್ ಮತ್ತು ಕ್ಯಾನ್ಸರ್

ರೋಮನ್ ರೇನ್ಸ್ ಮತ್ತು ಕ್ಯಾನ್ಸರ್

ರಸ್ಲಿಂಗ್ ಪ್ರೇಮಿಗಳಿಗೆ ಬೇಸರ, ನಿರಾಸೆ ಮೂಡಿಸಿದ ದಿನವಿದು. ಜನವರಿ 23ರಂದು ತಾನು ಕ್ಯಾನ್ಸರ್ (ಲ್ಯುಕೇಮಿಯಾ) ಜೊತೆ ಕಾದಾಡುತ್ತಿರುವ ವಿಚಾರವನ್ನು ಡಬ್ಲ್ಯೂಡಬ್ಲ್ಯೂಇ ಸ್ಟಾರ್ ರೋಮನ್‌ರೇನ್ಸ್ ಬಹಿರಂಗಪಡಿಸಿದ್ದರು. ರಸ್ಲಿಂಗ್‌ ರಿಂಗ್‌ನಿಂದ ದೂರ ಉಳಿಯುವುದಾಗಿಯೂ ಹೇಳಿದ್ದರು. ಯೂನಿವರ್ಸಲ್ ಚಾಂಪಿಯನ್ ಪ್ರಶಸ್ತಿಯನ್ನೂ ಈ ವೇಳೆ ಅವರು ಹಿಂದಿರುಗಿಸಿದ್ದರು.

ಆ್ಯಂಬ್ರೋಸ್-ರೋಲಿನ್ಸ್ ಹೊಡೆದಾಟ

ಆ್ಯಂಬ್ರೋಸ್-ರೋಲಿನ್ಸ್ ಹೊಡೆದಾಟ

ರೋಮನ್ ರೇನ್ಸ್ ತನಗಿರುವ ಖಾಯಿಲೆ ಬಹಿರಂಗಪಡಿಸಿದ ಬಳಿಕ ಅವರ 'ಶೀಲ್ಡ್' ರಸ್ಲಿಂಗ್ ಗ್ರೂಪ್‌ನಲ್ಲಿದ್ದ ಸಹ ಆಟಗಾರರಾದ ಡೀನ್ ಆ್ಯಂಬ್ರೋಸ್ ಮತ್ತು ಸೇತ್ ರೋಲಿನ್ಸ್ ವೈರಿಗಳಾದರು. ರೇನ್ಸ್ ವಿದಾಯದ ಬಳಿಕ ಮೊದಲ ಪಂದ್ಯದಲ್ಲಿ ಆ್ಯಂಬ್ರೋಸ್ ಮತ್ತು ರೋಲಿನ್ಸ್ ಇಬ್ಬರೂ ಟ್ಯಾಗ್‌ ಟೀಮಿನಲ್ಲಿ ಜೊತೆಯಾಗಿ ಎದುರಾಳಿ ವಿರುದ್ಧ ಕಾದಾಡಿದ್ದರು. ಅನಂತರ ಸೇತ್ ರೋಲಿನ್ಸ್ ಇದ್ದಕ್ಕಿದ್ದಂತೆ ಆ್ಯಂಬ್ರೋಸ್ ಜೊತೆ ಜಗಳ ಕಾದರು. ಮೊದಲೇ ಶೀಲ್ಡ್ ಟೀಮಿನ ನಾಯಕ, ಗೆಳೆಯ ರೋಮನ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ವಿಚಾರಕ್ಕೆ ಭಾವುಕನಾಗಿದ್ದ ಡೀನ್ ಆ್ಯಂಡ್ರೋಸ್‌ಗೆ ರೋಲಿನ್ಸ್ ವರ್ತನೆ ರೇಗಿಸಿತ್ತು. ಅದೇ ಸಿಟ್ಟಲ್ಲಿ ಅಂದಿನ ಪಂದ್ಯದಲ್ಲಿ ಆ್ಯಂಬ್ರೋಸ್, ರೋಲಿನ್ಸ್‌ ಅವರನ್ನು ಕೆಡವಿದರು. ಅಂದಿನಿಂದ ಇಬ್ಬರೂ ವೈರಿಗಳಾಗಿದ್ದರು.

ಬ್ರಿಯಾನ್ ಸೂಪರ್ ಶೋ

ಬ್ರಿಯಾನ್ ಸೂಪರ್ ಶೋ

ರಿಂಗ್‌ಗೆ ಮರಳಿರುವ ಡೇನಿಯಲ್ ಬ್ರಿಯಾನ್ ಮತ್ತೆ ತನ್ನ ಪ್ರಖರತೆಯನ್ನು ತೋರಿಸಲಾರಂಭಿಸಿದರು. ಸೂಪರ್ ಸ್ಟಾರ್ ಜಾನ್‌ಸೆನ ಜೊತೆಗಿನ ಡಿಸೆಂಬರ್ 29 ಕೇಜ್‌ ಫೈಟ್‌ನಲ್ಲಿ ಸೋಲಿಸಿ ಚಾಂಪಿಯನ್‌ ಎನಿಸಿಕೊಂಡ ಬ್ರಿಯಾನ್ ತನ್ನನ್ನು ತಾನು ಇಡೀ ಭೂಮಂಡಲದ ಚಾಂಪಿಯನ್ ಎಂದು ಕರೆದುಕೊಂಡಿದ್ದರು.

Story first published: Saturday, December 29, 2018, 20:07 [IST]
Other articles published on Dec 29, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+