ಇಂದು 5 PMಗೆ ಚಂಡೀಗಢದಲ್ಲಿ ಮಿಲ್ಖಾ ಸಿಂಗ್ ಅಂತ್ಯ ಸಂಸ್ಕಾರ

ಚಂಡೀಗಢ: ಭಾರತದ ಖ್ಯಾತ ಅಥ್ಲೀಟ್ (ಓಟಗಾರ) ಮಿಲ್ಖಾ ಸಿಂಗ್ ಅವರ ಅಂತ್ಯ ಸಂಸ್ಕಾರ ಚಂಡೀಗಢದಲ್ಲಿ ಜೂನ್ 19ರ ಶನಿವಾರ ಸಂಜೆ PMಗೆ ಸಕಲ ಗೌರವದೊಂದಿಗೆ ನಡೆಯಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಕೋವಿಡ್-19 ಸೋಂಕಿಗೀಡಾಗಿದ್ದ ಮಿಲ್ಖಾ ಶುಕ್ರವಾರ ತಡರಾತ್ರಿ ಕೊನೆಯುಸಿರೆಳೆದಿದ್ದರು.
91 ವರ್ಷ ವಯಸ್ಸಾಗಿದ್ದ ಮಿಲ್ಖಾ ಚಂಡೀಗಢ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಶುಕ್ರವಾರದ ವೇಳೆ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು. ಸಿಂಗ್ ಪತ್ನಿ ನಿರ್ಮಲ್ ಕೌರ್ ಕೂಡ ಕೋವಿಡ್-19ನಿಂದಾಗಿ ಇದೇ ತಿಂಗಳು ಸಾವನ್ನಪ್ಪಿದ್ದರು.
'ಇವತ್ತು (ಶನಿವಾರ) 5 PMಗೆ ಮಿಲ್ಖಾ ಸಿಂಗ್ ಅವರ ಅಂತ್ಯ ಸಂಸ್ಕಾರ ಚಂಡೀಗಢದಲ್ಲಿ ನಡೆಯಲಿದೆ,' ಎಂದು ಮಿಲ್ಖಾ ಕುಟುಂಬದ ವಕ್ತಾರರು ಮಾಹಿತಿ ನೀಡಿದ್ದಾರೆ. ಮಿಲ್ಖಾ ಪತ್ನಿ ನಿರ್ಮಲ್ ಕೂಡ ಭಾರತ ವಾಲಿಬಾಲ್ ತಂಡದ ಮಾಜಿ ನಾಯಕಿಯಾಗಿದ್ದರು.
ಮಿಲ್ಖಾ ಸಾವಿಗೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಸೇರಿದಂತೆ ಅನೇಕ ರಾಜಕಾರಣಿಗಳು, ಕ್ರೀಡಾಪಟುಗಳು, ಚಲನಚಿತ್ರ ತಾರೆಯರು ಮತ್ತು ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ 4 ಬಾರಿ ಪದಕ ಗೆದ್ದಿದ್ದ ಮಿಲ್ಖಾ 1960ರ ರೋಮ್ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications