ಮಿಲ್ಖಾ ಸಿಂಗ್‌ಗೆ ಕೋವಿಡ್-19 ಪಾಸಿಟಿವ್, ಹೋಮ್ ಐಸೊಲೇಶನ್

ನವದೆಹಲಿ: ಫ್ಲೈಯಿಂಗ್ ಸಿಖ್ ಖ್ಯಾತಿಯ ಭಾರತದ ಶ್ರೇಷ್ಠ ಅಥ್ಲೀಟ್ ಮಿಲ್ಖಾ ಸಿಂಗ್‌ಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಅವರೀಗ ಸದ್ಯ ಹೋಮ್ ಐಸೊಲೇಶನ್‌ನಲ್ಲಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ ಮತ್ತವರು ಚೆನ್ನಾಗಿದ್ದಾರೆ ಎಂದು ತಿಳಿದು ಬಂದಿದೆ. ಮಿಲ್ಖಾ ಜೀವನಾಧರಿಸಿ ಬಾಲಿವುಡ್‌ನಲ್ಲಿ 'ಭಾಗ್ ಮಿಲ್ಖಾ ಭಾಗ್' ಸಿನಿಮಾ ತೆರೆಕಂಡಿತ್ತು.
'ಬುಧವಾರ (ಮೇ 19) ಸಂಜೆ ಜಾಗಿಂಗ್ ಮುಗಿಸಿ ನಾನು ಮನೆಗೆ ಬಂದೆ. ಪರೀಕ್ಷಿಸಿದಾಗ ಕೋವಿಡ್-19 ಪಾಸಿಟಿವ್ ಬಂದಿತ್ತು. ಆದರೆ ನನಗೆ ಯಾವುದೇ ರೋಗ ಲಕ್ಷಣಗಳಿಲ್ಲ. ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ. ಏನೂ ಚಿಂತೆ ಮಾಡಬೇಕಾಗಿಲ್ಲ,' ಎಂದು ಮಿಲ್ಖಾ ಸಿಂಗ್ ಹೇಳಿದ್ದಾರೆ.
1958 ಮತ್ತು 1962ರ ಏಷ್ಯಾನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಮಿಲ್ಖಾ ಮಾತು ಮುಂದುವರೆಸಿ, 'ಕಳೆದ ಸಂಜೆ ನನಗೆ ಸ್ವಲ್ಪ ಜ್ವರ ಇತ್ತು. ಆದರೆ ಈಗ ಅದು ಗುಣವಾಗಿದೆ. ಇದು ಕೆಲವೇ ದಿನಗಳ ಸಂಗತಿಯಷ್ಟೇ. ನಾನು ಶೀಘ್ರ ಗುಣಮುಖನಾಗಲಿದ್ದೇನೆ,' ಎಂದಿದ್ದಾರೆ.
ಕೋವಿಡ್-19ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ತಾನು ವ್ಯಾಕ್ಸಿನ್ ಹಾಕಿಸಿಕೊಳ್ಳುವುದಾಗಿ 91ರ ಹರೆಯದ ಮಿಲ್ಖಾ ಹೇಳಿದ್ದಾರೆ. ಚಂಡೀಗಡದ ತಮ್ಮ ನಿವಾಸದಲ್ಲಿರುವ ಮಿಲ್ಖಾ ಅವರನ್ನು ಅವರ ಪತ್ನಿ ನಿರ್ಮಲಾ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications