Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಲಿಫ್ಟ್‌ ವೇಳೆ ಒಂದೇ ಕಡೆಗೆ ಗಮನ ಕೊಡಿ': ಮೀರಾಬಾಯ್‌ಗೆ ಮಲ್ಲೇಶ್ವರಿ ಸಲಹೆ

focus on one lift at a time: Karnam Malleswaris advice for Mirabai Chanu at Tokyo Olympics

ಟೋಕಿಯೋ: ಭಾರತೀಯ ಮಾಜಿ ಮಹಿಳಾ ವೇಟ್ ಲಿಫ್ಟರ್ ಕರ್ಣಂ ಮಲ್ಲೇಶ್ವರಿ ಅವರು ವೇಟ್ ಲಿಫ್ಟರ್ ಮೀರಾಬಾಯ್ ಚಾನುಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸಾಧಿಸಲು ನೆರವಾಗುವಂಥಹ ಸಲಹೆ ನೀಡಿದ್ದಾರೆ. ಲಿಫ್ಟ್‌ ವೇಳೆ ಒಂದೇ ಕಡೆ ಗಮನ ಕೊಡಿ ಎಂದು ಮಲ್ಲೇಶ್ವರಿ ಚಾನುಗೆ ಕಿವಿಮಾತು ಹೇಳಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ ವೇಳಾಪಟ್ಟಿ, ಫಲಿತಾಂಶ, ಪದಕಪಟ್ಟಿ ಸಂಪೂರ್ಣ ಮಾಹಿತಿ ಇಲ್ಲಿದೆ

ರಿಯೋ ಒಲಿಂಪಿಕ್ಸ್ ನಲ್ಲಿ ಮೀರಾಬಾಯ್ ಚಾನು ಲಿಫ್ಟ್‌ ವೇಳೆ ವೈಫಲ್ಯ ಎದುರಿಸಿದ್ದರು. ಲಿಫ್ಟ್‌ ವೇಳೆ ಸರಿಯಾದ ಏಕಾಗ್ರತೆಯಿಲ್ಲದೆ ಈ ವೈಫಲ್ಯ ಎದುರಾಗಿತ್ತು. ಹೀಗಾಗಿಯೇ ಚಾನು ಒತ್ತಡವನ್ನು ಬದಿಗಿಟ್ಟು ಏಕಾಗ್ರತೆಯಿಂದ ಸ್ಪರ್ಧಿಸಲು ಮಲ್ಲೇಶ್ವರಿ ಸಲಹೆ ನೀಡಿದ್ದಾರೆ.

"ಮೀರಾಬಾಯ್ ಚಾನು ನಿಜಕ್ಕೂ ಶ್ರಮವಹಿಸಿ ಅಭ್ಯಾಸ ನಡೆಸುತ್ತಿದ್ದಾರೆ. ಅವರು ವಿದೇಶದಲ್ಲೇ ಹೆಚ್ಚಿನ ಅಭ್ಯಾಸ ನಡೆಸಿದ್ದಾರೆ. ಈಗ ಒಳ್ಳೆಯ ಟಚ್‌ನಲ್ಲೂ ಇದ್ದಾರೆ. ಅವರಿಗೆ ಒಳ್ಳೆಯ ಜನಪ್ರಿಯತೆಯಿದೆ. ಅವರ ಜೊತೆ ಒಳ್ಳೆಯ ತಂಡವೂ ಇದೆ. ಅವರು ಪದಕ ಗೆಲ್ಲುತ್ತಾರೆಂದು ನನಗೆ ನೂರು ಶೇಕಡಾ ಭರವಸೆಯಿದೆ," ಎಂದು ಕರ್ಣಂ ಮಲ್ಲೇಶ್ವರಿ ಹೇಳಿದ್ದಾರೆ.

2000ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಏಕಮಾತ್ರ ಕಂಚುಗೆದ್ದ ಮೊದಲ ಮಹಿಳೆಯೆಂಬ ದಾಖಲೆ ಕರ್ಣಂ ಮಲ್ಲೇಶ್ವರಿ ಹೆಸರಿನಲ್ಲಿದೆ. ರಿಯೋ ಒಲಿಂಪಿಕ್ಸ್‌ನಲ್ಲಿನ ತಪ್ಪುಗಳನ್ನು ತಿಳಿಸಿ ಹೇಳುವಂತೆ ಮೀರಾಬಾಯ್ ಚಾನು ಕೇಳಿಕೊಂಡಿದ್ದರಿಂದ ಮಲ್ಲೇಶ್ವರಿ ತನ್ನ ಸಲಹೆಗಳನ್ನು ನೀಡಿದ್ದಾರೆ. ಜುಲೈ 23ರಿಂದ ಆಗಸ್ಟ್‌ 8ರ ವರೆಗೆ ಟೋಕಿಯೋ ಒಲಿಂಪಿಕ್ಸ್ ನಡೆಯಲಿದೆ.

Story first published: Friday, July 23, 2021, 0:55 [IST]
Other articles published on Jul 23, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+