Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

0 ಅಂಕ, ಹೊಸ ಹೆಸರಿನೊಂದಿಗೆ ಫೋರ್ಸ್ ಇಂಡಿಯಾ ಕಣಕ್ಕೆ!

Force India renamed Racing Point Force India for rest of 2018 season

ಬೆಂಗಳೂರು, ಆಗಸ್ಟ್ 24: ಉದ್ಯಮಿ ವಿಜಯ್ ಮಲ್ಯ ಈ ಹಿಂದೆ ತುಂಬಾ ಇಷ್ಟಪಟ್ಟು ಹೂಡಿಕೆ ಮಾಡಿದ್ದ ಫೋರ್ಸ್ ಇಂಡಿಯಾ ಎಫ್ 1 ತಂಡದ ಹೆಸರು ಬದಲಾವಣೆಗೆ ಎಫ್ಐಎ ಅನುಮತಿ ನೀಡಿದೆ. ಈ ವಾರಾಂತ್ಯದಲ್ಲಿ ಬೆಲ್ಜಿಯಂ ಗ್ರಾನ್ ಪ್ರೀಯಲ್ಲಿ ಶೂನ್ಯ ಅಂಕದೊಂದಿಗೆ ಕಣಕ್ಕಿಳಿಯಲಿದೆ, ಅಂದಹಾಗೆ ಫೋರ್ಸ್ ಇಂಡಿಯಾದ ಹೊಸ ಹೆಸರು 'ರೇಸ್ ಪಾಯಿಂಟ್ ಫೋರ್ಸ್ ಇಂಡಿಯಾ' ಎಂದು ಅಧಿಕೃತವಾಗಿ ಬದಲಾಗಿದೆ.

ಈ ಮುಂಚೆ ಸಹಾರಾ ಫೋರ್ಸ್ ಇಂಡಿಯಾ ಎಂಬ ಹೆಸರು ಹೊಂದಿತ್ತು. 2018ರ ಸೀಸನ್ ನಲ್ಲಿ ಹೊಸ ಹೆಸರಿನೊಂದಿಗೆ ರೇಸ್ ನಲ್ಲಿರಲಿದೆ. ಹೊಸ ಸೀಸನ್ ಗೆ ಅಂಕಗಳು ಸಿಗದಿದ್ದರೂ, ಚಾಲಕರಾದ ಎಸ್ಟೇಬಾನ್ ಒಕಾನ್ ಹಾಗೂ ಸರ್ಗಿಯೋ ಪೆರೆಜ್ ಅವರ ಅಂಕಗಳು ಹಾಗೆ ಉಳಿಯಲಿವೆ.



12 ರೇಸ್ ಗಳ ನಂತರ 59 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿತ್ತು. ಕೆನಡಾದ ಕೋಟ್ಯಧಿಪತಿ ಲಾರೆನ್ಸ್ ಸ್ಟ್ರಾಲ್ ಒಡೆತನದಲ್ಲಿರುವ ತಂಡ, ತನ್ನ ಹಳೆ ಹೆಸರಲ್ಲೇ ಎಫ್ 1ಕಾರುಗಳ ಮೇಲೆ ಬಳಸಲಿದೆ. ಫೋರ್ಸ್ ಇಂಡಿಯಾ ಎಂಬ ಹೆಸರಿನಲ್ಲೇ ಅಭಿಮಾನಿಗಳು ಕರೆಯಬಹುದು ಎಂದು ಲಾರೆನ್ಸ್ ಹೇಳಿದ್ದಾರೆ.

ವಿಜಯ್ ಮಲ್ಯ ಹಾಗೂ ಸಹರಾ ಇಂಡಿಯಾದ ಸಹ ಮಾಲೀಕತ್ವ ಹೊಂದಿದ್ದ ಫೋರ್ಸ್ ಇಂಡಿಯಾದ ಆಸ್ತಿ ಮೇಲೆ ಭಾರತೀಯ ಬ್ಯಾಂಕುಗಳ ಕಣ್ಣಿದೆ. ಆದರೆ. ಹೊಸ ತಂಡ ರೂಪುಗೊಂಡ ಬಳಿಕ ಹಳೆ ಮಾಲೀಕತ್ವದ ಬಗ್ಗೆ ಯಾವ ರೀತಿ ಬ್ಯಾಂಕುಗಳು ಕ್ರಮ ತೆಗೆದುಕೊಳ್ಳಬಹುದು ಎಂಬುದನ್ನು ಕಾದು ನೋಡಬೇಕಿದೆ.

Story first published: Saturday, August 25, 2018, 0:31 [IST]
Other articles published on Aug 25, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+