ನೀಲಿಚಿತ್ರ ಲೋಕಕ್ಕೆ ಕಾಲಿಟ್ಟ ಮಹಿಳಾ 'ಸೂಪರ್ ಕಾರ್ ರೇಸರ್' ರಿನೀ ಗ್ರೇಸಿ!

Former Australian V8 Supercars Racer Renee Gracie Turns To Adult Film Industry

ಆಸ್ಟ್ರೇಲಿಯಾದ ಮಾಜಿ ಸೂಪರ್ ಕಾರ್ಸ್ ರೇಸರ್ ರಿನೀ ಗ್ರೇಸಿ ಕ್ರೀಡಾ ಲೋಕಕ್ಕೆ ಶಾಕ್ ನೀಡಿದ್ದಾರೆ. ಮೋಟಾರ್ ಸ್ಪೋರ್ಟ್ಸ್ ಬಿಟ್ಟು ಅದರ ಬದಲು ವಯಸ್ಕರ ಚಿತ್ರೋದ್ಯಮಕ್ಕೆ ಕಾಲಿಡಲು ತೀರ್ಮಾನಿಸಿದ್ದಾರೆ. ವಯಸ್ಕರ ಚಿತ್ರೋದ್ಯಮದಲ್ಲಿ ತಾನು ಕಾರ್ಯನಿರ್ವಹಿಸಲು ಆರಂಭಿಸಿರುವುದನ್ನು ಕೂಡ ಅವರು ಖಚಿತಪಡಿಸಿದ್ದಾರೆ.

ಪಂತ್ & ನಾನು ಒಳ್ಳೆಯ ಫ್ರೆಂಡ್ಸ್, ಸ್ಪರ್ಧೆಯಾಗಿ ಆತನ ನೋಡಲಾರೆ: ಸ್ಯಾಮ್ಸನ್

ಆಸ್ಟ್ರೇಲಿಯಾದ ವಿ8 ಸೂಪರ್‌ಕಾರ್ಸ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಸ್ಪರ್ಧಿಯಾಗಿ ಕಣಕ್ಕಿಳಿದ ಮೊದಲ ಮಹಿಳೆ ಎಂಬ ಖ್ಯಾತಿ ರಿನೀ ಗ್ರೇಸಿ ಅವರಿಗಿದೆ. ಬ್ರಿಸ್ಬೈನ್‌ನಲ್ಲಿ ಜನಿಸಿದ ರೆನೀ ಗ್ರೇಸಿ ತಮ್ಮ ಇತ್ತೀಚಿನ ಸಂದರ್ಶನದಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಕೂಡ ರಿನೀ ಸ್ಪಷ್ಟಪಡಿಸಿದ್ದಾರೆ.

ಹಣ ಗಳಿಕೆಗಾಗಿ ಈ ನಿರ್ಧಾರ

ಹಣ ಗಳಿಕೆಗಾಗಿ ಈ ನಿರ್ಧಾರ

ಹಣ ಗಳಿಕೆಗಾಗಿ ಈ ಉದ್ಯಮಕ್ಕೆ ಇಳಿದಿದ್ದೇನೆ ಎಂದು ರಿನೀ ನೇರವಾಗಿಯೇ ಹೇಳಿದ್ದಾರೆ. ನಾನು ಈವರೆಗೆ ತೆಗೆದುಕೊಂಡಿರುವ ನಿರ್ಧಾರಗಳಲ್ಲಿ ಇದು ಅತ್ಯುತ್ತಮ ನಿರ್ಧಾರ ಎಂದಿದ್ದಾರೆ ರೆನೀ. ಮೋಟಾರ್ ಸ್ಪೋರ್ಟ್ಸ್ ಬಗ್ಗೆ ಮಾತನಾಡುತ್ತಾ "ನನಗೆ ಬೇಕಾದ ಫಲಿತಾಂಶ ಪಡೆಯಲು ಸಾಧ್ಯವಾಗಲಿಲ್ಲ. ನನ್ನಿಂದಾಗುವ ಗರಿಷ್ಠ ಪ್ರಯತ್ನವನ್ನು ನಾನು ಮಾಡಿದ್ದೇನೆ. ಆದರೆ ನನ್ನ ಕನಸು ಅಲ್ಲಿ ನನಸಾಗುವ ಸಾಧ್ಯತೆಯಿಲ್ಲದನ್ನು ಕಂಡುಕೊಂಡೆ" ಎಂದು ಹೇಳಿದ್ದಾರೆ.

ಕುಟುಂಬದ ಬೆಂಬಲವೂ ಇದೆ

ಕುಟುಂಬದ ಬೆಂಬಲವೂ ಇದೆ

"ಇದು ನನ್ನ ಇಡೀ ಜೀವನದಲ್ಲಿ ನಾನು ಮಾಡಿದ ಅತ್ಯುತ್ತಮ ಕೆಲಸವಾಗಿದೆ. ಇದು ಆರ್ಥಿಕವಾಗಿ ನಾನು ಹಿಂದೆಂದೂ ಕನಸು ಕಾಣದಂತಹ ಸ್ಥಿತಿಗೆ ತಂದಿದೆ. ಅದನ್ನು ನಿಜವಾಗಿಯೂ ಆನಂದಿಸುತ್ತೇನೆ. ಎಂದು ರಿನೀ ಗ್ರೇಸಿ ಹೇಳಿದ್ದಾರೆ. ಮತ್ತು ತನ್ನ ಈ ನಿರ್ಧಾರಕ್ಕೆ ಕುಟುಂಬದ ಬೆಂಬಲ ಸಂಪೂರ್ಣವಾಗಿ ಇದೆ ಎಂದು ಹೇಳಿದ್ದಾರೆ.

ಚೆನ್ನಾಗಿ ಹಣಗಳಿಸುತ್ತಿದ್ದೇನೆ

ಚೆನ್ನಾಗಿ ಹಣಗಳಿಸುತ್ತಿದ್ದೇನೆ

ನಾನು ಅತ್ಯುತ್ತಮವಾಗಿ ಹಣವನ್ನು ಗಳಿಸುತ್ತಿದ್ದೇನೆ. ನಾನು ಈಗ ಇರುವಲ್ಲಿ ಆರಾಮಾಗಿದ್ದೇನೆ. ನನ್ನನ್ನು ಅವರು ಏನೆಂದು ಕರೆಯಲು ಬಯಸಿದರು ಅದರಲ್ಲಿ ನಾನು ಚೆನ್ನಾಗಿರುತ್ತೇನೆ ಎಂದು ವಿಶ್ವಾಸದಿಂದ ಹೇಳಿದ್ದಾರೆ. ಡೈಲಿ ಟೆಲಿಗ್ರಾಫ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಸಾಕಷ್ಟು ಸಂಶೋಧನೆ ನಡೆಸಿ ನಿರ್ಧಾರ

ಸಾಕಷ್ಟು ಸಂಶೋಧನೆ ನಡೆಸಿ ನಿರ್ಧಾರ

"ನಾನು ಈ ಉದ್ಯಮದೊಳಗೆ ಏನೂ ತಿಳಿದುಕೊಳ್ಳದೆ ಬಂದಿಲ್ಲ. ನಾನು ಇಲ್ಲಿಗೆ ಬರುವ ಮುನ್ನ ಸಾಕಷ್ಟು ಸಂಶೋಧನೆಯನ್ನು ನಡೆಸಿದ್ದೇನೆ. ಇದಲ್ಲಿ ಏನಿದೆ, ಏನೆಲ್ಲಾ ಒಳಗೊಂಡಿದ ಎಂದು ಎಲ್ಲವನ್ನೂ ಅರಿತುಕೊಂಡಿದ್ದೇನೆ. ನನಗೆ ಗೊತ್ತಿದೆ ಕೆಲ ವಿಷಯಗಳು ವಿವಾದಾತ್ಮಕವಾಗಿರುತ್ತದೆ. ಕೆಲ ವಿಷಯಗಳು ಸೋರಿಕೆಯಾಗುತ್ತದೆ. ನಾನು ಎಲ್ಲಾ ಸಂಶೋಧನೆ ಮಾಡಿ ಈ ಉದ್ಯಮಕ್ಕೆ ಬರುವ ನಿರ್ಧಾರವನ್ನು ತೆಗೆದುಕೊಂಡೆ" ಎಂದಿದ್ದಾರೆ.

ಮೊದಲ ವಾರದ ಗಳಿಕೆ ಹೇಳಿದ ರೆನೀ

ಮೊದಲ ವಾರದ ಗಳಿಕೆ ಹೇಳಿದ ರೆನೀ

ನನ್ನ ಮೊದಲ ಆರು ದಿನದಲ್ಲಿ ನಾನು 24,000 ಅಮೆರಿಕನ್ ಡಾಲರ್ ಗಳಿಸಿಕೊಂಡಿದ್ದೇನೆ. ಆಗ ನನಗೆ ಅರ್ಥವಾಗಿಯಿತು, ನಾನು ಇದರಲ್ಲಿ ಏನನ್ನಾದರೂ ಮಾಡಲು ಸಾಧ್ಯವಿದೆ ಎನಿಸಿತು ಕೂಡ ರಿನೀ ಗ್ರೇಸಿ ಬಹಿರಂಗಪಡಿಸಿದ್ದಾರೆ. ಈ ಮಧ್ಯೆ ಸೂಪರ್‌ಕಾರ್ಸ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ಗ್ರೇಸಿಯ ನಡೆ ಮತ್ತು ನಂತರದ ಸಂದರ್ಶನದ ಬಗ್ಗೆ ತಮಗೆ ತಿಳಿದಿದೆ ಎಂದು ಹೇಳಿದೆ.

ಸೂಪರ್ ಕಾರ್ಸ್ ನೀಡಿದ ಸ್ಪಷ್ಟನೆ

ಸೂಪರ್ ಕಾರ್ಸ್ ನೀಡಿದ ಸ್ಪಷ್ಟನೆ

ಸೂಪರ್ ಕಾರ್ ಮಾಜಿ ರೇಸರ್‌ನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಮಾಜಿ ಸೂಪರ್ 2 ಚಾಲಕಿ ರೆನೀ ಗ್ರೇಸಿಗೆ ಸಂಬಂಧಿಸಿದ ಲೇಖನದ ಬಗ್ಗೆ ಸೂಪರ್ ಕಾರ್ಸ್‌ಗೆ ಮಾಹಿತಿಯಿದೆ. ಎಂಎಸ್ ಗ್ರೇಸಿ ಇನ್ನು ಮುಂದೆ ಸೂಪರ್ 2 ನಲ್ಲಿ ಸ್ಪರ್ಧಿಸುತ್ತಿಲ್ಲವಾದ್ದರಿಂದ, ಸೂಪರ್‌ಕಾರ್ಸ್ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ "ಎಂದು ವಕ್ತಾರರು ತಿಳಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts

Story first published: Tuesday, June 9, 2020, 12:28 [IST]
Other articles published on Jun 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more