ಐಎಎಎಫ್ ಮಾಜಿ ಮುಖ್ಯಸ್ಥ ಲ್ಯಾಮೈನ್ ಡಯಾಕ್‌ಗೆ 2 ವರ್ಷ ಜೈಲು ಶಿಕ್ಷೆ

ಡಾಕರ್: ಇಂಟರ್ ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್ (ಐಎಎಎಫ್) ಮಾಜಿ ಮುಖ್ಯಸ್ಥ ಲ್ಯಾಮೈನ್ ಡಯಾಕ್ 2 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಡಯಾಕ್ ಅವರನ್ನು ತಪ್ಪಿತಸ್ಥ ಎಂದು ಪರಿಗಣಿಸಲಾಗಿದೆ.
ರಷ್ಯಾದ ಡೋಪಿಂಗ್ ಹಗರಣದಲ್ಲಿ ಭ್ರಷ್ಟಾಚಾರ ಎಸಗಿರುವುದಕ್ಕೆ ಲ್ಯಾಮೈನ್ ಡಯಾಕ್ ಅವರನ್ನು ಬುಧವಾರ (ಸೆಪ್ಟೆಂಬರ್ 16) ಫ್ರಾನ್ಸ್‌ನಲ್ಲಿ ಶಿಕ್ಷೆಗೊಳಪಡಿಸಲಾಯಿತು ಮತ್ತು ಕನಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.
1999-2015ರ ವರೆಗೆ ಐಎಎಎಫ್‌ನ ಹೆಡ್ ಆಗಿದ್ದ 87 ವರ್ಷದ ಡಯಾಕ್ ಅವರನ್ನು ವಿಚಾರಣೆ ನಡೆಸಿದ ಫ್ರಾನ್ಸ್ ನ್ಯಾಯಾಲಯ ತಪ್ಪಿತಸ್ಥ ಎಂದು ಪರಿಗಣಿಸಿ ತೀರ್ಪು ನೀಡಿದೆ. ನ್ಯಾಯಾಲಯವು ಡಯಾಕ್‌ಗೆ ಇನ್ನೂ ಎರಡು ವರ್ಷಗಳ ಅಮಾನತುಗೊಂಡ ಜೈಲು ಶಿಕ್ಷೆಯನ್ನು ವಿಧಿಸಿದೆ.
ಡಯಾಕ್‌ಗೆ ಜೈಲು ಶಿಕ್ಷೆಯ ಜೊತೆಗೆ 500,000 ಯೂರೋಸ್ (ಸುಮಾರು 4,35,02,934 ರೂ.) ದಂಡ ಕೂಡ ವಿಧಿಸಿದೆ. ಡಯಾಕ್ ವಿರುದ್ಧ ನಂಬಿಕೆ ದ್ರೋಹ, ಮನಿ ಲಾಂಡರಿಂಗ್ ಸೇರಿ ಅನೇಕ ಭ್ರಷ್ಟಾಚಾರದ ದೂರುಗಳು ದಾಖಲಾಗಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications