ಡಬ್ಲ್ಯೂಡಬ್ಲ್ಯೂಇ ಮಾಜಿ ತಾರೆ, ಅಮೆರಿಕಾದ ಶಾಡ್ ಗ್ಯಾಸ್‌ಪಾರ್ಡ್ ನಿಧನ

ಬೆಂಗಳೂರು, ಮೇ 21: ಡಬ್ಲ್ಯೂಡಬ್ಲ್ಯೂಇ ಮಾಜಿ ತಾರೆ, ಅಮೆರಿಕಾದ ಶಾಡ್ ಗ್ಯಾಸ್‌ಪಾರ್ಡ್ ನಿಧನರಾಗಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿತ್ತು. ಕ್ಯಾಲಿಫೋರ್ನಿಯಾದ ವೆನಿಸ್ ಬೀಚ್‌ಗೆ ಈಜಲು ತೆರಳಿದ್ದ ಗ್ಯಾಸ್‌ಪಾರ್ಡ್ ತಪ್ಪಿಸಿಕೊಂಡಿದ್ದರು. ಅನಂತರ ಅವರ ಮೃತದೇಹ ಪತ್ತೆಯಾಗಿತ್ತು ಎಂದು ವರದಿ ಹೇಳಿದೆ.
ಡಬ್ಲ್ಯೂಡಬ್ಲ್ಯೂಇ (ವರ್ಲ್ಡ್ ರಸ್ಲಿಂಗ್ ಎಂಟರ್‌ಟೇನ್ಮೆಂಟ್) ಪ್ರಕಾರ, ಗ್ಯಾಸ್‌ಪಾರ್ಡ್ ಸಾಯುವುದಕ್ಕೂ ಮುನ್ನ ತನ್ನ ಮಗನ ಜೀವ ಉಳಿಸುವಂತೆ ಜೀವ ರಕ್ಷಕರಲ್ಲಿ ಕೋರಿಕೊಂಡಿದ್ದರು ಎನ್ನಲಾಗಿದೆ. ಮೇ 17ರಂದು ಬೀಚ್‌ಗೆ ಈಜಲು ತೆರಳಿದ್ದ ಗ್ಯಾಸ್‌ಪಾರ್ಡ್ ಅಂದೇ ಮೃತರಾಗಿದ್ದರು.
ಗ್ಯಾಸ್‌ಪಾರ್ಡ್ ಅವರ 10 ವರ್ಷದ ಮಗ ಆರ್ಯ ಅವರನ್ನು ಹಲವು ನುರಿತ ಈಜುಗಾರರು ಹೇಗೋ ಸುರಕ್ಷಿತವಾಗಿ ಹೊರ ತಂದಿದ್ದರು. ಆದರೆ ಗ್ಯಾಸ್‌ಪಾರ್ಡ್ ಅವರನ್ನು ನೀರಿನಿಂದ ಹೊರತರಲಾಗಿರಲಿಲ್ಲ. ಕೊನೆಯ ಬಾರಿಗೆ ಗ್ಯಾಸ್‌ಪಾರ್ಡ್ ಕಣ್ಣಿಗೆ ಬಿದ್ದಾಗ ಆತ ತೀರದಿಂದ ಸುಮಾರು 50 ಗಜಗಳಷ್ಟು ದೂರದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗ್ಯಾಸ್‌ಪಾರ್ಡ್, ಡಬ್ಲ್ಯೂಡಬ್ಲ್ಯೂಇಯ ಕ್ರೈಮ್ 'ಟೈಮ್'ನಲ್ಲಿ ಜೆಟಿಜಿ ಜೊತೆ ಜನಪ್ರಿಯರಾಗಿದ್ದರು. ಇಬ್ಬರ ಜೋಡಿ ಜಾನ್ ಸೆನಾ ಜೊತೆ ಸೇರಿ 2008ರಲ್ಲಿ ಜೆಬಿಎಲ್ ವಿರುದ್ಧ ಸ್ಪರ್ಧಿಸಿತ್ತು. 2009ರಲ್ಲಿ ಡಬ್ಲ್ಯೂಡಬ್ಲ್ಯೂಇ ಟ್ಯಾಗ್ ಟೀಮ್ ಪ್ರಶಸ್ತಿ ಸಮ್ಮರ್ ಸ್ಲ್ಯಾಮ್‌ನಲ್ಲೂ ಪಾಲ್ಗೊಂಡಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications