Elorda Cup 2024: ಕಂಚಿನ ಪದಕಕ್ಕೆ ತೃಪ್ತಿ ಪಟ್ಟ ನಾಲ್ವರು ಭಾರತದ ಬಾಕ್ಸರ್‌ಗಳು
ಮೇ 18 ಶನಿವಾರ, ಕಝಾಕಿಸ್ತಾನದ ಅಸ್ತಾನಾದಲ್ಲಿ ನಡೆಯುತ್ತಿರುವ 2024ರ ಎಲೋರ್ಡಾ ಕಪ್ ಟೂರ್ನಿಯಲ್ಲಿ (ಮೇ 17) ನಾಲ್ವರು ಭಾರತದ ಬಾಕ್ಸರ್‌ಗಳು ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ.
ಈ ಟೂರ್ನಿಯಲ್ಲಿ ಭಾರತದ ಬಾಕ್ಸರ್‌ಗಳು ಫೈನಲ್ ತಲುಪಿ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಆದರೆ ಸೆಮಿಫೈನಲ್‌ನಲ್ಲಿ ಅವರು ನೀಡಿದ ಅಸ್ಥಿರ ಪ್ರದರ್ಶನದಿಂದ ಫೈನಲ್ ಪ್ರವೇಶಿಸುವುದಕ್ಕೆ ಸಾಧ್ಯವಾಗಿಲ್ಲ.

ಯೈಫಾಬಾ ಸಿಂಗ್ ಸೊಯಬಮ್, ಅಭಿಷೇಕ್ ಯಾದವ್, ವಿಶಾಲ್ ಮತ್ತು ಗೌರವ್ ಚೌಹಾಣ್ ಅವರು ತಮ್ಮ ಸೆಮಿಫೈನಲ್‌ನಲ್ಲಿ ಸೋತ ಬಳಿಕ ಕಂಚಿನ ಪದಕಗಳೊಂದಿಗೆ ತಮ್ಮ 2024ರ ಎಲೋರ್ಡಾ ಕಪ್ ಅಭಿಯಾನವನ್ನು ಕೊನೆಗೊಳಿಸಿದ್ದಾರೆ.
ಹಾಲಿ ವಿಶ್ವ ಚಾಂಪಿಯನ್ ಕಝಾಕಿಸ್ತಾನ್‌ನ ಓರಲ್ಬೇ ನರ್ಬೆಕ್ ವಿರುದ್ಧ ವಿಶಾಲ್ (86 ಕೆಜಿ) 0-5 ರಿಂದ ಸೋತರೆ, ಗೌರವ್ 92+ ಕೆಜಿ ಸೆಮಿಫೈನಲ್‌ನಲ್ಲಿ ಕಝಕ್‌ನ ಮತ್ತೊಬ್ಬ ಬಾಕ್ಸರ್, ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕಾಮ್ಶಿಬೆಕ್ ಕುಂಕಬಾಯೆವ್ ವಿರುದ್ಧ 0-5 ರಿಂದ ಸೋಲು ಕಂಡರು.
ಇದಕ್ಕೂ ಮುನ್ನೆ ಗುರುವಾರ ತಡವಾಗಿ, ಶಲಾಖಾ ಸಿಂಗ್ ಸಂಸನ್ವಾಲ್ (70 ಕೆಜಿ) ಮತ್ತು ಮೋನಿಕಾ (81+ ಕೆಜಿ) ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಇಂದು (ಮೇ18) ಹಾಲಿ ವಿಶ್ವ ಚಾಂಪಿಯನ್ ನಿಖತ್ ಜರೀನ್ (52 ಕೆಜಿ), ಮಿನಾಕ್ಷಿ (48 ಕೆಜಿ), ಅನಾಮಿಕಾ (50 ಕೆಜಿ) ಮತ್ತು ಮನೀಶಾ (60 ಕೆಜಿ) ಚಿನ್ನದ ಪದಕಕ್ಕಾಗಿ ಹೋರಾಡಲಿದ್ದಾರೆ. ಶನಿವಾರ ಫೈನಲ್ ಪಂದ್ಯಗಳು ನಡೆಯಲಿವೆ.
2024ರ ಎಲೋರ್ಡಾ ಕಪ್ ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಬಾಕ್ಸರ್‌ಗಳ ಸಂಪೂರ್ಣ ಪಟ್ಟಿ
ಪುರುಷರ ತಂಡ : ಯೈಫಾಬಾ ಸಿಂಗ್ ಸೊಯಬಮ್ (48 ಕೆಜಿ), ಪವನ್ ಬರ್ತ್ವಾಲ್ (54 ಕೆಜಿ), ಕವಿಂದರ್ ಸಿಂಗ್ ಬಿಶ್ತ್ (57 ಕೆಜಿ), ವರೀಂದರ್ ಸಿಂಗ್ (60 ಕೆಜಿ), ಶಿವ ಥಾಪಾ (63.5 ಕೆಜಿ), ಅಭಿಷೇಕ್ ಯಾದವ್ (67 ಕೆಜಿ), ಹಿತೇಶ್ (71 ಕೆಜಿ), ಇಶ್ಮೀತ್ ಸಿಂಗ್ (75 ಕೆಜಿ), ಸಂಜಯ್ (80 ಕೆಜಿ), ವಿಶಾಲ್ (86 ಕೆಜಿ), ಮತ್ತು ಗೌರವ್ ಚೌಹಾಣ್ (92+ ಕೆಜಿ).
ಮಹಿಳಾ ತಂಡ : ಮಿನಾಕ್ಷಿ (48 ಕೆಜಿ), ಅನಾಮಿಕಾ (50 ಕೆಜಿ), ನಿಖತ್ ಜರೀನ್ (52 ಕೆಜಿ), ಸೋನಿಯಾ (54 ಕೆಜಿ), ಮನೀಶಾ (60 ಕೆಜಿ), ಸೋನು (63 ಕೆಜಿ), ಮಂಜು ಬಂಬೋರಿಯಾ (66 ಕೆಜಿ), ಶಲಾಖಾ ಸಿಂಗ್ (70 ಕೆಜಿ), ಲಾಲ್ಫಕ್ಮಾವಿ ರಾಲ್ಟೆ ( 81ಕೆಜಿ), ಮತ್ತು ಮೋನಿಕಾ (81+ಕೆಜಿ).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications